ಇತ್ತೀಚಿನ ಲೇಖನಗಳು

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಪೆಸಿಫಿಕ್ ಕರಾವಳಿಯಲ್ಲಿ ಸವಾರಿ

ನನ್ನ ಸಮೀಪದ ಬಂಧುಗಳು ಆಗಾಗ ಹೇಳುವುದು ‘ಊರು ನೋಡಬೇಕೋ ವಾಹನದಲ್ಲಿ ಕುಳಿತು ಡ್ರೈವ್ ಮಾಡುತ್ತ ನೋಡುತ್ತ ಹೋಗಬೇಕು. ವಿಮಾನದಲ್ಲಿ ಕುಳಿತು ನಿದ್ದೆ ತೂಗುತ್ತ ಊರಿಂದೂರಿಗೆ ಹೋಗುವುದರಲ್ಲಿ ಏನೂ ಮಜವಿಲ್ಲ.’ ಅಮೇರಿಕೆಯಲ್ಲೇ ಎಲ್ಲಾ ಮಕ್ಕಳಿದ್ದು ಆಗಾಗ ಸಮುದ್ರ ಲಂಘನ ಮಾಡಿದವರ ಅಭಿಪ್ರಾಯ. ‘ಹೌದು ನಿದ್ದೆ ತೂಗುತ್ತ ನೋಡುವುದಾದರೂ ಏನು?’ ಎಂದೆ. ನಾನೇನು ವಿಮಾನದಲ್ಲೇ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಬ್ಲಡ್ ಟೆಸ್ಟ್

‘ನಿಮಗೆ ಅಗತ್ಯದ ಔಷಧದ ಮಾತ್ರೆಗಳನ್ನು ತೆಗೆದುಕೊಂಡು ಬರಲು ಬಿಡುತ್ತಾರೆ. ಆದರೆ ವೈದ್ಯರ ಅನುಮತಿ ಚೀಟಿ ಇರಬೇಕಷ್ಟೆ’. ಅಮೇರಿಕೆಗೆ ಹೋಗುವ ತಯಾರಿಯಲ್ಲಿದ್ದ ನನಗೆ ಹಿರಿಮಗನ ಸೂಚನೆ. ಶೀತ, ಕೆಮ್ಮು, ಮೈಕೈ ನೋವು, ಹೊಟ್ಟೆ ನೋವು ಇಂತಹ ಸಾಮಾನ್ಯ ಕಿರಿಕಿರಿಗಳಿಗೆ ಡಾಕ್ಟರರು ಯಾಕೆ ಮನೆ ವೈದ್ಯರೇ ಸಾಲದೆ ಎಂಬ ಯೋಚನೆಯಿಂದ ಬೇಕಾದ ಮಾತ್ರೆಗಳನ್ನು ಕಟ್ಟಿಕೊಂಡಿದ್ದೆವು. ಎಷ್ಟೋ...

ಕಥೆ

ಕೈಲಾಸನಾಥ

ಮಹಾರಾಣಿ ಮಾಣಕಾವತಿ ತನ್ನ ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಆಕೆಯ ಈ ಅನ್ಯಮನಸ್ಕತೆಗೆ ಕಾರಣ ದಾಸಿಯರಿಗೂ ತಿಳಿದಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೆ ದಿನವಷ್ಟೇ ರಾಜಪರಿವಾರ ಕಾಂಚೀಪುರದ ಪ್ರವಾಸದಿಂದ ಹಿಂದಿರುಗಿತ್ತು. ಹೋಗುವಾಗ ಅತೀ ಉತ್ಸಾಹದ ಚಿಲುಮೆಯಂತಿದ್ದ ರಾಣಿ ಬರುವಾಗ ಚಿಂತೆಯ ಮುದ್ದೆಯಾಗಿದ್ದಳು. ದಾಸಿಯರು ಪರಿಪರಿಯಾಗಿ ವಿಚಾರಿಸಿದರೂ ಏನೂ...

ಅಂಕಣ

ಬೇಲಿ

 ಜನಸಾಮಾನ್ಯ ಜಾತಿ–ಧರ್ಮಗಳ ಪರಿವೆಯನ್ನು ಮರೆತು ತನ್ನ ನಿತ್ಯದ ಜೀವನವನ್ನು ನಡೆಸುತ್ತಿರುತ್ತಾನೆ. ಮುಸ್ಲಿಮರ ಅಂಗಡಿಗಳಲ್ಲಿ ಕೊಂಡ ಬಟ್ಟೆಯನ್ನು ಉಡುತ್ತಾನೆ; ಕ್ರೈಸ್ತರ ಅಂಗಡಿಗಳಲ್ಲಿ ಕೊಂಡ ಬ್ರೆಡ್ದನ್ನು ತಿನ್ನುತ್ತಾನೆ; ದಲಿತರಿಂದ ತರಕಾರಿಗಳನ್ನು ಕೊಂಡುತಂದು ಅಡಿಗೆ ಮಾಡಿಕೊಂಡು ಉಣ್ಣುತ್ತಾನೆ. ಊದಿನಕಡ್ಡಿ, ಕರ್ಪೂರಗಳನ್ನು ಯಾರು ತಯರಿಸಿರಬಹುದು ಎಂಬ ಬಗ್ಗೆ...

ಅಂಕಣ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂಬೆರಡು ಚಾಣಾಕ್ಷಮತಿಗಳು

ನೀವು ಈ ನನ್ನ ಲೇಖನವನ್ನು ಮೇ 23, 2019 ರ ಮತ ಎಣಿಕೆಯ ನಂತರ ಇನ್ನೊಮ್ಮೆ ಓದಬೇಕಾಗಬಹುದು… ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕೀಯ ಚಾಣಾಕ್ಷತನಕ್ಕೆ ಬಹುಶಃ ಭಾರತದ ರಾಜಕಾರಣದಲ್ಲಿ ಸಮನಾಗಿ ನಿಲ್ಲುವವರು ಬೇರಾರು ಇರಲಿಕ್ಕಿಲ್ಲ. ರಾಜಕೀಯ ವಿರೋಧಿಗಳನ್ನು ಬಹುದೂರದಿಂದಲೇ ಗುರುತಿಸಿ ತಮಗೆ ಅಪಾಯ ತಟ್ಟುವುದರೊಳಗೆ ಇನ್ನಿಲ್ಲದಂತೆ ಮಾಡಬಲ್ಲರು. ಚಳುವಳಿಯೊಂದರ ಮೂಲಕ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಕಾರಿನಲ್ಲಿ ಏನು?

‘ಅಮೇರಿಕೆಗೆ ಬಂದು ಮುವತ್ತು ವರ್ಷಗಳಾದುವು. ಇಲ್ಲಿನ ಜೀವನಕ್ಕೆ ಪೂರ್ಣ ಹೊಂದಿಕೊಂಡು ಬಿಟ್ಟಿದ್ದೇನೆ. ಈ ಊರಿಗೆ ಬಂದೇ ಹದಿನಾಲ್ಕು ವರ್ಷವಾಯಿತು ನೋಡಿ.’ ವಾಕಿಂಗ್ ಹೋಗುತ್ತ ನಾಯಿಯ ಚೈನು ಹಿಡಕೊಂಡು ಹೋಗುತ್ತಿದ್ದ ಮಾಬನೆಂದನು. ರಸ್ತೆಯ ಎರಡೂ ಕಡೆಯೂ ಮನೆಗಳು. ವಿಶಾಲ ಹಿತ್ತಿಲವು. ಹಿಂದೆ ಮುಂದೆ ಎಲ್ಲ ಮರಗಿಡ ಬೆಳೆಸಿ, ಅಲ್ಲಲ್ಲಿ ಹೂಗಿಡ, ಹಸಿರು ಹುಲ್ಲು...

ಪ್ರಚಲಿತ

Featured ಪ್ರಚಲಿತ

ಜಾಲತಾಣಗಳಿಗೆ ಮೂಗುದಾರ: ಕರ್ನಾಟಕದಲ್ಲಿ ಬರಲಿದೆಯೇ ಅಘೋಷಿತ ಎಮರ್ಜೆನ್ಸಿ?

ಆ ಘಟನೆ ಇನ್ನೂ ಹಸಿರಾಗಿದೆ. ಫೇಸ್ಬುಕ್ನಲ್ಲಿ ನಿಲುಮೆ ಎಂಬ ಗ್ರೂಪ್ನಲ್ಲಿ ವಿವೇಕಾನಂದರ ಕುರಿತ ಒಂದು ಲೇಖನದ ಲಿಂಕ್ಅನ್ನು ಯಾರೋ ಹಂಚಿಕೊಂಡಿದ್ದರು. ವಿವೇಕಾನಂದರು ರೋಗಿಷ್ಠರಾಗಿದ್ದರು, ಮೂವತ್ತೊಂದು ಕಾಯಿಲೆಗಳಿಂದ ನರಳುತ್ತಿದ್ದರು, ತಿಂಡಿಪೋತರಾಗಿದ್ದರು, ಮಾಂಸದಡುಗೆ ಮಾಡುತ್ತಿದ್ದರು, ಶಿಕ್ಷಕನಾಗಲು ನಾಲಾಯಕ್ ಎನ್ನಿಸಿಕೊಂಡು ಕೆಲಸ ಕಳೆದುಕೊಂಡಿದ್ದರು ಎನ್ನುತ್ತ...

ಪ್ರಚಲಿತ

ಉಕ್ಕಿನ ಮನುಷ್ಯನಿಗೆ ಒಲಿದು ಬರಲಿ ದೇಶದ ಪರಮೋಚ್ಚ ಹುದ್ದೆ!!

ಲಾಲ್ ಕೃಷ್ಣ ಅಡ್ವಾಣಿ!!!ಈ ಹೆಸರು ಕೇಳಿದ ಕೂಡಲೇ ಬಿಜೆಪಿ ಅಭಿಮಾನಿಯೊಬ್ಬನಿಗೆ ಆಗುವ ರೋಮಾಂಚನ, ಹೆಮ್ಮೆ, ಮನಸ್ಸಲ್ಲಿ ಮೂಡುವ ಗೌರವ ಅಷ್ಟಿಷ್ಟಲ್ಲ. ಇವತ್ತು ಭಾರತೀಯ ಜನತಾ ಪಕ್ಷ ಈ ಪರಿ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ಅಡ್ವಾಣಿಯೆಂಬ ಮಹಾಪುರುಷನ ಕೊಡುಗೆ ಅಪಾರ. ರಾಮ ನಾಮ ಮತ್ತು ಹಿಂದುತ್ವದ ಮೂಲಕ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿದ ಕೀರ್ತಿ...

Featured ಪ್ರಚಲಿತ

ಉಘೇ ಉಘೇ ನಮೋ…. ಮೋದಿ ಸರ್ಕಾರದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ...

ಪಂಚರಾಜ್ಯ ಚುನಾವಣೆಗಳಲ್ಲಿ ದೇಶದ ರಾಜಕೀಯ ಪ್ರಿಯರಲ್ಲಿ ಬಹಳ ಕುತೂಹಲವನ್ನು ಮನೆ ಮಾಡಿಸಿದ್ದ, ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇತ್ತಾದರೂ ಇಷ್ಟೊಂದು ಬೃಹತ್ ಮಟ್ಟದಲ್ಲಿ ಗೆಲುವು ದಕ್ಕುತ್ತದೆಂದು ಸ್ವತಃ ಕೇಸರಿ ಬ್ರಿಗೇಡ್...

Featured ಪ್ರಚಲಿತ

ಕಮ್ಯುನಿಸಂನ ಚಿಮ್ಮುಹಲಗೆಯಾಗದಿರಲಿ ಕರುನಾಡ ಕರಾವಳಿ!!

ಆತ ಹದಿಹರೆಯದ ತರುಣ. ಬಾಲ್ಯದಿಂದಲೇ ನಮಸ್ತೇ ಸದಾ ವತ್ಸಲೇಯನ್ನು ಪ್ರತಿದಿನ ಹಾಡಿ ಬೆಳೆದವ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡು ರಾಷ್ಟ್ರಕಾರ್ಯದಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದರಿಂದಾಗಿ ಪಿಯು ಶಿಕ್ಷಣ ಮಾಡುತ್ತಿರುವಾಗಲೇ ಎರ್ನಾಕುಲಂನ ಕಣ್ಣಾಮಲೈಯ ಸಹಕಾರ್ಯವಾಹ ಜವಾಬ್ದಾರಿಯೂ ಆತನ ಹೆಗಲಿಗೇರಿತ್ತು. ಎಂದಿನಂತೆ...

ಪ್ರಚಲಿತ

ಅಷ್ಟಕ್ಕೂ ಜನರಲ್ ರಾವತ್ ಹೇಳಿಕೆಯಲ್ಲಿ ತಪ್ಪೇನಿದೆ?

ಕಳೆದ ವಾರದ ಸುದ್ದಿ ಚಾವಡಿಯಲ್ಲಿ ಉತ್ತರ ಪ್ರದೇಶದ ಚುನಾವಣೆಯ ಭರಾಟೆ, ತಮಿಳ್ನಾಡಿನ ರಾಜಕೀಯದ ಹೈಡ್ರಾಮಾ ಮತ್ತು ಜಗತ್ತನ್ನೇ ನಿಬ್ಬೆರಗಾಗಿಸಿದ ನಮ್ಮ ಹೆಮ್ಮೆಯ ಇಸ್ರೋದ ಸಾಧನೆಯ ಜೊತೆಜೊತೆಗೆ ಕಾಶ್ಮೀರ ಕಣಿವೆಯಲ್ಲಿ ನಮ್ಮ ಸೈನಿಕರ ವಿರುದ್ಧ ಸದಾ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರಿಗೆ ಸಹಾಯ ಮಾಡುವ ದೇಶದ್ರೋಹಿ ಕುನ್ನಿಗಳಿಗೆ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಬಿಪಿನ್...

ಪ್ರಚಲಿತ

ಕೃಷ್ಣ ಪಾಂಚಜನ್ಯ ಕಹಳೆಯಿಂದ ಅಸ್ತವ್ಯಸ್ತವಾಗುತ್ತಾ ರಾಜ್ಯ ಹಸ್ತ??

೨೦೦೪ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಕಾಲವದು. ಜನತಾ ಪರಿವಾರ ಒಡೆದು ಚೂರಾದ ಮೇಲೆ ದೇವೇಗೌಡರು ಕಟ್ಟಿದ್ದ ಜೆಡಿಎಸ್ ಬಿಟ್ಟು ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸಾಧ್ಯ ಅನ್ನೋ ತೀರ್ಪನ್ನು ರಾಜ್ಯದ ಮತದಾರ ಕೊಟ್ಟಿದ್ದ. ಸಹಜವಾಗಿಯೇ ಸೋಕಾಲ್ಡ್ ಜಾತ್ಯಾತೀತ ಪಕ್ಷವಾಗಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸೋ ಪ್ರಕ್ರಿಯೆ...

ವೈವಿದ್ಯ

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ತೂಗು ಸೇತುವೆಯಲ್ಲಿ

ಏಳು ಸಮುದ್ರ ದಾಟುವುದೆಂದು ನಿಶ್ಚಯಿಸಿದಾಗ ಹೇಗೆ, ಯಾವಾಗ ಎಂದೆಲ್ಲಾ ನಿಗದಿಪಡಿಸಬೇಕಲ್ಲ. ನಿಶ್ಚಯ ಮಾಡಿದವರು ಮಕ್ಕಳು, ಕಾರ್ಯರೂಪಕ್ಕೆ ತರುವವರೂ ಮಕ್ಕಳು. ನಾವು ಕೀಲುಗೊಂಬೆಗಳು. ನಮಗೇನು ಗೊತ್ತಾಗಬೇಕು ಈ ಸಮುದ್ರ ದಾಟುವ ಪರಿ. ನಮ್ಮ ಕಲ್ಪನೆಯಲ್ಲಿ ನಾವು ಅಂದುಕೊಳ್ಳಬಹುದು,  ಊರು-ಪರಊರು ಎರಡನ್ನೂ ಜೋಡಿಸುವ ಒಂದು ತೂಗು ಸೇತುವೆ ಇದ್ದರೆ ಯಾವ ಜಂಜಾಟವೂ ಇಲ್ಲದೆ ಕೈಚೀಲ...

ಪ್ರವಾಸ ಕಥನ

ಹಂಪಿಯೆನ್ನುವ ಅದ್ಭುತ

ದೇಶದ ಯುವಕ-ಯುವತಿಯರಲ್ಲಿರುವ ಸಿಂಹವನ್ನು ಬಡಿದೆಬ್ಬಿಸಿ ಭಾರತವನ್ನು ಮತ್ತೆ ವಿಶ್ವಗುರು ಮಾಡುವುದಕ್ಕೊಸ್ಕರ ರಾಜ್ಯದ ನಾನಾ ಭಾಗಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಯುವಕರು ಸೇರಿ 2014ರ ಜುಲೈ 27 ರಂದು ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವುದರ ಮೂಲಕ “ಉತ್ತಿಷ್ಠ ಭಾರತ” ಉದ್ಘಾಟನೆಗೊಂಡಿತು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ...

ಅಂಕಣ ಪ್ರವಾಸ ಕಥನ

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ...

Featured ಅಂಕಣ ಪ್ರವಾಸ ಕಥನ

ತಮಿಳುನಾಡಿನ ಸುಂದರ ದೇವಾಲಯಗಳು

ಕಳೆದ ದಸರಾದಲ್ಲಿ ಕಾಶೀ ವಿಶ್ವನಾಥನ ದರ್ಶನ ಪಡೆದಿದ್ದ ನಾವು ಈ ಬಾರಿಯ ದಸರಾ ರಜೆಯಲ್ಲಿ ರಾಮೇಶ್ವರ ಹೊರಡುವ ಯೋಜನೆ ಹಾಕಿಕೊಂಡಿದ್ದೆವು. ಕಾಶೀ ಹೋಗಿ ಬಂದ ವರುಷದೊಳಗೆ ರಾಮೇಶ್ವರಕ್ಕೆ ಹೋಗಬೇಕೆಂಬ ಪ್ರತೀತಿ ನಮ್ಮಲ್ಲಿದೆ ಮತ್ತು ಕಾಶೀಯಿಂದ ತಂದ ಗಂಗಾಜಲದಿಂದ ಶ್ರೀ ರಾಮನಾಥನಿಗೆ ಅಭಿಷೇಕ ಮಾಡಿಸಬೇಕೆಂಬ ಪ್ರತೀತಿ ಕೂಡ. ದಸರಾ, ವಾರಂತ್ಯ ಮತ್ತು ಗಾಂಧೀ ಜಯಂತಿಗಳಿಂದ...