Author - Mamatha Channappa

ಅಂಕಣ

  “ಕಲಾತ್ಮ” – ರಂಗಭೂಮಿ ತಂಡ..

ಬೆಂಗಳೂರು ನಗರದ ರಂಗಭೂಮಿ ತಂಡಗಳಲ್ಲಿ “ಕಲಾತ್ಮ” ತಂಡ ಹೊಸತು ಮತ್ತು ವಿಶಿಷ್ಟವಾದದ್ದು. ಸಾಮಾನ್ಯವಾಗಿ ಹೊಸ ತಂಡಗಳು ಆಡಿಷನ್ಸ್ ಕರೆದು ಪ್ರತಿಭಾನ್ವೇಷಣೆ ನಡೆಸಿ ಆಯ್ಕೆ ಪ್ರಕ್ರಿಯೆ ಕೈಗೊಂಡರೆ, ಕಲಾತ್ಮ ತಂಡವು ರಂಗಭೂಮಿಯಲ್ಲಿ ಆಸಕ್ತಿಯಿರುವ ಯಾರನ್ನೂ ಬೇಕಾದರೂ ತಂಡಕ್ಕೆ ಸೇರಿಸಿಕೊಳ್ಳುತ್ತದೆ ಮತ್ತು ಉಚಿತವಾಗಿ ಅವರನ್ನು ವಿವಿಧ ಚಟುವಟಿಕೆಗಳ ಮೂಲಕ...

ಅಂಕಣ

ಕನ್ನಡ ಮಹಿಳಾ ಸಾಹಿತ್ಯ – ಅಂದಿನಿಂದ – ಇಂದು

ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಆಚರಿಸಿದ್ದೇವೆ.ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮನಾಗಿ ನಿಂತಿದ್ದಾಳೆ. ಸಾಹಿತ್ಯ, ಸಂಗೀತ,ವೈಧ್ಯಕೀಯ, ವಿಜ್ಞಾನ, ಧಾರ್ಮಿಕ, ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ.. ಇದೊಂದು ಸಾಹಿತ್ಯಕ್ಕೆ ಸಂಬಂದಿಸಿದ ವೇದಿಕೆಯಾಗಿದ್ದರಿಂದ...

ಕಥೆ

ಪಾರಿ ಭಾಗ-೧೨

   “ನಿಮ್ ಗೌಡನ್ ಮನಿಗೆ ನಾವ್ಯಾಕ  ಬರ್ಬೆಂಕತ? ನಮ್ ಪಾರಿ ಒದ್ದಾಡಿದ್ ಸಾಕ್ ಹೋಗು..ನಾವ್ಯಾರ್ ಮನಿಗೂ ಬರಲ್ಲ..ನಿಮ್ ಗೌಡಗ ಹೇಳ್ ಹೋಗ ಬಿಕನಾಸಿ..ನಾವ್ ಬರಲ್ಲಂತ…ಇನ್ನ ಗೌಡ ಈ ಕಡಿ ತೆಲಿ ಹಾಕಿದ ಅಂದ್ರ ಆಗುದ ಬ್ಯಾರೆ..ಎಷ್ಟಂತ ತಡ್ಕೊಳೋನು. ಹೋಗ ಭಾಡ್ಯಾ..ಬಂದ್ಬಿಟ್ಟ ಕರಿಯಾಕ..!!” ಎಂದು ಗೌಡರ ಆಳು ಮರಿಯಪ್ಪನನ್ನು ಮಲ್ಲವ್ವ ತರಾಟೆಗೆ...

ಕಥೆ

ಪಾರಿ ಭಾಗ-೧೧

ಹಿಂದಿನ ಭಾಗ: ಪಾರಿ ಭಾಗ-೧0   ಮಹದೇವಸ್ವಾಮಿ ಮದುವೆಯಾದ ಹುಡುಗಿಗೆ ಮೂರ್ಛೆ ರೋಗ ಇರುವ ವಿಚಾರ ಮದುವೆಯಾದಾಗಲೇ ಗೊತ್ತಾಗಿತ್ತು. ಜೊತೆಗೆ ಮೈಮೇಲೆ ಅಲ್ಲಲ್ಲಿ ಚಿಕ್ಕದಾಗಿ ಹರಡಿಕೊಂಡಿರುವ  ಸೋರಿಯಾಸಿಸ್ ಅನ್ನುವ ಚರ್ಮದ ಕಾಯಿಲೆ ಬೇರೆ ಇತ್ತು..ಇತ್ತಿಚೆಗೆ ಮಹದೇವಸ್ವಾಮಿಗೆ ಸಾಂಸಾರಿಕ ಜೀವನವೇ ಸಾಕಾಗಿ ಹೋಗಿತ್ತು.ಎರಡು ಗಂಡು ಮಕ್ಕಳು ಹುಟ್ಟಿದ್ದರೂ ಒಂದು ಮಗುವಿಗೆ ಮೂರ್ಛೆ...

ಅಂಕಣ

ಅವಳು ಬದುಕ ಕಲಿಸಿದವಳು

 ಬದುಕಿನಲ್ಲಿ ಪ್ರೀತಿಯೇ ಮುಖ್ಯಾನ!? ಅಥವಾ ಬದುಕುವುದು ಮುಖ್ಯಾನ!? ಅನ್ನೋದರ ಗೊಂದಲಕ್ಕೆ ಅರ್ಜುನ್’ರವರ ನೈಜ ಘಟನೆಗಳ ಆಧಾರಿತ ಕಾದಂಬರಿ ತಕ್ಕ ಮಟ್ಟಿಗೆ ಉತ್ತರಿಸುತ್ತದೆ.ಸಾಧಾರಣ ಕಥೆಯಂತಿದ್ದರೂ ಜೀವನದ ಪಾಠ ಮತ್ತು ಮಾನಸಿಕ ಹೋರಾಟವನ್ನು ಕಾದಂಬರಿ ತೆರೆದಿಡುತ್ತದೆ.. ಕಾದಂಬರಿಯಲ್ಲಿ ಜೀವಂತ ಪಾತ್ರಗಳಿಗೆ “ಅವಳು” ಎಂದು ಉಲ್ಲೇಖಿಸಿದ್ದು ವಿಶೇಷ...

ಕಥೆ

ಪಾರಿ ಭಾಗ-೧೦

  ಪಾರಿ ಏನೂ ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಳು.ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದವು.ಪಕ್ಕದಲ್ಲಿ ಮಹೇಶ ಮೌನವಾಗಿ ನಿಂತುಕೊಂಡಿದ್ದ.ತನಗೊಂದು ದಾರಿ ತೋರಿಸಿದ ಅವಳ ಪ್ರೀತಿಯ “ಯಲ್ಲಪ್ಪಣ್ಣ”ಇಂದು ಜೀವನ್ಮರಣದ ಹೋರಾಟ ನಡೆಸುತ್ತಾ ಆಸ್ಪತ್ರೆಯಲ್ಲಿದ್ದ. ಯಲ್ಲಪ್ಪ ಓಡಿಸಿಕೊಂಡು ಬರುತ್ತಿದ್ದ ಬೈಕಿಗೆ ಲಾರಿಯೊಂದು ಜೋರಾಗಿ ಬಂದು ಗುದ್ದಿತ್ತು...

ಕಥೆ

ಪಾರಿ ಭಾಗ-೯

ಪಾರಿ ಸಿಕ್ಕ ಸುದ್ದಿಯನ್ನು ಯಲ್ಲಪ್ಪನಿಂದ ತಿಳಿದ ಸುಬ್ಬಣ್ಣನವರಿಗೆ ಸಮಾಧಾನವಾಗಿತ್ತು. ಪಾರಿ ಯಲ್ಲಪ್ಪನ ಹತ್ತಿರ ಎಲ್ಲ ಗೋಳು ಹೇಳಿಕೊಂಡು ಅತ್ತಿದ್ದಳು.ಅವಳಿಗೆ ತಿಳಿಹೇಳಿದ ಯಲ್ಲಪ್ಪ “ನೀ ಸ್ವಲ್ಪ ದಿವ್ಸ್ ಊರಿನ್ ಸುದ್ದಿ ಮರ್ತು ಬಿಡು..ಆಮ್ಯಾಲ ನೋಡುನಂತ..ನೀ ಈಗ ಮತ್ತ ಊರ್ಗೆ ಹೋದ್ರ ಇಲ್ಲದ್ ಪ್ರಶ್ನೆ ಕೇಳಿ ನಿನ್ ತೆಲೆ ಹಾಳ್ ಮಾಡ್ತಾರ..ಮತ್ತ ನಿನ್ ಬದಕಾಕ...

ಕಥೆ

ಪಾರಿ ಭಾಗ-೮

ಸಾವಿತ್ರಮ್ಮನವರು ಬೆಳಿಗ್ಗೆ ಬೆಳಿಗ್ಗೆಯೇ ಜೋರು ಧ್ವನಿಯಲ್ಲಿ ” ಮಾದೇವಾ..ಮಾದೇವಾ..ಏಳ ಮ್ಯಾಲ..ಪಾರಿ ಕಾಣವಲ್ಲು..ಮತ್ಯಾರ ಮನಿ ಹಾಳ ಮಾಡಾಕ ಹೋಗ್ಯಾಳ ನೋಡ್ ನಡಿಯ..ಎಂತಾಕಿನ ತಂದು ಮನಿ ಹೋಗ್ಸಿದೀ..ಇನ್ನೂ ಅದೇನನ್ ಕರ್ಮ ನೋಡ್ಬೇಕೋ..ಅಯ್ಯ ದೇವ್ರ..ನಮಗ ಯಾಕ ಇಂತಾದ್ದು ಕೊಡ್ತಿಯಪ್ಪಾ..”ಎಂದು ಹಣೆ ಬಡಿದುಕೊಂಡು ಅತ್ತಂತೆ ನಾಟಕ ಮಾಡತೊಡಗಿದರು.ಅಂಗಳ...

ಕಥೆ

ಪಾರಿ ಭಾಗ -೭

 ಹೇಳಿ ಕೇಳಿ ಮಧ್ಯರಾತ್ರಿಯ ಹೊತ್ತು..ಕಾಲ್ಗೆಜ್ಜೆಯ ಸದ್ದಿಗೆ ಸುಬ್ಬಣ್ಣನವರು ತುಸು ಬೆದರಿದರು. ಗದ್ದೆಗೆ ನೀರು ಹಾಯಿಸುವ ವಿಷಯದಲ್ಲಿ ಅವರು ಆಳುಗಳನ್ನು ನಂಬದೇ ತಾವೇ ಖುದ್ದಾಗಿ ಬರಲು ಕಾರಣವಿತ್ತು‌.ಎರಡು ಮೂರು ಬಾರಿ ನೀರು ಹಾಯಿಸಲೆಂದು ಗೊತ್ತು ಮಾಡಿದ ಆಳುಗಳು ಮೋಟಾರು ನಿಲ್ಲಿಸದೇ ಹಾಗೆಯೇ ಮಲಗಿಬಿಟ್ಟಿದ್ದರು. ಇದರಿಂದ ನೀರು ಪೋಲಾಗಿದ್ದಲ್ಲದೇ ಬೆಳೆಗೂ...

ಕಥೆ

ಪಾರಿ ಭಾಗ ೬

ಪಾರಿಯ ಬದುಕಲ್ಲಿ ಮತ್ತದೇ ಕರಾಳ ದಿನಗಳು ಪ್ರಾರಂಭವಾದಾಗ ಪಾರಿ ಖಿನ್ನತೆಯ ಕೊನೆಯ ಹಂತ ತಲುಪಿದ್ದಳು.ಅವರ ತಿರಸ್ಕಾರಕ್ಕೆ ಅವರು ಕೊಟ್ಟ ಅನ್ನವೂ ಸೇರದಂತಾಗಿತ್ತು.ಮತ್ತಾರು ತಿಂಗಳೊಳಗೆ ಬದುಕು ಬೇಡವೆನ್ನುವಷ್ಟು ಬೇಸರವಾಗಿತ್ತು ಪಾರಿಗೆ‌.ಪಾರಿ ಪೂರ್ಣ ಕೃಶಳಾಗಿದ್ದಳು.  ಅದೊಂದು ದಿನ ಊರ ಪಂಚರರಲ್ಲೊಬ್ಬರಾದ ಸುಬ್ಬಣ್ಣನವರು ಶಾಂತಸ್ವಾಮಿಗಳ ಮನೆಗೆ ಮಗಳ ಮದುವೆಗೆ ಒಳ್ಳೆಯ...