ಮೋದಿ ಅಂಬಾನಿ ಆದಾನಿಗಳಿಗೆ ಲಾಭ ಮಾಡಿದ್ದಾರೆ ಎನ್ನುವವರು ಕೆಳಗಿನ ಯೋಜನೆ ಮತ್ತು ಫಲಾನುಭವಿಗಳ ಲೆಕ್ಕಗಳನ್ನು ಗಮನಿಸಿ. ಇದರಲ್ಲೂ ಅಂಬಾನಿ ಆದಾನಿ ಕಂಡರೆ ನಿಮಗೆ ದೃಷ್ಟಿದೋಷವಿರಬಹುದು ಒಮ್ಮೆ ಪರೀಕ್ಷಿಸಿ.
೧. ಅಟಲ್ ಪಿಂಚಣಿ ಯೋಜನೆಯಲ್ಲಿ 1.37 ಕೋಟಿ ಜನ ಖಾತೆ ತೆರೆದಿದ್ದು 60 ವರ್ಷದ ನಂತರ ಪಿಂಚಣಿ ಪಡೆಯಲಿದ್ದಾರೆ.
೨. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 1.53 ಕೋಟಿ ಕುಟುಂಬಗಳು ಸೂರು ಕಂಡುಕೊಂಡಿವೆ.
೩. ವಾರ್ಷಿಕ 12 ರೂಪಾಯಿ ಕಟ್ಟಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡು ತಮ್ಮ ಭವಿಷ್ಯದಲ್ಲಿ ಭದ್ರತೆಯನ್ನು ಕಂಡುಕೊಂಡ ಜನ 14.64 ಕೋಟಿ.
೪. ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿಯಲ್ಲಿ 14.24 ಕೋಟಿ ರೈತರು ಬೆಳೆ ನಷ್ಟವಾದರೆ ಸರ್ಕಾರದಿಂದ ಹಣ ಪಡೆಯಲಿದ್ದಾರೆ.
೫.ಸೌಭಾಗ್ಯ ಯೋಜನೆಯಡಿಯಲ್ಲಿ ಬೆಳಕು ಕಂಡ ಮನೆಗಳು 2.55 ಕೋಟಿ.
೬.ಜನಧನ್ ಯೋಜನೆಯಲ್ಲಾದ ಅಕೌಂಟುಗಳು 34.84 ಕೋಟಿ.
೭.ಜೀವನ್ ಪ್ರಮಾಣ್ ಯೋಜನೆಯಡಿಯಲ್ಲಿ 2.52 ಕೋಟಿ ಪಿಂಚಣಿದಾರರು ಮನೆಯಿಂದಲೇ ತಮ್ಮ ಇರುವಿಕೆಯನ್ನು ದೃಢೀಕರಿಸುತ್ತಿದ್ದಾರೆ.
೮. 18.93 ಕೋಟಿ ರೈತರ ಭೂಮಿಗೆ ಮಣ್ಣಿನ ಆರೋಗ್ಯ ಕಾರ್ಡ್ ಲಭಿಸಿದೆ.
೯.ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಫಲಾನುಭವಿಗಳು 5.67 ಕೋಟಿ.
೧೦.eNAM 1.46ಕೋಟಿ ರೈತರು ಮಾರುಕಟ್ಟೆಯ ನೇರ ಸಂಪರ್ಕದಲ್ಲಿದ್ದಾರೆ.
೧೧.ಸ್ವಚ್ಛ ಭಾರತ್ ಅಭಿಯಾನದಲ್ಲಿ ಕಟ್ಟಿದ ಶೌಚಾಲಯಗಳ ಸಂಖ್ಯೆ 9.67 ಕೋಟಿ, 5.40 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ.
೧೨.ಇಂದ್ರಧನುಷ್ ಯೋಜನೆಯಡಿಯಲ್ಲಿ ಲಸಿಕೆ ಪಡೆದ ಮಕ್ಕಳು 3.38 ಕೋಟಿ.
೧೩.ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದು ಸ್ವ ಉದ್ಯೋಗ ಕಂಡುಕೊಂಡು ಸ್ವಾವಲಂಬಿಗಳಾದವರ ಸಂಖ್ಯೆ 16.63 ಕೋಟಿ
೧೪.ಉಜಾಲಾ ಯೋಜನೆಯ ಅಡಿಯಲ್ಲಿ 34 ಕೋಟಿ ಬಲ್ಬ್ ವಿತರಣೆ
೧೫.ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ 1.40ಕೋಟಿ
೧೬. ಉಜ್ವಲಾ ಯೋಜನೆಯಡಿಯಲ್ಲಿ ಹೊಗೆ ಮುಕ್ತವಾದ ಮನೆಗಳ ಸಂಖ್ಯೆ 7.10 ಕೋಟಿ
೧೭.ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ರೂ. 6000 ವಾರ್ಷಿಕ ಹಣ ಪಡೆಯುವ ನೋಂದಾಯಿತ ರೈತರ ಸಂಖ್ಯೆ 10 ಕೋಟಿ.
೧೮. 2014ರಲ್ಲಿ 99 ಜನೌಷಧಿ ಕೇಂದ್ರಗಳಿದ್ದವು; ಈಗ ಅವುಗಳ ಸಂಖ್ಯೆ 5050ಕ್ಕೂ ಹೆಚ್ಚು. ಅಲ್ಲಿ ಸಿಗುವ ಔಷಧಿ ಮಾತ್ರೆಗಳ ಸಂಖ್ಯೆ 2014ರಲ್ಲಿ 200; ಸದ್ಯ 800ಕ್ಕಿಂತಲೂ ಜಾಸ್ತಿ.
೧೯.ಆಯುಷ್ಮಾನ್ ಭಾರತದ ಅಡಿಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯಯುವ ಬಾಳ್ವೆ ನಡೆಸುತ್ತಿರುವವರ ಸಂಖ್ಯೆ 12 ಲಕ್ಷ.
೨೦.ಸುಕನ್ಯಾ ಸಮೃದ್ಧಿಯಲ್ಲಿ ತೆರೆಯಲ್ಪಟ್ಟ ಅಕೌಂಟುಗಳ ಸಂಖ್ಯೆ 1.52ಕೋಟಿ. ಜಮೆಯಾದ ಹಣ 25,979 ಕೋಟಿ.
೨೧.ನಿಕ್ಷಯ ಪೋಷನ್ ಯೋಜನೆಯಡಿಯಲ್ಲಿ 8 ಲಕ್ಷ ಕ್ಷಯ ರೋಗಿಗಳಿಗೆ ಡೈರೆಕ್ಟ್ ಬೆನಿಫಿಟ್ ಯೋಜನೆಯ ಮುಖೇನ ಹಣ ಸಂದಾಯ.
ಇದರಲ್ಲಿ ಅಂಬಾನಿ ಆದಾನಿಯರನ್ನು ಹುಡುಕಿ… ಬಡವರಿಗಾಗಿ ಕೇಂದ್ರ ಸರ್ಕಾರ
#ಪ್ರತಿದಿನ_ಪ್ರಧಾನಿ ೨