Author - Rajesh Rao

ಅಂಕಣ

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ

           ಅಹಮದ್ ಶಾ ಅಬ್ದಾಲಿ. 1761ರ ಪಾಣಿಪತ್ ಯುದ್ಧದ ಮೂಲಕ ಚರಿತ್ರೆಯಲ್ಲಿ ದಾಖಲಾದ ಹೆಸರು. ಅಪ್ಘಾನಿಸ್ತಾನ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಅಹಮದ್ ಶಾ ಅಬ್ದಾಲಿಯನ್ನು ತಮ್ಮ ರಾಷ್ಟ್ರಪಿತ ಎಂದೇ ಆಧುನಿಕ ಅಪ್ಘನ್ನರು ಭಾವಿಸಿದ್ದಾರೆ. 1762ರಲ್ಲಿ ಸಿಖ್ಖರ ಘಲ್ಲುಘಾರವನ್ನೇ (ಜನಾಂಗೀಯ ಹತ್ಯೆ) ಹಮ್ಮಿಕೊಂಡ ಈತ ಅಮೃತಸರದ ಹರ್ ಮಂದಿರ ಸಾಹಿಬವನ್ನೇ...

ಅಂಕಣ

ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ

          ಸ್ವಾತಂತ್ರ್ಯ. ಅದರಿಚ್ಛೆ ಯಾರಿಗಿಲ್ಲ? ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಅಥವಾ ನಿತ್ಯರೂಢಿಯಿಂದ ಅದೇ ಅಭ್ಯಾಸವಾಗಿಬಿಡುವ ಕಾರಣ ಸುಮ್ಮನುಳಿಯುತ್ತದೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ನಿತ್ಯ...

Featured ಅಂಕಣ ಪ್ರಚಲಿತ

ಕಾಶ್ಮೀರ “ಘರ್ ವಾಪಸಿ”ಯಾಗಿದೆ!

ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ಮು ಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ...

ಅಂಕಣ

ಗದ್ದಾರ್’ಗಳಿಗೂ ಚಾದರ ಅರ್ಪಿಸುವ ಭೋಳೇತನ

2010ರ ನವೆಂಬರಿನಲ್ಲಿ ಇಂಗ್ಲೆಂಡಿನ ಹೃದಯ ಭಾಗದ ದಕ್ಷಿಣ ಯಾರ್ಕ್ ಶೈರ್’ನ ರೋದೆರ್ ಹ್ಯಾಮ್ನಲ್ಲಿ ಅಪ್ರಾಪ್ತ ಹುಡುಗಿಯರ ಮೇಲಿನ ಲೈಂಗಿಕ ಶೋಷಣೆಯ ಪ್ರಕರಣ ದಾಖಲಿಸಿ ಐದು ಜನರನ್ನು ಕಾರಾಗೃಹಕ್ಕಟ್ಟಲಾಯಿತು. ತಮ್ಮಲ್ಲಿನ ಅಪಸವ್ಯಗಳನ್ನು ಜಗತ್ತಿನ ಮುಂದೆ ಮುಚ್ಚಿಡಲು ಯತ್ನಿಸುವ ಪಾಶ್ಚಾತ್ಯರ ಧೋರಣೆಯಿಂದಾಗಿ ಅದೇನು ದೊಡ್ಡ ಸುದ್ದಿಯಾಗಲೇ ಇಲ್ಲ. ಆದರೆ ಎರಡು ವರ್ಷದ...

Featured ಅಂಕಣ

ಅಲ್ಲಿ ಪ್ರಶ್ನೆಯಿಲ್ಲ… ಇಲ್ಲಿ ಉತ್ತರವೇ ಇಲ್ಲ!

ಎರಡು ರಾಜ್ಯಗಳು. ಎರಡೂ ಒಂದೇ ದೇಶದ ಅಂಗಗಳು. ಆದರೆ ಒಂದು ಉತ್ತರ ಇನ್ನೊಂದು ದಕ್ಷಿಣ; ಭೌಗೋಳಿಕವಾಗಿಯೂ, ಆಡಳಿತಾತ್ಮಕವಾಗಿಯೂ. ಒಂದು ಇದ್ದ ಕಪ್ಪು ಕಲೆಗಳನ್ನು ತೊಳೆದು ಶುಭ್ರಗೊಳಿಸುತ್ತ ಅಘನಾಶಿನಿಯಾಗುವತ್ತ ಸಾಗಿದ್ದರೆ, ಇನ್ನೊಂದು ಪಥ ಬದಲಿಸಿ ಕೆಂಗೇರಿ ಮೋರಿಯಾಗುವತ್ತ ಹೊರಳುತ್ತಿದೆ. ಒಂದೆಡೆ ಆರಕ್ಷಕ ಪಡೆ ಗೂಂಡಾಗಳನ್ನು, ಸಮಾಜವಿದ್ರೋಹಿಗಳನ್ನು ಬೆನ್ನತ್ತಿ...

Uncategorized

ಕ್ಷಾತ್ರವನ್ನಪ್ಪಿ ಸನಾತನ ಧರ್ಮವನ್ನು ಬೆಳಗಿದ ಪುಷ್ಯಮಿತ್ರನೆಂಬ ಆರ್ಷಪ್ರಜ್ಞೆ

ಅಶೋಕನ ಕಾಲಕ್ಕೇ ಬುದ್ಧ ತತ್ತ್ವ ಭ್ರಷ್ಟವಾಗಿತ್ತು. ಕ್ಷಾತ್ರತ್ತ್ವ ಸೊರಗಿತ್ತು. ಅಶೋಕ ಇತ್ತ ಸರಿಯಾಗಿ ಸನಾತನ ಧರ್ಮವನ್ನೂ ಅನುಸರಿಸಲಿಲ್ಲ. ಅತ್ತ ಅವನಿಗೆ ಬುದ್ಧನ ಬೆಳಕೂ ಸಿಗಲಿಲ್ಲ. ಅಶೋಕ ತಾನೊಬ್ಬನೆ ಬೌದ್ಧನಾಗಿ ಹೋಗಿದ್ದರೆ ಅದರಿಂದ ಸಮಸ್ಯೆಯೇನೂ ಇರಲಿಲ್ಲ. ಅವನು ಅದನ್ನು ಅನವಶ್ಯವಾಗಿ ಪ್ರಜೆಗಳ ಮೇಲೆ ಹೇರಿದ. ಚಾಣಕ್ಯ-ಚಂದ್ರಗುಪ್ತರ ಮಾರ್ಗದರ್ಶನದಲ್ಲಿ...

Featured ಅಂಕಣ

ಜಗವ ಬೆಳಗಿದ ಪುಣ್ಯಗರ್ಭೆ ಸರಸ್ವತಿ ಮತ್ತೆ ಚಿಮ್ಮಿದಳು!

ತಮಗಿಂತ ಶ್ರೇಷ್ಠರು ಯಾರಿದ್ದಾರೆ ಎಂದು ಅಹಂನಿಂದ ಬೀಗಿದವರಿಗೆ ಅವಳು ಕ್ರಿಸ್ತನಿಂದೀಚೆಗೆ ಕಂಡಳು. ಅವರಲ್ಲೇ ಸ್ವಲ್ಪ ಮುಕ್ತ ಮನಸ್ಥಿತಿಯವರು ಕ್ರಿಸ್ತನಿಗಿಂತಲೂ ಒಂದೂವರೆ ಸಾವಿರ ವರ್ಷಗಳ ಹಿಂದಿನ ಜನ್ಮದಿನಾಂಕವನ್ನು ಅವಳಿಗೆ ಕೊಡುವ ಉದಾರತೆ ತೋರಿದರು. ಆದರೆ ಅವಳ ಕೃಪೆಯಿಂದ ಉತ್ತುಂಗಕ್ಕೇರಿದ್ದ ನಾಗರಿಕತೆಯನ್ನು ಹೊರಗಿನಿಂದ ಬಂದ ಇಂದಿನವರ ಪೂರ್ವಜರೆನಿಸಿಕೊಂಡವರು ನಾಶ...

Featured ಅಂಕಣ

ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!

ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು  ಮೇರೆ ಮೀರಿದ ಅಬ್ಬರ...

ಅಂಕಣ

ಪದ್ಮಾವತಿಯ ಇತಿಹಾಸವನ್ನು ಯಥಾವತ್ ಇಳಿಸಲೇನು ಧಾಡಿ?

“ಬರೇ ರಾಣಿಯೊಬ್ಬಳೇಕೆ; ನಿಮ್ಮ ಜನಾನವನ್ನು ಅಲಂಕರಿಸಲು ರಾಣೀವಾಸದ ಸುಂದರ ಸ್ತ್ರೀಯರೆಲ್ಲರೂ ಬರುತ್ತಿದ್ದಾರೆ ಜಹಂಪನಾ” ಎನ್ನುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸಿ ಸುಲ್ತಾನನ ಕಾಮದ ಹುಚ್ಚು ಕೆರಳುತ್ತಿದೆ. ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುವ ದೃಶ್ಯವನ್ನು ನೋಡಿದ ಮೇಲಂತೂ ಸ್ವರ್ಗಕ್ಕಿನ್ನು ಮೂರೇ ಗೇಣು ಎಂಬಂತೆ ಹುಚ್ಚನಂತೆ ಕುಣಿಯುತ್ತಾನೆ...

ಅಂಕಣ

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು

ಭಾರತವನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರಿಗೆ ಇಲ್ಲಿನ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದ ಅವಶ್ಯಕತೆಯಿತ್ತು. ಅಂತಹಾ ಸಮಯದಲ್ಲಿ ಮದರಾಸು, ಮಲಾಬಾರ್, ಕೆನರಾ ಮತ್ತು ಮೈಸೂರು ಭಾಗಗಳ ಅಧ್ಯಯನಕ್ಕೆ ನಿಯುಕ್ತಿಗೊಂಡವನೇ ಕಲ್ಕತ್ತಾ ಏಷಿಯಾಟಿಕ್ ಸೊಸೈಟಿಯ ಸಂಶೋಧನಾ ವಿದ್ಯಾರ್ಥಿಯೂ ಪ್ರಾಚ್ಯ ವಸ್ತುಗಳ ಅಧ್ಯಯನಕಾರನೂ ಈಸ್ಟ್ ಇಂಡಿಯಾ...