Author - ಶ್ರೀ ತಲಗೇರಿ

ಅಂಕಣ

ಬೇಲಿ ಹಾಕಿರದ ಭೂಮಿ ಕತೆ – ಹೊಂಬಣ್ಣ

ಪ್ರಕೃತಿ, ಮನುಷ್ಯ, ಬದುಕು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವ ಸಂಗತಿಗಳು. ನಕಾಶೆಯಲ್ಲಿ ಗಡಿಗಳ ತಿದ್ದುವ ನಾವು, ಜಗತ್ತು ಏಕಮಾತ್ರ ಅನ್ನುವ ಪರಿಕಲ್ಪನೆಯನ್ನ ಮರೆತುಬಿಡ್ತೀವಿ. ಜೊತೆಗೆ ನಮ್ಮೊಳಗೇ ಬೇಲಿಗಳನ್ನಿಡುವ ಹುನ್ನಾರದ ಭಾಗವಾಗ್ತೀವಿ.. ಪ್ರಕೃತಿಯ ಅಂಗಳದಲ್ಲಿ ಎಲ್ಲ ಪ್ರಕಾರಗಳನ್ನೊಳಗೊಂಡ ಜನಸಮೂಹವಿದೆ. ಬೇಡಿಕೆಯೊಂದು ಸಂಘರ್ಷವಾದಾಗ, ಹಸಿರು ಬಣ್ಣ ಕೆಂಪು...

ಕವಿತೆ

‘ಸಾರಿಗೆ’..

ರಾಗ ಹಿಂಜುತಿದೆ ಸುಣ್ಣದುಂಡೆಯ ಹೆಣಕೆ ವಾಯುವಿಹಾರದ ಸಮಯ.. ಅಷ್ಟಷ್ಟೇ ಪೋಷಕಾಂಶ ತೇಗಿದ್ದಷ್ಟೇ, ಕಡಲಿನಲ್ಲಿ ಉಪ್ಪು ಹುಟ್ಟಿದ್ದು ತಿಳಿಯಲಿಲ್ಲ… ಬತ್ತಿಸಿಕೊಳ್ಳುವ ಗುಣವೂ ಇದೆ ಗಾಳಿಗೆ, ಯಾರೂ ಅರುಹಲಿಲ್ಲ.. ದೊಡ್ಡ ನೀಲಿ ಚಾದರದಲ್ಲಿ ಗುದ್ದಲಿಗಳ ಅತಿಕ್ರಮಣ ನಿಯತ ಆಕಾರಕ್ಕೆ ತೊಳೆದಿಟ್ಟ ಹಲ್ಲುಗಳ ಬಣ್ಣ.. ತೇಪೆಗಳ ತುದಿಯಲ್ಲಿ ರಕ್ತ ಇಣುಕುವುದಿಲ್ಲ...

ಕವಿತೆ

ಇದಿರು

ಕಲ್ಲು ಮೂಳೆಗೆ ಮಣ್ಣ ತೊಗಲು ಗೋಡೆ ಮೇಲೆ ಕುಂತ ಪಾತ್ರೆ ಹಗುರ ದಪ್ಪ ಉದ್ದ ವಿರಳ ಒರಟು ಡೊಂಕು ಕಣ್ಣ ತಂಪು ಅರ್ಧ ಸೀಳಿದ ನಗ್ನ ಸೌದೆ.. ಗೆದ್ದಲಿಡಿವ ಮುನ್ನ ಸೇರಿಕೊಂಡ ನೀರನೊಸರದ ತೆಂಗು ತೂತು ಕೊರೆದ ಮಧ್ಯ ಕೋಟೆ.. ತಿಕ್ಕಿಕೊಂಡ ಬಣ್ಣಗಳ ಕಾವಿಗೆ ಸುಟ್ಟಿಕೊಂಡವು ತಮ್ಮ ಕೂದಲು.. ಮಧ್ಯ ಮಧ್ಯ ಉಸಿರು ಅವಳದು…   ತಳವ ಸೋಕಿ ಗಾಳಿ ಜೀಕಿ ಅಲ್ಲೇ ನಿಂತುಕೊಂತು...

ಕವಿತೆ

ಅಂದು.. ಬಂದಿದ್ದೆ ನಾನು…

ದ್ರವ್ಯವೊಮ್ಮೆ ಬೆರೆವಾಗ ನಾಚಿ ಕರಗಿತ್ತು ಲವಣ ಆಯಸ್ಸುಗಳ ಪೇರಿಸುತ್ತ ಆಕಾರ ಪಡೆಯಿತು ಮೌನ.. ರಕ್ತ ಸೋರುವ ಬಳ್ಳಿಗರಳಿದ ಹೂವಿಗೆ ಶಿಶುವೆಂದು ನಾಮಕರಣ.. ಅಂದು.. ಬಂದಿದ್ದೆ ನಾನು..! ತುಂಬಿಟ್ಟುಕೊಂಡ ಚೀಲದಲ್ಲಿ ತೂರಿಬರುತ್ತಿದ್ದ ಆಹಾರ.. ತುರುಬಿಗೆ ಸಿಕ್ಕಿಸಿದ ಬಣ್ಣಗಳ ಆಗಾಗ ಹೇಳುತ್ತಿದ್ದಳು ಅವಳು.. ಕಥನದಂತಿದ್ದ ನಾನು ವಾಸ್ತವದ ಚಿಹ್ನೆಯಾಗಿದ್ದು ನರಳುವಿಕೆಯ...

ಕವಿತೆ

ಸಾಂತ್ವನ

ಪ್ರತಿ ಹುಣ್ಣಿಮೆಯ ಸರಿ ರಾತ್ರಿ ಬಸಿವ ಬೆಳದಿಂಗಳ ಬೊಗಸೆಯಲಿ ಹಿಡಿದಿಟ್ಟು ಇನ್ನೆರಡು ದಿನ ಬಿಸಿಲಲ್ಲೊಣಗಿಸಿ ಹೊಸ ನಕ್ಷತ್ರಗಳ ಅಂಟಿಸುತ್ತೇನೆ ಅಮಾವಾಸ್ಯೆಗೆ!.. ಒಮ್ಮೊಮ್ಮೆ ಮಿಂಚುಹುಳುಗಳು ಹುಟ್ಟಿಕೊಳ್ಳುತ್ತವೆ ನನ್ನ ಕಣ್ಣಿನಲ್ಲೂ..   ಹರಿದ ಜೋಗಿಯ ಅರಿವೆಯ ತೇಪೆ ಕೊನೆಯಲ್ಲಿ ಜೋಲುತಿಹ ತಂಬೂರಿ ಸ್ವರಗಳ ಕೊಡು ನನಗೆ.. ನೆಂದಿವೆ ಕಾಗದಗಳು ಶಾಯಿಯಲ್ಲಿ...

ಅಂಕಣ

ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು…

‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ… ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ...

ಅಂಕಣ

ಮಳೆಗಾಲದಲ್ಲಿ ನಾಕಂಡ ‘ಗ್ರಹಣ’

ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋ ವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ...

ಅಂಕಣ

“ಯಾನ”ದ ಜೊತೆ ಮಳೆಗಾಲದ ಸಂಜೆ…

ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’.. ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ.. ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ...

ಕವಿತೆ

ಖಾಲಿಯಾಗಬೇಕೆಂದಿದ್ದೇನೆ

ಬಿಸಿಯುಸಿರ ತುದಿಗೆ ಅಂಟಿಕೊಂಡಿಹ ಹೊಟ್ಟೆಕಿಚ್ಚಿನ ಹೊಗೆಯ ವಾಸನೆ.. ಅಸಹ್ಯವಾಗಿ ಮೈಯೆಲ್ಲಾ ಹರಡಿರುವ ನಾನೆಂಬ ಝೇಂಕಾರದ ಆಲಾಪನೆ.. ಮತ್ತೆಂದೂ ಎದೆಯ ತುಂಡಿನ ಬದಿಗೂ ಹುಟ್ಟದಂತೆ ಖಾಲಿಯಾಗಬೇಕೆಂದಿದ್ದೇನೆ… ನುಣುಪು ಸೀರೆಯ ಚಿತ್ತಾರದಾ ಅಂಚಲ್ಲಿ ಜಾರಿಬಿಡುವ ಜೋರು ತುಡಿತಗಳಿಗೆ ನನ್ನದಲ್ಲದ ಚಂದ್ರಬಿಂಬದ ಚಾವಡಿಯ ಒಳಗೆ ಹಚ್ಚೆ ಹಾಕುವ ಬೆರಳಿನೆಲ್ಲ ಉದ್ವೇಗಗಳಿಗೆ...

ಅಂಕಣ

ಸಂಜೆಗಡಲು-2

ಸಂಜೆಗಡಲು-1 ನನ್ನ ಅವನ ಬಾಂಧವ್ಯದಂತೆ ಈ ಕಡಲಿನೊಂದಿಗಿನ ಸಂಬಂಧ.. ಹಠಮಾಡಿ ಕಡಲ ತಡಿಯಲ್ಲೇ ಮಲಗಿದ ದಿನಗಳೆಷ್ಟಿಲ್ಲ?ನಾವು ಮೂವರೂ ಒಟ್ಟಾಗಿ ಕಳೆದ ಚಣಗಳೆಷ್ಟಿಲ್ಲ? ಈ ಕಡಲ ಮಡಿಲಲ್ಲಿ..! ಎಂದು ಅಂದುಕೊಳ್ಳುತ್ತಾ ಇರುವ ಸಮಯದಲ್ಲೇ,ಅಲ್ಲಿಗೆ ಒಬ್ಬ ಸಣ್ಣ ಹುಡುಗ ಬಲೂನುಗಳನ್ನು ಮಾರುತ್ತಾ ಬಂದ. ಕಡಲಿನ ಪ್ರಕ್ಷುಬ್ಧತೆ ಈಗ ಮಾಯವಾಗಿತ್ತು. ಸೂರಿ ಪಡುವಣದಿ ತನ್ನ ನಿರ್ಗಮನದ...