Author - Guest Author

ಕಥೆ

ಕಥೆ ಕೊಳ್ಳುವ ಕಾಯಕ

ವಾಲ್ಮೀಕಿ ಇತ್ತೀಚೆಗೆ ಬಹಳಷ್ಟು ಕಥೆಗಳನ್ನು ಬರೆಯಹತ್ತಿದ್ದಾನೆ. ಅವನು ಬರೆಯುವ ಕಥೆಗಳು ತುಂಬಾ ಅರ್ಥಪೂರ್ಣವೂ, ಸತ್ಯಕ್ಕೆ ಅತೀ ಹತ್ತಿರವಾದವೂ, ಒಮ್ಮೊಮ್ಮೆ ಅಮಾನುಷವೂ ಆಗಿರುತ್ತವೆ. ಕಥೆಯ ಪಾತ್ರಗಳ ಸೃಷ್ಟಿ ಅದ್ಭುತವಾಗಿರುತ್ತದೆ. ಶ್ರೀರಾಂಪುರದ ಹಜಾಮ, ಗಾಂಧೀ ನಗರದ ವೇಶ್ಯೆ, ರಾಣೆಬೆನ್ನೂರಿನ ಭಿಕ್ಷುಕ, ಉಡುಪಿ ಹೊಟೆಲ್ ಮಾಣಿ ಹೀಗೆ ಕಥೆಯ ಪಾತ್ರಗಳು...

Featured ಅಂಕಣ

ಭೈರಪ್ಪರೊಡನೆ ಒಂದು ಖಾಸಗಿ ಭೇಟಿ

ಅಲ್ಲಿ‌ ನಿಂತಿದ್ದದ್ದು ಕಳೆದ‌ ನವೆಂಬರ್‘ನಲ್ಲಿ ನಾವೇ – ನಾನು, ಧರ್ಮಶ್ರೀ,‌ ಸಿಂಧೂ‌ ಮತ್ತು ಸಾಂಗತ್ಯ. ಅವತ್ತು ಅವರು ಮನೆಯಲ್ಲಿರಲಿಲ್ಲ. ನವೆಂಬರ್‘ನಲ್ಲಿ ಕಿರಿಕಿರಿ ಬೇಡವೆಂದು ಯು.ಎಸ್.ಎ ಗೆ ಹೋಗಿದ್ದರು.  ಇವತ್ತು ಜೂನ್ 14. ವಾರದ ಮೊದಲೇ ಭೇಟಿಗೆ ಅವಕಾಶ ಕೇಳಿದ್ದೆವು. ಎರಡು ಬಾರಿ ಕರೆಗಂಟೆ ಒತ್ತಿದರೂ ಯಾರು ಉತ್ತರಿಸಲಿಲ್ಲ. ಕಾಲೇಜಲ್ಲಿ ವೈವಾ ಪರೀಕ್ಷೆಗೆ...

ಕವಿತೆ

ಕಾವು

ರೊಟ್ಟಿ ಬೇಕೆಂದು ಹಟಹಿಡಿದಿದೆ ಮಗು, ಹಿಟ್ಟನ್ನು ಎಲ್ಲಿಂದ ತರುವುದು? ಬರಗಾಲ ಬಿದ್ದಿದೆ.   ಬಿಗಡಾಯಿಸಿದ ಬಿಸಿಲು ಬೆಂಕಿಯನ್ನೆಬ್ಬಿಸಿದೆ, ಬೆಂದ ಓತೀಕ್ಯಾತ ಹಸಿವು ತಣಿಸಲು ಸಾಲದು.   ವಲಸೆ ಹೊರಟಿಹುದು ಕೋಟಿ ಜನ, ಹೋಗುವ ಹಾದಿಯುದ್ದಕ್ಕೂ ಕಾದಾಟ, ರಕ್ತ ಕುಡಿದೇ ದಾಹ ತೀರಿಸಿಕೊಳ್ಳುತ್ತಿದೆ ಗುಂಪು.   ಗುಳೆ ಹೋಗಲಾಗದೇ ನರಳುತ ಬಿದ್ದಿವೆ ಹತ್ತಾರು...

ಅಂಕಣ

ಹಳ್ಳಿಜೀವನದಲ್ಲಿದೆ ನಿತ್ಯ ಪರಿಸರ ದಿನ

ಚುಮು ಚುಮು ಬೆಳಗು,  ಹಕ್ಕಿಗಳ ಕಲರವ, ದೂರದಲ್ಲಿ ನವಿಲ ಕೂಗು, ಮರಕುಟಿಗ ಹಕ್ಕಿಯ ಕುಟು ಕುಟು ಸದ್ದು.  ಅಂಬಾ ಎಂದು ಕರೆಯುವ ಹಸು. ಮತ್ಯಾವ ಸದ್ದೂ ಅಲ್ಲಿಲ್ಲ.  ಪ್ರತಿದಿನ ಏಳುವಾಗ ಇವಿಷ್ಟೇ ನನ್ನ ಕಿವಿಗೆ ಬೀಳುವ ಶಬ್ದಗಳಾಗಿತ್ತು. ಹೌದು.  ಊರಿಗೆ ಬಂದು ಒಂದು ವಾರವಷ್ಟೇ ಆಗಿತ್ತು.  ಅಲ್ಲಿ ಇರುವಷ್ಟೂ ದಿನ ಬೆಳಗಿನ ವಾಯು ವಿಹಾರ ಒಂಟಿ ಪಯಣಿಗನ ಚಾರಣದಂತಿತ್ತು.  ಭಯ...

ಕಥೆ

ಟೈಮ್ ಬ್ಯಾಂಕ್

ಮೀನಾಕ್ಷಿ ಮೀನು ಮಾರುಕಟ್ಟೆಗೆ ಮೀನುಗಳನ್ನು ಖರೀದಿಸಲು ಬಂದವಳು. ಊರಿನಲ್ಲಿರುವ ಟೈಮ್ ಬ್ಯಾಂಕ್ ಹೊತ್ತಿ ಉರಿದು ಭಸ್ಮವಾಗಿಹೋದ ಸುದ್ದಿಯನ್ನು ಯಾರೋ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡವಳಿಗೆ, ಆದ ಸಂಕಟ ಅಷ್ಟಿಷ್ಟಲ್ಲ. ಟೈಮ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ವಿಚಾರದ ಸತ್ಯಾಸತ್ಯತೆಯನ್ನು ಫಿಶ್ ಮಾರ್ಕೆಟ್ ಪಕ್ಕದ ಗಿರಣಿಯಲ್ಲಿ ಕೇಳಿ ತಿಳಿದವಳಿಗೆ, ಟೈಮ್...

Uncategorized

ಕಂಡು ಕೇಳರಿಯದ ರಾಜಕೀಯ ದೊಂಬರಾಟ…

“ಕರ್ನಾಟಕ ರಾಜಕೀಯದಲ್ಲಿ ಹೀಗೆಂದೂ ಆಗಿರಲಿಲ್ಲ.” – ಇತ್ತೀಚೆಗಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿರುವಾಗ ನನ್ನ ತಂದೆಯವರು ಉದ್ಗರಿಸಿದರು. ಹೌದು, ನಾವೆಂದು ಕಾಣದ ರಾಜಕೀಯ ದೊಂಬರಾಟ ನಡೆದೇ ಹೋಯಿತು, ಅಲ್ಲ ಅಲ್ಲ ಇನ್ನೂ ಅದು ನಡೆಯುತ್ತಿದೆ… ೨೦೧೮ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಪಡೆಯುತ್ತಿತ್ತು. ರಾಜಕೀಯ ಧುರೀಣರು ಅತಿ ವಿಶ್ವಾಸದಿಂದ...

ಅಂಕಣ

ನಗುವಿನ ಸರದಾರ

“ಮುಕ್ತ ಮುಕ್ತ ನೆನಪಾದರೆ ಇವರ ಮುಖ ಕಣ್ಣ ಮುಂದೆ ಬರುತ್ತದೆ” fbಯಲ್ಲಿ ಈ ಒಂದು ಪ್ರತಿಕ್ರಿಯೆಗೆ ನನ್ನ ಕೈ ಸೇರಿತು “ನಾವಲ್ಲ” ಪುಸ್ತಕ.  ಅದೂ ಚಂದದ ಆತ್ಮೀಯ ಒಕ್ಕಣೆಯೊಂದಿಗೆ ಶ್ರೀ ಸೇತುರಾಮ್ ರವರಿಂದ. ನಿಜಕ್ಕೂ ಆಶ್ಚರ್ಯ, ಸಂತೋಷ ಒಟ್ಟೊಟ್ಟಿಗೆ.  ಆದರೆ ಪುಸ್ತಕ ಓದಬೇಕಲ್ಲಾ?  ಏಕೆಂದರೆ ಪುಸ್ತಕ ಓದುವ ಗೀಳು ನನ್ನ ಬಿಟ್ಟೋಗಿ ಸುಮಾರು...

ಅಂಕಣ ಸಿನಿಮಾ - ಕ್ರೀಡೆ

ರಾಝೀ – ಕಮರ್ಷಿಯಲ್ ಸಿನೆಮಾ ಅಲ್ಲದಿದ್ದರೂ ಕಮರ್ಷಿಯಲಿ ಸಕ್ಸಸ್’ಫುಲ್

ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ  ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ… ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿಪಡೆದು ಹರಿಂದರ್ ಎಸ್. ಸಿಕ್ಕಾ ಅವರು...

Uncategorized

ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ….

ಪುಸ್ತಕದ  ಹೆಸರು : ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ…. ಲೇಖಕರು : ಉದಯಲಾಲ್ ಪೈ ಕನ್ನಡ ಅನುವಾದ : ವೇದಾ ಆಠವಳೆ [ ಇಂಗ್ಲೀಷ್ ಮೂಲ- ಉದಯಲಾಲ್ ಪೈ “ Why Am I a Hindu” ] ಬೆಲೆ : ₹ 450 ಪ್ರಕಾಶಕರು : ಪೋಥಿ.ಕಾಮ್ “ಆಸಿಂಧು ಸಿಂಧು ಪರ್ಯಂತಾ ತಸ್ಯ ಚ ಭಾರತ ಭೂಮಿಕಾ, ಮಾತೃಭೂ ಪಿತೃಭೂಶ್ಚೈವ ಸ ವೈ ಹಿಂದುರಿತಿ ಸ್ಮೃತ:”. ಸಪ್ತ ಸಿಂಧುಗಳು...

Uncategorized

ಇದೇ ನಮ್ಮ ಸಂಸ್ಕೃತಿ – ಇದೇ ನಮ್ಮ ಪರಂಪರೆ.

ಪ್ರೀತಿಯ ಕಾರ್ಯಕರ್ತ ಬಂಧುಗಳೇ, ಹೌದು, ನೀವು ಯೋಚಿಸುತ್ತಿರುವುದು ಸರಿಯಾಗಿಯೇ ಇದೆ. ಎಲ್ಲರೊಂದಿಗೆ ಮಾತನಾಡಿದ ನಂತರ ನಿಮ್ಮತ್ತ ತಿರುಗಿದ್ದೇನೆ. ಏಕೆಂದರೆ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎಂದೂ ಕೂಡ “ನಾನು” ಎಂದು ಯೋಚಿಸಿದವನಲ್ಲ; ತನ್ನನ್ನು ಮಾತನಾಡಿಸಲಿಲ್ಲ ಎಂದು ದುಃಖಿಸಿದವನೂ ಅಲ್ಲ. ಆತ ಕುಟುಂಬ ಜೀವನದ ಸಮಯವನ್ನು ಪಕ್ಷ ಹಾಗೂ ರಾಷ್ಟ್ರಕ್ಕಾಗಿ ಕೊಡುತ್ತಾನೆಯೇ...