ಕಥೆ

ಕಥೆ

ಕಥೆ ಕೊಳ್ಳುವ ಕಾಯಕ

ವಾಲ್ಮೀಕಿ ಇತ್ತೀಚೆಗೆ ಬಹಳಷ್ಟು ಕಥೆಗಳನ್ನು ಬರೆಯಹತ್ತಿದ್ದಾನೆ. ಅವನು ಬರೆಯುವ ಕಥೆಗಳು ತುಂಬಾ ಅರ್ಥಪೂರ್ಣವೂ, ಸತ್ಯಕ್ಕೆ ಅತೀ ಹತ್ತಿರವಾದವೂ, ಒಮ್ಮೊಮ್ಮೆ ಅಮಾನುಷವೂ ಆಗಿರುತ್ತವೆ. ಕಥೆಯ ಪಾತ್ರಗಳ ಸೃಷ್ಟಿ ಅದ್ಭುತವಾಗಿರುತ್ತದೆ. ಶ್ರೀರಾಂಪುರದ ಹಜಾಮ, ಗಾಂಧೀ ನಗರದ ವೇಶ್ಯೆ, ರಾಣೆಬೆನ್ನೂರಿನ ಭಿಕ್ಷುಕ, ಉಡುಪಿ ಹೊಟೆಲ್ ಮಾಣಿ ಹೀಗೆ ಕಥೆಯ ಪಾತ್ರಗಳು...

ಕಥೆ

ಟೈಮ್ ಬ್ಯಾಂಕ್

ಮೀನಾಕ್ಷಿ ಮೀನು ಮಾರುಕಟ್ಟೆಗೆ ಮೀನುಗಳನ್ನು ಖರೀದಿಸಲು ಬಂದವಳು. ಊರಿನಲ್ಲಿರುವ ಟೈಮ್ ಬ್ಯಾಂಕ್ ಹೊತ್ತಿ ಉರಿದು ಭಸ್ಮವಾಗಿಹೋದ ಸುದ್ದಿಯನ್ನು ಯಾರೋ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡವಳಿಗೆ, ಆದ ಸಂಕಟ ಅಷ್ಟಿಷ್ಟಲ್ಲ. ಟೈಮ್ ಬ್ಯಾಂಕ್ ಬೆಂಕಿಗೆ ಆಹುತಿಯಾದ ವಿಚಾರದ ಸತ್ಯಾಸತ್ಯತೆಯನ್ನು ಫಿಶ್ ಮಾರ್ಕೆಟ್ ಪಕ್ಕದ ಗಿರಣಿಯಲ್ಲಿ ಕೇಳಿ ತಿಳಿದವಳಿಗೆ, ಟೈಮ್...

Featured ಕಥೆ

ದಿ ಪರ್ಫೆಕ್ಟ್ ಮರ್ಡರ್

“ಯೂ ಅರ್ ಫಿನಿಷ್ಡ್ ಮಿ. ವ್ಯಾಸರಾವ್” “ನಿಮ್ಮ ಪತ್ನಿ ಸುಮಂಗಲಾ ಮರ್ಡರ್ ಮಾಡಿದ್ದು ನೀವೇ …. ಐ ಹ್ಯಾವ್ ಪ್ರೂಫ್ಸ್…” ಇನ್ಸಪೆಕ್ಟರ್ ಪ್ರಕಾಶ್ ಗಂಭೀರನಾಗಿ ನುಡಿದ. ಅಲ್ಲಿಯವರೆಗೂ ಆಡಿದ ಮಾತುಗಳೆಲ್ಲಾ ಕೇವಲ ಮುನ್ನುಡಿ ಎಂದು ಈಗ ಅರ್ಥವಾಯಿತು. ಸುಮಾರು ಅರ್ಧ ಘಂಟೆಯಿಂದ ಸುಮಂಗಲಾ ಸಾವಿನ ಬಗ್ಗೆ  ಮಾತನಾಡಿದ್ದು, ಅವನ ಇನ್ವೆಸ್ಟಿಗೇಶನ್ ಪ್ರೋಗ್ರೆಸ್ಸ್...

ಕಥೆ

ಅವಳದೆಂತಹ ಮಾತು?

ನನ್ನ ಮನದನ್ನೆ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ಎರಡು ಮೀನುಗಳನ್ನು ಒಂದು ಬೌಲ್‍ನಲ್ಲಿ ಇರುವ ತಿಳಿನೀರಿನೊಂದಿಗೆ ಉಡುಗೊರೆಯಾಗಿ ನೀಡಿದ್ದಳು. ಒಂದು ಸಣ್ಣ ಗಾತ್ರದ ಹಳದಿ ಮೀನಾದರೆ ಮತ್ತೊಂದು ಕೇಸರಿ ಬಣ್ಣದ ಸ್ವಲ್ಪ ದೊಡ್ಡ ಗಾತ್ರದ್ದಾಗಿತ್ತು.  ಅದನ್ನು ನೋಡಿ ಅಚ್ಚರಿಯೊಂದಿಗೆ ಹೇಳಿದೆ ಈ ಹಳದಿ ಮೀನು ನೀನು ಕೇಸರಿಯದ್ದು ನಾನು ಎಂದು. ಮನೆಗೆ ಅವೆರಡನ್ನು ಕೊಂಡೊಯ್ದ ನಾನು...

ಕಥೆ

ಹೆಜ್ಜೆ ಮೂಡದ ಹಾದಿ

ಮನೆಯ ಅಂಗಳದ ತುದಿಯಲ್ಲಿನ ಒಲೆಗೆ ನಿನ್ನೆ ರಾತ್ರಿ ಹಚ್ಚಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಒಳಗೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಬಡಬಡಾಯಿಸುತ್ತಲಿತ್ತು. ಕಂಬನಿಯ ಒರೆಸಿಕೊಂಡ ಕೈ ಒದ್ದೆಯಾಗಿಯೇ ಇತ್ತು. ಆದರೂ ಮುಖದ ಮೇಲೆ ನಗುವೊಂದು ಮೂಡಲೇಬೇಕಿತ್ತು. ಅವಳು ಸೋತಿದ್ದಳು. ಬಾಡಿದ ಮುಖದ ಮೇಲೆ ಮೂಡುತ್ತಿದ್ದ ನಗು ಮನದ ಭಾವನೆಯ ಪ್ರತಿಫಲನವಂತೂ ಅಲ್ಲವಾಗಿತ್ತು. ಆದರೂ...

ಕಥೆ

ಗಜವದನ …

 ಒಂದೇ ದಿನದಲ್ಲಿ ಎರಡೂ ಅನುಭವಗಳು ಆಗಿದ್ದು ನನ್ನ ಜೀವಮಾನದಲ್ಲೇ ಇದೆ ಮೊದಲನೇ ಭಾರಿ. ಮೊದಲನೆಯದು ಅಗಾಧ ಶಕ್ತಿಯಿಂದ ಕೂಡಿದ್ದು, ಆಹ್ಲಾದಕರ ಅನುಭವ, ಹೊಸ ಜೀವದ ಆಗಮನದ ನಡುಕ ಅದು. ಆ ನಡುಕದಲ್ಲಿ ಅಮೂಲ್ಯ ಮತ್ತು ಅಪಾರ ಶಕ್ತಿಯನ್ನು ಕ್ರೋಢೀಕರಿಸಿದ ಸುವಾಸನೆ ಎಲ್ಲೆಡೆ ಹಬ್ಬಿದೆ. ಮಹಾದೇವಿಯ ಮನದ ಭಯಕೆಯ ಭಾವ ಈಡೇರಿದಾಗ ಈ ಕಂಪನ ಅನುಭವಿಸಿದ್ದೇನೆ. ಮಹಾದೇವಿಯ ಜೊತೆಗೆ...

ಕಥೆ

“ಉತ್ತರವಿಲ್ಲದೆ”

ನನಗೂ ನನ್ನ ಮಡದಿ ರಚನಾಳಿಗೂ ಮದುವೆಯಾಗಿ ಹದಿನಾರು ವರ್ಷಗಳೇ ಕಳೆದರೂ ಯಾವ ವಿಷಯಕ್ಕೂ ಗಂಭೀರವಾದ ಜಗಳವಾದದ್ದೇ ಇಲ್ಲ. ದಿನಾಲೂ ಮಕ್ಕಳಿಗಿಂತಲೂ ಕೆಟ್ಟದಾಗಿ ಜಗಳವಾಡುವ ವಿಷಯವೆಂದರೆ ಕನ್ನಡಿ. ನನಗೋ ಕನ್ನಡಿಯೆಂದರೆ ಕುತೂಹಲ. ಕನ್ನಡಿಯ ಮುಂದೆ ನಿಂತು ಏನನ್ನೇ ಮಾಡಿದರೂ ಅದು ಬೇಸರಿಸದೆ ಬಿಂಬಿಸುತ್ತದೆ. ನನಗೆ ಅದನ್ನು ನೋಡುವುದೇ ಖುಶಿ. ನನ್ನವಳಿಗೆ ನಾ ಕನ್ನಡಿಯ ಮುಂದೆ...

ಕಥೆ

  ಒಂಟಿಬೆಟ್ಟದ ಸ್ಮಶಾನ!

ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್’ಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ, ಪ್ರೇಮ, ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ...

ಕಥೆ

ನೆನಪುಗಳ ಸಹವಾಸ: ನನ್ನ ಪ್ರೀತಿಯ ಆಟೋಗ್ರಾಫ್

ಮೊನ್ನೆ ಊರಿನ ಹಳೆಪೇಟೆ ಬಸ್‌ಸ್ಟ್ಯಾಂಡ್ ಬಳಿ ನಿಂತಿದ್ದೆ. ಕಾಲು ಗಂಟೆ ಕಾದು ಕಾಲು ಸುಸ್ತಾದರೂ ಬಸ್ಸು ಕಾಣಲೇ ಇಲ್ಲ. ತುಸು ದೂರದಲ್ಲಿ ಒಬ್ಬಳು ಸ್ನಿಗ್ದ ಸೌಂದರ್ಯದ ಯುವತಿ ಬಿರುಬೀಸು ನಡಿಗೆಯಲ್ಲಿ ಬಂದವಳೇ ಮೊಬೈಲ್‌ನಲ್ಲಿ ರೀಚಿಡ್ ಬಸ್ ಸ್ಟ್ಯಾಂಡ್ ಡಿಯರ್ ಅಂದಳು. ತುಸು ದೂರದ ಮುಖ ಹತ್ತಿರ ಬಂದಾಗ ಪರಿಚಿತೆ, ಒಂದೊಮ್ಮೆ ಸಹಪಾಠಿಯಾಗಿದ್ದಳು ಎಂದು ತಿಳಿದು ಹಾಯ್ ಎಂದು...

ಕಥೆ

‘ಪ್ರೀತಿ’ಯೇ ನಿನ್ನ ವಿಳಾಸ ಎಲ್ಲಿ…?  

ಪ್ರೀತಿ- ಪ್ರೇಮ-ಅನುರಾಗ-ಅನುಬಂಧ: ಆಗ ತಾನೇ ಯವ್ವನದ ಹೊಸ್ತಿಲಲ್ಲಿ ಕಾಲಿಟ್ಟ ಹುಡುಗ(ಗಿ)ಯರ ಹದಿ ಹರೆಯದ ಮನದ ಕಾಮನೆಗಳು ಮೊಗ್ಗಾಗಿ ಚಿಗುರೊಡೆಯುವ ಕಾಲ. ಮಾಧ್ಯಮಿಕ ಶಾಲೆಯ ಕೊನೆಯ ಘಟ್ಟದಲ್ಲಿದ್ದಾಗ ಮೊಗ್ಗಾಗಿದ್ದ ಪ್ರೀತಿ ಪ್ರೇಮ, ಕಾಲೇಜ್’ನಲ್ಲಿ  ಸುಂದರ ಪುಷ್ಪವಾಗಿ ಅರಳುವ ಕಾಲ, ಅರಿಯದ ಆಳಕ್ಕಿಳಿಯದಿದ್ದರು ಇದರ ಸುಳಿಯ ಸೆಳೆತಕ್ಕೆ ಸಿಲುಕದವರಿಲ್ಲ!! ಮೊಬೈಲ್ ಮತ್ತು...