Featured ಅಂಕಣ

ಬೆಸ್ಟ್ ಫಿನಿಶರ್ ಮೋದಿ – 1

೧. ಬಾಂಗ್ಲಾ ದೇಶದ ಗಡಿಯಲ್ಲಿನ ಪ್ರದೇಶಗಳ ಹಂಚಿಕೆ ಮಾತುಕತೆ ಪೂರ್ಣಗೊಂಡಿದೆ; ಇದು ಸುಮಾರು 68 ವರ್ಷ ಹಳೆಯ ಸಮಸ್ಯೆ.

೨. ಯುದ್ಧ ಸ್ಮಾರಕ ಪೂರ್ಣಗೊಂಡಿದೆ; 60 ವರ್ಷದ ಬೇಡಿಕೆ.

೩. ಕೊಲ್ಲಂ ಬೈಪಾಸ್ ರೋಡ್ ಪೂರ್ಣಗೊಂಡಿದೆ 43 ವರ್ಷದ ಹಿಂದೆ ಶುರುವಾದ ರಸ್ತೆಯದು.

೪. ಸೈನಿಕನಿಗೆ ಬರಬೇಕಾಗಿದ್ದ OROP 41 ವರ್ಷದ ಬೇಡಿಕೆ ಈ ಸರ್ಕಾರ ಪೂರೈಸಿತು.

೫. 40 ವರ್ಷಕ್ಕೂ ಮೊದಲೇ ಬಾಂಗ್ಲಾ ನುಸುಳುಕೋರರ ಬಗ್ಗೆ ತಿಳಿದು NRC (NATIONAL REGISTER OF CITIZENS) ಜಾರಿಗೆ ತಂದು ಮೂಲನಿವಾಸಿಗರಿಗೆ ನ್ಯಾಯ ಒದಗಿಸಿಕೊಡುವ ಮನವಿ ಇತ್ತು. ಆಸ್ಸಾಂನಲ್ಲಿ ಕೊನೆಯ ಕರಡು ಪ್ರತಿ ತಯಾರಾಗಿ 40 ಲಕ್ಷ ಜನ ತಮ್ಮ ನಾಗರಿಕತೆಯ ಬಗೆಗಿನ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಜ್ಯಗಳಿಗೆ NRC ವ್ಯಾಪಿಸಲಿದೆ.

೬. 171 ಕಿಲೋಮೀಟರ್ ಉದ್ದದ ಬನ್‌ಸಾರ್ ಕ್ಯಾನಲ್ ಸರಿಸುಮಾರು 1 ಲಕ್ಷ 70 ಸಾವಿರ ರೈತರ ಹೊಲಗಳಿಗೆ ನೀರು ಕೊಡಬಲ್ಲ, 40 ವರ್ಷದ ಮೊದಲು ಶುರುವಾದ ಯೋಜನೆ ಪೂರ್ಣಗೊಂಡಿದೆ.

೭. ರಾಷ್ಟ್ರೀಯ ಪೋಲಿಸ್ ಸ್ಮಾರಕ 34 ವರ್ಷಗಳ ಬೇಡಿಕೆ ಪೂರ್ಣಗೊಂಡಿದೆ.

೮. ವಾರಣಾಸಿ ಕೊಲ್ಕತ್ತಾ ವಾಟರ್ ವೇ 32 ವರ್ಷ ಮೊದಲು ಶುರುಗೊಂಡಿದ್ದು ಮುಗಿದಿದೆ.

೯. ರೇಲ್ವೇ ಹಳಿ‌ ಮತ್ತು ರಸ್ತೆ ಎರಡೂ ಇರುವ ವಿಶೇಷ ಭೋಗಿಬೀಲ್ ಬ್ರಿಡ್ಜ್ 21 ವರ್ಷ ಮೊದಲೇ ಅಡಿಗಲ್ಲು ಕಂಡ ಯೋಜನೆ ಪೂರ್ಣಗೊಂಡಿದೆ.

೧೦. ತೆರಿಗೆ ಸುಧಾರಣೆ ದೃಷ್ಟಿಯಿಂದ GST ಜಾರಿಗೆ ತರುವಂತೆ ಅರ್ಥಶಾಸ್ತ್ರಜ್ಞರ ಬೇಡಿಕೆ 20 ವರ್ಷಕ್ಕೂ ಮೊದಲಿನದ್ದು GST ಜಾರಿಗೆ ಬಂದಿದ್ದಷ್ಟೇ ಅಲ್ಲ. ೧ ಲಕ್ಷ ಕೋಟಿ ಈಗಾಗಲೇ ತೆರಿಗೆ ಸಂಗ್ರಹವಾಗಿದೆ.

೧೧. Udhampur-katra ರೇಲ್ವೇ ಲೈನ್ 16 ವರ್ಷದ ಬೇಡಿಕೆ ಸಾಕಾರಗೊಂಡಿದೆ.

೧೨. ಸರದಾರ್ ಸರೋವರ್ ಡ್ಯಾಮ್ ಅಡಿಗಲ್ಲು ಹಾಕಿ 15 ವರ್ಷ ಕಳೆದಿತ್ತು ಈಗ ಪೂರ್ಣಗೊಂಡಿತು.

೧೩. Western peripheral express highway 15 ವರ್ಷದ ಕನಸು ನನಸಾಯಿತು.

೧೪. ತುರ್ತು ಪರಿಸ್ಥಿತಿಗೆ ಬೇಕಾಗುವ ಕಚ್ಚಾ ತೈಲ ಸಂಗ್ರಹ strategic oil reserve ಯೋಜನೆ; ೧೩ ವರ್ಷ ಹಳೆಯ ಯೋಚನೆ. ಈಗ ಶುರುವಾಗಿದ್ದಷ್ಟೇ ಅಲ್ಲದೇ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

೧೫.ಇಂಡೋ-ರಷ್ಯನ್ ಸಹಯೋಗದಲ್ಲಿ ಆಗಬೇಕಾದ ರೈಫೆಲ್ ಪ್ಯಾಕ್ಟರಿ 12 ವರ್ಷಗಳ ನಂತರ ಆರಂಭವಾಗಿದೆ. ಇತ್ತಿಚೆಗೆ ಉದ್ಘಾಟನೆಗೊಂಡಿದೆ. ಆ ಪ್ಯಾಕ್ಟರಿ ಇರೋದು ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ.

೧೬. ಪಾಕಿಸ್ತಾನದ ವಿರೋಧದಿಂದ 11 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕೃಷ್ಣ ಗಂಗಾ ಪವರ್‌ಪ್ಲಾಂಟ್ ಉದ್ಘಾಟನೆಗೊಂಡಿದೆ

೧೭. ಸಿಕ್ಕಿಂನ pakyong airport; ೧೦ ವರ್ಷ ಹಳೆಯ ಕಲ್ಪನೆ ಪೂರ್ಣಗೊಂಡಿದೆ.

೧೮. Dhola-sadhiya ಬ್ರಿಡ್ಜ್ 8 ವರ್ಷದ ಮೊದಲು ಶಿಲಾನ್ಯಾಸವಾಗಿತ್ತು, ಕೆಲಸ ಶುರುವಾಗಿರಲಿಲ್ಲ ಈಗ ಪೂರ್ಣಗೊಂಡಿದೆ.

೧೯. ಜಮ್ಮು -ಕಾಶ್ಮೀರದ chenani-nashri tunnel 7 ವರ್ಷದ ಹಿಂದೆ ಶುರುಗೊಂಡು ಸ್ಥಗಿತವಾಗಿತ್ತು.‌ ಈಗ ಮುಗಿದಿದೆ.

೨೦.ದೇವೆಗೌಡರ ಹಾಸನ ಬೆಂಗಳೂರು ರೈಲು, ಅಟಲ್ಜಿಯ ಬೀದರ್- ಗುಲ್ಬರ್ಗಾ ರೈಲಿನ ಕನಸು ನನಸಾಗಿದೆ.

೨೧. ಬೇಡಿಕೆ ಇಟ್ಟು 9 ವರ್ಷದ ನಂತರ ಸೈನಿಕ ಬುಲೆಟ್ ಫ್ರೂಪ್ ಜಾಕೆಟ್‌ನ್ನು ಹಾಕಿಕೊಳ್ಳುವ ಸುಸಮಯ ಒದಗಿ ಬಂದಿದೆ.

#ಪ್ರತಿದಿನ_ಪ್ರಧಾನಿ 1

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!