Author - Rohith Chakratheertha

ಕಥೆ

ಎರಡು ಮುಖ

“ಯುವರ್ ಆನರ್, ಈತ ಸುಳ್ಳು ಹೇಳ್ತಿದಾನೆ. ಇವನ ಪ್ರಕಾರ ಲೂಸಿ ಅಕ್ರಮ ಸಂಬಂಧ ಇಟ್ಕೊಂಡಿದಾಳೆ. ಆದರೆ ಲೂಸಿ ಚಿನ್ನದಷ್ಟು ಪರಿಶುದ್ಧವಾದ ಹುಡುಗಿ. ಇನ್ನೊಬ್ಬರನ್ನು ಕನಸುಮನಸಲ್ಲೂ ನೆನೆಸಿಕೊಳ್ಳದ ಹುಡುಗಿ. ಇಷ್ಟಕ್ಕೂ ತಾಯಿಗೂ ಮಗುವಿಗೂ ಯಾವುದೇ ಹೋಲಿಕೆ ಇಲ್ಲದ ಸಾವಿರ ಉದಾಹರಣೆಗಳು ಇದ್ದಾವೆ ನಮ್ಮ ಸುತ್ತಮುತ್ತ. ದೇವಕಿಯ ಮಗ ಕೃಷ್ಣ ಕಾಫಿ ಡಿಕಾಕ್ಷನ್ ಥರ ಕಪ್ಪಗಿದ್ದ...

Featured ಅಂಕಣ

ಪದ್ಮ ಪ್ರಶಸ್ತಿ ಪುರಸ್ಕಾರ ಅಂದು-ಇಂದು

2015ರ ಜನವರಿಯಲ್ಲಿ ಪದ್ಮ ಪ್ರಶಸ್ತಿಗಳ ಘೋಷಣೆಯಾದಾಗ ಅದರಲ್ಲಿ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿದ್ದದ್ದನ್ನು ಕಂಡು ಅನೇಕರಿಗೆ ಆಶ್ಚರ್ಯ, ಪುಳಕ, ಬೇಸರ ಆಯಿತು. ಆಶ್ಚರ್ಯ – ಇಷ್ಟು ವರ್ಷಗಳ ಕಾಲ ಇವರಿಗೆ ಒಂದು ಪದ್ಮ ಪ್ರಶಸ್ತಿಯೂ ಬಂದಿರಲಿಲ್ಲವೆ ಎಂಬ ಕಾರಣಕ್ಕೆ. ಪುಳಕ – ಇಷ್ಟು ವರ್ಷಗಳ ಮೇಲಾದರೂ, ಸ್ವಾಮೀಜಿಗಳಿಗೆ ನೂರಾಹತ್ತು ವರ್ಷಗಳು...

Featured ಅಂಕಣ

ದೇಶದ ಉಳಿವಿಗಾಗಿ ನೆತ್ತರ ಸಂಬಂಧ ಕತ್ತರಿಸಿಕೊಂಡ ವಿಜಯಲಕ್ಷ್ಮಿ ಪಂಡಿತ್...

ಶ್ರೀಮತಿ ಗಾಂಧಿಯವರ ಬಗ್ಗೆ ನಿಮ್ಮ ಅಭಿಪ್ರಾಯ ಏನು? – ಪತ್ರಕರ್ತ ಆಕೆಯ ಬಳಿ ಕೇಳಿದ. ಉತ್ತರಿಸಲಿದ್ದ ಆಕೆಗೆ 78ರ ವೃದ್ಧಾಪ್ಯ. ಬೆಳ್ಳಿಗೂದಲು. ನೆರಿಗೆಗಟ್ಟಿದ ಹಣೆ. ಪುಟ್ಟ ಕಣ್ಣು. ಕುಗ್ಗಿದ ದೇಹ. ಆದರೆ ಆಕೆಯ ಉತ್ತರದಲ್ಲಿ ಅಂಥ ವೃದ್ಧಾಪ್ಯದ ಲಕ್ಷಣಗಳೊಂದೂ ಇರಲಿಲ್ಲ. ಅತ್ಯಂತ ಖಚಿತ ಧ್ವನಿಯಲ್ಲಿ, ಯಾವ ನಡುಕವೂ ಇಲ್ಲದೆ ಆ ವೃದ್ಧೆ ಹೇಳಿದರು: “ಆಕೆ...

ಅಂಕಣ ಪ್ರಚಲಿತ

ಒಬ್ಬ ಸಂತೋಷ್ ತಮ್ಮಯ್ಯರನ್ನು ಬಂಧಿಸಿದರೆ ಇತಿಹಾಸದ ಸತ್ಯ ಅನಾವರಣಗೊಳಿಸುವ...

“ಅರಿಮುಕ್ಕೆಲೆ ಪೋಂಡ ತೌಡುಮುಕ್ಕೆಲೆ ಬರುವೆ” ಎಂದು ತುಳುವಿನಲ್ಲಿ ಒಂದು ಗಾದೆ. ಅಕ್ಕಿ ಮುಕ್ಕುವವನು ಹೋದನಲ್ಲಾ ಎಂದು ಸಂತೋಷಪಟ್ಟರೆ, ಆತನ ನಂತರ ಬರುವಾತ ಅಕ್ಕಿಯನ್ನಷ್ಟೇ ಅಲ್ಲ, ಅಕ್ಕಿಯ ತೌಡನ್ನೂ ಮುಕ್ಕುವಾತ ಆಗಿರಬಹುದು ಎಂಬುದು ಅರ್ಥ. ಕರ್ನಾಟಕದ ರಾಜಕೀಯ ರಂಗದಲ್ಲಿ ಈಗ ಹಾಗಾಗಿದೆಯೇ ಎಂದು ಅನುಮಾನ. ಹಿಂದೂವಿರೋಧಿ, ಟಿಪ್ಪುಪ್ರೇಮಿ ಸಿದ್ದರಾಮಯ್ಯ...

Featured ಅಂಕಣ

ಚೊಕ್ಕಾಡಿಯ ಕಾವ್ಯವೃಕ್ಷ

ಚೊಕ್ಕಾಡಿ ಸುಳ್ಯದ ಒಂದು ಪುಟ್ಟ ಹಳ್ಳಿ. ಇಲ್ಲಿ ವರ್ಷದ ಆರು ತಿಂಗಳು ಬಸಿರಿನ ಹೆಂಗಸಿನ ಏದುಸಿರಿನಂತೆ ನದಿ-ತೊರೆಗಳು ಉಕ್ಕಿ ಹರಿದರೆ ಮಿಕ್ಕ ಆರು ತಿಂಗಳು ಅವು, ಪೋಷಣೆಯಿಲ್ಲದೆ ಸೊರಗಿದ ತೆಳು ಜಡೆಯಂತೆ ಕಾಣುತ್ತವೆ. ಕುಮಾರನ ಹೆಸರಿದ್ದರೂ ಇಲ್ಲಿನ ಬೆಟ್ಟ, ಹತ್ತಿ ಬರುವ ಚಾರಣಿಗರಿಗೆ ನೀರಿಳಿಸದಿದ್ದರೆ ಕೇಳಿ! ಇನ್ನು ಮಳೆಗಾಲದಲ್ಲಿ ಮುಗಿಲ ಮುಸುಕಿನ ಮರೆಯಲ್ಲಿ ಆಕಾಶ...

ಅಂಕಣ

ಭೂಮಂಡಲದಾಚೆ ಕಾಲ್ಚೆಂಡು?

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಲ್ಚೆಂಡಿನಾಟದ ಉತ್ಸವ ಈ ಸಲ ನಡೆಯುತ್ತಿರುವುದು ಫುಟ್‍ಬಾಲ್ ಸ್ವರ್ಗ ಎಂದೇ ಕರೆಯಬಹುದಾದ ಬ್ರೆಜಿಲ್‍ನಲ್ಲಿ! ಕ್ರಿಕೆಟ್ ಸೀಸನ್ ಶುರವಾದರೆ ಸಾಕು ಟಿವಿ ಮುಂದೆ ಜಮೆಯಾಗಿ ಊಟ-ನಿದ್ದೆಗಳನ್ನೂ ಮರೆಯುವ ಭಾರತೀಯ ಕ್ರಿಕೆಟ್ ಫ್ಯಾನ್‍ಗಳ ಹಾಗೆ ಬ್ರೆಜಿಲಿಯನ್ನರಿಗೆ ಫುಟ್‍ಬಾಲ್ ಕೂಡ ಒಂದು ಧರ್ಮವೇ! ತಮ್ಮ ದೇಶವನ್ನು ಪ್ರತಿನಿಧಿಸುತ್ತ...

Featured ಅಂಕಣ

ಮೂರು ದಿನಗಳ ಕಷ್ಟ ಕಳೆಯಲು ನೂರು ಕಷ್ಟಗಳ ಸಹಿಸಿಕೊಂಡವನು!

ಎರಡು ವಾರದ ಹಿಂದೆ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ “ಪ್ಯಾಡ್ ಮ್ಯಾನ್” ಸಿನೆಮಾ ಬಿಡುಗಡೆಗೊಂಡಿತು. ಬ್ಯಾಟ್‍ಮ್ಯಾನ್ ಗೊತ್ತು, ಹೀಮ್ಯಾನ್ ಗೊತ್ತು, ಸೂಪರ್ ಮ್ಯಾನ್ ಕೂಡ ಕೇಳಿ, ನೋಡಿ ಬಲ್ಲೆವು. ಆದರೆ ಪ್ಯಾಡ್ ಮ್ಯಾನ್ ಯಾರು? ಕುತೂಹಲ ಹುಟ್ಟುವುದು ಸಹಜ. ಅಂಥಾದ್ದೇ ಕುತೂಹಲವಿಟ್ಟುಕೊಂಡು ಥಿಯೇಟರಿಗೆ ಹೋಗಿ ಸಿನೆಮಾ ನೋಡಿ ಬಂದವರನ್ನು...

Featured ಅಂಕಣ

ಮರಳ ನೆಲದಲ್ಲಿ ಅರಳಿ ನಿಂತಿತ್ತು ಒಂದು ಮರ

ಪ್ರವಾಸಿಯೊಬ್ಬ ದಾರಿ ತಪ್ಪಿದ್ದಾನೆ. ಕೈಯಲ್ಲಿ ದಿಕ್ಸೂಚಿ, ನಕಾಶೆ ಯಾವುದೂ ಇಲ್ಲ. ಸ್ಮಾರ್ಟ್ ಫೋನ್ ಇದ್ದರೂ ಅದಕ್ಕೆ ಎರಡು ದಿನಗಳಿಂದ ಸಿಗ್ನಲ್ಲೇ ಸಿಕ್ಕಿಲ್ಲ. ಇನ್ನೇನು ಒಂದೆರಡು ತಾಸಿನಲ್ಲಿ ಅದು ಬ್ಯಾಟರಿ ಇಳಿದು ಸಂಪೂರ್ಣ ನಿಷ್ಕ್ರಿಯವೂ ಆಗಿಹೋದೀತು. ಯಾರನ್ನಾದರೂ ಕೇಳೋಣವೆಂದರೆ ಅಕ್ಕಪಕ್ಕದಲ್ಲಿ ನರಪಿಳ್ಳೆ ಬಿಡಿ, ನರಿಗಳ ಊಳು ಕೂಡ ಇಲ್ಲದಂಥ ಜಾಗ! ಅಲೆಮಾರಿ...

ಅಂಕಣ ಪ್ರಚಲಿತ

ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?

ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ...

ಅಂಕಣ ಕೇಳೋದೆಲ್ಲಾ ತಮಾಷೆಗಾಗಿ

ಮೀಸೆ: ಗಂಡಿಗೆ ಕೇಶ, ಹೆಣ್ಣಿಗೆ ಕ್ಲೇಶ!

ಹೆಂಗಸರಿಗೇಕೆ ಮೀಸೆ ಬೆಳೆಯುವುದಿಲ್ಲ? “ಅವಳೇ ನನ್ನ ಹೆಂಡ್ತಿ” ಸಿನೆಮಾದಲ್ಲಿ “ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು” ಎಂಬ ಹಾಡು ಕೇಳಿದ ಮೊದಮೊದಲ ದಿನಗಳಲ್ಲಿ “ಮೀಸೆ ಹೊತ್ತ ಹೆಂಗಸಿಗೆ” ಅಂತ ಯಾಕಿಲ್ಲ ಎಂಬ ಪ್ರಶ್ನೆ ತಲೆ ತುಂಬಿಕೊಂಡದ್ದು ಹೌದು. ಆದರೆ ಯಾರನ್ನು ಕೇಳುವುದು? ಮನೆಯಲ್ಲಿ ಅಮ್ಮನ ಬಳಿ ಇಂಥ...