ಕವಿತೆ

ಕವಿತೆ

ಗೆದ್ದಲು

ಚಿಗುರುವುದನ್ನೇ ಮರೆತ ಬೋಳುಮರ ಹೂವು ಹಣ್ಣು ತಳೆದು ಹಕ್ಕಿಗಳ ಹೊಟ್ಟೆ ತಣಿಸಿ ಎಷ್ಟು ಯುಗವಾಯ್ತು ಕಾದಿರುವೆ ಹಗಲಿರುಳು ಬೇರುಗಳ ನೆನೆಸಿ ಜೀವ -ವೂಡುವ ಹೊಸ ಮಳೆಗೆ ಮೋಡಗಳ ಸುಳಿವೂ ಇಲ್ಲ ಬಿರುಬಿಸಿಲು… ಕಾದ ಮೊಳೆ ಕಿರಣಗಳ ಮೈಗೆಲ್ಲ ಬಡಿವ ಕ್ರೂರಿ ಸೂರ್ಯ ಒಳಗೋ- ಗೆದ್ದಲು ಹಿಡಿದು ಪೂರಾ ಪೊಳ್ಳು ತೋರಿಕೆಗೆ ಆಕಾರವಷ್ಟೇ ಉಳಿದು ನನಗೆ ನಾನೇ ಹುಸಿ ಚಿಗುರುವುದು ಹೇಗೆ...

ಕವಿತೆ

ಅದೊಂದು ದಿನ

ಅದೊಂದು ದಿನ- ಅಂದೂ ತೊಳೆದಿಟ್ಟ ಹಾಗೆ ಆಕಾಶ ಅಥವಾ ಅಲ್ಲಿ ಇಲ್ಲಿ ಒಂದೆರಡು ಖಬರುಗೇಡಿ ಮೋಡ ಸುಮ್ಮನೆ ರೆಕ್ಕೆಯೂ ಅಲುಗದೆ ಹಾಗೆ ಹಾಗೇ ತೇಲುವ ಹಕ್ಕಿ ಅನುದಿನದ ಕಾಯಕದಲ್ಲಿ ಆಕಳಿಸುವ ಮಂಕು ಸೂರ್ಯ ಅಂದೂ-ಎಲೆ ಅಲುಗುತ್ತದೆ ಹೂವು ದುಂಬಿಗಾಗಿ ಕಾದಿವೆ ರೇಡಿಯೋದ ಸುಪ್ರಭಾತ, ವಾರ್ತೆಗಳೊಡನೆ ಬೆಳಗಾಗಿದೆ ರಸ್ತೆಗಳಲ್ಲಿ ಹೊಗೆ-ಧೂಳು ಸಹನೆಗೆಟ್ಟ ಕರ್ಕಶ ಹಾರ್ನ್ ಸಿಗ್ನಲ್ ಹಾರಿ...

ಕವಿತೆ

ನಡೆ ನೀನು‌ ನಡೆ!

  ಭಾವ ಬಂಧನದ ಮೇರೆ ಮೀರಿ, ನೂರಾರು ಕನಸುಗಳ ಕೋಟೆ ದಾಟಿ, ಹೊರಟಿದೆ‌‌ ಪಯಣ, ಗಮ್ಯದ ಕಡೆ ಗಮನ! ಅಂತ್ಯವ ಯಾರು ಬಲ್ಲರು? ಶುರುವ ಯಾರು ಮರೆಯಕೂಡದು! ನಡೆದು ಬಂದ ದಾರಿ ತಿರುಗಿ ನೋಡಿದಾಗ, ನೀನು ಯಾರೆಂದು ನಿನಗೆ ನೆನಪಾಗುವುದು! ಇಲ್ಲಸಲ್ಲದ ಅಹಮಿಕೆಗೆ ಸಿಲುಕಿ, ಕಳೆದುಕೊಳ್ಳದಿರು ನಿನ್ನ ಅಸ್ತಿತ್ವ, ಹೆಜ್ಜೆ ಹೆಜ್ಜೆಗೂ ಇದೆ ಇಲ್ಲಿ ಪರೀಕ್ಷೆ ನೀ ಉತ್ತರವ ತುಂಬಿ...

ಕವಿತೆ

“ದೇವರ ಗುಟ್ಟು” 

ಕಳೆದ ರಾತ್ರಿ ಮದದಲ್ಲಿ ಉನ್ಮತ್ತ ದೇವರು! ಬಾಯ್ತಪ್ಪಿ ದೊಡ್ಡ ಗುಟ್ಟೊಂದ ಅರುಹಿದ … ಭುವಿಯ ಮೇಲೆ ಒಬ್ಬನೇ ಒಬ್ಬನಿಲ್ಲ ನನ್ನ ದಯೆಯ ಅಗತ್ಯವಿರುವವ… ದಯೆಯಾದರೂ ಯಾಕೆ? ಪಾಪವೆಂಬುದೇ ಇಲ್ಲದಿರುವಾಗ! ಆ ಪ್ರಿಯದೇವ ಎಂತಹ ತಲ್ಲೀನನಾಗಿದ್ದ! ನನ್ನ ಮೇಲೆ ಅವನೇ ಧಾರೆಯಾದ… ಆನಂದದ ಅತಿರೇಕದಲ್ಲಿ ನಾನೂ ಆ ರಸವ ಕುಡಿದೆ ಕೊಚ್ಚಿ ಹರಿದೆ… ಓ ಪ್ರಿಯರೇ...

ಕವಿತೆ

ಕೇಳಿಸುವುದಿಲ್ಲ

ಕಡೆಯ ಮಾತು ಕೇಳಿಸುವುದೇ ಇಲ್ಲ. ಕೂಗಳತೆಯ ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಆಕಾರ ಕಡೆಗೆ  ಮರೆಯಾಗುತ್ತದೆ.   ಊರ ಜಾತ್ರೆಯ ಗೌಜಿನಷ್ಟು ಪ್ರಶಾಂತವಾಗಿರುವ ನಗರದ ಗುಡಿಗಳ ಆಡಂಬರದ ಉಡುಗೆ – ತೊಡುಗೆಗಳ ನೂಕು ನುಗ್ಗಲಿನಲ್ಲಿ, ಗರ್ಭಗುಡಿಯ ಸಾಲಿನಲ್ಲಿ, ಪ್ರದಕ್ಷಿಣೆಗಳ ಹೆಜ್ಜೆ ಸದ್ದುಗಳಲ್ಲಿ ನಿನ್ನ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ.  ...

ಕವಿತೆ

ಮತದಾನ

ಎಲ್ಲಿ  ಹೋಗುವಿರಿ ನಿಲ್ಲಿ ಜನತೆಯೇ ಅದೋ ಬರುತ್ತಿದೆ ಚುನಾವಣೆ ಗಲ್ಲಿಗಲ್ಲಿಗಳ ಸೇಂದಿ ಅಂಗಡಿಗಳೇ ಹೆಚ್ಚುವುದು ನಿಮ್ಮ ಚಲಾವಣೆ   ಗಡಿಪಾರಾಗಿ ಹೋದಂತಿದ್ದ ಜನನಾಯಕರ ಮತ್ತೆ ಮುಖದರ್ಶನ ಯಾರ ಭಾಗ್ಯವೋ ಏನೋ ನಾನಂತೂ ಕಾಣೆ ಉಚಿತ ಸೀರೆ ದುಡ್ಡುಗಳ ಮಹಾದಾನ   ಕುಂಭಕರ್ಣನಂತೆ ಮಲಗಿ ನಿದ್ರಿಸುತ್ತಿದ್ದ ಸರಕಾರ ಎದ್ದಿದೆ ನೋಡಲ್ಲಿ ಜನರ ಕಷ್ಟಕೆ ಮೊಸಳೆ ಕಣ್ಣೀರ...

ಕವಿತೆ

ಸಾಂತ್ವನ

ಆ ದಿನ ನನಗೆ ಅಳು ಒಂದೇ ಸಮನಾಗಿ ಬರುತ್ತಿತ್ತು| ತಡೆಯಲಾರದ ಅಳು, ಬಿಕ್ಕು, ತೊಟ್ಟುತೊಟ್ಟಾಗಿ ಹರಿಯುವ ಕಣ್ಣೀರು ಹೊರಬರುವ ಕಣ್ಣೀರ ಸೆರಗ ತುದಿಯಿಂದ ಒರೆಸಲಾಗದ ಅಸಹಾಯಕ ನಾನು||   ಹೋಗಿ ಅಮ್ಮನ ತಬ್ಬಿದೆ; ಅಚ್ಚರಿಗೊಂಡು ಕೈಹಿಡಿದಳು ಕೆಲವೇ ಕ್ಷಣ, ನೀನೊಬ್ಬ ಹುಚ್ಚಿ, ಪಕ್ಕಕ್ಕೆ ಸರಿಸಿದಳು| ಅಪ್ಪನ ಹಿಡಿದೆ, ಏನಾಯ್ತು ಮಗಳೇ? ಕೇಳಿದ ಕೆಲವೇ ಗಳಿಗೆ, ಅವನ ಕೈ...

ಕವಿತೆ

ಇರುವಾಗ

ಎಂದಿನಂತಲ್ಲದ ಅದೊಂದು ಬೆಳಗು ಎಲ್ಲ ರಸ್ತೆಗಳಂತೆಯೇ ಆ ರಸ್ತೆಯಲ್ಲಿ ಇನ್ನೂ ಗಡಿಬಿಡಿ ತನ್ನ ಪಯಣ ಆರಂಭಿಸಿಲ್ಲ   ಮಂಜಿನ ತುಣುಕುಗಳನ್ನು ಬಿಸಿಲಕೋಲು ಚುಚ್ಚಿ ಬುಟ್ಟಿಗಿಳಿಸುತ್ತಿದೆ ತರಗೆಲೆಗಳ ಉದುರಿಸಲೂ ಮರೆತಂತೆ ಸ್ತಬ್ಧ ಮರ   ಇಲ್ಲಿ ತನ್ನ ತಟ್ಟೆಗೇನು ಭಿಕ್ಷೆ ಬಿದ್ದೀತೆಂಬ ದುಗುಡದಲ್ಲೇ ಕಾಯುತ್ತಿದ್ದಾನೆ ರಸ್ತೆಯಂಚಿಗೆ ಯಾರೋ ಮುಟ್ಟಿಸಿಹೋದ ಮೊಂಡು...

ಕವಿತೆ

ಡಕಾಯಿತನ ಪ್ರೀತಿ

ಡಕಾಯಿತನಿಗೆ ಪ್ರೀತಿಸುವ ಹಕ್ಕಿಲ್ಲವೇ? ಪ್ರೀತಿಗೂ ವೃತ್ತಿಗೂ ಪರಸ್ಪರ ಸಂಬಂಧ ಬೇಕೆ? ಪ್ರೀತಿ ಕುರುಡಲ್ಲವೇ? ಆಂಗ್ಲಮೂಲದ ಕವಿ ಆಲ್‌ಫ್ರೆಡ್ ನೋಯ್ಸ್ ಬರೆದ ದ ಹೈವೇ ಮ್ಯಾನ್ ಒಬ್ಬ ಡಕಾಯಿತನ ಪ್ರೀತಿಯ ಕುರಿತಾಗಿ ಮಾತನಾಡುವ ಸುಂದರ ಕವನ. ಕನ್ನಡಕ್ಕೆ ಅನುವಾದಿಸಿದ್ದಾರೆ – ಸರೋಜಾ ಪ್ರಭಾಕರ್ ಭಾಗ-೧     ಗಾಢಾಂಧಕಾರದ ನಡುವೆ ಮರಗಳ ರಾಶಿಯೊಳಗಿಂದ ಗಾಳಿಯ ರಭಸದ...

ಕವಿತೆ

ನಗೆಯ ತುಣುಕುಗಳು

ತುಕ್ಕು ಹಿಡಿದ ನಗುವನ್ನೂ ಬಚ್ಚಿಟ್ಟಿರುವೆನು ಉಜ್ಜಿ ಹೊಸದಾಗಿಸಲಾಗದು ಇರುವುದನ್ನಾದರೂ ಉಳಿಸಿಕೊಳ್ಳಬೇಕಿದೆ; ಬಿತ್ತಿ ಬೆಳೆಸಲಾಗುವುದಿಲ್ಲ ಇರುವುದನ್ನೇ ಜೋಪಾನಮಾಡಿಕೊಳ್ಳಬೇಕಿದೆ.   ಒಳಗೊಳಗೇ ನಕ್ಕು ಖುಷಿಯಾಗಿದ್ದರೂ ಸಹಿಸುವುದಿಲ್ಲ ಈ ಜನ, ತಿರುಗಿ ಕೊಡುವುದಂತೂ ಇಲ್ಲ ಕಂಡರೆ ಕದಿಯಲು ಹಾತೊರೆಯುತ್ತಾರೆ.   ತಲೆಯೆತ್ತಿ ನೋಡಲೂ ಸಮಯವಿಲ್ಲ ಈ ಜನರಿಗೆ...