ಜನಸಾಮಾನ್ಯ ಜಾತಿ–ಧರ್ಮಗಳ ಪರಿವೆಯನ್ನು ಮರೆತು ತನ್ನ ನಿತ್ಯದ ಜೀವನವನ್ನು ನಡೆಸುತ್ತಿರುತ್ತಾನೆ. ಮುಸ್ಲಿಮರ ಅಂಗಡಿಗಳಲ್ಲಿ ಕೊಂಡ ಬಟ್ಟೆಯನ್ನು ಉಡುತ್ತಾನೆ; ಕ್ರೈಸ್ತರ ಅಂಗಡಿಗಳಲ್ಲಿ ಕೊಂಡ ಬ್ರೆಡ್ದನ್ನು ತಿನ್ನುತ್ತಾನೆ; ದಲಿತರಿಂದ ತರಕಾರಿಗಳನ್ನು ಕೊಂಡುತಂದು ಅಡಿಗೆ ಮಾಡಿಕೊಂಡು ಉಣ್ಣುತ್ತಾನೆ. ಊದಿನಕಡ್ಡಿ, ಕರ್ಪೂರಗಳನ್ನು ಯಾರು ತಯರಿಸಿರಬಹುದು ಎಂಬ ಬಗ್ಗೆ...
Author - ಶ್ರೀಕಲಾ ಹೆಗಡೆ ಕಂಬ್ಳಿಸರ
ಚಳಿಗಾಲದ ಕಥೆ
ಸುಂದರವಾದ ಹಳ್ಳಿಯ ಸುಂದರವಾದ ಮುಂಜಾನೆ ಹೇಗಿರಬಹುದು? ಮಂಜಿನಿಂದ ಮುಚ್ಚಿಕೊಂಡ ಊರು, ಮಂಜಿನ ಮಬ್ಬಿನಲ್ಲಿ ಅಳಿಸಿಹೋದ ಕಾಲುದಾರಿಗಳು, ಇಬ್ಬನಿಯಲ್ಲಿ ಮಿಂದ ಹುಲ್ಲು ದಾರಿಯ ಕಡೆಗೆ ಬಾಗಿ ಸ್ವಾಗತಿಸುವ ಪರಿ, ಮರದ ಎಲೆಯಿಂದ ಎಲೆಗೆ ಧುಮುಕುವ ಇಬ್ಬನಿಯ ಹನಿಗಳ ಪಟಪಟ ಸದ್ದು, ರಾತ್ರಿಯೆಲ್ಲ ಉಪವಾಸ ಮಾಡಿದ ಪಕ್ಷಿಗಳು ಹಸಿವಿನ ಸಂಕಟಕ್ಕೋ, ಆಹಾರ ದೊರಕುವ ಸಂತೋಷಕ್ಕೋ...
ಹಾರುವ ರೆಕ್ಕೆಗಳೂ- ಏರುವ ಮೆಟ್ಟಿಲುಗಳೂ
ಪುಟ್ಟ ರೆಕ್ಕೆಗಳು ಗಾಜಿಗೆ ಬಡಿದುಕೊಳ್ಳುತ್ತ ಹಾರುವ ಸದ್ದು ಮತ್ತೆ ಬೀಳುವ ಸದ್ದು. ಸದ್ದು ಬಂದೆಡೆಗೆ ಹೋಗಿ ನೋಡಿದರೆ ದೊಡ್ಡ ನೊಣವೊಂದು ಕಿಟಕಿಯ ಗಾಜಿನಿಂದ ತೂರಿಕೊಂಡು ಹೊರಹೋಗಲು ಹವಣಿಸುತ್ತಿತ್ತು. ನಾನು ಕಿಟಕಿಯನ್ನು ತೆರೆಯಲು ಪಟ್ಟ ಪ್ರಯತ್ನ ಫಲಕೊಡಲಿಲ್ಲ. ಗಂಡಸರು ಹೆಂಗಸರೆನ್ನದೇ ಮನೆಮಂದಿಯೆಲ್ಲ ದುಡಿಯಲು ಹೋಗುವ ಮನೆಗಳಲ್ಲಿ ಕಿಟಕಿಗಳ ಬಾಗಿಲುಗಳನ್ನು ತೆರೆಯುವ...
ಕೇಳಿಸುವುದಿಲ್ಲ
ಕಡೆಯ ಮಾತು ಕೇಳಿಸುವುದೇ ಇಲ್ಲ. ಕೂಗಳತೆಯ ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಆಕಾರ ಕಡೆಗೆ ಮರೆಯಾಗುತ್ತದೆ. ಊರ ಜಾತ್ರೆಯ ಗೌಜಿನಷ್ಟು ಪ್ರಶಾಂತವಾಗಿರುವ ನಗರದ ಗುಡಿಗಳ ಆಡಂಬರದ ಉಡುಗೆ – ತೊಡುಗೆಗಳ ನೂಕು ನುಗ್ಗಲಿನಲ್ಲಿ, ಗರ್ಭಗುಡಿಯ ಸಾಲಿನಲ್ಲಿ, ಪ್ರದಕ್ಷಿಣೆಗಳ ಹೆಜ್ಜೆ ಸದ್ದುಗಳಲ್ಲಿ ನಿನ್ನ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ...
ಹೆಣ್ಣು ಹುಟ್ಟಿತು
ನಾನು ಶಾರಿತಾಯಿಯನ್ನು ಮೊದಲ ಬಾರಿ ನೋಡಿದಾಗ ಅತ್ತ ಹುಡುಗಿಯೂ ಅಲ್ಲದ, ಇತ್ತ ಹೆಂಗಸೂ ಅಲ್ಲದ ಸ್ಥಿತಿಯಲ್ಲಿದ್ದಳು. ಉದ್ದನೆಯ ಊಟದ ಒಳದಲ್ಲಿ ಹನ್ನೆರಡು ಜನ ಮಕ್ಕಳು, ಜೊತೆಗೆ ಅತಿಥಿಯಾಗಿದ್ದ ನನ್ನನ್ನೂ ಸೇರಿ ಹದಿಮೂರು ಜನ ಮಕ್ಕಳ ಬೇಕು ಬೇಡಗಳನ್ನು ಪೂರೈಸುತ್ತ, ಆಗಾಗ ಹಾಸ್ಯಮಾಡುತ್ತ, ಚಿಕ್ಕ ಮಕ್ಕಳನ್ನು ರಮಿಸುತ್ತ, ಕೈಲಿದ್ದ ಕೋಲೊಂದನ್ನು ಝಳಪಿಸುತ್ತ ತಟ್ಟೆಯಲ್ಲಿ...
ಸೆಳೆದೂ ಎಳೆದೊಯ್ಯಲಾಗದೇ…
“ಹರಯವೆನ್ನುವುದು ಮೀನಿನಷ್ಟೇ ಚುರುಕು, ಅಷ್ಟೇ ಚಂಚಲ ಕೂಡ” ಎಂದು ಹಿಂದಿನ ದಿನ ಸಂಜೆ ಆಕ್ವೇರಿಯಂ ತಂದು ಜೋಡಿಸುವಾಗ ಅಪ್ಪ ಹೇಳಿದ್ದು ನೆನಪಾಗಿ ಸಣ್ಣದಾಗಿ ನಕ್ಕಳು ಮೇದಿನಿ. ಚಂದದ ಮೀನುಗಳು ತನ್ನ ಪ್ರತಿರೂಪವೆಂಬಂತೆ ಭಾಸವಾಯಿತು ಅವಳಿಗೆ. ಅತ್ತಿಂದಿತ್ತ ಈಜಾಡುತ್ತಲೇ ಇರುವ ಈ ಮೀನುಗಳು ತನ್ನನ್ನೂ ಚಂಚಲಗೊಳಿಸುತ್ತಿವೆ ಎಂಬ ಭ್ರಮೆ ಕಾಡತೊಡಗಿತು. “ನಿನ್ನೆ...
ಋತುಗಳೆಲ್ಲಿ ಕಳೆದುಹೋದವು?
“ಈ ಸಿಟಿಗಳಲ್ಲಿ ಸೀಜನ್ನುಗಳೇ (Season) ಇಲ್ಲ” ಎಂಬ ವಿಚಾರವನ್ನು ಪದೇ ಪದೇ ಎತ್ತಿ ಚರ್ಚಿಸಿ ನಮಗೆಲ್ಲ ಬೇಸರ ತರಿಸುತ್ತಿದ್ದ ಸಹೋದ್ಯೋಗಿಯೊಬ್ಬನಿದ್ದ. ಉಪಮನ್ಯು ಎಂದು ಹೆಸರು. `ಅಸ್ತವ್ಯಸ್ತವಾಗಿ ಹರಡಿಕೊಂಡ ಕಸದ ರಾಶಿಗಳು ಮತ್ತು ರಾಡಿಯಾದ ನೆಲವನ್ನು ನೋಡಿ ಮಳೆಗಾಲವೆಂದು ಭಾವಿಸಬೇಕು; ಧೂಳು ಗಾಳಿಯನ್ನು ನೋಡಿ ಚಳಿಗಾಲವನ್ನು ಕಲ್ಪಿಸಿಕೊಳ್ಳಬೇಕು; ಟಾರು...
ಕನ್ನಡದ ನಗು – ಕನ್ನಡದ ಅಳು
ಮಾತೃಭಾಷೆ ಅಥವಾ ತಾಯ್ನುಡಿ ಎಂದರೇನು ಎಂದು ನಿಘಂಟಿನಲ್ಲಿ ಹುಡುಕಿದರೆ ತಾಯಿ ಹೇಳಿಕೊಟ್ಟ ಭಾಷೆ ಅಥವಾ ಪ್ರಥಮವಾಗಿ ಕಲಿತ ಭಾಷೆ ಎಂಬ ಅರ್ಥ ಸಿಗುತ್ತದೆ. ಪರಭಾಷೆಯಲ್ಲಿ ಕೇಳಿದ, ಓದಿದ ವಿಷಯಗಳನ್ನು ಮಾತೃಭಾಷೆಯ ಮೂಲಕವೇ ಅರ್ಥೈಸಿಕೊಳ್ಳುತ್ತೇವೆ. 19,000 ಕ್ಕೂ ಹೆಚ್ಚು ಭಾಷೆಗಳಿರುವ ಭಾರತದ ನಗರಗಳ ಇಂದಿನ ಯುವ ಜನಾಂಗ ಇಂಗ್ಲೀಷನ್ನು ಮಾತೃಭಾಷೆಯಾಗಿ ಬಳಸುತ್ತಿರುವುದು...
ಕಟ್ಟಿಹಾಕಲಾಗದು
ಮರಗಳು ವಿರಳವಿರುವ ಮಲೆನಾಡಿನ ಒಂದು ಭಾಗದಲ್ಲಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಅದು ಎಲ್ಲಾದರೂ ನಿಂತಿದೆಯೋ ಎಂದು ಸುತ್ತಲೂ ಕಣ್ಣಾಡಿಸಿಕೊಂಡು ಹೊರಡಬೇಕಿತ್ತು. ಹೋಗುವ ಹಾದಿಯ ಗುಂಟ ಪದೇ ಪದೇ ಹಿಂತಿರುಗಿ ನೋಡಿಕೊಳ್ಳುತ್ತ, ಎಡಬಲಗಳಲ್ಲಿ ಕಣ್ಣಾಡಿಸುತ್ತ, ಅದಕ್ಕೆ ಅಂಜಿಕೊಂಡೇ ನಡೆಯಬೇಕಿತ್ತು. ಶಾಲೆಗೆಂದು ಹೋದ ಮಕ್ಕಳು ಸರಿಯಾದ ಸಮಯಕ್ಕೆ ಮನೆ ತಲುಪಿದ ಮೇಲೇ...
ಸಾಕ್ಷರತಾ ಆಂದೋಲನ
ಅದು ತೊಂಬತ್ತರ ದಶಕದ ಮಧ್ಯಭಾಗ. ದೇಶ ಆಗಷ್ಟೇ ಹೊಸ ಅರ್ಥಿಕ ನೀತಿಗಳಿಗೆ(ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ತೆರೆದುಕೊಳ್ಳುತ್ತಿತ್ತು. ವಸ್ತುಗಳ ಬೆಲೆಯಲ್ಲಿನ ಚಿಕ್ಕ ಪುಟ್ಟ ಏರುಪೇರುಗಳಿಗೂ ಜನರು ಆರ್ಥಿಕ ಒಪ್ಪಂದವನ್ನೇ ಗುರಿಯಾಗಿಸಿ ಅವಲತ್ತುಕೊಳ್ಳುತ್ತಿದ್ದರು. ನಾನು ಆಗಿನ್ನೂ 7-8 ವರ್ಷದ ಹಸುಳೆ. ದೇಶದ ಪ್ರಧಾನಿ ಯಾರೆಂಬುದನ್ನೂ ಕಂಠಪಾಠ ಮಾಡಿ...