ಈ ಹ್ಯಾಶ್ ಟ್ಯಾಗ್’ಗಳ ಭರಾಟೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಮೂಲಭೂತ ಕರ್ತವ್ಯದಂತಾಗಿದೆ. ಅದೆಷ್ಟು ಟ್ಯಾಗ್’ಗಳು, ದಿನಕ್ಕೆ ಒಂದು ಹೊಸ ಟ್ಯಾಗ್ ಹುಟ್ಟದಿದ್ದರೆ ಮತ್ತೆ ಕೇಳಿ. ಒಂದು ಗುಂಪು ಏನೋ ಹಾಕುತ್ತದೆ ಅದಕ್ಕೆ ಪ್ರತಿವಾದ ಇದ್ದೇ ಇರುತ್ತದೆ, ಅಂತೂ ಟ್ಯಾಗ್ ಮುಂದುವರಿಯುತ್ತಲೇ ಇರುತ್ತದೆ. ಇದೆಲ್ಲಾ ಈಗ ಹೀಗನಿಸಲು ಕಾರಣವೂ ಇದೆ, ಹತ್ತಿರ ಹತ್ತಿರ ತಿಂಗಳಾಗುತ್ತಾ...
ಭಾವತರಂಗ
ಮನಸ್ಸಿದ್ದರೆ ಮಾರ್ಗವಿದೆ ಎಂದು ಸಾಧಿಸಿ ತೋರಿಸಿದ ಚಾಲಾಕಿ ಈಕೆ…
ಅವಳು ಇರಾ ಸಿಂಘಾಲ್. ಇತರರಂತೆ ಸಾಮಾನ್ಯಳಾಗಿದ್ದರೆ ಆಕೆಯ ಬಗ್ಗೆ ಬರೆಯುವ ಮನಸ್ಸು ಮಾಡುತ್ತಿರಲಿಲ್ಲವೇನೋ. ಆಕೆಗೆ ಬೆನ್ನುಹುರಿಗೆ ಸಂಬಂಧಿಸಿದ ಸ್ಕೋಲಿಯೋಸಿಸ್ ಎಂಬ ರೋಗವಿದೆ. ಎಷ್ಟೆಂದರೆ ಆಕೆಗೆ ತನ್ನ ತೋಳುಗಳನ್ನು ಚಲಿಸಲೂ ಸಾಧ್ಯವಾಗುತ್ತಿಲ್ಲ, ಅಷ್ಟು. ಅದೊಂಥರ ‘ಬಗಲ್ ಮೆ ದುಶ್ಮನ್’ ಇದ್ದ ಹಾಗೆ. ಸದಾ ಆ ನೋವನ್ನು ಹೊತ್ತುಕೊಂಡೇ ತಿರುಗಬೇಕು. ನಡೆಯುವಾಗಲೂ ಅಷ್ಟೆ...
ಧಣಿ
“ ಹುಹ್… ಈ ಕಾಮುಕನಿಗೆ ಸನ್ಮಾನ ಬೇರೆ ಕೇಡು” ಅಂತ ಹೇಳುವಾಗ ಅವಳ ಮುಖದಲ್ಲಿ ರೋಷ ಉಕ್ಕಿ ಬರುತ್ತಿತ್ತು. ಊರಿಗೆ ಊರೇ ಅವರನ್ನು ‘ಅಣ್ಣೆರೆ’ ಎಂದು ಸಂಭೋದಿಸಿ ಗೌರವಿಸುತ್ತಿರುವಾಗ ಇವಳ್ಯಾಕೆ ಇಷ್ಟು ದ್ವೇಷಿಸುತ್ತಾಳೆ? ಅದೂ ಕೂಡಾ ಹಲವು ಸಂಘ ಸಂಸ್ಥೆಗಳಲ್ಲಿ ಮುಖಂಡನಾಗಿರುವವರನ್ನು ಕಾಮುಕನೆಂದು ಹೇಳುತ್ತಿರುವುದೇಕೆ? ಎಂಬ ಪ್ರಶ್ನೆ ನನ್ನಲ್ಲಿ ಇನ್ನಿಲ್ಲದ ಕುತೂಹಲ...
ಕಲ್ಲಿಗೆ ಪೆಟ್ಟು ಬಿದ್ದಷ್ಟೂ ಅದು ಮೂರ್ತಿಯಾಗುವುದು
ಕೆಲವರಿಗೆ ಈ ಬದುಕೆಂಬ ಸಂತೆಯಲ್ಲಿ ಇಲ್ಲಗಳದ್ದೇ ಚಿಂತೆ. ನಮ್ಮ ಬಯಕೆಗಳೆಲ್ಲ ಯಾವತ್ತೂ ನಮ್ಮ ವ್ಯಾಪ್ತಿ ಪ್ರದೇಶದ ಹೊರಗಿರುತ್ತದೆ. ಈ ಬಯಕೆಗಳು ಒಂದೋ ನಮ್ಮ ರೇಂಜಲ್ಲಿರುವುದಿಲ್ಲ. ಇಲ್ಲಾ ನಮ್ಮ ರೇಂಜಲ್ಲಿರುವ ಬಯಕೆಗಳು ನಮಗೆ ಸಿಗುವುದಿಲ್ಲ. ಒಟ್ಟಿನಲ್ಲಿ ನಮಗೆ ಸುಖವಿರುವುದಿಲ್ಲ. ಬಹುಶಃ ಇದಕ್ಕೆಯೇ ಇರಬೇಕು ಹಿರಿಯರು ಹೇಳಿದ್ದು “ಇರದುದರೆಡೆಗೆ ತುಡಿವುದೇ ಜೀವನ” ಅಂತ...
ಪ್ರೀತಿಗೆ ಕಣ್ಣಿಲ್ಲ?
ಸುನಿಲ್ ಮತ್ತು ನಾನು ಇಬ್ರೂ ಫ್ರೆಂಡ್ಸ್, ಬೆಸ್ಟ್ ಅಲ್ಲ, ಜಸ್ಟ್ ಕ್ಲೋಸ್ ಫ್ರೆಂಡ್ಸ್. ಎಂಟನೇ ತರಗತಿಯಿಂದ ಒಟ್ಟಿಗೆ ಓದಿದ್ದು ನಾವು. ನಮ್ಮಿಬ್ಬರಲ್ಲಿ ಮುಚ್ಚಿಡುವಂತಾದ್ದು ಏನೂ ಇರಲಿಲ್ಲ. ಅವನ ಕಷ್ಟ ನನ್ನತ್ರ ಹೇಳ್ತಿದ್ದ, ನನ್ನ ಕಷ್ಟ ಅವನಲ್ಲಿ. ಅವನು ಅತ್ಯಂತ ಚುರುಕಾದ ಸ್ವಭಾವದವನು. ಕಲಿಕೆಯಲ್ಲಿ ಯಾವಾಗಲೂ ನಮಗಿಬ್ಬರಿಗೆಯೇ ಫೈಟ್ ಮತ್ತು ನಮಗೆ ಫೈಟ್ ಕೊಡೋರು ಬೇರೆ...
ಪ್ರೀತಿ ಮಧುರ ತ್ಯಾಗ ಅಮರ
ಅವರಿಬ್ಬರ ಪರಿಚಯವಾಗಿದ್ದೇ ಒಂದು ಆಕಸ್ಮಿಕ. ಫ್ರೆಂಡ್ ಅನುಷಾಳ ಮದುವೆಗೆಂದು ಮೈಸೂರಿಗೆ ಬಂದಿದ್ದ ಕಾರ್ತಿಕ್. ಸೋ ಇವನು ಹುಡುಗಿಯ ಕಡೆಯವನು. ಮತ್ತವಳು ಹುಡುಗನ ಅತ್ತೆ ಮಗಳು. ಸೋ ಅವಳು ಹುಡುಗನ ಕಡೆ. ಆಕ್ಚ್ವಲ್ಲಿ ರೂಪಾಳದ್ದು ಟಿಪಿಕಲ್ ಅಯ್ಯಂಗಾರ್ ಫ್ಯಾಮಿಲಿ. ಈ ಮದುವೆ ಹಿಂದಿನ ದಿನ ಜೋರಾಗಿ ಡಿಜೆ ಹಾಕೋದು, ಕುಣಿಯೋದು ಇಂತದ್ದಕ್ಕೆಲ್ಲಾ ಅವಕಾಶವೇ ಇಲ್ಲ ಅಲ್ಲಿ...
ಹಣೆಬರಹ
ನಾನು ಲತ, ಒಬ್ಬಳು ಪುಟ್ಟ ತಂಗಿ, ಅಪ್ಪ – ಅಮ್ಮ ಹೀಗೆ ಚಿಕ್ಕ ಚೊಕ್ಕ ಸಂಸಾರವಾಗಿತ್ತು ನಮ್ಮದು. ಬಡತನವೆಂಬುದು ಪಿತ್ರಾರ್ಜಿತವಾಗಿ ಬಂದ ವರದಾನವಾಗಿತ್ತು. ಇದೆಯೆಂಬುದಕ್ಕಿಂತ ಇಲ್ಲಗಳ ಸಂಖ್ಯೆಯೇ ಜಾಸ್ತಿಯಾಗಿದ್ದಿತು. ಹೊತ್ತಿನ ಊಟಕ್ಕೂ ತತ್ವಾರ. ಊಟಕ್ಕೂ ಗತಿ ಇಲ್ಲ ಎನ್ನುವಂತಹ ಸ್ಥಿತಿಗೆ ನಮ್ಮನ್ನು ನಮ್ಮಪ್ಪನೇ ತಳ್ಳಿದ್ದು. ಅಪ್ಪ ಮಹಾ ಕುಡುಕ, ಅದ್ಯಾರು ಅವನಿಗೆ ಈ...