Author - Nagesh kumar

ಕಥೆ

ಕೆಂಪಾದವೋ ಎಲ್ಲಾ- ೨

ಕೆಂಪಾದವೋ ಎಲ್ಲಾ- ೧   ರೈಲ್ವೆ ಕಂಬಿಗಳ ಪಕ್ಕದ ಪೊದೆಯ ಬಳಿ ಇವರಿಗಾಗಿ ಬಾಡಿಯನ್ನು ಕಾದಿರಿಸಿದ್ದ ಲೋಕಲ್ ಪೋಲಿಸರು, ಇನ್ಸ್ಪೆಕ್ಟರ್ ಈಶ್ವರಿ ಮತ್ತು ಪತ್ತೇದಾರ ಅಮರ್‌ನನ್ನು ಕರೆದೊಯ್ದರು. ಬಿಳಿ ಪಂಚೆ ಕಪ್ಪು ಕೋಟ್ ಧರಿಸಿ, ಹಣೆಯ ಮೇಲೆ ಮೂರು ನಾಮ ಬಳಿದಿದ್ದ  ಸೆಟ್ಟಿಯವರ ಮುಖವು ನೋವಿನಿಂದ ಕಿವುಚಿ ವಿಕಾರವಾಗಿತ್ತು, ಕತ್ತಿನ ಸುತ್ತಲೂ ಹಗ್ಗ ಬಿಗಿದ ಗಾಯಗಳಾಗಿವೆ...

ಕಥೆ

ಕೆಂಪಾದವೋ ಎಲ್ಲಾ- ೧

ಹಸಿರೂರಿನ ಮುಖ್ಯ ರಸ್ತೆಯ ತಿರುವಿನ ಸಿಗ್ನಲ್ನಲ್ಲಿ ತನ್ನ ಹೊಂಡಾ ಸಿಟಿ ಕಾರ್ ನಿಲ್ಲಿಸಿ ಆಕಳಿಸಿದ ಪತ್ತೇದಾರ ಅಮರ್ ಪಾಟೀಲ್. ಅಕ್ಕನ ಮನೆಗೆ ವೆಕೇಶನ್ ಎಂದು ಆಫೀಸ್ ಶಾಖೆ ಮುಚ್ಚಿ ಮಂಗಳೂರಿಂದ  ತಡರಾತ್ರಿ ಹೊರಟಿದ್ದರಿಂದ ಆಯಾಸವಾದಂತಿತ್ತು.  ಒಂದು ವರ್ಷದ ಕೆಳಗೆ ಈ ಊರಿಗೆ ಅಕ್ಕ ಈಶ್ವರಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾದಾಗಿನಿಂದ ಇದ್ದ ಆಕೆಯ ಆಹ್ವಾನಕ್ಕೆ ಈಗ...

ಅಂಕಣ

ಕೆ. ಎನ್. ಗಣೇಶಯ್ಯರವರ  ೨ ಹೊಸ ಪುಸ್ತಕಗಳ  ವಿಮರ್ಶೆ

೧. ಪದ್ಮಪಾಣಿ-( ಕಥಾ ಸಂಕಲನ) ಮತ್ತೊಂದು ಐತಿಹಾಸಿಕ ಜಾನಪದ ಶೈಲಿಯ ರಹಸ್ಯಗಳ ಹಿನ್ನೆಲೆಯುಳ್ಳ ರೋಚಕ ಕಥೆಗಳ ಕಥಾ ಸಂಕಲನ ಇದು. ಪದ್ಮಪಾಣಿ ಎಂಬ ಶೀರ್ಷಿಕೆ ಕತೆಯಲ್ಲಿ ಕತೆಯಲ್ಲಿ ಲೇಖಕರು ಅಜಂತಾ ಗುಹೆಯ ಸುಂದರ ಶಿಲ್ಪವೊಂದರ ಬೆಳಕಿಗೆ ಬಾರದ ಬೌದ್ಧ ಧರ್ಮದ ಕತೆಯನ್ನು ಭೂತವೊಂದು ಹೇಳಿದಂತೆ ಬಿಂಬಿಸಿದರೆ, ಮಲಬಾರ್-೦೭ ಎಂಬಲ್ಲಿ ಜೈವಿಕ ಭಯೋತ್ಪಾದನೆ ಎಂಬ ವಿನೂತನ...

ಕಥೆ

ಮಾರುತಿಯ ಟ್ರೀಟ್

ಐ ಫೋನ್-೭ ರ ಅಲಾರಂ ಮಧುರವಾಗಿ ನುಡಿದರೂ ನನಗೆ ಬೆಚ್ಚಿ ಬೀಳುವಂತೆಯೇ ಆಗಿ ಎದ್ದು ಕೂತೆ.  ಬೆಳಿಗ್ಗೆ ಆರು ಗಂಟೆಯಾಯ್ತು ನಿಜ, ಆದರೆ ಹಿಂದಿನ ರಾತ್ರಿ ನನ್ನ ಕಲೀಗಿನ ಫ಼ೇರ್‌‍ವೆಲ್ ಪಾರ್ಟಿಯಿಂದ ಬಂದಿದ್ದು ರಾತ್ರಿ ೧ ಗಂಟೆಗೆ ತಾನೆ?..ಅದನ್ನು ನಮ್ಮ ೨೪x೭ ಲೆಕ್ಕಾಚಾರದ ಐ ಟಿ ಕಂಪನಿಗೆ ಹೇಳುವಂತಿಲ್ಲ.. ಇಲ್ಲಿ ಟೈಮ್ ಅಂದರೆ ಶತಾಯ ಗತಾಯ.. ಕಾರ್ಡ್ ಇನ್ ಮತ್ತು ಔಟ್...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ -13

ಇನ್ನು ಆ ಪತ್ತೇದಾರ ಮತ್ತು ಆತನ ಜತೆಗಾತಿ ಲಾಯರ್ ಲೂಸಿ ಮಿಕ್ಕೆಲ್ಲವನ್ನು ಪತ್ತೆ ಹಚ್ಚಿ ರಾಮನ್’ನನ್ನೂ ಕರೆದುಕೊಂಡು ಇಲ್ಲಿಗೆ ಬಂದೇ ಬರುತ್ತಾರೆ. ರಾಮನ್’ಗೆ ನನ್ನನ್ನು ಅರೆಸ್ಟ್ ಮಾಡಲು ಮನಸ್ಸು –ಧೈರ್ಯ ಇರುವುದಿಲ್ಲಾ, ‘ತಾನೂ ಸಹಾ ಜಾನಿಗೆ ರಹಸ್ಯ ಬಾಯಿಬಿಟ್ಟುದರಲ್ಲಿ ಶಾಮೀಲಿದ್ದೆನಲ್ಲಾ ’ ಎಂದು ಅವನಿಗೆ ಅಳುಕು ಬರುತ್ತದೆ.. ಇನ್ನು ನಾನು ಬದುಕಿದ್ದರೆ ಎಲ್ಲರಿಗೂ...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ -೧೨

ರಾತ್ರಿ ಮಲಗಿದ್ದರೂ ನಿದ್ದೆಹತ್ತಲಿಲ್ಲ. ಜಾನಿ ಮತ್ತು ಅವನ ಪ್ರಿಯತಮೆ ಶಾಂತಿಯ ಕೊಲೆಗಳು ನನ್ನ ಕಣ್ಣಿಗೆ ಕಟ್ಟಿದಂತಾಗಿ  “ನೀನು ನಮ್ಮನ್ನುಉಳಿಸಲು ಆಗುತ್ತಿರಲಿಲ್ಲವೇ’ ಎಂದು ಚುಚ್ಚಿ ಚುಚ್ಚಿ ಕೇಳಿದಂತಾಯಿತು. ಕಡೇ ಪಕ್ಷ ಅವರ ಕೊಲೆಗಾರನನ್ನಾದರೂ ನಾನು ಪತ್ತೆ ಹಚ್ಚಿ ಕಾನೂನಿಗೆ ಕೊಡಬೇಕೆಂಬ ಛಲ ಹುಟ್ಟಿತು. ಮುಂದಿನ ದಿನ ಬೆಳಿಗ್ಗೆ ನಾನು ಕಾಫಿ ತಿಂಡಿ...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ – 11

ನಾನೆಂದೆ: “ ಆ..ಮತ್ತೆ ನಿಮ್ಮ ಈಗಿನ ಪತಿ ರಾಮನ್…ಅವರು?’ ನನ್ನತ್ತಲೇ ನೋಡುತ್ತಾ ರಚನಾ ನುಡಿದರು..”ನೀವೇನಾದರೂ ಇನ್ಸ್ಪೆಕ್ಟರ್ ಶ್ರೀನಿವಾಸನ್’ರವರ ಫೋಟೋ ನೋಡಿದ್ದಿದ್ದರೆ ಖಂಡಿತಾ ಹೋಲಿಕೆ ಹೇಳಿಬಿಡುತ್ತಿದ್ದಿರಿ, ನನ್ನ – ಮೃದುಲಾ ಬಗ್ಗೆ ಹಿಡಿದಿರಲ್ಲಾ ಹಾಗೆ!…ಶ್ರೀನಿವಾಸನ್’ರವರ ಮಗನೇ ನನ್ನ ಗಂಡ ರಾಮನ್!. ಅಪ್ಪನ ಮಾತಿಗೆ ಎದುರು ಹೇಳದೇ ನನ್ನ ಕುತ್ತಿಗೆಗೆ ಮುಂದಿನ...

ಕಾದಂಬರಿ

ಕರಾಳಗರ್ಭ ಭಾಗ- 10

೧೨ ಆಫೀಸಿಗೆ ಮರಳುತ್ತಲೇ ಕೂಲಾದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ತಕ್ಷಣ, ಲೂಸಿ ” ಕಾಫಿ ಬೇಕಲ್ಲವೇ ?”ಎಂದಳು…ಅದಲ್ಲವೇ ಮಾತು! “ಕಾಫಿ ಕುಡಿದು ಯಾವುದೋ ಯುಗವೇ ಆಯಿತು..ಕೊಡು, ಕೊಡು …ಈ ತೂಕಡಿಸುವ ಮಿದುಳಿಗೆ ಚಾಲನೆ ಕೊಟ್ಟು ಬೇಗ ಈ ಕೇಸಿನ ಪರಿಹಾರ ಹುಡುಕೋಣಾ…” ಎಂದೆ “ ಇನ್ಯಾರಾದರೂ ಪ್ರಾಣ ಬಿಡುವ ಮುಂಚೆ ಅಂತಲೆ?” ಎಂದಳು ಕಾಫಿ ಬಗ್ಗಿಸುತ್ತಾ. “ಇನ್ಯಾರೋ ಅಲ್ಲಾ...

ಕಥೆ ಕಾದಂಬರಿ

ಕರಾಳಗರ್ಭ- 9

ನಾನು ಈ ರೀತಿ ಹೇಳಿದ್ದೆಲ್ಲಾ ಕೇಳಿ ಲೂಸಿ ತನ್ನ ಆಫೀಸಿನಲ್ಲಿ ಬಹಳೇ ಅಚ್ಚರಿಪಟ್ಟಳು.. “ ವಿಜಯ್, ನನಗನಿಸುವ ಮಟ್ಟಿಗೆ ನಾವು ಮಾಡಿರುವ ಪ್ರಗತಿ ಆಶಾದಾಯಕವಾಗಿಯೇ ಇದೆ..ಮುಂದೇನಾದರೂ ದಾರಿ ಹುಡುಕಿ ರಚನಾ ಸುಮಾರು ೧೬ ವರ್ಷ ತರುಣಿಯಾಗಿದ್ದಾಗ ಯಾವ ಯುವಕನೊಂದಿಗೆ ಸಂಬಂಧ ಬೆಳೆಸಿ ಗರ್ಭಿಣಿಯಾದಳು ತಿಳಿದುಕೊಳ್ಳಬೇಕು..ಅವಳಪ್ಪ ಅಮ್ಮ ಸುಲಭವಾಗಿ ಗರ್ಭಪಾತ ಮಾಡಿಸಿ ಅವರು ಈ...

ಕಥೆ ಕಾದಂಬರಿ

ಕರಾಳಗರ್ಭ-8

“ನಾನು ವಿವರಿಸುತ್ತೇನೆ, ತಾಳಿ..ಮೂವತ್ತೈದು ವರ್ಷದ ಹಿಂದೆ ನಿಮ್ಮ ತಾಯಿ ಒಂದು ಹೆಣ್ಣು ಮಗುವನ್ನು ಹೆತ್ತು, ಅದನ್ನು ಬೇರೆ ದಂಪತಿಗಳಿಗೆ ಸಾಕಿಕೊಳ್ಳಲು ದತ್ತು ಕೊಟ್ಟರೆಂದು ನಮಗೆ ತಿಳಿದು ಬಂದಿದೆ..ಇದು ನಿಜವೆ?, ನಿಮಗೆ ಇದರ ಬಗ್ಗೆ ಏನು ಗೊತ್ತು ?”ಎಂದಳು ಅಕೆಯ ಮುಖ ತಕ್ಷಣವೆ ವಿವರ್ಣವಾಗಿ ತಮ್ಮ ಎದೆಯನ್ನು ಗಾಬರಿಯಿಂದ ಒತ್ತಿಕೊಂಡರು.  “ನಮ್ಮಮ್ಮ?, ನನ್ನ ತಂಗಿ...