ಇತ್ತೀಚಿನ ಲೇಖನಗಳು

Featured ಅಂಕಣ

‘ಕೆರೆಯ ನೀರನು ಕೆರೆಗೆ ಚೆಲ್ಲಿ’; ಸಂಪಾದಿಸಿದ್ದನ್ನು ಸಮಾಜಕ್ಕೆ...

ಹಳೆಮೈಸೂರು ಪ್ರಾಂತದಲ್ಲಿ ನವರಾತ್ರಿಗೆ ಬೊಂಬೆ ಕೂಡಿಸುವುದೇ ಒಂದು ಉತ್ಸವ. ಬೊಂಬೆಗಳಿಗೂ ಮಾನವನಿಗೂ ಹಿಂದಿನಿಂದಲೂ ಆಪ್ಯಾಯಮಾನ ಸಂಬಂಧವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮಾತ್ರವಲ್ಲದೆ ಬೊಂಬೆಗಳು, ಚಿತ್ರಕಲೆಗಳು ಮನುಷ್ಯನ ಒಳಗಿರುವ ಕಲಾತ್ಮಕ ಗುಣವನ್ನು ಗುರುತಿಸಲು ಮಾಧ್ಯಮವಾಗಿವೆ; ಉದ್ಯೋಗ ಸೃಷ್ಟಿಯ ಪ್ರಮುಖ ಅಂಗವೂ ಆಗಿವೆ. ಆಧುನಿಕೀಕರಣದ ಓಟದಲ್ಲಿ ಕರಕುಶಲ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಪರದೇಶಿಯ ಅಂತರಂಗ

ನಾನೂ ನೌಕರಿಗೆ ಸೇರಿದೆ. ನೌಕರಿ ಸಿಕ್ಕಿದಾಗ ಏನೋ ಒಂದು ಕುಶಿ. ಹಳ್ಳಿ ಮೂಲೆಯ ಶಾಲೆಯಲ್ಲಿ ಕಲಿತು, ಮತ್ತೂ ಕಲಿತು ಮುಂದೇನು ಎಂದು ಯೋಚಿಸುವುದಕ್ಕಿಂತ ಮುಂಚೆಯೇ ಮದುವೆಯಾಗಿ ಹೊಸ ದೇಶಕ್ಕೆ ಬಂದೆ. ಭಾಷೆಯ ಸೊಗಡು ಬೇರೆ, ಜನರ ರೀತಿ ನೀತಿ ಬೇರೆ, ವ್ಯವಹಾರ ಪ್ರಪಂಚವೇ ಬೇರೆ. ಆದರೂ ನನ್ನದೇ ಹೊಸಜೀವನ ಸುರುಮಾಡುತ್ತೇನೆ ಎಂಬ ಉತ್ಸಾಹ, ಉಲ್ಲಾಸ ಇದ್ದಾಗಲೇ ಹೊಸ ನೆಲದಲ್ಲಿ...

ಪ್ರಚಲಿತ

ವಿಶ್ವಾಸ, (ಅ)ವಿಶ್ವಾಸದ ನಡುವೆ ಮರೆಯಾಗುತ್ತಿದೆಯೇ ಪ್ರಜಾಪ್ರಭುತ್ವದ ಶ್ವಾಸ?

ಕರ್ನಾಟಕದ ಶಾಸಕರೆಲ್ಲ ಸೇರಿ ನೆಡೆಸಿದ ಅಮೋಘ ಹದಿನೆಂಟು ದಿನಗಳ (ವಾರಾಂತ್ಯ ಹೊರತು ಪಡಿಸಿ) ಕರಾಳ ಪ್ರಹಸನಕ್ಕೆ ಮಂಗಳ ಹಾಡಿದ್ದು  24 ಜುಲೈ ಮಂಗಳವಾರದಂದು.  ಸರ್ಕಾರ ವಿಶ್ವಾಸ ಕಳೆದುಕೊಂಡಿದ್ದನ್ನು ಖಚಿತ ಪಡಿಸಿಕೊಂಡೇ ಮುಖ್ಯಮಂತ್ರಿಗಳು  ರಾಜೀನಾಮೆ ಸಲ್ಲಿಸುವುದರೊಂದಿಗೆ ಹೊಸ ಮುಖ್ಯಮಂತ್ರಿಗಳ ಪಟ್ಟಾಭೀಷೇಕವೂ ನೆಡೆದು ಬಿಟ್ಟಿದೆ. ಕನ್ನಡಿಗರಿಗ್ಯಾಕೋ ಈ ಸಾರಿ, ಆಷಾಢದ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನೀರಿಲ್ಲದ ತೋಟ

ಮರುಭೂಮಿ, ಬಂಜರು ಭೂಮಿ ಎಂದಾಗ ನೆನಪಾಗುವುದು ನನ್ನ ಹುಟ್ಟೂರು. ಬಾವಿಗಳಿದ್ದರೆ ನೀರು ಪಾತಾಳದಲ್ಲಿ ಇದ್ದರೂ ಆಯಿತು ಇಲ್ಲದಿದ್ದರೂ ಆಯಿತು. ಬೇಸಿಗೆಯಲ್ಲಂತೂ ಉರಿ ಬಿಸಿಲು, ಸೆಕೆ, ನೀರು ದುರ್ಲಭ. ಕೆಂಪು ಕಲ್ಲಿನ ನೆಲ ಕಾದು ಕಾಲಿಡಲಾಗುತ್ತಿರಲಿಲ್ಲ. ಆದರೂ ಮರಗಿಡಗಳಿದ್ದವು, ಪ್ರಾಣ ಪಕ್ಷಿಗಳಿದ್ದವು. ಹೆಚ್ಚೇಕೆ ನಾನೂ ನನ್ನವರೂ ವಾಸಿಸುತ್ತಿದ್ದೆವಲ್ಲ ! ನನ್ನ...

ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನಾವು ಯುವಕರು

‘ವಾಕಿಂಗ್’ ಮುಗಿಸಿ ಮನೆಗೆ ಮರಳಿದೆ. ಬಾಗಿಲು ತೆಗೆಯೋಣವೆಂದು ಚಿಲಕಕ್ಕೆ ಕೈಹಾಕಿದಾಗ ಪತ್ರವೊಂದನ್ನು ಯಾರೋ ಸಿಕ್ಕಿಸಿದ್ದರು. ಆಗಾಗ ಹೀಗೇ ಬ್ರೆಡ್ ಮಾರುವವರು, ಪಿಜ್ಜಾ ಮಾರುವವರು ಚಿಲಕಕ್ಕೆ ಅವರವರ ಬಣ್ಣದ ಚೀಟಿ ಹಚ್ಚುತ್ತಾರೆ. ಆದರೆ ಈ ಪತ್ರ ಯಾವುದೇ ಪ್ರಚಾರಕ್ಕಲ್ಲ, ಮನೆ ಮಾಲಕರ ಎಚ್ಚರಿಕೆ, ವಿನಂತಿ. ’14 ನೇ ತಾರೀಕಿಗೆ ಮನೆ ಎದುರಿರುವ ಕೊಳ...

ಅಂಕಣ

ಚುನಾವಣೋತ್ತರ ಜನಪ್ರಿಯ ಬಜೆಟ್, ಎಲ್ಲಾ ವರ್ಗಗಳನ್ನು ತಲುಪುವ ಹಾದಿ

ನರೇಂದ್ರ ಮೋದಿ 2.0 ಸರಕಾರದ ಮೊದಲ ಹಾಗೂ ಬಹುನಿರೀಕ್ಷಿತ ಬಜೆಟ್ (ಬಾಹಿ ಖಾತಾ) ಹಿಂದಿನ ಬಜೆಟ್‍ಗಳ ಮುಂದುವರಿಕೆಯಂತೆ ತೋರುತ್ತದೆ. ಹಿಂದಿನ ಪರಂಪರೆಗೆ ಭಿನ್ನವಾಗಿ ಪ್ರತೀ ವಲಯವಾರು ಹಣಕಾಸಿನ ಹಂಚಿಕೆಗಳನ್ನು ಉಲ್ಲೇಖಿಸದ, ಹಾಕಿಕೊಂಡ ಯೋಜನೆಗಳ ಕಾರ್ಯಸೂಚಿ ನೀಡದ ಹಾಗೂ ಆಶಯಗಳಿಂದ ಗಮನ ಸೆಳೆಯುವ “ಅರ್ಧ ಬಜೆಟ್” ಎಂದರೆ ತಪ್ಪಾಗದು. 2025ರ ಹೊತ್ತಿಗೆ...

ಪ್ರಚಲಿತ

Featured ಅಂಕಣ ಪ್ರಚಲಿತ

“ಪರ”ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ? ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು...

ಪ್ರಚಲಿತ

ಸರ್ಕಾರಿ ಶಾಲೆಗಳನ್ನೆ ಉಳಿಸಿಕೊಳ್ಳುವ ತಾಕತ್ತಿಲ್ಲದವರು ನಮ್ಮ ಮಠ...

ಕರ್ನಾಟಕ ಸರ್ಕಾರವು ರಾಜ್ಯದ ಮಠ ಮಂದಿರಗಳು ಹಾಗೂ ಅವುಗಳ ಸುಪರ್ದಿಯಲ್ಲಿರುವ ದೇವಸ್ಥಾನಗಳನ್ನು ತನ್ನ ಅಧೀನದಲ್ಲಿರುವ ಮುಜುರಾಯಿ ಇಲಾಖೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಆ ನಿರ್ಧಾರವನ್ನು ಮುಖ್ಯಮಂತ್ರಿಗಳು ತಳ್ಳಿಹಾಕಿದರೂ, ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಆದಾಯವಿರುವ ಎಲ್ಲಾ ದೇವಾಲಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು;...

Featured ಪ್ರಚಲಿತ

ಭಾಗ್ಯಗಳ ಭರಾಟೆಯಿಲ್ಲದ ದೇಶದ ಪರ ಬಜೆಟ್!

ಈ ಬಾರಿಯ ಬಜೆಟ್ ಹಲವು ವಿಷಯಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ . ಮೊದಲನೆಯದಾಗಿ ಹೆಚ್ಚಿನ ಜನರು ಭಾವಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ ೨೦೧೯ ರಲ್ಲಿ ಚುನಾವಣೆ ಗೆಲ್ಲಲು ಏನು ಬೇಕು ಅದನ್ನ ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದು . ತಾತ್ಕಾಲಿಕ ಶಮನ ನೀಡುವ ಅಥವಾ ಸುಖ ನೀಡುವ ಫಾರ್ಮುಲಾಗೆ ಮೋದಿ ಮಣೆ ಹಾಕಿಲ್ಲ . ಎರಡನೆಯದಾಗಿ ಮಧ್ಯಮ ವರ್ಗದ ಜನರಿಗೆ...

ಅಂಕಣ ಪ್ರಚಲಿತ

ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?

ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ...

Featured ಅಂಕಣ ಪ್ರಚಲಿತ

ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ

ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ  ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ...

ಪ್ರಚಲಿತ

ನಾಯಕರು ಇಂಥ ಗೂಂಡಾಗಳಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಇರುವಂತಹ ದಿಟ್ಟ...

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಜ್ಯದ ಮಾಜಿ ಮಂತ್ರಿ, ಮುಧೋಳದ ಮುರುಘೇಶ್ ನಿರಾಣಿಯವರ ಕಡೆಯವರಿಂದ ಹಲ್ಲೆಗೊಳಗಾದ ನನ್ನ ಸ್ನೇಹಿತನ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಆ ಘಟನೆಯ ನಂತರ ತುಂಬ ಡಿಸ್ಟರ್ಬ್ ಆಗಿದ್ದೀನಿ. ನನ್ನ ನೋವು, ಕಳವಳಗಳನ್ನು ಹಂಚಿಕೊಳ್ಳಲು ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ. ನನ್ನ ಸ್ನೇಹಿತ, ರೈತ ಮತ್ತು ಕೃಷಿ ಸಲಕರಣೆಗಳ ವ್ಯಾಪಾರಸ್ಥ...

ವೈವಿದ್ಯ

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಹಸಿರು ಹಾಸಿನ ಮೇಲೆ ಸಂಗೀತ

‘ಪಾರ್ಕಿಂಗಿಗೆ ಹತ್ತು ಡಾಲರ್’ ಎಂದೂ ಕಾಣದ ಫಲಕ ಇಂದು. ಸೊಸೆಯೊಂದಿಗೆ ವಾರ್ನರ್ ಪಾರ್ಕಿಗೆ `ವಾಕಿಂಗ್’ ಹೋಗುವ ರಸ್ತೆಯಲ್ಲಿ ಮಧ್ಯದಲ್ಲಿ ಇರಿಸಿದ್ದರು. ರಸ್ತೆಯ ಎರಡೂ ಬದಿಯ ಬೃಹತ್ ಪಾರ್ಕಿಂಗ್ ಮಳಿಗೆ ಯಾವಾಗಲೂ ಬಿಕೋ ಎನ್ನುತ್ತಿದ್ದುದು ಇಂದೇನು ಒಮ್ಮೆಲೇ ಶುಕ್ರದೆಸೆ ಗಳಿಸಿಕೊಂಡುದು ಎಂದುಕೊಳ್ಳುತ್ತಾ ಪಾರ್ಕಿನ ಕಡೆ ನಡೆದೆವು. ಏನೋ ಗದ್ದಲ ಕೇಳಿಬರುತ್ತಿತ್ತು. ಹಾಗೇ...

ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಜೆಮ್ ಶೋ

ಊರಿಂದ ಹೊರಡುವ ಮುಂಚೆಯೇ ಸೊಸೆ `ನಿಮ್ಮನ್ನು ಜೆಮ್ ಶೋಗೆ ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಎಲ್ಲಾ ಕಾದಿರಿಸಿದ್ದೇನೆ’ ಎಂದಿದ್ದಳು. ಮುಂದಾಗಿ ದೊರೆತ ಮಾಹಿತಿಯಿಂದ ನನ್ನಾಕೆಗೆ ಖುಶಿಯೇ. ಅದಕ್ಕೇ ಮೊನ್ನೆ ಸಾಂತಾ ಮೋನಿಕಾಕ್ಕೆ ಮುತ್ತು ರತ್ನಗಳ ಮೇಳಕ್ಕೆ ಹೊರಡುವಾಗ ಯಾವ ತಕರಾರಿಲ್ಲದೆ ಹೊರಟುದು. ಇಲ್ಲಿಯ ಬಿಸಿಲು, ಚಳಿ ಎರಡೂ ಆಕೆಗೆ ಅತಿರೇಖವೇ ಆಗಿ ಹೊರಗೆ...

ಅಂಕಣ ಪ್ರವಾಸ ಕಥನ ಲೋಕವಿಹಾರಿ-ಸಸ್ಯಾಹಾರಿ

ಅಂದು ಪ್ರಣಯಕ್ಕೆ ಪ್ಯಾರಿಸ್! ಇಂದು ಪ್ರವಾಸಿಗರಿಗೆ ರಿಸ್ಕ್!

ಸ್ಥಳ ಯಾವುದೇ ಇರಲಿ, ಪ್ರವಾಸ ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ ಒಂದು ಹೊಸ ಬದುಕು, ಆ ಬದುಕ ಬದುಕಲು ಒಂದು ಹೊಸ ಆಯಾಮ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನಿಯತ್ತು ಮತ್ತು ವ್ಯವಹಾರ

ಕಾರಿನ ಚಕ್ರಗಳ ಸಮತೋಲನ ತಪ್ಪಿದೆ, ಸರಿಪಡಿಸಬೇಕು, ಕೋಸ್ಟ್ಕೋಗೆ  ಹೋಗಬೇಕು ಎಂದು ಮಗ ಯೋಚಿಸುತ್ತಿದ್ದ. ಆ ಬೃಹನ್ಮಳಿಗೆಯದು ಏನೆಲ್ಲಾ ವ್ಯವಹಾರ ಇರಬಹುದು? ತರಕಾರಿ, ಜೀನಸು, ಬೇಕರಿ ವಸ್ತುಗಳು, ಕಾರಿನ ಟಯರು ಕೂಡಾ. ಟಯರು ಮಾರುವುದು ಮಾತ್ರವಲ್ಲ ಚಕ್ರಕ್ಕೆ ಅದು ಹೊಂದಿಕೆಯಾಗುತ್ತದೋ ಎಂಬ ಪರೀಕ್ಷೆ ಕೂಡಾ. ಆದರೆ ಇವುಗಳೆಲ್ಲವೂ ಸರದಿ ಪ್ರಕಾರವೇ. ಸರದಿಗೆ...