ಅಂಕಣ

ದೇಶದ ಆರೋಗ್ಯ ಮತ್ತು ಸ್ವಚ್ಛ ಭಾರತ

ದೇಶದ ಆರೋಗ್ಯದ ವಿಚಾರವಾಗಿ ಅನಾರೋಗ್ಯಕ್ಕೆ ಔಷಧೋಪಚಾರ, ಉಚಿತ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೇ ಅನಾರೋಗ್ಯಕ್ಕೆ ಕಾರಣವಾಗುವ ಮಾಲಿನ್ಯವನ್ನು ತಡೆಗಟ್ಟಿ ನಿರ್ಮಲೀಕರಣದೆಡೆಗೆ ಹೆಜ್ಜೆ ಇಡುವುದೂ ಸರ್ಕಾರದ ಕರ್ತವ್ಯ. ದೇಶದ ಆರೋಗ್ಯದಲ್ಲಿ ಸ್ವಚ್ಛ ಭಾರತದ ಪಾತ್ರವೂ ಅಷ್ಟೇ ಇದೆ. ಅದಕ್ಕೆ ಎರಡರ ಯಶಸ್ಸನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

1.6000 ರೂಪಾಯಿ ಮಾತೃವಂದನಾ ಸ್ಕೀಮಿನಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ನೀಡಲಾಗುತ್ತದೆ.‌ ಪ್ರತಿ ವರ್ಷ 50 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. 1.7 ಕೋಟಿ ಮಹಿಳೆಯರಿಗೆ antenatal check-up

(ಪ್ರಸವ ಪೂರ್ವ ವೈದ್ಯಕೀಯ ಪರೀಕ್ಷೆ) ಮಾಡಿದ್ದಾರೆ. 86.88 ಲಕ್ಷ ಗರ್ಭಿಣಿಯರಿಗೆ ಔಷಧೋಪಚಾರಗಳ ಮೂಲಕ immunize ಮಾಡಲಾಗಿದೆ. Maternity leaveನ್ನು 12 ವಾರದಿಂದ 26 ವಾರಗಳಿಗೆ ಏರಿಸಿದ್ದಾರೆ.

2.ಹಲವಾರು ಕಾರಣಗಳಿಗೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಅದರಲ್ಲಿ ಸ್ವಚ್ಛ ವಾತಾವರಣ ಇಲ್ಲದ ಕಾರಣವೂ ಇದೆ. ಒಂದೆಡೆ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದರೆ ಮತ್ತೊಂದೆಡೆ ಇಂದ್ರಧನುಷ್ ಮೂಲಕ ಮಕ್ಕಳಿಗೆ ಒಟ್ಟಾರೆ 6 ಲಸಿಕೆ ಹಾಕುತ್ತಾರೆ.‌ 3.38 ಕೋಟಿ ಮಕ್ಕಳು ಈಗಾಗಲೇ ಲಸಿಕೆಯನ್ನು ಹಾಕಿಸಿಕೊಂಡಿವೆ.

3.ಜನೌಷಧಿ ಸ್ಕೀಮಿನ ಮೂಲಕ ಕಡಿಮೆ ವೆಚ್ಚದಲ್ಲಿ ಔಷಧಿ ದೊರೆಯುತ್ತಿವೆ. 2014ರಲ್ಲಿ 99 ಜನೌಷಧಿ ಕೇಂದ್ರಗಳಿದ್ದವು. ಸದ್ಯ 5050ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. 2014ರಲ್ಲಿ 200 ಔಷಧಿಗಳು ಸಿಗುತ್ತಿದ್ದರೆ ಸದ್ಯ 800ಕ್ಕಿಂತಲೂ ಜಾಸ್ತಿ ಔಷಧಿಗಳು ಸಿಗುತ್ತವೆ.

4. ಆಯುಷ್ಮಾನ್ ಭಾರತ್ ಕಾರ್ಡಿನ ಮೂಲಕ ಉಚಿತ ಚಿಕಿತ್ಸೆ ಒದಗಿಸುತ್ತಿದ್ದಾರೆ. ಇದರಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಸುಮಾರು 16 ಲಕ್ಷ. ಪೆಬ್ರುವರಿ 1ರ ಹೊತ್ತಿಗೆ ಇದರ ಸಂಖ್ಯೆ 10 ಲಕ್ಷವಿತ್ತು. ಕೇವಲ ಎರಡು ತಿಂಗಳಲ್ಲಿ 6 ಲಕ್ಷ ಜನರೆಂದರೆ ಯೋಜನೆಯ ಅವಶ್ಯಕತೆಯ ಬಗ್ಗೆ ಅರಿಯಬಹುದು. ಪೆಬ್ರುವರಿ ಹೊತ್ತಿಗೆ ದೇಶದ ಜನ ಆರೋಗ್ಯದ ಸಲುವಾಗಿ ಖರ್ಚು ಮಾಡುವ ಅಂದಾಜು 3000 ಕೋಟಿ ರೂಪಾಯಿಯನ್ನು ಈ ಯೋಜನೆ ಉಳಿಸಿತ್ತು.

5. ಸೌದೆಯಿಂದ ಅಡುಗೆ ಮಾಡುತ್ತಿದ್ದ ಪರಿಣಾಮ ಸ್ತ್ರೀಯರಲ್ಲಿ ಶ್ವಾಸಕೋಶ‌ ಸಂಬಂಧಿ ಕಾಯಿಲೆಗಳು ಜಾಸ್ತಿ ಕಾಣುತ್ತಿದ್ದವು. ಮೋದಿಯವರು ಬಂದ ಮೇಲೆ ಸರಿಸುಮಾರು 7.16 ಕೋಟಿ ಗ್ಯಾಸ್ ಕನೆಕ್ಷನ್ ಕೊಟ್ಟಿದ್ದಾರೆ.

6.ಒಂದು ವರದಿಯ ಪ್ರಕಾರ 10 ವರ್ಷದ ಒಳಗಿನ ಮಕ್ಕಳು ಡಯೋರಿಯಾದ ಕಾರಣದಿಂದ ಸತ್ತು ಹೋಗುತ್ತಿರುವುದು ಕಂಡುಬಂತು. ಅದಕ್ಕೆ ಬಯಲು ಕಡೆಗೆ ಶೌಚಕ್ಕೆ ಹೋಗುವುದೇ ಕಾರಣವೆಂದು ಗೊತ್ತಾಯ್ತು. ಸ್ವಚ್ಛಭಾರತ ಯೋಜನೆಯಿಂದ ಶೌಚಾಲಯ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡರು. 10 ವರ್ಷದೊಳಗಿನ ಮಕ್ಕಳು ಬಯಲು ಶೌಚ ಮುಕ್ತ ಪ್ರದೇಶಗಳಲ್ಲಿ ಸಾವು 9.3% ಇದ್ದರೆ ಬಯಲು ಶೌಚಮುಕ್ತವಲ್ಲದ ಪ್ರದೇಶಗಳಲ್ಲಿ ಅದರ ಪ್ರಮಾಣ 13.9% ಇದೆ.

7. ದೇಶವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಮೆಚ್ಚಲೇಬೇಕು. ಇಲ್ಲಿಯವರೆಗೆ ಒಟ್ಟಾರೆ ಬಯಲು ಶೌಚ ಮುಕ್ತಗೊಂಡ ಹಳ್ಳಿಗಳ ಸಂಖ್ಯೆ 5 ಲಕ್ಷ. ಜೊತೆಗೆ ಕಟ್ಟಲ್ಪಟ್ಟ ಶೌಚಾಲಯಗಳ ಸಂಖ್ಯೆ 9.79 ಕೋಟಿ.

8.ಗ್ರಾಮೀಣ ವಿಭಾಗದ ಸ್ವಚ್ಛತೆಯ ಮಟ್ಟ 2014ರಲ್ಲಿ 38.7% ಇತ್ತು. ಸದ್ಯ ಅದರ ಪ್ರಮಾಣ 98.63% ಆಗಿದೆ

9.2017ರ ವರದಿಯ ಪ್ರಕಾರ 2017ಕ್ಕೂ ಎರಡು ವರ್ಷದ ಹಿಂದೆ 10 ಲಕ್ಷ 5 ವರ್ಷದೊಳಗಿನ ಮಕ್ಕಳು ವಿವಿಧ ರೋಗರುಜಿನಗಳಿಂದ ಸಾಯುತ್ತಿದ್ದರು. ಇದರಲ್ಲಿ ಬಹುಪಾಲು ಸ್ವಚ್ಛತೆ ಇಲ್ಲದ ಕಾರಣಕ್ಕೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದರು. ಈ ಒಂದು ಯೋಜನೆಯ ಪರಿಣಾಮ ಪ್ರತಿ ವರ್ಷ ಅಂದಾಜು‌ 2 ಲಕ್ಷ ಮಕ್ಕಳು ಇಂಥ ರೋಗದಿಂದ ಬಚಾವಾಗಿವೆ; ಸಾವಿನ ಸಂಖ್ಯೆ ಕಡಿಮೆಯಾಗಿದೆ.

10. 2015ರಲ್ಲಿ ಹುಟ್ಟಿದ ಪ್ರತಿ 1000 ಮಕ್ಕಳಲ್ಲಿ ಅಂದಾಜು 43 ಮಕ್ಕಳು ಸಾಯುತ್ತಿದ್ದವು. 2016ರ ಹೊತ್ತಿಗೆ ಈ ಸಂಖ್ಯೆ 39ಕ್ಕೆ ಇಳಿಯಿತು. ಇದು ಸ್ವಚ್ಛ ಭಾರತಕ್ಕೆ ಸಂದ ಗೆಲುವು.

11.ಸ್ವಚ್ಛತೆ ಆರೋಗ್ಯವಷ್ಟೇ ಅಲ್ಲದೇ ಸ್ವಚ್ಛ ಭಾರತ್ ಮತ್ತೊಂದು ಉದ್ದೇಶವನ್ನು ಹೊಂದಿತ್ತು ಅದು ತ್ಯಾಜ್ಯದಿಂದ ಶಕ್ತಿ ಉತ್ಪಾದನೆ. ತ್ಯಾಜ್ಯದಿಂದ 88.3 ಮೆಗಾವ್ಯಾಟ್ ಶಕ್ತಿ ಉತ್ಪಾದನೆಯಾಗಿದೆ.

12.ತ್ಯಾಜ್ಯದಿಂದ ಸಾವಯವ ಗೊಬ್ಬರದ ಉತ್ಪಾದನೆಗೂ ಮುಂದಾದ ಸರ್ಕಾರ ಒಟ್ಟಾರೆಯಾಗಿ 15 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ನಿರ್ಮಾಣ ಮಾಡಿದೆ.

13. ಸ್ವಚ್ಛ ಭಾರತ್ ಅದೆಂಥ ಪ್ರೇರಣಾದಾಯಕ ಯೋಜನೆಯೆಂದರೆ ರಾಮಕೃಷ್ಣ ಆಶ್ರಮದಂಥ ಸಂಘಟನೆಗಳು ಇದಕ್ಕೆ ಕೈ ಜೋಡಿಸಿದವು. ಯುವಾಬ್ರಿಗೇಡ್ ತಂಡವಂತೂ ದೇವಸ್ಥಾನದ ಮುಂದಿನ ಕಲ್ಯಾಣಿಗಳನ್ನು, ಪ್ರವಾಸಿ ಕ್ಷೇತ್ರಗಳನ್ನು, ಗುಡಿಗಳನ್ನು ಸ್ವಚ್ಛಗೊಳಿಸಿತು. ಈ ಪ್ರೇರಣೆ ಇಷ್ಟಕ್ಕೆ ನಿಲ್ಲಲಿಲ್ಲ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪೌರ ಕಾರ್ಮಿಕರ ಗಲ್ಲಿಗಳನ್ನು ,ಸ್ಮಶಾನವನ್ನೂ ಸ್ವಚ್ಛಗೊಳಿಸಿದ್ದಕ್ಕೆ ಯುವಾಬ್ರಿಗೇಡ್‌ಗೆ ನಾಡಿನ ಜನತೆ ಧನ್ಯವಾದ ಹೇಳಲೇ ಬೇಕು. ಒಬ್ಬ ನಾಯಕ ಯುವಜನತೆಯನ್ನು ಯಾವ ರೀತಿ ಪ್ರೇರೇಪಿಸಬಲ್ಲ ಎಂಬುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕಿಲ್ಲ.

14. ಕೇರಳದ ತ್ರಿಸೂರಿನಲ್ಲಿ ಕೈಗಾರಿಕಾ ಘನ ತ್ಯಾಜ್ಯ ನಿರ್ವಹಣೆ ಕಷ್ಟವಾಗಿತ್ತು. ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತರಾಗಿ ಜನರು ಘನತ್ಯಾಜ್ಯಗಳನ್ನು ಗೋಬರ ಗ್ಯಾಸ್ ಮಾಡಿಕೊಳ್ಳುವ ಘಟಕವನ್ನು ಸ್ವಯಂಪ್ರೇರಿತರಾಗಿ ನಿರ್ಮಿಸಿಕೊಂಡರು.

15. ಹರ್ಯಾಣದ ಊಂಟಕರ್‌ನಲ್ಲಿ “ಮೇರೆ ಘರ್ ಮೇ ಶೌಚಾಲಯ ಬನಾವೋ ಪಿಯಾಜಿ” ಎಂಬ ಹಾಡು ಕಟ್ಟಿದ್ದಾರೆ. ಈ ಹಾಡು ಹಾಡಿ ಕೆಲವು ಸಮಯ ಕೂತ ಸ್ವಚ್ಛತೆಯ ಬಗ್ಗೆ ಚರ್ಚಿಸುತ್ತಾರೆ. ಗ್ರಾಮಗಳ ಮಟ್ಟಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿರುವುದು ನಿಜಕ್ಕೂ ಶ್ಲಾಘನೀಯ.

16.ಕೊಪ್ಪಳದ 10 ನೇ ವರ್ಗದ ವಿದ್ಯಾರ್ಥಿನಿ ಶೌಚಾಲಯ ನಿರ್ಮಿಸಿ ಎಂದು ಉಪವಾಸ ಕೂರುತ್ತಾಳೆ ಮೋದಿ ಈ ವಿಚಾರವನ್ನು ತಮ್ಮ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳುತ್ತಾರೆ.

17.ಸ್ವಚ್ಛ ವಿದ್ಯಾಲಯ ಎಂಬ ನಾಮದಡಿಯಲ್ಲಿ ಶಾಲೆಯಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು‌. ಒಂದೇ ವರ್ಷದಲ್ಲಿ 1.9 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಿದರು ಅದರಿಂದ ಬಾಲಕಿಯರ ಶಾಲಾ ದಾಖಲಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

18. 2017-18ರಲ್ಲಿ ಪೋಷಣ್ ಅಭಿಯಾನ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೋಷಕಾಂಶಯುಕ್ತ ಆಹಾರದ ಖಾತ್ರಿ ಮಾಡುವುದಾಗಿ ಮುಂದಾದರು. ಅದಕ್ಕಾಗಿ 2122.27 ಕೋಟಿ ಹಣವನ್ನು 2 ವರ್ಷಕ್ಕೆ ಮೀಸಲಿಟ್ಟಿದ್ದಾರೆ. 2 ವರ್ಷದೊಳಗೆ ಸುಮಾರು 10 ಕೋಟಿ ಜನರಿಗೆ ಇದರ ಫಲ ದಕ್ಕಲಿದೆ.

ಮೇಲೆ ಉಲ್ಲೇಖಿಸಿದ ಸ್ವಚ್ಛ ಭಾರತ್ ಯೋಜನೆಯ ಕೆಲವು ಅಂಶಗಳಲ್ಲಿ ಜನರು ತಾವೇ ಮುಂದಾಗಿ ಯೋಜನೆಯೊಂದಿಗೆ ಕೈ ಜೋಡಿಸಿದ್ದನ್ನು ಕಾಣಬಹುದು. ಆ ಅಂಶಗಳ ಕ್ರೆಡಿಟ್ ನೇರವಾಗಿ ಮೋದಿಯವರಿಗೆ ಸಲ್ಲದಿದ್ದರೂ ಪರೋಕ್ಷವಾಗಿ ಒಂದು ಯೋಜನೆ ಅಥವಾ ಒಟ್ಟಾರೆ ವಿಕಾಸವನ್ನು ಜನಾಂದೋಲನವಾಗಿ ಮೋದಿ ಪರಿವರ್ತಿಸಿದ್ದಾರೆ ಅಂತಲೇ ಹೇಳಬೇಕು.

ರಾಹುಲ್ ಹಜಾರೆ

31.03.2019

#ಪ್ರತಿದಿನ_ಪ್ರಧಾನಿ ೧೮

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!