Author - Anoop Gunaga

ಸಿನಿಮಾ - ಕ್ರೀಡೆ

‘ಸರಕಾರಿ ಹಿ.ಪ್ರಾ.ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ...

“ಒಂದು ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತಾನೋ ಅಥವಾ ಕನಸಿನಲ್ಲಿ ಯಾವ ಭಾಷೆ ಮಾತಾಡುತ್ತಾನೋ ಆ ಭಾಷೆಯಲ್ಲಿ ಅವನಿಗೆ ಶಿಕ್ಷಣ ಕೊಡಬೇಕು. ಅದನ್ನು ಹೊರತಾಗಿ ಇದೇ ಭಾಷೆಯಲ್ಲಿ ಕನಸು ಕಾಣು ಎಂದು ಒತ್ತಡ ಹೇರುವುದು ಅದೆಷ್ಟು ಬಾಲಿಶ ಅಲ್ಲವೇ?” ನಿಜ. ‘ಸರಕಾರಿ ಹಿ. ಪ್ರಾ. ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’ ಚಿತ್ರ...

ಅಂಕಣ

ಹೂವ ತೇರಲೊಬ್ಬ ದೇವರು!

“ಮುಂಜಾವಿನ ಕನಸಿನಲಿ ನೀ ನೀಡಿದ ಸಿಹಿವಚನ. ನನ್ನೊಲವೇ ಮರೆಯದೆಯೇ ಬಲುಬೇಗ ಈಡೇರಿಸು” ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಒಂದು ಹಾಡಿನ ಪಲ್ಲವಿ ಇದು. ಈ ಹಾಡಿನ ಚರಣದಲ್ಲಿ ಒಂದು ಸಾಲಿದೆ: `ಖುಷಿಯಲಿ ಕಂಪಿಸಿ ಮನಸೀಗ ಹೂವ ತೇರು’ ಎಂದು. ಅದೇಕೋ ಅರಿಯೆ, ಈ ಸಾಲಿನಲ್ಲಿರುವ ‘ಹೂವ ತೇರು’ ಪದ ತುಂಬ ಆಪ್ತವಾಯಿತು ನನಗೆ. ‘ತೇರು ಹೂವು’ ಎನ್ನುವ ಒಂದು ಬಗೆಯ ಹೂವಿದೆ. ನನಗೆ ಈ...

ಕಥೆ

ಅವನಿಲ್ಲದ ತಿರುವು

ಬದುಕಿನ ಹೊಸ ತಿರುವಿನಲ್ಲಿ ನಿಂತಿದ್ದೇನೆ. ಇದು ಅವನಿಲ್ಲದ ತಿರುವು. ಇಂತಹದ್ದೊಂದು ತಿರುವು ಇರಬಹುದೆಂಬ ಸೂಚನೆಯನ್ನೂ ಕೊಡದೆ ಎದುರಾದ ತಿರುವು. ತಿರುವಲಿ ದೇವರೇ ಎದುರಾದರೆ ಅದು ಪ್ರೇಮವಂತೆ. ಆದರೆ ದೇವರೆ ಕಳೆದು ಹೋಗುವ ತಿರುವು ಎದುರಾದರೆ? ಅದಕ್ಕೇನು ಹೆಸರಿಡಲಿ? ನಾನು ಮತ್ತು ದುಶ್ಯಂತ್ ದೂರದ ಸಂಬಂಧಿಗಳು. ಸಂಬಂಧ ದೂರದ್ದಾದರೂ ಮನೆಗಳು ಸಮೀಪದಲ್ಲಿದ್ದವು...

ಅಂಕಣ

ಪ್ರತಿ ಪಯಣ ನೂತನ…

ಅದೊಂದು ಭಾನುವಾರದ ಮುಂಜಾನೆ. ರಾಶಿ ಭವಿಶ್ಯದಲ್ಲಿ ದೂರಪ್ರಯಾಣದಿಂದ ದೇಹಾಯಾಸ ಎಂದಿತ್ತು. ಹಾಗೆಂದು ಅದನ್ನು ಓದಿ ಮನೆಯಲ್ಲಿಯೇ ಇರಲು ಸಾಧ್ಯವೇ? ಹೊರಟಿದ್ದೆ, ನನ್ನ ಪಯಣದ ಸಹಪಾಠಿ ಫಾಸ್ಟ್ ಟ್ರ್ಯಾಕ್ ಬ್ಯಾಗ್ ಅನ್ನು ಬೆನ್ನ ಮೇಲೆ ಕೂರಿಸಿಕೊಂಡು. ಮುಂಜಾನೆಯಾದ್ದರಿಂದ ಬಸ್ಸಿನಲ್ಲಿ ಆಸನವನ್ನು ಅರಸುವ ಪ್ರಮೇಯ ಬರಲಿಲ್ಲ. ಎಂದಿನಂತೆ ನನ್ನಿಷ್ಟದ ಕಿಟಕಿ ಪಕ್ಕದ ಆಸನದಲ್ಲಿ...

ಅಂಕಣ

ಏಕಾಂತ

‘ಏಕಾಂತ’ ಪ್ರತಿಯೊಬ್ಬನ ಬದುಕಿಗೆ ಶಾಶ್ವತ ಸಂಗಾತಿ. ಅದೊಂದು ಅಮೂರ್ತವಾದ ಸಾಂತ್ವನ. ಸಂತಸದ ಕ್ಷಣಗಳಲ್ಲಿ ಜೊತೆಯಿದ್ದೂ ನಮ್ಮ ಸಂಭ್ರಮವನ್ನು ದೂರವೇ ನಿಂತು ನೋಡಿ ಖುಷಿಪಡುತ್ತದೆ. ಅದೇ ನೋವಿನ ಕ್ಷಣಗಳಲ್ಲಿ ಕರೆಯುವ ಮುನ್ನವೇ ಬಂದು ಆಲಂಗಿಸಿ ಸಂತೈಸುತ್ತದೆ. ಅದೊಂದು ನಿಸ್ವಾರ್ಥ ಭಾವಗಳ ಸಮ್ಮೇಳನ. ತನ್ನವರೆನಿಸಿದವರೆಲ್ಲ ತೊರೆದು ದೂರವಾದಾಗ...

ಸಿನಿಮಾ - ಕ್ರೀಡೆ

ಮುಗುಳುನಗೆ

ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ, ಸೋನು ನಿಗಮ್ ಅಂದ ತಕ್ಷಣ ಕನ್ನಡ ಚಿತ್ರಪ್ರೇಮಿಗಳ ಮನಸುಗಳೆಲ್ಲ ಒಮ್ಮೆಲೇ ಹಾರುವುದು ಅಂದಿನ “ಅನಿಸುತಿದೆ ಏಕೋ ಇಂದು…” ಹಾಡಿನ ನೆನಪಿಗೆ. ಅಂದು ಎಲ್ಲೆಡೆ ಭಾವಗಳ ಮಳೆ ಸುರಿಸಿದ್ದ ಈ ಕಾಂಬಿನೇಶನ್ ಮತ್ತೆ ಜೊತೆಯಾಗಿ ನೀಡಿರುವ ಚಿತ್ರ ‘ಮುಗುಳುನಗೆ’. ಅಳುವೇ ಬಾರದ ವ್ಯಕ್ತಿಯೊಬ್ಬನ ಕಥೆ ಇದು...

ಕವಿತೆ

ಅನುಗಾಲವೂ  ಅನುರಾಗಿ  ನಾ…

ಕಾಣದೆ ಹೋದರೆ ಅರೆಘಳಿಗೆ, ಅರಸಿದೆ ನಯನವು ನಿನ್ನ… ನಿನ್ನನು ಕಂಡ ಮರುಘಳಿಗೆ; ಭಾವದ ಧಾಟಿಯೇ ಭಿನ್ನ! ಎಲ್ಲರಂತೆ ನಾನಲ್ಲ, ಬಲ್ಲೆಯೇನು ನೀ? ಅನುಗಾಲವೂ ಅನುರಾಗಿ ನಾ, ನಂಬೆನ್ನನು!!! ಸೋತಿದೆ ಪ್ರೀತಿಸು ಎಂದು ಹೇಳುವ ಧೈರ್ಯವು, ಸನಿಹವೇ ಕೂತಿರು ಎಲ್ಲವ ಹೇಳಲಿ ಮೌನವು…! ಸುಳಿವೆ ಇಲ್ಲದೇ ಬಳಿಗೆ ಬಂದಿದೆ ಒಂದು ಕವಿತೆ ಸಾಲು… ಮೆಲ್ಲ ಬಂದು ನಡೆಸೀಗ ಸಲ್ಲಾಪವ, ಬರಿ ನೋಟಕೂ...

ಅಂಕಣ

ಸಾಮಾಜಿಕ ಜಾಲತಾಣಗಳು ಹಾಗೂ ಅನವಶ್ಯಕ ಕಲಹಗಳು…

ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಒಂದು ಅವಿಭಾಜ್ಯ ಅಂಗ. ಇಂದು ದಿನಚರಿಯ ಪ್ರತಿಯೊಂದನ್ನೂ ಮನೆಯವರ ಬಳಿ ಹಂಚಿಕೊಳ್ಳುತ್ತೇವೋ, ಇಲ್ಲವೋ ಅರಿಯೆ. ಜಾಲತಾಣಗಳಾದಂತಹ ಫೇಸ್ಬುಕ್, ಟ್ವಿಟರ್ ಗಳಲ್ಲಿ ಮಾತ್ರ ನಿರಂತರ ಸ್ಟೇಟಸ್ ಅಪ್ಡೇಟ್’ಗಳನ್ನು ಹಾಕುತ್ತಲೇ ಇರುತ್ತೇವೆ. “ಹ್ಯಾಪ್ಪಿ ಬರ್ತಡೇ ಅಪ್ಪಾ!!!” ಎಂದು ಅಪ್ಪನ ಪಕ್ಕದಲ್ಲೇ ಕೂತು...

ಅಂಕಣ

ಸಾಫ್ಟ್’ವೇರ್ ‘ವಾರ್’ಅಂತ್ಯ…

ಅದೊಂದು ಶುಕ್ರವಾರ. ಮೋಡ ಕವಿದ ವಾತಾವರಣ. ಬಹುಷಃ ಸೂರ್ಯ ‘ವರ್ಕ್ ಫ್ರೊಮ್ ಹೋಮ್’ ಮಾಡುತ್ತಿದ್ದಿರಬೇಕು. ಇಡೀ ಜಗತ್ತೇ ವಾರಾಂತ್ಯದ ಗುಂಗಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸೋಮವಾರ ಹಾಗೂ ಮಂಗಳವಾರ ಸಹ ರಜೆ ಇದ್ದಿದ್ದರಿಂದ ಅದೊಂದು ಉದ್ದದ ವಾರಾಂತ್ಯ ಎನ್ನಬಹುದು. ಹಾಗಾಗಿ ಸಾಫ್ಟ್‌ವೇರ್ ಕಂಪನಿಗಳಲ್ಲೆಲ್ಲ ಒಂದು ಸಣ್ಣ ಹಬ್ಬದ ವಾತಾವರಣ. ಕೆಲವರು ಇನ್ನೂ...

ಕಥೆ

ನೆನಪುಗಳಲ್ಲೊಂದು ಪ್ರೇಮಕಥೆ…

ಹಾಯ್ ಸೃಷ್ಟಿ… ಯಾವಾಗ್ಲೂ ಹೇಳ್ತಿದ್ಯಲ್ಲಾ, “ಹೇ ರಕ್ಷಿತ್, ಏನೇನೋ ಕಲ್ಪನೆ ಮಾಡಿ ವಿಚಿತ್ರ ಕಥೆ ಬರೀತಾ ಇರ್ತಿಯಾ, ಅದೇ ತರ ನಮ್ ಕಥೆನೂ ಬರಿಬಾರ್ದಾ?” ಅಂತ. ಅಷ್ಟು ಹೇಳೋದಲ್ದೆ ತಲೆ ಮೇಲೆ ಬೇರೆ ಹೊಡಿತಾ ಇದ್ದೆ, ಇವತ್ತು ಬರಿಬೇಕು ಅಂದ್ಕೊಂಡಿದೇನೆ. ನೀನೇ ಬರೆಯೋಕೆ ಹೇಳಿದ್ರಿಂದ, ನಿನಗೆ ಕಥೆ ಹೇಳೋ ತರನೇ ಬರೆಯೋ ಹಂಬಲ. ಶುರುಮಾಡಲಾ? ಹಾಗೇ...