ಅಂಕಣ

ಮೋದಿಯವರ ವಿದೇಶ ಪ್ರವಾಸದ ಫಲಗಳು

1.ಬಾಂಗ್ಲಾ ದೇಶದ ಗಡಿಯಲ್ಲಿದ್ದ ಕೆಲವು ಪ್ರದೇಶಗಳ ಹಂಚಿಕೆಯಾಯಿತು. ಬಾಂಗ್ಲಾ ಚಿತ್ತಗಾಂಗ್‌ನಲ್ಲಿ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಿ ಅಲ್ಲಿಂದ ಈಶಾನ್ಯ ರಾಜ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಡುವಂತಾಯಿತು. ಕೊಲ್ಕತ್ತಾದಿಂದ ಈಶಾನ್ಯ ರಾಜ್ಯಗಳಿಗೆ ಹೋಗುವಾಗ ಬಾಂಗ್ಲಾ ದೇಶವನ್ನು ಬಳಸಿಕೊಂಡು ಹೋಗಬೇಕಾದ ಅನಿವಾರ್ಯವಿತ್ತು. ಸದ್ಯ ಬಾಂಗ್ಲಾದ ಮೂಲಕ ಹಾದು ಹೋಗುವ ರಸ್ತೆಗಳು ನಿರ್ಮಾಣವಾಗಿವೆ. ಭಾರತ ನೇಪಾಳ್ ಬಾಂಗ್ಲಾ, ಭಾರತ ಮಯನ್ಮಾರ್ ಥೈಲ್ಯಾಂಡ್ ರಸ್ತೆಗಳು ನಿರ್ಮಾಣವಾಗುತ್ತಿವೆ. ಬಾಂಗ್ಲಾದ ಬಾಯ್ರಾ ಪೋರ್ಟಿನ ಅಭಿವೃದ್ಧಿಗೆ ಸಹಿ ಹಾಕಿದ ಮೋದಿ ಜಪಾನನ್ನು ಕೂಡಾ ಈ ಪೋರ್ಟಿನ ಅಭಿವೃದ್ದಿಗೆ ಕರೆದು ಚೀನಾಗೆ ಸೆಡ್ಡು ಹೊಡೆದರು.

2.ಮಾರಿಷಿಯಸ್‌ಗೆ ಹೋದ ಪ್ರಧಾನಿ ಅಲ್ಲಿ ಒಂದು ರೆಡಾರ್ ಸ್ಟೇಷನ್ ಸ್ಥಾಪನೆ ಮಾಡಿ ಚೀನಾದ ವಿಮಾನ ಹಾರಾಟಗಳ ಮೇಲೆ ಕಣ್ಣಿಡುತ್ತಾರೆ. ಅಷ್ಟೇ ಅಲ್ಲದೇ ಮಾರಿಷಿಯಸ್ ಮೂಲಕ ಭಾರತದ್ದೇ ಕಪ್ಪು ಹಣ ಬಿಳುಪಾಗಿ ಬರುವುದನ್ನು ತಡೆಯಲು DTAA (Double tax avoidance agreement)ನ್ನು ಬದಲಾಯಿಸಿದರು. ಇದು 38 ವರ್ಷ ಹಳೆಯ ಒಪ್ಪಂದ..

3.ಶ್ರೀಲಂಕಾದ ಹಂಬನ್‌ತೋಟಾ ಅಭಿವೃದ್ಧಿಗೆ ಚೀನಾ ಸಾಲಕೊಟ್ಟು ಭಾರತದ ಮೇಲೆ ಎತ್ತಿ ಕಟ್ಟಿತ್ತು. ಚೀನಾದ ಸಾಲದ ಸುಳಿಯಿಂದ ಶ್ರೀಲಂಕಾವನ್ನು ಮುಕ್ತಿ ಮಾಡಿ ಭಾರತ 40 ವರ್ಷ ಹಂಬನ್‌ತೋಟಾ ನಿರ್ವಹಣೆ ಮತ್ತು 70% ಶೇರ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

4.ಚೀನಾ ಗ್ವದಾರ್ ಪೋರ್ಟಿನ ಅಭಿವೃದ್ಧಿ ಮಾಡಿ ಅಲ್ಲಿಂದ ರಷ್ಯಾ ಮತ್ತು ಯುರೋಪ ಮಾರುಕಟ್ಟೆಗೆ ನೇರ ಸಂಪರ್ಕ ಹೊಂದಿತ್ತು. ಭಾರತಕ್ಕೆ ಅಪಘಾನಿಸ್ತಾನ ಯುರೋಪಕ್ಕೆ ಹೋಗಬೇಕಾದರೆ ಪಾಕಿಸ್ತಾನದ ಮೂಲಕವೇ ಹೋಗಬೇಕಿತ್ತು. ಪಾಕಿಸ್ತಾನದ ಮೇಲಿನ ಈ ಅವಲಂಬನೆಯನ್ನು ತಪ್ಪಿಸಿ ಭಾರತ ಹೊಸ ದಾರಿ ಕಂಡುಕೊಳ್ಳಬೇಕಿತ್ತು. ಗ್ವದಾರ್ ಪೋರ್ಟಿಗೆ ತುಂಬಾ ಸಮೀಪವಿರುವ ಇರಾನ್‌ನಲ್ಲಿ ಚಾಬಹಾರ್ ಪೋರ್ಟಿನ ಅಭಿವೃದ್ಧಿಗೆ ಭಾರತ ಮುಂದಾಯ್ತು.

5.ಚೀನಾಗೆ ಸೆಡ್ಡು ಹೊಡೆಯುವುದೊಂದೆ ಕಾಯಕ ಮಾಡಿಕೊಳ್ಳಲಿಲ್ಲ. ಚೀನಾದಲ್ಲಿ ಅಕ್ಕಿಗೆ ಬಹುದೊಡ್ಡ ಮಾರುಕಟ್ಟೆ ಇದೆ ಎಂದು ತಿಳಿದು ಚೀನಾಕ್ಕೆ ಅಕ್ಕಿಯನ್ನು ರಫ್ತು ಮಾಡುವ ವಿಚಾರಕ್ಕೆ ಮೋದಿ ಸಹಿ ಹಾಕಿದರು. ಅಷ್ಟೇ ಅಲ್ಲದೇ ಚೀನಾ ಬ್ರಹ್ಮಪುತ್ರ ನದಿಯ ಹೈಡ್ರಾಲಾಜಿಕಲ್ ಡಾಟಾ ಕೊಡಲು ಒಪ್ಪಿತು. ಈ ಡಾಟಾ ಮಳೆಗಾಲದ ಸಮಯದಲ್ಲಿ ಬಹಳ ಮುಖ್ಯ. ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡೋಕ್ಲಾಮ್ ವಿವಾದವನ್ನು ಯುದ್ಧವೇ ಇಲ್ಲದೇ ಬಗೆಹರಿಸಿಕೊಂಡಿದ್ದು ಮೋದಿಯೇ ಹೊರತು ಮತ್ತಾರೂ ಅಲ್ಲ.

6.ನಮ್ಮಲ್ಲಿ ಹಲವರು ಡಾಲರ್ ರೂಪಾಯಿಗಳ ಏರಿಳಿತದ ಬಗ್ಗೆ ಚರ್ಚೆ ಮಾಡುತ್ತಿರಬೇಕಾದರೆ ಮೋದಿಯವರು ಜಪಾನ್, ರಷ್ಯಾ, UAEಯಂಥ ರಾಷ್ಟ್ರಗಳೊಂದಿಗೆ ರೂಪಾಯಿಯಲ್ಲಿ ವ್ಯವಹಾರ ಮಾಡಲು ಮುನ್ನುಡಿ ಬರೆದು ಬಂದಿದ್ದಾರೆ. ಇನ್ನೂ ಇಪ್ಪತ್ತ್ಮೂರು ರಾಷ್ಟ್ರಗಳೊಂದಿಗೆ ರೂಪಾಯಿಯಲ್ಲೇ ವ್ಯವಹಾರ ಮಾಡಲು ಮಾತುಕತೆಗಳು ಜಾರಿಯಲ್ಲಿವೆ. ಒಮ್ಮೆ ರೂಪಾಯಿ ವ್ಯವಹಾರ ನಿಶ್ಚಿತವಾದರೆ ಡಾಲರಿಗೆ ಜಗತ್ತಿನ ಮಾರುಕಟ್ಟೆಯಲ್ಲಿ ಬೆಲೆಯೇ ಇರುವುದಿಲ್ಲ.

7.ಭಾರತ ಭೂತಾನಿನಲ್ಲಿ 4 ಜಲವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲಿದೆ. ಅದರಿಂದ ಉತ್ಪಾದನೆಯಾಗುವ ವಿದ್ಯುತ್ತಿನ ಸಿಂಹಪಾಲನ್ನು ಭಾರತವೇ ಪಡೆಯಲಿದೆ. ಮತ್ತೊಂದು ದೇಶದ ಜಾಗ, ಮಾನವ ಸಂಪನ್ಮೂಲದ ಬಳಕೆ ಭಾರತಕ್ಕೆ ಅಧಿಕ ಲಾಭ

8.ನೇಪಾಳದಲ್ಲಿನ ಒಂದು ಡ್ಯಾಮ್ ಕಟ್ಟಲು ಚೀನಾ ತವಕಿಸುತ್ತಿತ್ತು. ಅದನ್ನು ಭಾರತ ತನ್ನ ತೆಕ್ಕೆಗೆ ಹಾಕಿಕೊಂಡು ಅದರಿಂದ ಉತ್ಪಾದಿಸಲ್ಪಡುವ ಶಕ್ತಿಯ ಸುಮಾರು 83% ಶಕ್ತಿಯನ್ನು ಭಾರತ ಉಚಿತವಾಗಿ ಪಡೆಯಲಿದೆ.

9.ಯೆಮನ್‌ನಲ್ಲಿ ಯುದ್ಧದ ಸನ್ನಿವೇಶ ಏರ್ಪಟ್ಟಾಗ ಭಾರತ 4000ಕ್ಕೂ ಹೆಚ್ಚು  ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದ್ದು ನಿಜಕ್ಕೂ ಸಾಹಸದ ಕೆಲಸ. ಅದಷ್ಟೇ ಅಲ್ಲದೇ ವಿದೇಶದ ನಾಗರಿಕರನ್ನು ಉಳಿಸಿ ಕೊಡುವಲ್ಲಿ ಭಾರತದ ಪಾತ್ರ ಗಣನೀಯವಾದದ್ದು.

10.ಫ್ರಾನ್ಸಿನೊಂದಿಗೆ ರಫೇಲ್ ವಿಚಾರಕ್ಕೆ ಮಾತುಕತೆಗೆ ಕೂತು ಹಲವಾರು ಚೌಕಾಸಿಗಳ ನಂತರ ಅತ್ಯಂತ ಕಡಿಮೆ ಬೆಲೆಗೆ ವ್ಯವಹಾರ ಮುಗಿಸಿಕೊಂಡು ಬಂದಿತು. ಬರುವ ದಿನಗಳಲ್ಲಿ ಭಾರತದ ಸೈನ್ಯ ರಫೇಲ್ ಯುದ್ಧ ವಿಮಾನಗಳನ್ನು ಪಡೆಯಲಿದೆ.

11.ಭಾರತದ ಅಣು ಸ್ಥಾವರಗಳಿಗೆ ಯುರೇನಿಯಂನ ಕೊರತೆ ಇತ್ತು. 42 ವರ್ಷಗಳ ನಂತರ ಕೆನಡಾಗೆ ಭೇಟಿ ಕೊಟ್ಟ ಭಾರತದ ಪ್ರಧಾನಿ ಐದು ವರ್ಷಗಳ ಕಾಲ ಯುರೇನಿಯಂ ಕಳಿಸಿಕೊಡುವ ಒಪ್ಪಂದಕ್ಕೆ ಸಹಿ ಹಾಕಿದರು. ಇಲ್ಲಿಯವರೆಗೆ ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು USA ರಷ್ಯಾಗೆ ಕೇಳಿ ಪಡೆಯುತ್ತಿದ್ದೆವು. ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮೋದಿಯವರು ನ್ಯೂಕ್ಲಿಯರ್ ರಿಯಾಕ್ಟರ್‌ನ್ನು ಭಾರತದಲ್ಲೇ ತಯಾರಾಗುವಂತೆ MAKE IN INDIA ಮೂಲಕ ಉತ್ಪಾದಿಸಲು ಸಹಿ ಹಾಕಿದರು. ಆಸ್ಟ್ರೇಲಿಯಾ ಕೂಡಾ 500 ಟನ್ ಯುರೇನಿಯಂ ಕೊಡಲು ಒಪ್ಪಿಕೊಂಡಿದೆ.

12.ಸೌದಿ ಅರೇಬಿಯಾ ಕಚ್ಚಾ ತೈಲದ ಮೇಲಿನ “one time delivery one premium charge”ನ್ನು ತೆಗೆದುಹಾಕಿದೆ. ಆ ಮೂಲಕ ಭಾರತಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಿದೆ. ಇತ್ತಿಚೆಗೆ ಭಾರತಕ್ಕೆ ಭೇಟಿ ಕೊಟ್ಟ ಸೌದಿ ಅರೇಬಿಯಾದ ರಾಜ ತಾವು ಬಂಧಿಸಿದ 850 ಭಾರತೀಯರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು.

13.2004ರಿಂದ ತಟಸ್ಥವಾಗಿದ್ದ “LOGISTIC EXCHANGE MEMORANDUM ACT”ಗೆ ಸಹಿ ಬಿದ್ದದ್ದು ಮೋದಿಯವರು ಬಂದ ಮೇಲೆಯೇ.

14.ಈ ಹಿಂದೆ ಒಬ್ಬರೂ ಪ್ರಧಾನಿ ಇಸ್ರೇಲಿಗೆ ಭೇಟಿ ಕೊಟ್ಟಿರಲಿಲ್ಲ. ಇಸ್ರೇಲ್ ಪ್ಯಾಲೆಸ್ತೇನ್ ಎರಡರೊಂದಿಗೂ ಸಮತೋಲನದ ಬಾಂಧವ್ಯ ಬೆಸೆದಿದ್ದು ಮೋದಿಯವರ ಚಾಣಾಕ್ಷತನಕ್ಕೆ ಹಿಡಿದ ಕನ್ನಡಿ‌. 3 ಕ್ಷಿಪಣಿ ಸಂಬಂಧಿತ 2.6 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಮೋದಿಯವರು ಸಹಿ ಹಾಕಿದರು. ಪ್ಯಾಲೆಸ್ತೇನ್‌ಗೆ ಭೇಟಿ ಕೊಟ್ಟು ಆರು ಒಪ್ಪಂದಗಳನ್ನು ಮಾಡಿಕೊಂಡರು.

15. ಅಮೇರಿಕಾ ಇರಾನ್ ಜೊತೆಗಿನ ಸಂಬಂಧ ಹದಗೆಟ್ಟು ವಿಶ್ವದ ಎಲ್ಲಾ ದೇಶಗಳ ಮೇಲೆ ಒತ್ತಡ ಹೇರಿ ಇರಾನ್‌ನೊಂದಿಗಿನ ವ್ಯಾಪಾರ ವಹಿವಾಟನ್ನು ನಿಲ್ಲಿಸಲು ಹೇಳಿತು. ಆದರೆ ಭಾರತಕ್ಕೆ ಈ ಷರತ್ತು ಅನ್ವಯಿಸಲಿಲ್ಲ. ಭಾರತ ಯಥಾ ಪ್ರಕಾರ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಅಷ್ಟೇ ಅಲ್ಲದೇ ರೂಪಾಯಿಯಲ್ಲಿ ವ್ಯವಹಾರ ಮಾಡಿ ದೇಶಕ್ಕೆ ಡಾಲರ್ ಕನ್ವರ್ಷನ್‌ನಿಂದ ಆಗುತ್ತಿದ್ದ ವೆಚ್ಚವನ್ನು ಉಳಿಸಿದೆ. ಭಾರತ ಈ ತೈಲದ ಅರ್ಧದಷ್ಟು ದುಡ್ಡನ್ನು ರೂಪಾಯಿಯಲ್ಲಿ ಪಾವತಿಸಿದರೆ ಇನ್ನು ಅರ್ಧದಷ್ಟು ದುಡ್ಡನ್ನು ಆಹಾರ ಸಾಮಗ್ರಿ, ಔಷಧಗಳನ್ನು ರಫ್ತು ಮಾಡುವ ಮೂಲಕ ಪಾವತಿಸುತ್ತದೆ.

16.ಭಾರತ ಕರೆಕೊಟ್ಟ ತಕ್ಷಣ ವಿಶ್ವದ 177 ರಾಷ್ಟ್ರಗಳು ವಿಶ್ವ ಯೋಗದಿನಕ್ಕೆ ವಿಶ್ವಸಂಸ್ಥೆಯಲ್ಲಿ ಒಪ್ಪಿಬಿಟ್ಟವು. ವಿಶ್ವಸಂಸ್ಥೆಯ ಇತಿಹಾಸದಲ್ಲೆ ಇಷ್ಟು ರಾಷ್ಟ್ರಗಳು ಒಂದು ಯೋಜನೆಗೆ ಸಮ್ಮತಿಸಿದ್ದು ದಾಖಲೆಯ ಸಂಗತಿ.

17.ಜಪಾನ್ 2.46 ಲಕ್ಷ ಕೋಟಿ, ಅಮೇರಿಕಾ 3.16 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿವೆ. ಭಾರತಕ್ಕೆ ಅತಿ ಹೆಚ್ಚು ಎಂದರೆ 38 ಬಿಲಿಯನ್ ಡಾಲರ್ FDI ಹರಿದು ಬಂದಿದೆ.

18. ಮೋದಿಯವರು ಯಾವುದೋ ವಿದೇಶಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ವಿದೇಶದ ಸರ್ಕಾರದೊಂದಿಗೆ ಒಪ್ಪಂದಗಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳುವ ಕಾರಣ ಅಲ್ಲಿನ ತಂತ್ರಜ್ಞಾನ ಭಾರತಕ್ಕೆ ರವಾನೆಯಾಗುತ್ತದೆ ಆ ಮೂಲಕ ನಮ್ಮಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಭಾರತದ ಯುವಶಕ್ತಿ ವಿಶ್ವ ಮಾರುಕಟ್ಟೆಗೆ ಬೇಕಾದ ಸರಕನ್ನು ಸಿದ್ಧಪಡಿಸಲು ಶಕ್ತರಾಗುತ್ತಾರೆ. MAKE IN INDIA ಈ ನಿಟ್ಟಿನಲ್ಲಿ ಬಹಳ ದೊಡ್ಡ ಕೆಲಸ ಮಾಡುತ್ತಿದೆ.

19. ವಿಶ್ವದ ಮುಸ್ಲಿಂ ರಾಷ್ಟ್ರಗಳೆ ಮಾಡಿಕೊಂಡ OIC ಎಂಬ ಸಂಘಟನೆಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶೇಷ ಅತಿಥಿಯಾಗಿ ಭೇಟಿ ಕೊಟ್ಟರು. ಸುಷ್ಮಾ ಸ್ವರಾಜ್ ಅವರನ್ನು ಆಮಂತ್ರಿಸಿದ್ದಕ್ಕೆ ಪಾಕಿಸ್ತಾನ ವಿರೋಧಿಸಿತು. ಪಾಕಿಸ್ತಾನವನ್ನೇ ಹೊರಗಿಟ್ಟ ಮುಸ್ಲಿಂ ರಾಷ್ಟ್ರಗಳ ಭಾರತಕ್ಕೆ ಮನ್ನಣೆ ಕೊಟ್ಟವು.

20. ಪುಲ್ವಾಮಾ ಘಟನೆಯ ನಂತರ ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಭಾರತದ ಬೆಂಬಲಕ್ಕೆ ನಿಂತಿದ್ದು ಮೋದಿಯವರ ವಿದೇಶ ಪ್ರವಾಸದ ಫಲವಲ್ಲದೇ ಮತ್ತೇನೂ ಅಲ್ಲ.

ರಾಹುಲ್ ಹಜಾರೆ

01.04.2019

#ಪ್ರತಿದಿನ_ಪ್ರಧಾನಿ 19

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!