ಸಿನಿಮಾ - ಕ್ರೀಡೆ

Airlift: ಐತಿಹಾಸಿಕ ಘಟನೆಯನ್ನು ಸ್ಮರಿಸುವ ರೋಚಕ ಚಿತ್ರ

ಶುಕ್ರವಾರ 22 ರಂದು “ಏರ್ ಲಿಫ್ಟ್” ಚತ್ರದ ಬಿಡುಗಡೆಯಾಯಿತು. ಈ ಚಿತ್ರ 2016 ರ ಇಲ್ಲೀವರೆಗಿನ ಬಹು ನಿರೀಕ್ಷಿತ ಚಿತ್ರವೆಂದೇ ಹೇಳಬಹುದು. ಇದಕ್ಕೆ ಕಾರಣ “ರಾಜಾ ಮೆನನ್”ರವರು ನಿರ್ದೇಶನ ಮಾಡಿದ್ದಾರೆ ಎಂದಲ್ಲ. ಅಥವಾ ಅಕ್ಷಯ್ ಕುಮಾರ್’ರವರು ನಟಿಸಿದ್ದಾರೆ ಎಂದೂ ಅಲ್ಲ. ಈ ಚಿತ್ರವು ಒಂದು ನೈಜ ಘಟನೆಯ ಕಥನ. ಭಾರತದ ಹೆಮ್ಮೆಯ ಮತ್ತು ಅತ್ಯಂತ ಸಫಲ ರಕ್ಷಣಾ ಮತ್ತು ನೆರವು ಕಾರ್ಯಾಚರಣೆಯ ಕಥೆಯ ಆಧಾರಿತ ಚಿತ್ರವು ಇದಾಗಿದೆ.

1990 ನಲ್ಲಿ ಇರಾಕಿನ ಸರ್ವಾಧಿಕಾರಿ ಸದ್ದಾಮ್ ಹುಸ್ಸೈನ್ (Saddam Hussain) ಕುವೈತ್ (Kuwait) ರಾಷ್ಟದ ಮೇಲೆ ದಾಳಿಮಾಡುತ್ತಾನೆ. ಇಂಧನ ಬೆಲೆಯ ಜಗಳದ ವಿಷಯವಾಗಿ ಉಭಯ ರಾಷ್ಟ್ರಗಳ ಮಧ್ಯೆ ಜಗಳವಾಗಿದ್ದು ಎಂದು ಇತಿಹಾಸದ ಪುಟಗಳು ತಿರುವಿದಾಗ ನಮಗೆ ತಿಳಿದು ಬರುತ್ತದೆ. ಅದೇನೆ ಆಗಲಿ, ಇರಾಕಿನ ಸೈನಿಕರು ಕುವೈತಿನ ನಾಗರೀಕರ ಮೇಲೆ ದೌರ್ಜನ್ಯ ಎಸಗಿದ್ದಂತು ಕಠು ಸತ್ಯ. ನಂತರ ಈ ಉಭಯ ರಾಷ್ಟ್ರಗಳ ಜಗಲ “Gulf War” ಆಗಿ ಪರಿವೃತಗೊಂಡದ್ದು ನಮಗೆ ತಿಳಿದದ್ದೆ. ಮಧ್ಯ-ಪೂರ್ವ ರಾಷ್ಟ್ರಗಳ (Middle-East Nations) ನಡುವೆ ರಾಜಕೀಯವಾಗಿ ಇದು ಭಾರಿ ಕಂಪನಗಳನ್ನು ಎಬ್ಬಿಸಿತ್ತು.

ಇತಿಹಾಸದ ಪೂರ್ವಾಪರಗಳು ಹಾಗೆ ಇರಲಿ, ಈಗ ನಮ್ಮ ಚಿತ್ರದ ಕಡೆಗೆ ಹೋಗೋಣ. ಇಡೀಯ “Airlift” ಚಿತ್ರದ ವಸ್ತು ಏನಪ್ಪ ಅಂದ್ರೆ, ಈ ಯುದ್ಧದಲ್ಲಿ ಭಾರತೀಯರು ಪಟ್ಟಂಥಹ ಪರದಾಟ ಮತ್ತು ಆ ಕರಾಳ ದಿನಗಳನ್ನು ಕಳೆದು ಅವರು ಆ ಯುದ್ಧ ಭೂಮಿಯಿಂದ ಮರಳಿ ತಾಯಿ ನಾಡಿಗೆ ಬಂದದ್ದು.

ಚಿತ್ರದಲ್ಲಿ ಅಕ್ಷಯ್ ಕುಮಾರ್’ರವರು ಕುವೈತಿನ ಒಂದು ದೊಡ್ಡ ಉದ್ಯಮಿ. ಅವರ ಪ್ರಭಾವ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಕುವೈತಿನ ರಾಜನು ಕೂಡ ಅವರನ್ನು ಸನ್ಮಾನಿಸುತ್ತಿರುತ್ತಾನೆ. ಆದರೆ, ಅಲ್ಲಿನ ಹೆಚ್ಚು ಜನ ಭಾರತೀಯ ಮೂಲದ ಕುವೈತಿಗಳಂತೆ, “ರಂಜೀತ್ ಕಟಿಯಾಲ್” ಎಂಬ ಈ ಉದ್ಯಮಿ ಕೂಡ, ಭಾರತವನ್ನು ಮರೆತು ತಾನು ಉಬ್ಬ “ಕುವೈತಿ” ಎಂಬು ಭಾವಿಸಿರುತ್ತಾನೆ. ಇದೇ ವಿಷಯವಾಗಿ ನಂತರ ಅರಿವೆಯಾಗಿ ಪಶ್ಚಾತ್ತಾಪ ಪಡುವುದು ಉಂಟು. ಇದರ ಮಧ್ಯೆ ನಡೆಯುವುದೇ ಆ ಘೋರ ಯುದ್ಧ. ತನ್ನವರೂ ಎಂದುಕೊಂಡಿದ್ದ ಕುವೈತಿಯರು ಆ ಕಷ್ಟ ಕಾಲದಲ್ಲಿ ಅವನಿಗೆ ಆಗಿ ಬರುವುದಿಲ್ಲ. ಭಾರತೀಯರೆಲ್ಲ ಒಂದಾಗಿ ನಿಂತು, ಒಬ್ಬರಿಗೊಬ್ಬರು ಆ ಕಷ್ಟ ಕಾಲದಲ್ಲಿ ಸಹಾಯವಾಗುತ್ತಾರೆ. ಇನ್ನು ಮುಂದಿನ ಕಥೆ ಹೇಳಿದರೆ ಚಿತ್ರದ ಕುತೂಹಲ ಕಳೆದೀತು.

ಚಿತ-ಕಥೆ ಮತ್ತು ನಿರ್ದೇಶನ ಅದ್ಭುತವಾಗಿ ಮೂಡಿ ಬಂದಿದೆ. ಸಂಗೀತ ಇನ್ನು ಚೆನ್ನಾಗಿ ಮೂಡಿಬರಬಹುದಿತ್ತು ಎಂದು ನನ್ನವೈಯಕ್ತಿಕ ಅಭಿಪ್ರಾಯ. ವಿಶೇಷವಾಗಿ ಕಡೆಯ ಸೀನ್ ಗಳಲ್ಲಿ ಇನ್ನು ಹೆಚ್ಚು ಪರಿಣಾಮಕಾರಿ ಹಾಗು ಪ್ರಭಾವಕಾರಿ ಸಂಗೀತ-ಸಂಯೋಜನೆ ಬೇಕಿತ್ತು. ಇನ್ನು ನಟನೆಯ ಪ್ರಶ್ನೆಗೆ ಬಂದರೆ ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸಿದ್ದಾರೆ. ಒಂದು ಸಣ್ಣ ಪಾತ್ರವಾದರು, ನಮ್ಮ ಕನ್ನಡದವರೇ ಆದ, ’ಪ್ರಕಾಶ್ ಬೆಳವಾಡಿ’ಯವರು ಅತ್ಯದ್ಭುತವಾಗಿ ನಟಿಸಿದ್ದಾರೆ; ಪಾತ್ರಕ್ಕೆ ನೈಜತೆ ಮತ್ತು ಜೀವವನ್ನು ತುಂಬಿಸಿದ್ದಾರೆ. ಚಿತ್ರ ನಿರ್ಮಾಣದ ವಿಷಯಕ್ಕೆ ಬಂದರೆ ಉಚಿತವಾಗಿ ಹಾಗು ಚೆನ್ನಾಗಿ ಮೂಡಿಬಂದಿದೆ. ಒಂದು ಅಥವ ಎರಡು ಕಡೆ ನಿಮಗೆ studio set-up ಎಂದೆನಿಸಬಹುದು, ಇಲ್ಲವಾದಲ್ಲಿ ಬಹುತೇಕ ಚೆನ್ನಾಗಿ ಚಿತ್ರೀಕರಿಸಿದ್ದಾರೆ, ಪ್ರಿಯಾ ಸೇಟ್’ರವರಿಗೆ ಈ ಶ್ರೇಯಸ್ಸು ಸಲ್ಲಬೇಕು. ಕಥಾವಸ್ತು (plot) ಅತಿ ಸರಳವಾಗಿ, ಸಲೀಸಾಗಿ ಹರಿದು ಬಂದಿದೆ. ಒಂದರ ನಂತರ ಒಂದು ಎಂಬಂತೆ ಅನುಕ್ರಮವಾಗಿ ಮೂಡಿಬಂದಿದೆ. ಸಂಭಾಷಣೆ ಚೆನ್ನಾಗಿ ಮೂಡಿಬಂದಿದ್ದು, ಇನ್ನು ಹೆಚ್ಚು “Punch Dialogues”ನ ಕೊರತೆ ಕಂಡು ಬರುತ್ತದೆ. ಆದರೆ ಈ ಕಥೆಯಲ್ಲಿ ಸಂಭಾಷಣೆಗಿಂತ ಚಿತ್ರೀಕರಣಕ್ಕೆ ಹೆಚ್ಚು ಮಹತ್ವ ಮತ್ತು ಪ್ರಭಾವ. “ಪೂರಬ್ ಕೋಹ್ಲಿ” ಎಂಬ IAS ಅಧಿಕಾರಿಯ ಪಾತ್ರ ಅನರ್ಘ್ಯವಾಗಿ ಚಿತ್ರಿಸಿದ್ದಾರೆ. ಇಡೀಯ ಭಾರತ ಸರ್ಕಾರ ಪ್ರವಾಸೀ ಭಾರತೀಯರ ನೆರವಿಗೆ ಬರದಿದ್ದಾಗ, ಕೋಹ್ಲಿ ಅಂಥಹ ದಕ್ಷ ಅಧಿಕಾರಿಗಳ ಪರಿಶ್ರಮದಿಂದಾಗಿ ’ಏರ್ ಲಿಫ್ಟ್’ನಂಥಹ ಮಹತ್ ಕಾರ್ಯ ಸಾಧ್ಯಾವಾಗುತ್ತದೆ. ಇನ್ನು “Air Indian”, “Indian Airlines”, ಮತ್ತು “Indian Air Force” ನ ಶ್ರಮದಾನಕ್ಕೆ ಪಾರವೇ ಇಲ್ಲ. ಸುಮಾರು 488 ವಾಯುಯಾನಗಳನ್ನು 59 ದಿನಗಳ ಕಾಲ ಚಲಾವಣೆ ಮಾಡಿದ್ದು, ತಮ್ಮ ಜೀವವನ್ನು ಒತ್ತೆ ಇಟ್ಟು, ಒಟ್ಟು 1,70,000 ಜನ ಪ್ರವಾಸೀ ಭಾರತೀಯರನ್ನು ಭಾರತೀಯ ವಿಮಾನ ಚಾಲಕರು ರಕ್ಷಿಸಿದ್ದು ಒಂದು ಇತಿಹಾಸವೇ ಸರಿ. ಇದು ಒಂದು “World Record”.  ಯಾವ ದೇಶವೂ (ಅಮೇರಿಕಾ ಮುಂತಾದ ಬಲಿಷ್ಠ ರಾಷ್ಟ್ರಗಳನ್ನೂ ಒಳಗೊಂಡು) ಹಿಂದೆ ಮಾಡಿಲ್ಲದ, ಮುಂದೆ ಮಾಡಲು ಅಸಾಧ್ಯವಾದ ಕಾರ್ಯವನ್ನು ಭಾರತ ನೇತೃತ್ವ ವಹಿಸಿ ಪೂರ್ಣ ಮಾಡಿರುವುದು ಒಂದು ಹೆಮ್ಮೆಯ ಸಂಗತಿ.

ಒಟ್ಟಾರೆ ಚಿತ್ರವು ಅತ್ಯುತ್ತಮವಾಗಿ ಮೂಡಿಬಂದಿದ್ದು ಎಲ್ಲರೂ ಒಮ್ಮೆ ನೋಡಲೇಬೇಕಾದ ಚಿತ್ರ. ದೇಶಭಕ್ತಿಯ ಭಾವ ಉಕ್ಕಿ ಬರುತ್ತದೆ; ಕಣ್ಣಿನಲ್ಲಿ ನೀರು ತರುತ್ತದೆ. ನಾನು ಕೂತ ಚಿತ್ರ ಮಂದಿರದಲ್ಲಂತೂ ಎಲ್ಲರೂ ಚಿತ್ರದ ಕೊನೆಯಲ್ಲಿ ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿದ್ದು ಒಂಟು. ಚಿತ್ರದ ಕೊನೆಯಲ್ಲಿ ನೀವು “ವಂದೇ ಮಾತರಂ” ಎಂದು ತಾಯಿ ಭಾರತಿಯನ್ನು ಸ್ಮರಿಸದೆ ತೆರಳಲು ಸಾಧ್ಯವೇ ಇಲ್ಲ!

ಅಳಿದು ಹೋದ ಐತಿಹಾಸಿಕ ಘಟನೆಯನ್ನು ಏರ್ ಲಿಫ್ಟ್  ಚಚಿತ್ರದ ಮೂಲಕ ನಮಗೆಲ್ಲರಿಗೂ ತಿಳಿಯಪಡಿಸಿದ ಇಡೀಯ ಚಚಿತ್ರ ತಂಡಕ್ಕೆ ಅಭಿನಂದನೆಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!