ಅಂಕಣ

ಪ್ರಧಾನಿಯೆಂಬ ಪ್ರೇರಣೆ.

ನರೇಂದ್ರ ಮೋದಿ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ ಮತ್ತು ತಮ್ಮ ಉಳಿತಾಯದ ಹಣವನ್ನು ದಾನ ಮಾಡುವ ಸತ್ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಹೀಗಿರುವ ಪ್ರಧಾನಿಗಳು ದೇಶದ ಪ್ರಜೆಗಳಿಗೂ ದಾನ ಮಾಡುವಂತೆ ಕೋರಿಕೊಂಡಾಗ ಪ್ರಜೆಗಳಿಂದ ಒಳ್ಳೆಯ ಸ್ಪಂದನೆ ದೊರೆತಿದೆ‌.

1.ಮೋದಿಯವರು ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆದರು. ಆ ಪ್ರಶಸ್ತಿಯಲ್ಲಿ ಸ್ವೀಕರಿಸಿದ 2,00,000 ಡಾಲರ್ ಹಣವನ್ನು ನಮಾಮಿ ಗಂಗೆ ಎಂಬ ಗಂಗಾ ಶುದ್ಧಿಕರಣ ಯೋಜನೆಗೆ ನೀಡಿದರು.

2.ಮೋದಿಯವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದನ್ನು ಕೆಲವರು ವ್ಯಂಗ್ಯ ಮಾಡಿದರು. ವ್ಯಂಗ್ಯ ಮಾಡಿದವರ ಕಿಲುಬು ಸಂಪತ್ತಿನ ಚಿಕ್ಕಾಸು ಪೌರ ಕಾರ್ಮಿಕರಿಗೆ ಕೊಟ್ಟಿರಲಿಕ್ಕಿಲ್ಲ. ಮೋದಿಯವರು ತಮ್ಮ ಉಳಿತಾಯದ 21 ಲಕ್ಷ ಹಣವನ್ನು ಪೌರ ಕಾರ್ಮಿಕರ ಉದ್ಧಾರಕ್ಕಾಗಿ ಕೊಟ್ಟರು.

3.2015ರಲ್ಲಿ ಮೋದಿಯವರಿಗೆ ಬಂದ ಉಡುಗೊರೆಗಳನ್ನು ಹರಾಜು ಮಾಡಿ ಬಂದ 8.33 ಕೋಟಿ ಹಣವನ್ನು ನಮಾಮಿ ಗಂಗೆ ಎಂಬ ಯೋಜನೆಗೆ ಕೊಟ್ಟರು.

4.ಪ್ರತಿ ವರ್ಷದಂತೆ ಈ ವರ್ಷ ನಡೆದ ಪ್ರಧಾನಮಂತ್ರಿಗಳು ಪಡೆದ ಉಡುಗೊರೆಗಳ ಹರಾಜಿನಲ್ಲಿ 3.4 ಕೋಟಿ ರೂಪಾಯಿಯನ್ನು ನಮಾಮಿ ಗಂಗೆ ಯೋಜನೆಗೆ ಕೊಟ್ಟಿದ್ದಾರೆ.

5.ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮೋದಿ kanya kelavani ಎಂಬ ಬಾಲಕಿಯರನ್ನು ಸುಶಿಕ್ಷಿತರನ್ನಾಗಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಗುಜರಾತಿನ ಮುಖ್ಯಮಂತ್ರಿ ಪದವಿಯನ್ನು ಬೇರೊಬ್ಬರಿಗೆ ಹಸ್ತಾಂತರಿಸಿ ದೇಶದ ಪ್ರಧಾನಿ ಹುದ್ದೆಗೇರುವ 2014 ಮೇ 22ರಂದು ಮೋದಿಯವರು ತಮ್ಮ ವೈಯಕ್ತಿಕ ಉಳಿತಾಯದ 21 ಲಕ್ಷ ರೂಪಾಯಿಯನ್ನು ಬಾಲಕಿಯರ ಶಿಕ್ಷಣಕ್ಕೆ ಕೊಡುಗೆಯಾಗಿ ಕೊಟ್ಟರು.

6.ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷ ತಮಗೆ ಬರುತ್ತಿದ್ದ ಅಷ್ಟೂ ಉಡುಗೊರೆಗಳನ್ನು ಹರಾಜು ಹಾಕುತ್ತಿದ್ದರು ಅದರಿಂದ ಬಂದ ಸರಿಸುಮಾರು 89 ಕೋಟಿ ರೂಪಾಯಿ Kanya kelavani fundಗೆ ದಾನವಾಗಿ ಕೊಟ್ಟಿದ್ದಾರೆ.

7.ಹಿರಿಯ ನಾಗರಿಕರಿಗಿರುವ ರೇಲ್ವೇ ಸಬ್ಸಿಡಿಯನ್ನು ಸಾಧ್ಯವಾದರೆ ಬಿಡಲು ಕೋರಿಕೊಂಡರು. 42 ಲಕ್ಷ ಹಿರಿಯ ನಾಗರಿಕರು ತಮ್ಮ ಸಬ್ಸಿಡಿಯನ್ನು ಬಿಟ್ಟ ಪರಿಣಾಮ ರೇಲ್ವೇ ಇಲಾಖೆಗಾದ ಉಳಿತಾಯ 77 ಕೋಟಿ.

8.Give it up ಅಭಿಯಾನದಡಿಯಲ್ಲಿ ಗ್ಯಾಸ್ ಸಬ್ಸಿಡಿಯನ್ನು ಬಿಡಲು ಪ್ರಧಾನ ಮಂತ್ರಿಗಳು ಕೊಟ್ಟ ಕರೆಗೆ ಅಭೂತಪೂರ್ವ ಸ್ಪಂದನೆ ಬಂದಿತ್ತು. ಇದುವರೆಗೆ ಒಟ್ಟಾರೆ 1.25 ಕೋಟಿ ಕುಟುಂಬಗಳು ಗ್ಯಾಸ್ ಸಬ್ಸಿಡಿಯನ್ನು ಬಿಟ್ಟಿವೆ. ತರುವಾಯ 7.16 ಕೋಟಿ‌ ಹೊಸ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್ ಲಭಿಸಿದೆ.

9.ಗರ್ಭಿಣಿ ಮಹಿಳೆಯರಿಗೆ ತಿಂಗಳಿಗೊಮ್ಮೆಯಾದರೂ ಉಚಿತ ಚಿಕಿತ್ಸೆ ಕೊಡಿ ಎಂದು ಪ್ರಧಾನಮಂತ್ರಿಗಳು ಕೇಳಿಕೊಂಡಿದ್ದರು. ಅದರ ಪರಿಣಾಮ ಇಲ್ಲಿಯವರೆಗೂ ವೈದ್ಯರು ಸುಮಾರು 1.25 ಕೋಟಿ ಗರ್ಭಿಣಿ ಮಹಿಳೆಯರಿಗೆ ಉಚಿತ ಚಿಕಿತ್ಸೆ ಕೊಟ್ಟಿದ್ದಾರೆ ಎಂದು ಪ್ರಧಾನಿಗಳು ತಮ್ಮ ಒಂದು ಭಾಷಣದಲ್ಲಿ ಹೇಳಿದ್ದರು.

10.ಪ್ರಧಾನಮಂತ್ರಿಗಳು ದೇಶದ ಸೈನಿಕರಿಗಾಗಿ ದಿನಕ್ಕೆ 1 ರೂಪಾಯಿ ಲೆಕ್ಕದಲ್ಲಿ 365 ರೂಪಾಯಿಯನ್ನು ಸಿಂಡಿಕೇಟ್ ಬ್ಯಾಂಕಿನ “army welfare fund and battle casualties” ಅಕೌಂಟಿಗೆ ಹಾಕುವಂತೆ ಹೇಳಿದರು. ಅದರಿಂದ ಪ್ರೇರಿತರಾದ ಹಲವು ಜನರು ಅಕೌಂಟಿಗೆ ದುಡ್ಡು ಹಾಕಿದರು.

ರಾಹುಲ್ ಹಜಾರೆ

30.03.2019

#ಪ್ರತಿದಿನ_ಪ್ರಧಾನಿ ೧೭

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!