ನಮ್ಮನ್ನಾಳುವವರ, ದೊರೆ ನಾನು ನಮ್ಮ ಹೂಳುವನೆಂದು, ಬಂದವರ ಪಾಲಿಗೆ, ಊರುಗೋಲು ನಾನು. ನಮ್ಮನ್ನು, ವಂಚಿಸುವವರ, ಸ್ನೇಹ ಜೀವಿ ನಾನು ಇಂದಿಗೆ, ಈ ಬದುಕು ಮುಗಿಯುತ್ತಿದೆ ಎಂದಾಗಲೂ ಹಸನ್ಮುಖಿ ನಾನು. ನಾನು ಎನ್ನುವ ಇವ, ಶ್ರೀ ಸಾಮಾನ್ಯನು. ನಾನು ಎಂದರೆ ಬೇರೆಯಲ್ಲ ಕನ್ನಡಿಗನು. -ಪವನ ಕುಮಾರ ಕೆ ವಿ kvpkbly@gmail.com
ಇತ್ತೀಚಿನ ಲೇಖನಗಳು
ದೇಶದ ಹಿತ ಅಡಗಿದೆಯೆಂದಾದರೆ ಇನ್ನಷ್ಟು ಕರಟಲೂ ಸಿದ್ಧ!
‘ಮನೆ ಮಠ ಸಂಸಾರವೆಂದು ನೀನ್ಯಾವತ್ತೂ ಯೋಚನೆ ಮಾಡುವ ಹಾಗಿಲ್ಲ. ರಾತ್ರೋರಾತ್ರಿ ನಿನ್ನ ರಜೆಯನ್ನು ಸರಕಾರ ಕಸಿದುಕೊಂಡು ವೃತ್ತಿಗೆ ಕರೆದರೂ ಅದನ್ನೂ ನೀನು ಪ್ರಶ್ನಿಸುವಂತಿಲ್ಲ. ನಿನಗೇನಿದ್ದರೂ ನಿನ್ನ ಬ್ಯಾಂಕೇ ಹೆಂಡತಿ, ಗ್ರಾಹಕರೇ ಮಕ್ಕಳು… ಸಮಯ ಸಂದರ್ಭ ಅಂತ ನೋಡದೆ, ರಜೆ ಮಜಾ ಅಂತ ಯೋಚಿಸದೆ ರಾತ್ರಿ ಹಗಲು ಸೇವೆ ಸಲ್ಲಿಸುವುದು ನಿನ್ನ ವೃತ್ತಿ ಧರ್ಮ’ ಹೀಗಂತ...
ಬುದ್ದಿ, ಇದು ಬುದ್ಧಿಯಿಲ್ಲದ ಸುದ್ದಿವಾಹಿನಿಗಳ ಸುದ್ದಿ!
ಈ 24×7 ಸುದ್ದಿವಾಹಿನಿಗಳು ಮೂರ್ಖರ ಪೆಟ್ಟಿಗೆಯ ಮೂಲಕ ಮೂರು ಲೋಕವನ್ನು ಆವರಿಸಿಕೊಂಡು ಜನರಿಗೆ ನ್ಯೂಸ್ ಪಾಸ್ ಮಾಡಲು ಆರಂಭಿಸಿದ ಮೇಲೆ ಎಲ್ಲವೂ ತಳಕಂಬಳಕ. ಸಮಾಜದ ನಾಲ್ಕನೆಯ ಅಂಗವಾದ ಮಾಧ್ಯಮಗಳೇ ಸೌಹಾರ್ದತೆಗೆ ಭಂಗ ತರುವಂತಿವೆ. ಮಾಧ್ಯಮ ಅಧಮ ಸ್ಥಿತಿ ತಲುಪಿದರೆ ಏನಾಗುತ್ತದೆ ಎನ್ನುವುದಕ್ಕೆ ಇಂತಹ ಕೆಲವು ವಾಹಿನಿಗಳೇ ಸಾಕ್ಷಿ! ತಮ್ಮ ಠೀವಿಯನ್ನು ಕಳೆದುಕೊಂಡಿರುವ ಟಿ...
ಕಾಲಾಯ ತಸ್ಮೈ ನಮಃ!
ಇದು ಸ್ಮಾರ್ಟ್‍ಫೋನ್ ಯುಗ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹಲವು ತಯಾರಕರಿರುವುದರಿಂದ, ಅವರವರ ಬಜೆಟ್ಟಿಗೆ ತಕ್ಕಂತೆ, ಕೈಗೆಟಕುವ ದರದಲ್ಲಿ ಸ್ಮಾರ್ಟ್‍ಫೋನ್‍ಗಳು ದೊರೆಯುತ್ತಿವೆ. ಪರಿಣಾಮವಾಗಿ ಎಲ್ಲರ ಕೈಯಲ್ಲಿಯೂ ವಿಭಿನ್ನ ಸಾಮರ್ಥ್ಯದ ಸ್ಮಾರ್ಟ್‍ಫೋನ್‍ಗಳು ರಾರಾಜಿಸುತ್ತಿವೆ. ವಿಶೇಷವೆಂದರೆ, ಇಂತಿಪ್ಪ ಸ್ಮಾರ್ಟ್‍ಫೋನ್‍ಗಳನ್ನು ಉಪಯೋಗಿಸಲು, ಉಪಯೋಗಿಸುವ ವ್ಯಕ್ತಿಗಳು...
ರಜನಿಕಾಂತ್‍ರಿಗಿಂದು 66ನೇ ವರುಷದ ಹರುಷ
ರಜನಿಕಾಂತ್’ರವರು ಇಂದು ಸೂಪರ್ ಸ್ಟಾರ್,ಸ್ಟೈಲ್ ಕಿಂಗ್ ಎಂಬ ಪಟ್ಟವನ್ನು ಜನರಿಂದ ಪಡೆದಿರುವರು.ಆದರೆ ಶಿವಾಜಿ ರಾವ್ ಗಾಯಕ್ವಾಡ್ ರಜನಿಕಾಂತ್ ಆದ ಸಂಪೂರ್ಣ ಕತೆ ಕೇಳಿದರೆ ನಮ್ಮ ನಿಮ್ಮ ಮೈಯೆಲ್ಲಾ ಮುಳ್ಳಾಗದೆ ಇರದು.ಆಕರ್ಷಕ ನಟನೆ, ಅಭಿನಯವನ್ನೇ ಬಂಡವಾಳವಾಗಿಸಿಕೊಂಡು ವಿಶ್ವಾದ್ಯಂತ ಅಭಿಮಾನಿಗಳನ್ನು ಪಡೆದಿರುವುದರ ಹಿಂದೆ ಅವಿರತ ಶ್ರಮ ಹಾಗು ಅಪಾರ ಶ್ರದ್ಧೆ ಇದೆ. ಯಾವುದೇ...
ಸಮ್ಮೇಳನದ ಮಾನದಂಡಗಳು ಯಾವುವು..?
ಇನ್ನೊಂದು ಸುತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆ ಮುಗಿದಿದೆ. ಸಾಲು ಸಾಲು ಊಟದ ಸರದಿ ಮತ್ತು ಪುಸ್ತಕ ಪ್ರಕಾಶಕರ ಅಂಗಡಿಗಳು ತಂತಮ್ಮ ಟೆಂಟೆತ್ತಿಕೊಂಡು ಹೊರಡುವ ಈ ಅವಧಿಯಲ್ಲಿ ಇಷ್ಟೆಲ್ಲಾ ಮಾಡಿ ಕನ್ನಡ ಭಾಷೆ ಅಥವಾ ದುಂದು ವೆಚ್ಚದ ಈ ನುಡಿ ಹಬ್ಬದಿಂದ ಆಗಿರುವ ಅಥವಾ ಆಗುತ್ತಿರುವ ಲಾಭ ಎನ್ನುವ ತೀರ ವ್ಯವಹಾರಿಕ ಮಾತು ಒತ್ತಟ್ಟಿಗಿರಲಿ, ಒತ್ತಾಸೆ ಅಥವಾ ಪ್ರಯೋಜನ...
