Author - Sachin anchinal

ಅಂಕಣ

ಬಂಡೇಯನೇರಿ ಭಾರತದ ಭವಿಷ್ಯ ಕಂಡ ಭಾಸ್ಕರ

ಕನ್ಯಾಕುಮಾರಿ ಎಂದೊಡನೆ ನೆನೆಪಾಗುವದು. ಮಾತೆ ಪಾರ್ವತಿಯ ದೇವಸ್ಥಾನ ಮತ್ತೆ ಸ್ವಾಮಿ ವಿವೇಕಾನಂದರ ಆ ಪವಿತ್ರ ಬಂಡೆ. ಚಿಕ್ಕಂದಿನಲ್ಲಿ ಸ್ವಾಮೀಜಿಯವರ ಭಾವಚಿತ್ರವೊಂದು ನಮ್ಮ ಮನೆಯ ಗೋಡೆಯಮೇಲಿತ್ತು ಚಿತ್ರದಲ್ಲಿ ಸಿಂಹಪುರುಷನಂತೆ ಕೈಕಟ್ಟಿ ನಿಂತಿದ್ದ ಸ್ವಾಮೀಜಿಯವರ ಹಿಂದೆ ಅದೇ ಕನ್ಯಾಕುಮಾರಿಯ ಬಂಡೆ, ಬಂಡೆಯ ಮೇಲಿದ್ದ ಸ್ಮಾರಕದ ತುದಿಯಲ್ಲಿ ಭಗವಾಧ್ವಜ. ಆ ಪಟವನ್ನು...

ಕವಿತೆ

ಕಲಿಸಿ ಹೋದಳಾಕೆ !

ಭಾವತರಂಗವ ಬರೆಯುವದನು, ಅಂತರಂಗವ ಆಳುವದನು, ಕಲಿಸಿ ಹೋದಳಾಕೆ. ನಿಸ್ವಾರ್ತಿಯಾಗಿ ಬದುಕುವದನು, ಬದುಕುವಾ ಕಲೆಯನ್ನು, ಕಲಿಸಿ ಹೋದಳಾಕೆ.! ದೇಶವೇ ಗುರುವೆಂದು, ಗುರುವೇ ತಾಯಿಯೆಂದು, ತಾಯಿಯೇ ದೈವವೆಂದು, ಕಲಿಸಿ ಹೋದಳಾಕೆ. ಬದಕುವದನು ಕಲಿಸಿ ಹೋದಳಾಕೆ.! ಪಕೀರ ನೀನು, ಪಾಪ ಬೇಡ. ಆಸೆಗೆ ನಾನೇ ಮೂಲ, ಅತಿಯಾಸೆ ಬೇಡ ನಿನ್ನ ನೀನು ಗೆಲ್ಲೆಂದು, ಕಲಿಸಿ ಹೋದಳಾಕೆ ಅವಳಿಲ್ಲದೆ...

ಅಂಕಣ

ವಾಚ್!!

ವಾಚ್ ಎಂದಾಕ್ಷಣ ಗೋಡೆಯ ಮೇಲಿದ್ದ ಗಡಿಯಾರ ನೋಡಿದೆ, ಮೂರೂ ಘಂಟೆಗೆ ಇನ್ನು ಮೂರೂ ನಿಮಿಷ. ತಡಬಡಾಯಿಷಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಆಫೀಸಿನ ಮೆಟ್ಟಿಲಿಳಿವಾಗ ಕಣ್ಣ ಮುಂದೆ ಬಿಎಂಟಿಸಿ ಬಸ್ ಮತ್ತು ಸಿಲ್ಕ್ ಬೋರ್ಡಿನ ಟ್ರಾಫಿಕ್ ಬಂದು ಹೋಯಿತು. ಬೊಮ್ಮಸಂದ್ರದಿಂದ ಬಸವನಗುಡಿಗೆ ಒಂದು ಘಂಟೆಯಲ್ಲಿ ತಲುಪುವೆನೆಂದು ಜಂಬ ಕೊಚ್ಚಿಕೊಂಡವನಿಗೆ ದೊಡ್ಡ ಬಸವ ದರ್ಶನ ಕೊಟ್ಟಿದ್ದು...

ಕವಿತೆ

ನೆನಪು

ನವೀರಾದ ನಿನ್ನಯ ನೆನಪು ಉಸಿರಲ್ಲಿ ಬೆಸೆಯುವ ಹೊಳಪು ನಿನ್ನಾಣೆ ನಾನೇ ಸತ್ಯ ಕಣೀ ನಿನ್ನಯ ಪ್ರೀತಿಯ ಗುಲಾಮನು ನಾನೇ ! ನಾಚಿ ಹೋಗುವ ಆ ನಿನ್ನ ವೈಯಾರ ನಲ್ಲೆ ನಿನ್ನ ಮನವೇ ಮಧುರ ನೀರಂತಾ ನಿನ್ನಯ ಕನಸು ನನಗೆ ಕನಸಲ್ಲ ಅದು ಸೊಗಸು ! ಸ್ವರ್ಗವೇ ಧರೆಗಿಳಿದಂತೇ ಸ್ಪರ್ಷವೇ ಸಂಭೋಗವಂತೆ ನಾರಿ ನೀನೇ ದೈವ ಕಣೀ ನನ್ನಯ ಪಾಲಿನ ಸ್ವರ್ಗವು ನೀನೇ ! -ಸಚಿನ್ ಹಂಚಿನಾಳ್

ಅಂಕಣ

ದೇಶಪ್ರೇಮಿಗಳಾರು? ದೇಶದ್ರೋಹಿಗಳಾರು?

ಸ್ವಲ್ಪ ದಿನಗಳಿಂದ ನೀವೆಲ್ಲ ಕಾಶ್ಮೀರದ ಗಲಭೆಯ ಬಗ್ಗೆ ಕೇಳಿಯೇ ಇರ್ತಿರಾ,ಕಾಶ್ಮೀರದಲ್ಲಿ ಈ ತರದ ಹಿಂಸಾಚಾರಗಳಿಗೆ ಲೆಕ್ಕವೇ ಇಲ್ಲ, ಇದಕ್ಕಿಂತಲೂ ದೊಡ್ಡ ದೊಡ್ಡ ಹಿಂಸಾಚಾರಗಳು ಜರುಗಿ ಹೋಗಿವೆ, ಆದರೇ ಏಕೆ? ಈ ಸಲದ ಗಲಭೆ ಇಷ್ಟು ಪ್ರಚಾರ ಪಡೆಯಿತು. ಅದಕ್ಕೆ ಕಾರಣಗಳು ಬಹಳ. ಯಾವಾಗ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನಿಂದ ಭಾರತದಲ್ಲಿ...

ಕವಿತೆ

ಜೊತೆಗಾರ್ತಿ

ನಿನ್ನ ಅರಿಯರು ಯಾರು! ನನ್ನ ಬಿಟ್ಟು ಇನ್ನಾರು? ಮಾತು ನಿನ್ನರಿವು, ಪರ್ಣ ನಿನ್ನೆಸರು. ಕವಿತೆ ನಿನ್ನುಸಿರು, ಭಾವ ನಿನ್ನ ಸಿರಿಯು. ಸಿರಿ ದೇವಿಯೂ ನೀ ವರ್ಷದಾಯಿನಿ ಪ್ರೀತಿಯಲ್ಲಿ ನೀ ಸುವರ್ಣವೋ ಕೋಪದಲ್ಲಿ ಸೂರ್ಯರಶ್ಮಿ ನೀ ನಗುವೇ ನಿನ್ನ ಆಭೂಷಣವು ಧನ್ಯವೀ ಜನುಮ, ನಿನ್ನ ಕಂಡ ಆ ಘಳಿಗೆ ನೀನೇ ದೇವತೆ ನನ್ನ ಪದಸಿರಿಗೆ ನೀನೇ ಗಾಯಕಿ ನನ್ನ ಗಾನಸಿರಿಗೆ

ಅಂಕಣ

ಪೊಲೀಸರನ್ನು ಬೆಂಬಲಿಸಿ!

ಒಂದೆರೆಡು ವಾರಗಳ ಹಿಂದೆ ವಿಜಯನಗರದ ನಮ್ಮ ರೂಮನಲ್ಲಿ ಕೆಲವು ಮೊಬೈಲ್ ಫೋನ್ಗಳ ಕಳ್ಳತನವಾಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ಕಾಲೇಜ್ ಹೋಗುವ ಮುನ್ನ ಒಂದು ಕಂಪ್ಲೇಂಟ್ ಕೊಟ್ಟರಾಯಿತೆಂದು, ನಾನು ನನ್ನ ಸ್ನೇಹಿತರು ವಿಜಯನಗರ ಪೋಲಿಸ್ ಸ್ಟೇಷನ್ಗೆ ತೆರಳಿದೆವು. ನಡೆದ ಘಟನೆಯಲ್ಲಿ ನಮ್ಮದೇ ತಪ್ಪಿದ್ದರೂ ಪೊಲೀಸರ ಮೇಲೆ ಹೊಣೆ ಹೊರೆಸುವ ಕೆಲಸವದು, ಸ್ವಲ್ಪ ಬೇಜಾರಲಿದ್ದ ನಾವು ಬೇಗ...

ಅಂಕಣ

ಬುದ್ಧ ನಕ್ಕ – ಇದು ಭಾರತದ ಹೆಮ್ಮೆಯ ಪರಮಾಣು ಪರೀಕ್ಷೆಯ ಕಥೆ

ಅದು ಮೇ 11, 1998  ಬುದ್ಧ ಪೂರ್ಣಿಮೆಯ ಪವಿತ್ರ ದಿನ. ದೆಹಲಿಯ 7RCR ರಸ್ತೆಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಪತ್ರಿಕಾ ವರದಿಗಾರರು ಕಿಕ್ಕಿರಿದು ತುಂಬಿದ್ದರು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಪತ್ರಕರ್ತರನ್ನುದ್ದೇಶಿಸಿ ಹೇಳಿದರು ” ಇವತ್ತು 15:45  ಘಂಟೆಗೆ ಭಾರತ ಭೂ ತಳದಲ್ಲಿ 3 ಪರಮಾಣು ಪರೀಕ್ಷೆಗಳನ್ನು ಪೋಖ್ರಾನ್ ಪ್ರಾಂತ್ಯದಲ್ಲಿ...