ಅಂಕಣ

ದೇಶಪ್ರೇಮಿಗಳಾರು? ದೇಶದ್ರೋಹಿಗಳಾರು?

ಸ್ವಲ್ಪ ದಿನಗಳಿಂದ ನೀವೆಲ್ಲ ಕಾಶ್ಮೀರದ ಗಲಭೆಯ ಬಗ್ಗೆ ಕೇಳಿಯೇ ಇರ್ತಿರಾ,ಕಾಶ್ಮೀರದಲ್ಲಿ ಈ ತರದ ಹಿಂಸಾಚಾರಗಳಿಗೆ ಲೆಕ್ಕವೇ ಇಲ್ಲ, ಇದಕ್ಕಿಂತಲೂ ದೊಡ್ಡ ದೊಡ್ಡ ಹಿಂಸಾಚಾರಗಳು ಜರುಗಿ ಹೋಗಿವೆ, ಆದರೇ ಏಕೆ? ಈ ಸಲದ ಗಲಭೆ ಇಷ್ಟು ಪ್ರಚಾರ ಪಡೆಯಿತು. ಅದಕ್ಕೆ ಕಾರಣಗಳು ಬಹಳ. ಯಾವಾಗ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೋ ಅಂದಿನಿಂದ ಭಾರತದಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳು ತುಂಬಾ ಪ್ರಚಾರ ಪಡೆಯುತ್ತಿವೆ. ಅದು ರೋಹಿತ್ ವೇಮಲಾ ಘಟನೆಯಾಗಿರಭಹುದು, ದಾದ್ರಿ ಘಟನೆಯಾಗಿರಭಹುದು ಇನ್ನು ಅನೇಕ ಘಟನೆಗಳು. ಈಗ ಪ್ರಶ್ನೆಯೆಂದರೇ, ಹೀಗೇಕೆ ಕೆಲವು ಭಾರತೀಯ ಮಾಧ್ಯಮಗಳು ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸಿ ಸುದ್ದಿಗಳನ್ನು ಬಿತ್ತರಿಸುತ್ತಿವೆ? ಭಾರತೀಯರಾಗಿ ಭಾರತದ ಅನ್ನವನ್ನು ಉಂಡು ಭಾರತದ ವಿರುದ್ಧವೇ ಮಾತನಾಡಲು ಕಾರಣವಾದರು ಏನು?. ಉತ್ತರ ಸುಲಭ ” ಹಣ “, ಹೌದು .. ಈ ಭ್ರಷ್ಟ ಮಾಧ್ಯಮಗಳಿಗೆ ಭ್ರಷ್ಟ NGO ಗಳಿಗೆ , ಪಾಕಿಸ್ತಾನ , ಸೌದಿ ಮುಂತಾದ ರಾಷ್ಟ್ರಗಳಿಂದ ಹೇರಳವಾಗಿ ಬರುತ್ತಿರುವ ಹಣ. ಯಾವಾಗ ಶ್ರೀ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿ ಇವರಿಗೆ ಸಂದಾಯವಾಗುತ್ತಿರುವ ಈ ಭ್ರಷ್ಟ ಹಣವನ್ನು ನಿಲ್ಲಿಸಲು ಪ್ರಯತ್ನ ನಡೆಸಿದರು.ಈ ಭ್ರಷ್ಟರಿಗೆ ಅದನ್ನು ಸಹಿಸಲಾಗುವುದಿಲ್ಲ.

ಕಾಶ್ಮೀರ ಈ ಭ್ರಷ್ಟರಿಗೆ ಸ್ವರ್ಣವಿದ್ದಂತೆ .ಕಾಶ್ಮೀರದಲ್ಲಿ ಏನೇ ಒಳ್ಳೆಯ ಕೆಲಸಗಳಾದರು ಇವರ ಮೈತುಂಬ ಜ್ವರ ಬಂದು ಬಿಡುತ್ತದೆ. ಕಾಶ್ಮೀರದಲ್ಲಿ ಪ್ರವಾಹ ಬಂದಾಗ ಸಾವಿರಾರು ಕೋಟಿ ಹಣ ಪರಿಹಾರ ನೀಡಿದರೂ ಸಹಿಸಲಾಗದು, ಕಾಶ್ಮೀರದಲ್ಲಿ ಪಾಕಿಸ್ತಾನದ ಬೆಂಬಲಿತ ಉಗ್ರರನ್ನು ಸದೆ ಬಡಿದರು ಸಹಿಸಲಾಗದು,  ಕಾಶ್ಮೀರದಲ್ಲಿ ಭಾಜಪ ಸರ್ಕಾರ ರಚಿಸಿದರು ಇವರಿಗೆ ಸಹಿಸಲಾಗದು, ಕಾಶ್ಮೀರದಲ್ಲಿ ಭಾರತೀಯ ಸೇನೆ ಹೆಚ್ಚಿಸಿದರೂ ಈ ಜನಕ್ಕೆ ವಿಷವುಂಡಂತಾಗುತ್ತದೆ.

ಮೊನ್ನೆ ಜುಲೈ 8 ರಂದು ನಡೆದ ಘಟನೆ ಇಷ್ಟೇ. ಒಬ್ಬ ಕಾಶ್ಮೀರಿ ಪ್ರತೀಕವಾದಿ ಸಂಘಟನೆ ಹಿಜಬುಲ್ ಮುಜಾಹಿದ್ದೀನ್ ಕಮಾಂಡರ ಬುರ್ಹಾನ್ ವನಿಯನ್ನು ಅಲ್ಲಿನ ಪೊಲೀಸರು ಕೊಂದು ಹಾಕಿದರು . ಬುರ್ಹಾನ ವನಿ ಒಬ್ಬ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ . 26/11 ಮಾಸ್ಟರ್ ಮೈಂಡ್ ಹಫೀಜ್ ಸಹೀದ್ ಜೊತೆಗೆ ಗುರುತಿಸಿಕೊಂಡವ . ಮತ್ತೆ ಭಾರತೀಯ ಸೇನೆಯ ಯಾವುದೇ ಸೈನಿಕನನ್ನು ಕೊಲ್ಲುತ್ತೇನೆಂದು ಶಪಥಗೈದ ವಿಷಯುಕ್ತ ಕ್ರಿಮಿ , ಇಷ್ಟೇ ಸಾಕಾಗಿತ್ತು ಈ ತಥಾಕಥಿತ ಬುದ್ಧಿ ಜೀವಿ ಮಾಧ್ಯಮದವರಿಗೆ ಭಾರತ ಸರ್ಕಾರ, ಭಾರತದ ಸೇನೆಯ ವಿರುದ್ಧ ಯುದ್ಧಕ್ಕೆ ನಿಂತವರಂತೆ ಕಾಶ್ಮೀರವನ್ನು ಹುರುದುಂಬಿಸಲು ನಿಂತು ಬಿಟ್ಟರು. ಯಾವ ಮಾಧ್ಯಮದವರು ಭಾರತೀಯ ಸೇನೆಯನ್ನು ಬೆಂಬಲಿಸಬೇಕೋ ಅದೇ ಕೆಲವು ಮಾಧ್ಯಮಗಳು ಪ್ರತೀಕವಾದಿಗಳ ತಲೆ ತುಂಬಿ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕಾರಣವಾದರು. ಆದರೆ ಭಾರತದ ಸೇನೆ , ಭಾರತದ ಸರ್ಕಾರ ಸಹನೆ ಕಳೆದುಕೊಳ್ಳಲಿಲ್ಲ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ನರೇಂದ್ರ ಮೋದಿ ಕಾಶ್ಮೀರದ ಗಲಭೆಯನ್ನು ಬಲು ಬೇಗನೆ ಹತ್ತಿಕ್ಕಿದರು . ತುಂಬಾ ಅಮಾಯಕರ ಪ್ರಾಣ ಉಳಿಸಲು ಕಾರಣವಾದರು.

ಈ ಎಲ್ಲ ಘಟನೆಗಳ ಒಂದು ಮುಖ ಸತ್ಯವನ್ನು ಹೊರ ಹಾಕಿತು, ದೇಶದಲ್ಲಿ ಯಾರು ದೇಶಭಕ್ತರು ಮತ್ತು ದೇಶದ್ರೋಹಿಗಳು ಎಂಬುವದನ್ನು ಸ್ಪಷ್ಟವಾಗಿ ತೋರಿಸಿತು, ಈ ದೇಶದ್ರೋಹಿಗಳು ದೇಶದ ಆಯಕಟ್ಟಿನ ರಂಗಗಳಲ್ಲಿ ಕುಳಿತು ಈ ದೇಶದ ಸಾಮಾನ್ಯ ನಾಗರಿಕರಿಗೆ ಸುಳ್ಳು ಸುದ್ದಿ, ಕಥೆಗಳನ್ನು ಬಿತ್ತರಿಸುತಿದ್ದರೆ ಅವರಲ್ಲಿ ಕೆಲವು ಮಾಧ್ಯಮಗಳು, ಕೆಲವು ರಾಜಕೀಯ ಪಕ್ಷಗಳು, NGOಗಳು, ತಥಾಕಥಿತ ಬುದ್ದಿಜೀವಿಗಳು, ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಕೆಲವು ನೈತಿಕತೆ ಇಲ್ಲದ ವಿದ್ಯಾರ್ಥಿ ಸಂಘಟನೆಗಳು ಸೇರಿವೆ, ಇಲ್ಲಿ ದೇಶಭಕ್ತಿಯ ಮತ್ತು ದೇಶದ್ರೋಹಿಯ ವ್ಯಾಖ್ಯಾನ ತುಂಬಾ ಸರಳ, ಯಾರು ಈ ದೇಶದ ಸಾರ್ವಭೌಮತೆಯನ್ನು ಕಾಪಾಡುವರೋ, ಯಾರು ದೇಶಕ್ಕೆ ಪ್ರಾಣವನ್ನೇ ಅರ್ಪಿಸುವ ಭಾರತೀಯ ಸೇನೆಯನ್ನು ಬೆಂಬಲಿಸುವರೋ, ಯಾರು ಈ ದೇಶದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ನಿಲ್ಲುವರೋ, ಯಾರು ಈ ದೇಶದ ವೈವಿದ್ಯತೆ, ಸಂಸ್ಕೃತಿ ಮತ್ತು ಜ್ಯಾತ್ಯತೀತತೆಯನ್ನು ಸಂರಕ್ಷಿಸುವರೋ  ಮತ್ತು ಯಾರು ಮೊದಲು ದೇಶ ನಂತರ ಉಳಿದೆಲ್ಲವೂ ಎನ್ನುವ ಮನೋಭಾವವನ್ನು ಹೊಂದಿರುವರೋ ಅವರೇ ದೇಶಭಕ್ತರು. ಮತ್ತು ಯಾರು ಈ ದೇಶದ ಉಪ್ಪು ತಿಂದು ಭಾರತವನ್ನು ವಿಭಜಿಸುವ ಮಾತನಾಡುತ್ತಾರೋ, ಯಾರು ತಮ್ಮನು ಬಾಹ್ಯ ಶಕ್ತಿಗಳಿಂದ ರಕ್ಷಿಸುವ ಭಾರತೀಯ ಸೇನೆಯನ್ನೇ ಅತ್ಯಾಚಾರಿಗಳೆಂದು ಕರೆಯುತ್ತಾರೋ, ಯಾರು ಈ ದೇಶದ ಮಹಿಳೆಯರ ಮಕ್ಕಳ ಶೋಷಣೆಯನ್ನು ನಡೆಸುತ್ತಾರೋ, ಯಾರು ಈ ದೇಶದ ಕಾನೂನಿನ ಶಿಕ್ಷೆಯನ್ನೇ ವಿರೋಧಿಸಿ ಪ್ರತಿಭಟನೆ ನಡೆಸುತ್ತಾರೋ ಮತ್ತು ಯಾರು ಅಂಬೇಡ್ಕರಜೀ ಬರೆದ ಭಾರತದ ಸಂವಿದಾನ ನೀಡಿರುವ ಸರ್ಕಾರವನ್ನು ದ್ರೋಹಿಗಳಂತೆ ನೋಡುತ್ತಾರೋ ಅವರು ದೇಶದ್ರೋಹಿಗಳು.

ಈಗ ಈ ದೇಶಭಕ್ತರ ಮೇಲೆ ದೇಶದ್ರೋಹಿಗಳು ಯಾರು ಎಂಬುದನ್ನು ಒಂದು ಚಿಕ್ಕ ಘಟನೆಯ ಮುಖಾಂತರ ನೋಡೋಣ. ಅರ್ನಬ್ ಗೋಸ್ವಾಮಿ ಎಂಬ ಸುದ್ದಿವಾಹಿನಿಯ ಮುಖ್ಯಸ್ಥ ಭಾರತೀಯ ಸೈನ್ಯವನ್ನು ಬೆಂಬಲಿಸಿ ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುತ್ತಿರುವ ಮಾಧ್ಯಮಗಳನ್ನು ಶಿಕ್ಷಿಸಬೇಕು ಎಂದು ಗಂಡೆದೆಯಿಂದ  ಮಾತನಾಡಿದಾಗ, ಸೇನೆಯ ಪ್ರತಿ ಹೆಜ್ಜೆಯನ್ನು ವಿರೋಧಿಸುವ ಬರ್ಕಾ ದತ್ತಾ , ರಾಜದೀಪ್ ಸರ್ದೇಸಾಯಿ ಮತ್ತು ರಾಹುಲರಂತಹ ಜನರ ನಿಲುವೇನು ಎಂಬುದು ದೇಶಕ್ಕೇ ಗೊತ್ತಾಯಿತು..

ಜನರಲ್  GD ಭಕ್ಷಿ, ಮೇಜರ್ ಗೌರವ್ ಆರ್ಯರ  ಪ್ರಶ್ನೆಗಳಿಗೆ ಉತ್ತರಿಸದೆ, ಭಾರತೀಯ ಸೇನೆಗೆ ತಮ್ಮ ಜೀವನವನ್ನು ತೇಯ್ದ ಜನರನ್ನೇ ಅತ್ಯಾಚಾರಿಗಳೆಂದು ಸಂಭೋದಿಸುತ್ತಾರಲ್ಲ! ಈ ಮೆಹ್ರಾ ಸೂದ್ , ಜಾನ್ ದಯಾಳ್ , ಸುಧೀಂದ್ರ ಕುಲಕರ್ಣಿಯಂತಹ ತಥಾಕಥಿತ ಬುದ್ಧಿ ಜೀವಿಗಳಲ್ಲಿ, ದೇಶಪ್ರೇಮಿಗಳು  ದೇಶ ಕಾಪಾಡುವ ಸೈನಿಕರೇ ಅಥವಾ ಈ ಬುದ್ಧಿ ಜೀವಿಗಳೇ ವಿಚಾರ ಮಾಡಿ. ಆಮ್ ಆದ್ಮಿ ಪಾರ್ಟಿಯ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಗೆ ಪಾಕಿಸ್ತಾನ & ಉಗ್ರಗಾಮಿಗಳ ಬಗ್ಗೆ ಪ್ರಶ್ನೆ ಕೇಳಿದರೆ ಮೈಯೆಲ್ಲಾ ಉರಿಯುತ್ತದೆ, ಚರ್ಚೆಯಿಂದಲೇ ಎದ್ದು ಹೋಗುತ್ತಾರೆ. ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ ಎಂದು ಬಿಂಬಿಸಲು ಆಮ್ ಆದ್ಮಿ ಪಾರ್ಟಿಯ ವೆಬ್ ಸೈಟ್ ನಲ್ಲಿ POK ಅನ್ನು ಪಾಕಿಸ್ತಾನದೊಂದಿಗೆ ಜೋಡಿಸುತ್ತಾರೆ, ಉಚಿತವಾಗಿ ನೀರು ಕೊಡುತ್ತೇನೆಂದು ಹೇಳುವವರು ನೀರು ಕೇಳಲು ಬರುವ ಮಹಿಳೆಯರಿಗೆ ಅತ್ಯಾಚಾರದ ಧಮಕಿ ಹಾಕುತ್ತಾರೆ. ಇನ್ನೊಂದೆಡೆ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ಉಗ್ರವಾದದ ವಿರುದ್ಧ ಮಾತನಾಡುವ, ಸೇನೆಯ ಜೊತೆಗೆ ದೀಪಾವಳಿ ಆಚರಿಸಿ ಸೇನೆಯ ಮನೋಬಲ ಹೆಚ್ಚಿಸುವ, ಉಗ್ರಗಾಮಿಗಳ ವಿರುದ್ಧ ಹೋರಾಡಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸಾರ್ವಭೌಮತೆಗೆ ಸವಾಲಾಗಿರುವವರನ್ನು ಸುಮ್ಮನಾಗಿಸಲು ಹರಸಾಹಸ ಮಾಡುತ್ತಿದ್ದಾರೆ. ದ್ರೋಹಿಗಳಾರು , ಭಕ್ತರಾರು ಎಂಬ ಸ್ಪಷ್ಟ ಚಿತ್ರಣವೇ ನಿಮ್ಮ ಮುಂದೆ ಇದೆ.

ಯಾವುದೇ ದೇಶವಾಗಿರಲಿ ಅದಕ್ಕೆ ಬಾಹ್ಯ ಶಕ್ತಿಗಳೊಂದಿಗೆ ಹೋರಾಟ ಸಹಜ, ಆದರೇ ತನ್ನದೇ ಕೆಲವು ಜನರ ದೇಶದ್ರೋಹಿ ಭಾವನೆ ಮತ್ತು ದೇಶದ ಮೇಲಿನ ವಿರೋಧಾಭಾಸ ದೇಶದ ಮೇಲೆ ತುಂಬಾ ಪರಿಣಾಮವನ್ನು ಉಂಟು ಮಾಡುತ್ತದೆ. ಭಾರತ ಯಾವಾಗಲೂ ಅಹಿಂಸಾ ಮಾರ್ಗದ ಮೂಲಕ ಹೋರಾಟ ನಡೆಸಿದೆ ಮತ್ತು ನಡೆಸುತ್ತಿದೆ, ಆದರೆ ಅದೊಂದೇ ಮಾರ್ಗವಲ್ಲ ಸಮಯ ಬಂದಾಗಲೆಲ್ಲಾ ತನ್ನ ಪರಾಕ್ರಮವನ್ನು ತೋರಿಸಿದೆ. ಈಗ ಸಮಯ ಭಾರತೀಯ ಪ್ರಜೆಗಳದ್ದು ಭಾರತದ ಅಖಂಡತೆಗೆ ದಕ್ಕೆ ಉಂಟು ಮಾಡುವ, ಭಾರತೀಯ ಸೇನೆಯನ್ನು ವಿರೋದಿಸುವ ಮತ್ತು ಭಾರತದ ದೇಶಭಕ್ತರನ್ನು ಕಟುಕರಂತೆ ಬಿಂಬಿಸುವ ದೇಶದ್ರೋಹಿಗಳ ವಿರುದ್ಧ ಒಂದಾಗಲೇ ಬೇಕು. ದೇಶದ ಬಾಹ್ಯ ಮತ್ತು ಆಂತರಿಕ ಧಮನವನ್ನು ತಡೆಯಲು ಬೇಕು. ಈ ದುರ್ಬುದ್ದಿ ಜೀವಿಗಳಿಗೆ ಪಾಠ ಕಲಿಸಲು ಯಾವ ತ್ಯಾಗಕ್ಕೂ ನಾವು ಸಿದ್ದ ಎಂಬುದನ್ನು ತೋರಿಸಲೇ ಬೇಕು

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!