ಅಂಕಣ

ರಜನಿಕಾಂತ್‍ರಿಗಿಂದು 66ನೇ ವರುಷದ ಹರುಷ

ರಜನಿಕಾಂತ್’ರವರು ಇಂದು ಸೂಪರ್ ಸ್ಟಾರ್,ಸ್ಟೈಲ್ ಕಿಂಗ್ ಎಂಬ ಪಟ್ಟವನ್ನು ಜನರಿಂದ ಪಡೆದಿರುವರು.ಆದರೆ ಶಿವಾಜಿ ರಾವ್ ಗಾಯಕ್ವಾಡ್ ರಜನಿಕಾಂತ್ ಆದ ಸಂಪೂರ್ಣ ಕತೆ ಕೇಳಿದರೆ ನಮ್ಮ ನಿಮ್ಮ ಮೈಯೆಲ್ಲಾ ಮುಳ್ಳಾಗದೆ ಇರದು.ಆಕರ್ಷಕ ನಟನೆ, ಅಭಿನಯವನ್ನೇ ಬಂಡವಾಳವಾಗಿಸಿಕೊಂಡು ವಿಶ್ವಾದ್ಯಂತ ಅಭಿಮಾನಿಗಳನ್ನು ಪಡೆದಿರುವುದರ ಹಿಂದೆ ಅವಿರತ ಶ್ರಮ ಹಾಗು ಅಪಾರ ಶ್ರದ್ಧೆ ಇದೆ. ಯಾವುದೇ ಗಾಡ್‍ಫಾದರ್, ಹಣದ ಪ್ರಭಾವ ಇಲ್ಲದೆ ನಟನೆ ಒಂದನ್ನೇ ನಂಬಿ ನಟನಾ ರಂಗದಲ್ಲಿ ಯಶಸ್ಸಿನ ಶಿಖರವನ್ನು ಏರಿರುವ ರಜನಿರವರು ನಿಜವಾದ ಸಾಧಕ.ಅವರಿಗಿಂದು 66ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ!

ಮುಳ್ಳಿನ ದಾರಿಯಲ್ಲಿ ನಡೆದು ಇಂದು ಕಾಲಿವುಡ್’ನ ಸಿಂಹಾಸನದ ಮೇಲೆ ವಿರಾಜಮಾನರಾಗಿ ವಿಜೃಂಭಿಸುತ್ತಿರುವ ರಜನಿ ಹುಟ್ಟಿದ್ದು ಡಿಸೆಂಬರ್ 12, 1950ರಂದು ಬೆಂಗಳೂರಿನಲ್ಲಿ .ಓದು ಬರಹದಲ್ಲಿ ಬಹಳ ಮುಂದಿದ್ದರು,ಅಚಾನಕ್ ಆಗಿ ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದರು ನಂತರ ಹೊಟ್ಟೆ ಪಾಡಿಗೆ ಬೆಂಗಳೂರು ಸಾರಿಗೆ ಸೇವೆ ಇಲಾಖೆಯಲ್ಲಿ ಅಂದರೆ ಈಗಿನ ಬೆಂಗಳೂರು ಮಹಾನಗರ ಟ್ರಾನ್ಸ್’ಪೋರ್ಟ್ ಕಾರ್ಪೋರೇಷನ್’ನಲ್ಲಿ ಬಸ್  ಕಂಡೆಕ್ಟರ್ ಆದರು. ಹಾಗಿರುವಾಗಲೇ ನಾಟಕದ ಮೇಲೆ ಅವರಿಗೆ ಅಪರಿಮಿತ ಆಸಕ್ತಿ ಮೂಡಿತು. ಆದರೆ ನಾಟಕಗಳಲ್ಲಿ ಅವರಿಗೆ ಅವಕಾಶಗಳೇ ಸಿಗಲಿಲ್ಲ. ಅದಕ್ಕೆ “ನಾಟಕದಲ್ಲಿ ಅವಕಾಶ ಸಿಕ್ಕದಿದ್ದರೆ ಏನಂತೆ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ತೇನೆ”ಎಂದೆನ್ನುತ್ತಾ ಮದ್ರಾಸ್‍ಗೆ ಹೊರಟು ಬಿಟ್ಟರು ರಜನಿ.ಹೊರಡುವಾಗ ಬಳೆಪೇಟೆಯ ಪದ್ಮಶ್ರೀ ಕ್ಲಬ್ ನ ಮುಂಭಾಗದ ಬಾವಿ ಕಟ್ಟೆಯ ಮೇಲೆ ಕುಳಿತು ಗೆಳೆಯರೊಂದಿಗೆ ಬಿಯರ್ ಸಿಪ್ಪಸಿದರು.ರೈಲು ಹತ್ತುವಾಗ ಅದೇ ಗೆಳೆಯರು ಸಂಗ್ರಹಿಸಿಕೊಟ್ಟ ನೂರಾ ಇಪ್ಪತ್ತು ರೂಪಾಯಿ ಅಷ್ಟೇ ಅವರ ಬಳಿ ಇತ್ತು.ಮದ್ರಾಸ್ ನಲ್ಲಿ ನಟನೆ ಕುರಿತು ತರಬೇತಿ ಪಡೆಯುತ್ತಿದ್ದ ರಜನಿ ಹದಿನೈದು ದಿನಕ್ಕೊಮ್ಮೆ ಬೆಂಗಳೂರಿಗೆ ಬಂದು ಕಂಡೆಕ್ಟರ್ ಕೆಲಸ ಮಾಡುತ್ತಿದ್ದರು.

ಹಲವು ಕಷ್ಟಗಳು ಬಂದರೂ ಸಹಿಸಿಕೊಂಡು ಹೇಗೋ ತರಬೇತಿ ಮುಗಿಸಿದರು.ಅಪೂರ್ವ ರಾಗಂಗಳ್ ಚಿತ್ರಕ್ಕೆ ಅಭಿನಯಿಸಲು ಅವಕಾಶ ಸಿಕ್ಕಿತು. ರಜೆ ಹಾಕುವುದು ಜಾಸ್ತಿಯಾದ್ದರಂದ ಕಂಡಕ್ಟರ್ ಕೆಲಸವನ್ನು ಕಳೆದುಕೊಂಡರು. ಅದಕ್ಕೆ ಅವರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಧೃಢ ಸಂಕಲ್ಪ ತೊಟ್ಟು ಚೆನ್ನೈಗೆ ತೆರಳಿ ನಟನೆಯಲ್ಲಿಯೇ ತಮ್ಮ ಜೀವನ ರೂಪಿಸಿಕೊಂಡರು.

ಅಪೂರ್ವ ರಾಗಂಗಳ್‍ನಿಂದ ಇಂದು 0.2 ಸಿನಿಮಾದವರೆಗೆ ರಜನಿರವರು ಸಿನಿರಂಗದ ಪಯಣ ಸಾಗಿಬಂದಿದೆ. ಅವರು ಅಂದು ಮಾಡಿದ ಧೃಡ ನಿರ್ಧಾರ, ನಿರಂತರ  ಪರಿಶ್ರಮವೇ ಈ ಮಟ್ಟಕ್ಕೆ ಬೆಳೆದಿರಲು ಕಾರಣ.ರಜನಿಕಾಂತ್ ಇಂದು ಅದೆಷ್ಟೇ ಮೇಲ್ಮಟ್ಟಕ್ಕೆ ಏರಿದ್ದರೂ ಕೂಡ ಅವರು ಏರಿದ ಮೆಟ್ಟಿಲನ್ನು ಮರೆಯಲ್ಲಿಲ್ಲ. ಅವರು ಇಂದಿಗೂ ತಮ್ಮ ಕಷ್ಟಕಾಲಕ್ಕೆ ನೆರವಾದ ಗೆಳೆಯರಾದ ರಘು ಹಾಗು ರಾಜ್ ಬಹದ್ದೂರ್‍ರವರನ್ನು ಮರೆತಿಲ್ಲ. ಪ್ರತಿ ಸಲವೂ ಬೆಂಗಳೂರಿಗೆ ಬಂದಾಗಲೂ ಈ ಗೆಳೆಯರೊಂದಿಗೆ ಟೂರ್ ಹೊಡೆಯುವರು. ವೇಷ ಬದಲಿಸಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ಅಲೆಯುತ್ತಾ ಜನರೊಂದಿಗೆ ಬೆರೆಯುತ್ತಾರೆ. ಪ್ರತಿಷ್ಠಿತ ಕಂಪೆನಿಗಳ ಐಶಾರಾಮಿ ಕಾರ್ ಗಳು  ಅವರ ಬಳಿ ಇದ್ದರೂ ಕೂಡ ಅವರಿಗೆ ಅಚ್ಚುಮೆಚ್ಚಿನ ಕಾರ್ ಇಂದಿರಾ ಪ್ರಿಯದರ್ಶಿನಿ ಫಿಯಟ್ ಕಾರ್ ಅದರಲ್ಲೇ ಸದಾ ಅವರ ಪ್ರಯಾಣ.ತಮಿಳುನಾಡಿನ ಹಳ್ಳಿಯೊಂದನ್ನು ದತ್ತು ತೆಗೆದುಕೊಂಡು ಅದನ್ನು ಅವರೇ ನೋಡಿಕೊಳ್ಳುತ್ತಿರುವರು.

ನೀವೇ ಊಹಿಸಿ ವಿಶ್ವದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನೊಬ್ಬ ಹೀಗೆ ಜೀವನ ನಡೆಸುತ್ತಿದ್ದಾರಾ? ಎಂದರೆ ನಂಬಲು ಕಷ್ಟವಾದರೂ ಹೌದು ಇದು ಸತ್ಯ.  ಈವತ್ತಿಗೆ ಅವರಿಗೆ 66ನೇ ವರ್ಷ ಪೂರೈಸಿದೆ.ಅವರ ಅದ್ಭುತ ಸಿನಿಮಾಗಳು ಹೀಗೆ ನಿರ್ಮಾಣವಾಗುತ್ತಿರಲಿ, ಇನ್ನಷ್ಟು ನಮ್ಮನ್ನು ರಂಜಿಸಲಿ ಎಂಬುದು ನನ್ನ ಹಾರೈಕೆ.

   -ರಜತ್ ರಾಜ್ ಡಿ.ಹೆಚ್

    ಎಸ್.ಡಿ.ಎಂ ಕಾಲೇಜು

    ಪ್ರಥಮ ಎಂ.ಸಿ.ಜೆ

    ಉಜಿರೆ,ಬೆಳ್ತಂಗಡಿ

rajathrajdh4@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!