Author - Prasad Kumar Marnabail

ಪ್ರಚಲಿತ

ವಿರೋಧಿಸುವುದಷ್ಟೇ ವಿರೋಧ ಪಕ್ಷದ ಕೆಲಸವೇ?

‘ಸರಕಾರ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳನ್ನು ಬೆಂಬಲಿಸೋಣ. ಎಲ್ಲವನ್ನು ವಿರೋಧಿಸುವುದು, ಎಲ್ಲದಕ್ಕೂ ಮೋದಿಯನ್ನು ತೆಗಳುವುದುನ್ನು ನಿಲ್ಲಿಸೋಣ’ ಇದು ಇತ್ತೀಚೆಗೆ ದಿಗ್ವಿಜಯ ಸಿಂಗ್, ಅಭಿಷೇಕ್ ಮನು ಸಿಂಗ್ವಿ, ಶಶಿತರೂರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿರುವ ಮಾತುಗಳು. ನಿಜಕ್ಕೂ ಇದು ಕಾಂಗ್ರೆಸ್ ಪಕ್ಷದ ಒಳ್ಳೆಯ ಬೆಳವಣಿಗೆಯೇ. ಕಾಂಗ್ರೆಸ್‍ನ ಈ ಹಿರಿತಲೆಗಳಿಗೆ...

ಅಂಕಣ ಪ್ರಚಲಿತ

ಸಾಲ ಮನ್ನಾ ಜಾತ್ರೆಯಲ್ಲಿ…

ಕಟ್ಟಿರೋನ್  ಕೋಡಂಗಿ ಬಾಕಿ ಇಟ್ಟಿರೋನೇ ವೀರಭದ್ರ! ಕರ್ನಾಟಕ ಸರಕಾರದ ಇಂದಿನ ಸಾಲ ಮನ್ನಾ ಕಾರ್ಯಕ್ರಮವನ್ನು ಸರಿಯಾಗಿ ಗಮನಿಸಿದ್ದೇ ಆದರೆ ಖಂಡಿತವಾಗಿಯೂ ಜನ ಹೀಗೆಯೇ ಅನ್ನಬಹುದು ಎಂದೆನ್ನಿಸುತ್ತದೆ! ಮತ್ತಿನ್ನೇನು, ಕೃಷಿ ಸಾಲ ತೆಗೆದುಕೊಂಡು ಅದ್ಯಾರು ಸಾಲವನ್ನು ಕಟ್ಟದೇ ಬ್ಯಾಂಕ್ ಮ್ಯಾನೇಜರನ್ನು ಈವರೆಗೆ ಸತಾಯಿಸುತ್ತಿದ್ದರೋ ಅವರುಗಳೇ ಇಂದು ಹೀರೋಗಳಂತಾಗಿದ್ದಾರೆ...

ಅಂಕಣ

ವಿಶ್ವಚೇತನ ಸ್ವಾಮಿ ವಿವೇಕಾನಂದರ ನೆನೆಯುತ್ತಾ…

ಧರ್ಮ! ಪ್ರಪಂಚದಲ್ಲಿ ಅತಿಯಾಗಿ ಚರ್ಚಿಸಲ್ಪಟ್ಟ ವಿಚಾರವೊಂದಿದೆ ಎಂದರೆ ಅದು ಧರ್ಮ. ಸನ್ನಡತೆ, ಸನ್ಮಾರ್ಗದ ಪಯಣ ಜೊತೆಗೆ ದೈವತ್ವದ ಅರಿವು ಕೊನೆಗೆ ಮೋಕ್ಷದ ಸಂಪಾದನೆ. ಇವಿಷ್ಟು ಧರ್ಮದ ಮೂಲ ಆಶಯಗಳು. ಇವುಗಳಿಗಾಗಿಯೇ ಬಹುತೇಕ ಧರ್ಮಗಳು ಮೈದಳೆದಿರುವುದು ಎಂದರೆ ತಪ್ಪಾಗದು. ಆದರೆ ಇಂದು ಧರ್ಮದ ಈ ಮೂಲ ಆಶಯಗಳು ಕಣ್ಮರೆಯಾಗಿ ಬರೇ ‘ತಾನು ಮೇಲು ತಾನು ಮೇಲು’ ಎಂಬ ವಿಚಾರ...

Featured ಅಂಕಣ

ಆರ್‍ಎಸ್‍ಎಸ್ ಒಂದು ದಲಿತ ವಿರೋಧಿಯೇ?

‘ಕೈಯಲ್ಲಿ ಕತ್ತಿ ಸುತ್ತಿಗೆ ಹಿಡಿದ ದಲಿತರು ಇಂದೂ ಕೂಡ ಹಾಗೆಯೇ ಇದ್ದಾರೆ, ಆದರೆ ಚೆಡ್ಡಿ ಹಾಕಿ ಶಾಖೆಗೆ ಬಂದವರು ರಾಷ್ಟ್ರಪತಿಯಾಗಿದ್ದಾರೆ. ಯಾರು ಇಲ್ಲಿ ದಲಿತೋದ್ದಾರಕರು!?’ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದ ಕ್ಷಣದಿಂದ ಇಂತಹುದೊಂದು ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಮೆಸೇಜ್ ಸಣ್ಣದಾದರೂ ಇದರೊಳಗಿರುವ ‘ಮೆಸೇಜ್’ ಮಾತ್ರ ನಿಜಕ್ಕೂ...

ಅಂಕಣ

ಕೊಳೆತು ನಾರುವ ಕಳೆಗಳನ್ನು ಕೀಳಿದರಷ್ಟೇ ಇಲ್ಲಿ ಶಾಂತಿ ನೆಲೆಯಾದೀತು

 ಹಾಗೇ ಸುಮ್ಮನೆ ಯೋಚನೆ ಮಾಡೋಣ. ಅಮೇರಿಕಾದ ಪ್ರಜೆಯೋರ್ವ ಅಲ್ಲಿ ಕುಳಿತುಕೊಂಡು ಐಸಿಸ್ ಭಯೋತ್ಪಾದಕರು ಅಮಾಯಕರು, ಅವರು ಭಯೋತ್ಪಾದಕರಲ್ಲ ಬದಲಾಗಿ ಸಿರಿಯಾ-ಇರಾಕ್‍ನ ಸಶಸ್ತ್ರ ಹೋರಾಟಗಾರರು ಅಷ್ಟೇ ಅಂದು ಬಿಟ್ಟರೆ ಆತನ ಪರಿಸ್ಥಿತಿ ಹೇಗಿರಬಹುದು? ಖಂಡಿತಾ ಆತನಿಗೆ ಜೀವನಪರ್ಯಂತ ಜೈಲೂಟವೇ ಗತಿಯಾಗಬಹುದು. ಅದೇ ರೀತಿ ಪಾಕಿಸ್ಥಾನದಲ್ಲಿ ಯಾರಾದರು ಕಾಶ್ಮೀರವು ಭಾರತಕ್ಕೆ...

ಅಂಕಣ

ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ತಾನೆ!?

ಆಕೆ ಅವಿವಾಹಿತೆ. ಅನೈತಿಕ  ಸಂಬಂಧ ನಡೆದದ್ದು ವರ್ಷದ ಹಿಂದೆ. ಇದೀಗ ಆಕೆಗೆ ಮಗುವಾಗಿದೆ. ಒಂಭತ್ತು ತಿಂಗಳು ಗರ್ಭ ಹೊತ್ತು ಕಳೆದ ಆಕೆ ಅಲ್ಲಿಯವರೆಗೂ ಮೌನವಾಗಿದ್ದು ಇದೀಗ  ಏಕಾಏಕಿ ಎಚ್ಚರಗೊಂಡು ಅತ್ಯಾಚರವೆಂದು ಕೇಸ್ ದಾಖಲಿಸಿದ್ದಾಳೆ!  ಸಾಲದಕ್ಕೆ ಸಂಭಂಧವೇ ಇಲ್ಲದ ಜಾತಿ ದೌರ್ಜನ್ಯದ ಕೇಸನ್ನೂ ಅದರ ಜೊತೆಗೆ ಸೇರಿಸಲಾಗಿದೆ! ಇದೀಗ ಇಲ್ಲಿ ಆಕೆಯ ಗರ್ಭಕ್ಕೆ ‘ಕಾರಣಕರ್ತನಾದ’...

ಅಂಕಣ

ಫ್ರೀಬೀಸ್‍ಗಳ ಬೆನ್ನು ಹತ್ತಿದೆ ನೋಡಿ ನಮ್ಮ ರಾಜಕಾರಣ

ಉಚಿತ ಪೆನ್ನು, ಪುಸ್ತಕ, ಲ್ಯಾಪ್‍ಟಾಪ್, ಟ್ಯಾಬ್, ಜೊತೆಗೆ ಉಚಿತ ಇಂಟರ್‍ನೆಟ್, ಮನೆಗೊಂದು ಕಲರ್ ಟಿವಿ, ರೇಷನ್ ಕಾರ್ಡ್‍ದಾರರಿಗೆ ಒಂದು ಮೊಬೈಲ್, ಮಹಿಳೆರಿಗೆ ಸೀರೆ-ರವಿಕೆ, ಇನ್ನುಳಿದಂತೆ ಕಡಿಮೆ ಬೆಲೆಗೆ ಇಡ್ಲಿ, ಹಾಲು, ಮೊಸರು, ನೂರು ಯುನಿಟ್‍ಗಳಷ್ಟು ಉಚಿತ ಕರೆಂಟ್, ಉಚಿತ ನೀರು, ಅಡುಗೆ ಮನೆಗೆ ಸಾನಿಟಿ ಕಿಟ್, ಮೆಲ್ಲುವುದಕ್ಕೆ ಕಡಿಮೆ ಬೆಲೆಗೆ ಕುರಿ-ಮೇಕೆ ಮಾಂಸ...

Featured ಅಂಕಣ

ದೇಶದ ಹಿತ ಅಡಗಿದೆಯೆಂದಾದರೆ ಇನ್ನಷ್ಟು ಕರಟಲೂ ಸಿದ್ಧ!

‘ಮನೆ ಮಠ ಸಂಸಾರವೆಂದು ನೀನ್ಯಾವತ್ತೂ ಯೋಚನೆ ಮಾಡುವ ಹಾಗಿಲ್ಲ. ರಾತ್ರೋರಾತ್ರಿ ನಿನ್ನ ರಜೆಯನ್ನು ಸರಕಾರ ಕಸಿದುಕೊಂಡು ವೃತ್ತಿಗೆ ಕರೆದರೂ ಅದನ್ನೂ ನೀನು ಪ್ರಶ್ನಿಸುವಂತಿಲ್ಲ. ನಿನಗೇನಿದ್ದರೂ ನಿನ್ನ ಬ್ಯಾಂಕೇ ಹೆಂಡತಿ, ಗ್ರಾಹಕರೇ ಮಕ್ಕಳು… ಸಮಯ ಸಂದರ್ಭ ಅಂತ ನೋಡದೆ, ರಜೆ ಮಜಾ ಅಂತ ಯೋಚಿಸದೆ ರಾತ್ರಿ  ಹಗಲು  ಸೇವೆ ಸಲ್ಲಿಸುವುದು ನಿನ್ನ ವೃತ್ತಿ ಧರ್ಮ’ ಹೀಗಂತ...

Featured ಅಂಕಣ

ಮೊದಲು ಈ ಯೋಚನೆ ಬದಲಾಗಬೇಕಿದೆ

ಸರ್ಜಿಕಲ್ ಸ್ಟ್ರೈಕ್! ಭಾರತದ ಸೈನಿಕರು ಪಾಕ್ ವಿರುದ್ಧ ಮುಗಿಬಿದ್ದು ನಡೆದ ಕಾರ್ಯಾಚರಣೆಯಿದು. ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳ ಸುರಿಮಳೆ.  ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಭಾರತ ನಡೆಯನ್ನು ಪ್ರಶಂಸಿಸಿ ಸಂದೇಶ ಕಳುಹಿದ್ದರು. ಅಷ್ಟೇ ಏಕೆ ಅಫ್ಘಾನ್, ಬಾಂಗ್ಲಾ ದೇಶದಂತಹ ಮುಸಲ್ಮಾನ ರಾಷ್ಟ್ರಗಳೂ ಕೂಡ ಭಾರತದ ನಡೆಯನ್ನು ಹೊಗಳಿ ಪಾಕ್‍ಗೆ ಸಡ್ಡು ಹೊಡೆಯಿತು...

Featured ಅಂಕಣ

ಒಂದು ಸಹ ಭೋಜನ ದಲಿತರನ್ನು ಬಲಿತರನ್ನಾಗಿಸೀತೆ?

ಇದೀಗ ಉಡುಪಿ ಮಠದ ಊಟದ ವಿಚಾರವು ಬಿರುಸಾದ ಚರ್ಚೆಯಲ್ಲಿದೆ. ಬ್ರಾಹ್ಮಣರ ಹಾಗೂ ಮಿಕ್ಕುಳಿದವರ ಮಧ್ಯೆ ಪಂಕ್ತಿಬೇಧವಿದೆ, ಇದು ಶೋಷಣೆಯ ಭಾಗ ಎಂಬುದು ವರ್ಗವೊಂದರ ಅಳಲು. ಪರಿಣಾಮ ‘ಉಡುಪಿ ಚಲೋ’ ಎಂಬ ಕಾರ್ಯಕ್ರಮವನ್ನು ದಲಿತ ಸಂಘಟನೆಯೊಂದು ಹಮ್ಮಿಕೊಂಡು ಉಡುಪಿ ಮಠದಲ್ಲಿ ಇರುವ ಪಂಕ್ತಿ ಬೇಧವನ್ನು ನಿಲ್ಲಿಸದೇ ಹೋದರೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಕೂಡ ನೀಡಿದೆ. ಈ...