ಇತ್ತೀಚಿನ ಲೇಖನಗಳು

ಕವಿತೆ

ನೀನಿರಬೇಕು..

ಕೊನೆಯೆಂದು ಇರದ ಪರದಾಟದಲ್ಲಿ ಕಳೆದೊದುದೆನೋ ಸಿಕ್ಕಂತೆ ಈಗ ನನಗಾರು ಎಂಬ ಹುಡುಕಾಟದಲ್ಲಿ ಸಿಗಬಾರದಿತ್ತೇ ನೀ ಸ್ವಲ್ಪ ಬೇಗ! ಮೊಗದಲ್ಲಿ ನಿನ್ನ ಸಿಹಿ ನಗುವ ತರುವ ನಾ ಸಣ್ಣ ನೆನಪಾಗಿ ಇರಲೆ ಇರುವೆಲ್ಲ ಸಮಯ ನಿನ್ನೊಡನೆ ಕಳೆವ ನೆಪವೆಲ್ಲ ನಾ ಹುಡುಕಿ ತರಲೆ! ಯಾರಲ್ಲೂ ಹೇಳಿರದ ನೂರಾರು ಮಾತು ನೀ ಕೇಳಬೇಕು ಜತೆಯಲ್ಲಿ ಕುಳಿತು ಒಂದಿಷ್ಟು ಮುನಿಸು ಒಂದಷ್ಟು ಒಲವು ನೀ ತೋರಬೇಕು...

ಪ್ರಚಲಿತ

ಸಂವೇದನೆ ಸತ್ತ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡೋಣ?

ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮೂರು ವರ್ಷಗಳನ್ನ ಪೂರೈಸಿಬಿಟ್ಟಿದೆ; ನುಡಿದಂತೆ ನಡೆದಿದ್ದೇವೆ ಎಂಬ ಬೋರ್ಡು ಹಾಕಿಕೊಂಡವರು ಮಾಡಿದ ಅವಾಂತರಗಳು ಜನರ ಮನದಲ್ಲಿರುವಾಗ, ಸಿಎಂ ಅದೇನೋ ಒಂದಷ್ಟು ಫಲಾನುಭವಿಗಳನ್ನು ಸೇರಿಸಿ ಕೆಲ ದಿನಗಳ ಹಿಂದೆ ಜನ-ಮನ ಕಾರ್ಯಕ್ರಮವನ್ನು ಕೂಡ ಮಾಡಿ ಮುಗಿಸಿಬಿಟ್ಟರು. ಸಾಕಷ್ಟು ಹಗ್ಗ-ಜಗ್ಗಾಟದ ಬಳಿಕ...

Featured ಅಂಕಣ

ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ……

“ನಾವು ಯಾರೂ ಕೂಡ ಜೀವಂತವಾಗಿಯೇ ಈ ಬದುಕಿನಿಂದಾಚೆ ಹೋಗುವುದಿಲ್ಲ. ಹಾಗಾಗಿ ಧೈರ್ಯಶಾಲಿಗಳಾಗಿರಿ, ವಿನಯಶೀಲರಾಗಿರಿ, ಉತ್ತಮರಾಗಿರಿ ಹಾಗೂ ಬದುಕಲ್ಲಿ ಸಿಕ್ಕಿದ ಅವಕಾಶಗಳಿಗೆ ಕೃತಜ್ಞರಾಗಿರಿ” ಹೈಸ್ಕೂಲ್ ಹುಡುಗನೊಬ್ಬ ತನ್ನ ಶಾಲೆಯ ಪ್ರೈಜ್ ಗೀವಿಂಗ್ ಸಮಾರಂಭದಲ್ಲಿ ಭಾಷಣ ಮಾಡಿದ್ದ. ಈ ಭಾಷಣವನ್ನು ಬರೆದುಕೊಂಡಾಗ ಬಹುಶಃ ಈ ಮಾತುಗಳ ಆಳ ಅತನಿಗೂ ತಿಳಿದಿರಲಿಲ್ಲವೇನೋ?! ಆದರೆ...

ಅಂಕಣ

ಎಂದೂ ಮರೆಯಲಾಗದ ನೆನಪುಗಳು

ಪ್ರತಿಯೊಬ್ಬರ ಜೀವನದಲ್ಲಿ ಮಾಧ್ಯಮಿಕ ಶಾಲಾ ಘಟ್ಟ ಅತ್ಯಂತ ಮಹತ್ವದ್ದು. ಹಂತ ಹಂತವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿ ವ್ಯಕ್ತಿತ್ವ ರೂಪಗೊಳ್ಳುವ ಸಮಯವಿದು. ಹದಿಹರೆಯದ ಎಲ್ಲ ಹುಡುಗ ಹುಡುಗಿಯರಿಗೆ ಯೌವ್ವನದ ಹೊಸ್ತಿಲಲ್ಲಿ ನಿಂತ ಹೊಸ ಅನುಭವ, ವಯೋ ಸಹಜವಾದ ಹುಚ್ಚು ಮನಸ್ಸಿನ ನೋರೆಂಟು ಆಸೆಗಳು ಮತ್ತು ತಮ್ಮದೇ ಆದ ಕಲ್ಪನಾ ಲೋಕದಲ್ಲಿ ಎಲ್ಲೆ ಇಲ್ಲದೇ ವಿಹರಿಸುವ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫ _______________________________ ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿವೆ ಮಾಸಿ | ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ || ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ | ತಳಮಳಿಸುತಿದೆ ಲೋಕ – ಮಂಕುತಿಮ್ಮ || ಪರಂಪರೆಯೆನ್ನುವುದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರಬೇಕಾದ ಅಮೃತ ರಸ – ಹಾಗೆ ಬರುವಾಗ...

ಅಂಕಣ

ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಷ್ಟೇ…..!

ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಿದೆ. ಸರ್ಕಾರದ ಸಾಧನೆಗಳು ಒಂದಾ ಎರಡಾ ,ಲೆಕ್ಕಮಾಡಲಾಗದಷ್ಟು . ನಾವು ಸಾಧಿಸಿದ್ದೇವೆ ಅಂತಾ ಸರ್ಕಾರವೇ ಜಂಬ ಕೊಚ್ಚಿಕೊಳ್ಳಬೇಕು ಹೊರತು,ಅದೇನು ಸಾಧನೇ ಮಾಡಿದೆಯೋ ಆ ದೇವರಿಗೂ ತಿಳಿದಿದೆಯೋ ಇಲ್ಲವೋ. ಅದೇನೆ ಇರಲಿ ಒಂದಷ್ಟು ನಮಗೆ ತಿಳಿಯದಂತಾ ಸಾಧನೆಗಳನ್ನು ಮಾಡಿರಬಹುದೇನೋ. ಆದರೆ ಅಭಿವೃದ್ಧಿ ಅನ್ನೋ ಪದದ ಅರ್ಥ ಮರೆತೇ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ