‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ಇವತ್ತು ಅರ್ಥ ಉಳಿದಿಲ್ಲ.ಬಹುತೇಕ ಜನರು ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವುದಿಲ್ಲ. ಬದಲಿಗೆ ಡಾಕ್ಟರ್’ಗಳೆಂದರೆ ದುಡ್ಡು ಸುಲಿಯುವವರು,ಆಸ್ಪತ್ರೆಗಳೆಂದರೆ ದರೋಡೆ ಮಾಡುವ ತಾಣ ಎಂಬ ನಂಬಿಕೆ ಜನರಲ್ಲಿ ಬೇರೂರತೊಡಗಿದೆ.ವೈದ್ಯರೂ ಕೂಡ ಮೊದಲಿನ ಹಾಗೆ ಈಗ ತಮ್ಮ ವೃತ್ತಿಯನ್ನು ಸೇವೆಯೆಂದು ಪರಿಗಣಿಸುತ್ತಿಲ್ಲ.ಕೋಟ್ಯಂತರ ರೂಪಾಯಿ...
Author - Lakshmisha J Hegade
ಕೆಂಪುಬಾವುಟದ ಖದೀಮರ ಮುಖವಾಡ ಕಳಚುವ ‘Buddha in a traffic jam’
“ಸಾಯುವ ಮೊದಲು ನನಗೊಂದು ಆಸೆಯಿದೆ.ದೆಹಲಿ,ಕಲ್ಕತ್ತಾ,ವಾರಣಾಸಿ,ಚೆನ್ನೈ,ಮುಂಬೈ ಮುಂತಾದ ನಗರಗಳ ಬೀದಿಗಳಲ್ಲಿ ಸಾವಿರಾರು ಕಾಮ್ರೇಡ್’ಗಳು ತಂಡೋಪತಂಡವಾಗಿ ‘ಲಾಲ್ ಸಲಾಂ’ ಎಂದು ಕೂಗುತ್ತ ಕೆಂಪು ಬಾವುಟ ಹಿಡಿದು ಮೆರವಣಿಗೆ ಮಾಡಬೇಕು.ಆಳುವ ಸರ್ಕಾರದ ಪ್ರತಿನಿಧಿಗಳ ಅಧಿಕಾರಶಾಹಿಯ ರಕ್ತ ಹೊರಚೆಲ್ಲಿ ನೆಲವೆಲ್ಲ ಕೆಂಬಣ್ಣಕ್ಕೆ ತಿರುಗಬೇಕು.ಕಾಮ್ರೇಡ್’ಗಳು ಆಡಳಿತ...
ಕನ್ನಡ ಚಿತ್ರರಂಗ ಬದಲಾಗಲು ಇದು ಪರ್ವಕಾಲ
ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಕನ್ನಡದಲ್ಲಿ ಕೆಲವೊಂದು ಹೊಸ ಅಲೆಯ ಸಿನಿಮಾಗಳು ಬಂದವು.ಅವುಗಳಲ್ಲಿ ಸ್ಟಾರ್ ನಟ-ನಟಿಯರಿರಲಿಲ್ಲ.ದೊಡ್ಡ ನಿರ್ದೇಶಕರಿರಲಿಲ್ಲ.ಭರ್ಜರಿ ಫೈಟ್ಸ್’ಗಳು,ಐಟಂ ಸಾಂಗ್’ಗಳು ಇರಲಿಲ್ಲ.ಬಿಡುಗಡೆಗೆ ಮುನ್ನ ಅವುಗಳಿಗೆ ಹೆಚ್ಚು ಪ್ರಚಾರವೂ ಸಿಗುತ್ತಿರಲಿಲ್ಲ.2013ರಲ್ಲಿ ಬಂದ ‘ಲೂಸಿಯಾ’ ದಿಂದ ಹಿಡಿದು ಮೊನ್ನೆ ಮೊನ್ನೆಯ ‘ರಾಮಾ ರಾಮಾ ರೆ’ ಗಳ ತನಕ...
‘ಸ್ವಚ್ಛ ಭಾರತ’ ಕೇವಲ ಕಲ್ಪನೆಯಾಗಿ ಉಳಿಯದಿರಲಿ
ಮೊನ್ನೆ ದೀಪಾವಳಿ ಹಬ್ಬದ ಒಂದು ದಿನ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮೈಸೂರಿನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಎಲ್ಲಿ ನೋಡಿದರೂ ಪಟಾಕಿಯ ಕಸ.ಪೌರ ಕಾರ್ಮಿಕಳೊಬ್ಬಳು ಆಗಲೇ ಬಂದು ಆ ಪಟಾಕಿಯ ಕಸವನ್ನೆಲ್ಲ ಬಾಚಿ ಗುಡಿಸುವುದರಲ್ಲಿ ನಿರತಳಾಗಿದ್ದಳು.ಅವಳು ಯಾವತ್ತೂ ಆರು ಗಂಟೆಗೆಲ್ಲ ರಸ್ತೆ ಗುಡಿಸಲು ಬಂದವಳೇ ಅಲ್ಲ.ಏನಿದ್ದರೂ ಬೆಳಿಗ್ಗೆ ಏಳುವರೆಯ ನಂತರ...
ಮಾಧ್ಯಮಗಳನ್ನು ಬೈಯ್ಯುವ ಮುಂಚೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ
ಇತ್ತೀಚೆಗೆ ಮಾಧ್ಯಮಗಳು ಮತ್ತು ಮಾಧ್ಯಮದ ಅಧ್ವರ್ಯುಗಳಾದ ಸಂಪಾದಕರುಗಳು ಪದೇ ಪದೇ ಜನರಿಂದ ಬೈಸಿಕೊಳ್ಳುತ್ತಿದ್ದಾರೆ.ಹುಚ್ಚ ವೆಂಕಟ್ ಗಲಾಟೆಯನ್ನು,ದರ್ಶನ್’ನ ಗಂಡ-ಹೆಂಡತಿ ಜಗಳವನ್ನು,ಶಿವರಾಜ್ ಕುಮಾರ್ ಮಗಳ ಮದುವೆಯ ನೇರಪ್ರಸಾರ ಮತ್ತು ಕಾವೇರಿ ಗಲಾಟೆಯ ಸಂದರ್ಭದಲ್ಲಿ ಮಾಧ್ಯಮದವರು ನಡೆದುಕೊಂಡ ರೀತಿಯನ್ನು ಬಹಳಷ್ಟು ಜನರು ವಿರೋಧಿಸಿದರು.ತೀರ ಇತ್ತೀಚಿನ ಲೇಟೆಸ್ಟ್...
ಚಾರಿತ್ರ್ಯ,ನೈತಿಕತೆಗಳ ಅರ್ಥವನ್ನು ವಿಶ್ಲೇಷಿಸುವ ‘ಪಿಂಕ್’
“The word `NO’ is not just a word. It itself is a sentence.NO means NO.it has a wide meaning.” ಈ ವಾಕ್ಯವನ್ನು ಹೇಳುವುದು ‘ಪಿಂಕ್’ ಸಿನಿಮಾದಲ್ಲಿ ಹಿರಿಯ ವಕೀಲ ದೀಪಕ್ ಸೆಹಗಲ್ ಪಾತ್ರ ಮಾಡಿರುವ ಅಮಿತಾಭ್ ಬಚ್ಚನ್. ಈ ಮಾತನ್ನು ಯಾವ ಸಂದರ್ಭದಲ್ಲಿ ಯಾಕಾಗಿ ಹೇಳಿದರು ಎಂಬುದಕ್ಕೆ ಉತ್ತರ ಶೂಜಿತ್ ಸಿರ್ಕಾರ್’ರ ‘ಪಿಂಕ್’ ಸಿನಿಮಾದಲ್ಲಿದೆ...
ಬಂದ್ ಹೆಸರಲ್ಲಿ ಹಿಂಸೆ ನಡೆಸಿ ಸಾಧಿಸಿದ್ದೇನು?
ದಿನಾಂಕ 12-09-2016 ನೇ ಸೋಮವಾರ ರಾಜ್ಯದ ಸುದ್ದಿ ವಾಹಿನಿಗಳಲ್ಲಿ `ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಕನ್ನಡದವರ ಮನೆ,ಅಂಗಡಿಗಳ ಮೇಲೆ ದಾಳಿ’ ಎಂಬ ಸುದ್ದಿ ಬಿತ್ತರವಾಗಲು ಶುರುವಾದ ಕೂಡಲೇ ಕಳೆದ ಶುಕ್ರವಾರ ಅಂದರೆ 8-9-2016ರಂದು ರಾಜ್ಯವ್ಯಾಪಿ ಬಂದ್ ಆಚರಿಸಿ ನಂತರ ತಕ್ಕಮಟ್ಟಿಗೆ ಶಾಂತವಾಗಿದ್ದ ರಾಜ್ಯ ರಾಜಧಾನಿ ಮತ್ತು ಮಂಡ್ಯ ಹೊತ್ತಿ ಉರಿಯತೊಡಗಿದವು...
ಸ್ವಾತಂತ್ರ್ಯ,ಸ್ವೇಚ್ಛೆ ಹಾಗೂ ಮೌಲ್ಯಗಳನ್ನು ಒರೆಗೆ ಹಚ್ಚುವ ‘ಕ್ಷಮೆ’
ಅವಳೊಬ್ಬಳು ಸಾಫ್ಟ್’ವೇರ್ ಇಂಜಿನಿಯರ್.ಗಂಡ ಮತ್ತು ಮುದ್ದಾದ ಮಗಳ ಸುಂದರ ಸಂಸಾರವಿದೆ ಆಕೆಗೆ.ಗತಿಸಿ ಹೋದ ತಾಯಿಯ ನೆನಪಿನಲ್ಲೇ ಅಮ್ಮನ ಸಾವಿಗೆ ಪರೋಕ್ಷವಾಗಿ ಕಾರಣವಾದ ತನ್ನ ಅಪ್ಪನನ್ನೂ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ.ಹೆಸರು ಪಲ್ಲವಿ.ಉದ್ಯೋಗದ ಕಾರಣದಿಂದ ವಿದೇಶಗಳಿಗೂ ಹೋಗಬೇಕಾಗಿ ಬರುತ್ತದೆ.ಸದಾ ಅವಳ ಬೆನ್ನುಲು ಬಾಗಿರುವ ಗಂಡ ರಘು ಏನೂ ಕ್ಯಾತೆ ತೆಗೆಯದೇ ಅವಳು...
`ರುಸ್ತುಂ’ ಎಂಬ Judicial thriller
ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದು ಅಷ್ಟೊಂದು ಸುಲಭವಲ್ಲ.ಸ್ವಲ್ಪ ಏರುಪೇರಾದರೂ ತನಗೆ ನೋವಾಗುವಂತೆ,ಅವಮಾನವಾಗುವಂತೆ ತೋರಿಸಿದ್ದಾರೆ ಎಂದು ನಿರ್ದೇಶಕರನ್ನು ಆ ವ್ಯಕ್ತಿ ಬಯ್ಯಬಹುದು.ಹಾಗಂತ ನೇರಾನೇರ ಆ ಘಟನೆಯನ್ನೇ ತೆರೆಯ ಮೇಲೆ ತಂದರೆ ಅದು ವೀಕ್ಷಕರಿಗೆ ರುಚಿಸದೇ ಇರಬಹುದು.ಭಾರತೀಯ ನೌಕಾಪಡೆಯ ನಿವೃತ ಅಧಿಕಾರಿ ಕೆ.ಎಮ್...
ರಾಜನಿದ್ದೂ ಅರಾಜಕತೆಯತ್ತ ಸಾಗಿದೆ ಕರ್ನಾಟಕದ ರಾಜಕೀಯ
ಇತ್ತೀಚೆಗಷ್ಟೇ ಸಿದ್ಧರಾಮಯ್ಯನವರು ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರದ ಕೆಲವು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹಲವು ಘಟನೆಗಳು ಸಂಭವಿಸಿದವು.ಆ ಘಟನೆಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದರಿಂದ ಆಡಳಿತ ಪಕ್ಷದ ಮೇಲೆ ಹಲವರು ಸಿಡಿಮಿಡಿಗೊಂಡರು.ತಮ್ಮ ನಾಯಕರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದಕ್ಕೆ ರೊಚ್ಚಿಗೆದ್ದ ಅವರುಗಳ ಬೆಂಬಲಿಗರು ರಾಜ್ಯದ ನಾನಾ ಕಡೆಗಳಲ್ಲಿ...