ಅಂಕಣ

ಉತ್ತರ ಭಾರತೀಯರಿಗೆ ಬೆಂಗಳೂರು ಆಕ್ಷಯ ಪಾತ್ರೆಯಂತೆ

ಎಲ್ಲರಿಗೂ ನಮಸ್ಕಾರ, ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸ೦ಗ ಮಾಡುತ್ತಿದ್ದೇನೆ. ನನ್ನ ಸ್ವಂತ ಊರು ದಾವಣಗೆರೆ ಆದರೆ ಬೆಂಗಳೂರಿಗೆ ಬಂದು ಒಂದುವರ್ಷದ ಮೇಲಾಯ್ತು. ನಿನ್ನೆ ಬೆಳೆಗ್ಗೆ ಕ್ಷೌರಕ್ಕೆಂದು ಸಲೂನ್ ಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಅದೇನೆಂದರೆ ಆ ಅಂಗಡಿ ನಮ್ಮ ಕಾಲೇಜ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ತೆರೆದಿತ್ತು,ಅಲ್ಲಿ ಕೆಲಸ ಮಾಡುವವರನ್ನು ಹೊರಗಿನಿಂದ ನೋಡಿದಾಗ ನಮ್ಮ ಕನ್ನಡದವರೇ ಎಂದುಕೊಂಡಿದ್ದೆ. ಆದರೆ ನಿನ್ನೆ ಅದರ ಹೊಳಹೊಕ್ಕಾಗಲೇ ಗೊತ್ತಾಗಿದ್ದು ಅಲ್ಲಿರುವವರು ಉತ್ತರ ಭಾರತೀಯರೆಂದು. ಆಸಲೂನ್ ಗೆ ಮೊದಲ ಬಾರಿ ಹೋದದ್ದರಿಂದ ಅಲ್ಲಿನ ಬೆಲೆಗಳು ನನಗೆ ಗೊತ್ತಿರಲಿಲ್ಲ ಅದಕ್ಕೆ ಮೊದಲು ಕ್ಷೌರಕ್ಕೆ ಎಷ್ಟು ತಗೋತೀರೀ ಎಂದೆ, ಆವಾಗಾ ಆಸಾಮಿ “ಸರ್ ಕನ್ನಡ್ ನಹೀ ಆತಾ” ಎಂದು ಮಾಮೂಲಿ ಎಲ್ಲ ಹೊರ ರಾಜ್ಯದವರು ಹೇಳುವ ರೀತಿಯಲ್ಲೇ ಹೇಳಿದ.. ಎಲಾ ಇವನಾ ಕರ್ನಾಟಕದಲ್ಲಿ cutting, shaving ಮಾಡುವುದಕ್ಕೂ ಇವರು ಬಂದುಬಿಟ್ಟರಾ ಎಂದು ಮನಸಿನಲ್ಲಿಯೇ ಅಂದುಕೊಂಡೆ. ಕ್ಷೌರವೆಲ್ಲಾ ಮುಗಿದ ಮೇಲೆ ನಿನ್ನದು ಯಾವ ಊರು ಎಂದೆ ಅದಕ್ಕೆ ಅವನು ಸರ್ ಬಿಹಾರ ಎಂದು ನಾನು ಮೊದಲೇ ಎಣಿಸಿದಂತೆ ಹೇಳಿದ. ಅವನ ಬಾಸ್ ನನ್ನು ವಿಚಾರಿಸಿದೆ, ಅರೇಅವನು ನಮ್ಮ ಬೆಂಗಳೂರಿನವನೇ !! ನಿನಗೆ ಇಲ್ಲಿ ಯಾರು ಕೆಲಸಕ್ಕೆ ಸಿಗಲಿಲ್ಲವಾ, ಅಲ್ಲಾ ಹೋಗೀ ಹೋಗೀ ಬಿಹಾರದಿಂದ ಕೆಲಸಕ್ಕೆ ಕರೆದುಕೊಂಡು ಬಂದಿದ್ದೀಯಲ್ಲಾ ಎಂದರೆ, ಸರ್ ನಮ್ಮವರುಯಾರು ಕೆಲಸಕ್ಕೆ ಸಿಗುವುದಿಲ್ಲಾ, ಸಿಕ್ಕರೂ ಹೆಚ್ಚು ಸಂಬಳ ಕೇಳುತ್ತಾರೆ ಅದಕ್ಕೆ ಇವನನ್ನು ಕೆಲಸಕ್ಕೆ ಸೇರಿಸಿಕೊಂಡೆ ಎಂದು ಸಮಜಾಯಿಷಿ ಕೊಟ್ಟ.

ನಮಗೆ ಗೊತ್ತಿರುವ ಹಾಗೆ ಮೊದಮೊದಲು ಮಾರ್ವಾಡಿಗಳು ಚಿನ್ನ-ಬೆಳ್ಳಿ ವ್ಯಾಪಾರ ಮಾಡಿಕೊಂಡು ಇಲ್ಲಿದ್ದರು. ನಂತರ ನಾವೆಲ್ಲಾ ಬಾಯಿ ಚಪ್ಪರಿಸುವ ಪಾನೀಪೂರಿ, ಗೋಬಿ ಹಾಗೂಗೋಲ್ಗಪ್ಪಗಳನ್ನು ನಮಗೆ ಉಣಬಡಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುಲು ಬಂದರು. ತೀರ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಯಾವುದೇ ಪ್ಲಾಸ್ಟಿಕ್ ಅಂಗಡಿ, ಮಸಾಲೆ ಪದಾರ್ಥ ಅಂಗಡಿ, ಫ್ಯಾನ್ಸಿ ಸ್ಟೋರ್ಸ್ಎಲ್ಲಿ ನೋಡಿದರೂ ಇವರದೇ ಕಾರುಬಾರು. ಇನ್ನು ಬೆಂಗಳೂರಿನ ವಿಷಯಕ್ಕೆ ಬರುವುದಾದರೆ IT-BT ಯಲ್ಲಿ ಕೆಲಸ ಮಾಡುವ ಮುಕ್ಕಾಲು ಭಾಗ ಜನ ಹೊರ ರಾಜ್ಯದವರು. ಒಂದೇ ಮಾತಿನಲ್ಲಿಹೇಳಬೇಕೆಂದರೆ ತನ್ನನ್ನು ನಂಬಿಕೊಂಡು ಬರುವ ಎಲ್ಲರ ಹೊಟ್ಟೆತುಂಬಿಸುತ್ತಿದೆ ನಮ್ಮ ಬೆಂಗಳೂರು, ಅದಕ್ಕೇ ಬೆಂಗಳೂರು ಉತ್ತರ ಭಾರತೀಯರ ಪಾಲಿಗೆ ಅಕ್ಷಯ ಪಾತ್ರೆಯಂದಿದ್ದು..

ಅವರ ಮೇಲೆ ನನಗೆ ಯಾವುದೇ ಬೇಸರವಿಲ್ಲ ಯಾಕಂದರೆ ನಾನೂ ಹಾಗೂ ನನ್ನಂತಹ ಎಷ್ಟೋ ಕನ್ನಡಿಗರೇ ಹೊಟ್ಟೆಪಾಡಿಗಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ವಲಸೆಬಂದಿದ್ದೇವೆ ಹಾಗಾಗಿ ಅವರೂ ಸಹ ನಮ್ಮಂತೆಯೆ. ಇಲ್ಲಿ ಬೇಸರದ ಸಂಗತಿಯಂದರೆ ಇತ್ತೀಚಿಗೆ ಕೆಲವು ಹೊರ ರಾಜ್ಯದವರು ಇಲ್ಲೇ ಇದ್ದುಕೊಂಡು ಇಲ್ಲೇ ಜೀವನ ಸಾಗಿಸುತ್ತಾ ಇಲ್ಲಿನ ನೆಲ, ಜಲ,ಭಾಷೆಯನ್ನು ಹೀಯಾಳಿಸುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ Say No To Kannada ಎನ್ನುವಂತಹ ಹಲವು ಪೇಜ್ ಗಳನ್ನು ತೆರೆದು ಕನ್ನಡಿಗರನ್ನು ಕನ್ನಡವನ್ನುಅವಮಾನಿಸುತ್ತಿದ್ದಾರೆ. ಕೆಲವು ಕೆಟ್ಟ ಮನಸ್ಸುಗಳ ಇಂತಹ ಕೆಲಸಗಳಿಂದ ಕನ್ನಡಿಗರೂ ಮತ್ತು ಬೇರೇ ರಾಜ್ಯದ ವಲಸಿಗರ ನಡುವೆ ಇದ್ದ ಪ್ರೀತಿ ಮಾಯವಾಗುತ್ತಿದೆ. ಹಾಗಾಗುವುದು ಬೇಡ ಎಂದುಆಶಿಸುತ್ತಾ ನನ್ನ ಈ ಪುಟ್ಟ ಲೇಖನವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ— ಜೇ ಕನ್ನಡಾಂಬೆ, ಜೈ ಭಾರತಾಂಬೆ

  • Swamy JS

swamyjrs@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!