ಅಂಕಣ

‘ನಾಳೆ’ ಎಂಬ ಬಣ್ಣದ ಚಿಟ್ಟೆ…

ನಮ್ಮ ಬದುಕನ್ನು ಪ್ರವೇಶಿಸಿರದ, ಆದರೂ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ, ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಹಂಬಲಿಸುವ ಭವಿಷ್ಯದ ತುಣುಕಿನ ಚಿತ್ರಣವೇನಾಳೆ‘. ಜೀವನ ಪಯಣದಲ್ಲಿನಾಳೆನಮಗಿಂತ ತುಸು ಮುಂದೆ ಇದ್ದು ನಮ್ಮೊಂದಿಗೆ ಸಾಗುತ್ತದೆ. ಅದು ನೂರು ಕನಸುಗಳ ಬಣ್ಣ ಮೆತ್ತಿಕೊಂಡು ಹಾರುವ ಚಿಟ್ಟೆಯಂತೆ. ಇನ್ನೇನು ನಾವು ನಾಳೆ ಚಿಟ್ಟೆಯನ್ನು ತಲುಪಿಯೇ ಬಿಟ್ಟೆವು ಎನ್ನುವಾಗ, ಇನ್ಯಾವುದೋ ಹೊಸ ಕನಸುಗಳ ರೂಪ ತಳೆದು ಮುಂದೆ ಹಾರಿರುತ್ತದೆ

            ನಾಳೆಗಳು ಎಂದಿಗೂ ಸುಂದರ. ಕಾರಣವೇನೆಂದರೆ ನಾವು ಸಾಮಾನ್ಯವಾಗಿನಾಳೆಗಳಲ್ಲಿ ಒಳಿತನ್ನೇ ಕಲ್ಪಿಸುತ್ತೇವೆ. ‘ನಾಳೆನಮಗೆ ಒಳ್ಳೆಯದಾಗುತ್ತದೆ, ನಮ್ಮ ಬದುಕು ಇನ್ನೂ ಸುಂದರವಾಗುತ್ತದೆ ಎಂದು ಹಂಬಲಿಸುವುದರಲ್ಲೇ ನಮ್ಮ ಇಂದಿನ ನೆಮ್ಮದಿ ಅಡಗಿರುವುದು. ನಾಳೆಯ ನಂಬಿಕೆಯ ಆಳ ಎಷ್ಟರ ಮಟ್ಟಿಗಿರುತ್ತದೆ ಎಂದರೆ ಆಧುನಿಕ ಶರಶಯ್ಯೆ ಎನಿಸಿಕೊಂಡಿರುವ ICUವಿನಲ್ಲಿ ಮಲಗಿರುವ ಒಬ್ಬ ವ್ಯಕ್ತಿಯ ಜೀವಿತದ ಕುರಿತು ಆತನ ಚಿಕಿತ್ಸೆ ನಡೆಸುತ್ತಿರುವ ವೈದ್ಯರೇ ಆಸೆ ಬಿಟ್ಟು ಕುಳಿತಿದ್ದರೂ ಆತನನ್ನು ಪ್ರೀತಿಸುವ ಜೀವಗಳು ಮಾತ್ರನಾಳೆಆತ ಹುಷಾರಾಗಿ ಮತ್ತೆ ಮೊದಲಿನಂತಾಗಬಹುದು ಎಂದೇ ಹಂಬಲಿಸುತ್ತಾರೆ. ಇದಲ್ಲವೇನಾಳೆಗಳ ಮೇಲಿರುವ ನಂಬಿಕೆಯ ಶಕ್ತಿ. ಅಂತಹನಾಳೆಇರದಿದ್ದರೆ ಬದುಕು ಸಾಧ್ಯವೇ? ಖಂಡಿತಾ ಇಲ್ಲ ಅನಿಸುತ್ತದೆ ನನಗೆ. ‘ನಾಳೆಬದುಕಿಗೊಂದು ಪ್ರೇರಕ ಶಕ್ತಿ. ಪ್ರಸ್ತುತ ನಾವು ಬಯಸಿಯೂ ಸಿಗದ ಹಲವು ಕನಸಿನ ಬಣ್ಣಗಳನ್ನು ನಮಗೆ ನಾವೇ ಮೆತ್ತಿಕೊಂಡು ನಿಂತಂತೆ ಕಲ್ಪಿಸಿಕೊಳ್ಳುವ ಸುಂದರ ಕಲ್ಪನೆಯ ಅಮೂರ್ತ ರೂಪವೇನಾಳೆ‘. ನಮ್ಮೆದೆಯ ಆಳದಲ್ಲಿ ಹುದುಗಿರುವ ಆಸೆಗಳು ಕೈಗೂಡಿದಾಗ ನಾವು ಹೇಗಿರಬಹುದು ಎಂಬುದನ್ನು ನಮಗೆ ದರ್ಶಿಸುವ ಬಣ್ಣದ ಪರದೆ ನಾಳೆ‘. ಮೂಲಕ ಆಸೆಗಳನ್ನು ನಮ್ಮ ಗುರಿಯಾಗಿಸಿ ನಮ್ಮನ್ನು ಗುರಿಯತ್ತ ಸಾಗಲು ಅಣಿಗೊಳಿಸುವ ಒಂದು ಅಗೋಚರ ಶಕ್ತಿಯಂತೆ ಬಿಂಬಿತವಾಗುತ್ತದೆ

             ಚಿಕ್ಕವರಿರುವಾಗ ಒಂದನೇ ತರಗತಿಯಲ್ಲಿ ಉತ್ತೀರ್ಣರಾದರೆ ಸೈಕಲ್ ತೆಗೆಸಿಕೊಡುತ್ತೇನೆ ಎಂದು ಮನೆಯವರು ತೋರಿಸುವ ನಾಳೆಗಳ ಆಮಿಷಕ್ಕೆ ಪ್ರೇರೆಪಿತರಾಗಿ ಖುಷಿಯಿಂದ ಓದುತ್ತಿದ್ದ ದಿನಗಳಿಂದನಾಳೆ ಇನ್ಸೆಂಟಿವ್ ಗೋಸ್ಕರ ಹಗಲುರಾತ್ರಿ ದುಡಿಯುವ ಇಂದಿನ ಸಾಫ್ಟವೇರ್ ಬದುಕಿನವರೆಗೆ ಎಲ್ಲವೂನಾಳೆಗಳಿಂದ ಪ್ರೇರೇಪಿತ. ೯೮ರ ಹರೆಯದ ಅಜ್ಜಿಯೊಬ್ಬಳು  ತನ್ನ ಗರ್ಭಿಣಿ ಮೊಮ್ಮಗಳುನಾಳೆಜನ್ಮ ನೀಡಲಿರುವ ಮರಿಮಗಳ ಕಾಣುವ ಹಂಬಲದಲ್ಲಿ ಸಾವನ್ನು ಕೂಡ ಮುಂದೂಡುತ್ತ ಕಾಯುವಷ್ಟರ ಮಟ್ಟಿಗೆ ಆಸೆಗಳನ್ನು ಅಂಕುರಿಸುತ್ತವೆ ನಾಳೆಗಳು.  

                   ನಿಜ. ‘ನಾಳೆಅಂದರೇನೆ ಆಸೆ. ‘ನಾಳೆಅಂದರೆ ಕಾತರ, ‘ನಾಳೆಅಂದರೆ ಕುತೂಹಲ. ‘ನಾಳೆಗೆ ಕೊನೆ ಎಂಬುದಿಲ್ಲ. ಬದುಕು ಕೊನೆಯಾಗಬಹುದು. ಆದರೆನಾಳೆಗಳು ಕೊನೆಯಾಗಲಾರವು. ತಾಯಿಯೊಬ್ಬಳು ಸತ್ತಾಗ ಸಹಜವಾಗೇ ಮಗನಾದವನು ಇನ್ನಿಲ್ಲದಂತೆ ರೋಧಿಸುತ್ತಾನೆ. ತಾಯಿಯ ಅಗಲಿಕೆಯ ದುಃಖ ಎಲ್ಲದಕ್ಕಿಂತ ದೊಡ್ಡದು. ಮಾತೃವಾತ್ಸಲ್ಯಕ್ಕಿಂತ ಹೆಚ್ಚಿನದು ಭೂಮಿಯಲ್ಲಿ ಯಾವುದಿದೆ ಅಲ್ಲವೇ. ಹಾಗೆಂದು ತಾಯಿಯನ್ನು ಮತ್ತೆ ಕರೆತರಲು ಆತನಿಗೆ ಶಕ್ಯವಿಲ್ಲ. ಆಗ ಅವನನ್ನು ಸಂತೈಸಲು ಮುಂದಾಗುವುದು ನಾಳೆ‘. ‘ನಾಳೆತನ್ನ ತಾಯಿ ನನ್ನ ಮಗಳಾಗಿ ನನ್ನನ್ನು ಮತ್ತೆ ಸೇರಬಹುದೇನೋ ಎಂಬೊಂದು ಹಂಬಲ ಅವನನ್ನು ಅವನೇ ಸಂತೈಸಿಕೊಳ್ಳಲು ಸಹಕರಿಸುತ್ತದೆ. ಅದೆಷ್ಟು ಸುಂದರ ಅಲ್ಲವೇ ಕಲ್ಪನೆ. ಶಾಶ್ವತವಾಗಿ ಕಳೆದುಹೋಗಿರುವ ವ್ಯಕ್ತಿಗಳನ್ನು ಕೂಡ ಇನ್ನೆಲ್ಲೋ, ಇನ್ಯಾವುದೋ ರೂಪದಲ್ಲಿ ಕಾಣಬಹುದೇನೋ ಎನ್ನುವ ಹಂಬಲಕ್ಕೆ ಇಂಬು ಕೊಡುವನಾಳೆಗಳಿಗೆ ಧನ್ಯವಾದ ಹೇಳಲೇಬೇಕು. ಪ್ರಿಯ ಗೆಳತಿಯೊಬ್ಬಳು ಏನೋ ಭಿನ್ನಾಭಿಪ್ರಾಯಗಳಿಂದ ಮುನಿಸಿಕೊಂಡು ಮಾತು ಬಿಟ್ಟಿದ್ದರೆ, ಒಂದಲ್ಲ ಒಂದುನಾಳೆಆಕೆ ನಮ್ಮನ್ನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು  ಮತ್ತೆ ಮಾತನಾಡುತ್ತಾಳೆ ಎಂದು ಕಾತರಿಸುವುದುಆಕೆಗೆ ಸಮಜಾಯಿಷಿ ನೀಡಲು ಹೋಗಿ ಪರಿಸ್ತಿತಿಯನ್ನು ಇನ್ನಷ್ಟು ಹದಗೆಡಿಸುವುದಕ್ಕಿಂತ ಮೇಲು. ಕಾತರ ನಿಜವಾಗುವುದೋ ಇಲ್ಲವೋ ತಿಳಿಯದು. ಆದರೆ ಆಗಲೇ ಹೇಳಿದಂತೆನಾಳೆಗಳಿಗೆ ಕೊನೆಯಿಲ್ಲ. ಅಂತೆಯೇ ‘ನಾಳೆಗಳಿಗಾಗಿ ಕಾಯುವ ಕಾತರಕ್ಕೂ ಕೊನೆಯಿಲ್ಲ. ಹಾಗಾಗಿ ಅಲ್ಲಿ ನಿರಾಶೆಗೂ ಆಸ್ಪದವಿಲ್ಲ

              ‘ನಾಳೆಗಳು ಎಂದಿಗೂ ಒಳಿತಾಗಿರುತ್ತವೆ ಎಂಬ ಮಾನವನ ಬಲವಾದ ನಂಬಿಕೆಗೆ ಉತ್ತಮ ಉದಾಹರಣೆ ೨೦೧೨ರ ಪ್ರಳಯದ ಕುರಿತ ವರದಿಗಳು. ‘ನಾಳೆಜಗತ್ತು ಅಂತ್ಯವಾಗಲಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ಬಾಯಿ ಬಡಿದುಕೊಂಡವು. ಆದರೂ ಮಾನವನಾಳೆ ಬಗೆಗೆ ಒಳ್ಳೆಯದನ್ನೇ ಯೋಚಿಸಿದ. ‘ನಾಳೆಗಳನ್ನು ನಂಬಿದ. ಕೊನೆ ಕ್ಷಣದವರೆಗೂ ತನ್ನ ಕಾಯಕಗಳನ್ನು ಮಾಡುತ್ತಲೇ ಇದ್ದ. ಅಂತೆಯೇ ಜಗತ್ತು ಎಂದಿನಂತೆ ಮುಂದುವರಿದಿತ್ತು. ‘ಪ್ರಳಯ ಕುರಿತಾದನಾಳೆಗಳುನಿನ್ನೆಗಳಾಗಿದ್ದವು. ಮಾನವ ಇನ್ನಷ್ಟು ಸುಂದರನಾಳೆಗಳನ್ನು ಹೆಣೆಯತೊಡಗಿದ್ದ

                ಎಲ್ಲ ವಿಚಾರಗಳೊಂದಿಗೆ ಇನ್ನೊಂದು ಮಾತು ಕೂಡ ಸತ್ಯ. ಅದೇನೆಂದರೆ ಮೇಲಿನ ಎಲ್ಲ ವಿಚಾರಸರಣಿಗಳು ಬದುಕನ್ನು ಪ್ರೀತಿಸುವವರಿಗೆ ಮಾತ್ರ ಅನ್ವಯವಾಗುತ್ತದೆ. ಯಾವುದರಲ್ಲೂ, ಯಾರಲ್ಲಿಯೂ ನಂಬಿಕೆಯೇ ಇಲ್ಲದೇ ಬದುಕುವ ಜಡಜೀವಗಳಿಗೆ ಇದು ಸಂಬಂಧವಿಲ್ಲದ್ದು. ಹಾಗೆಯೇ ಇಂದಿನ ಕಾಯಕಗಳನ್ನು ಬಿಟ್ಟು ಕೈ ಕಟ್ಟಿ ಕೂತು ನಾಳೆಗಳಿಗಾಗಿ ಕಾಯುವವರಿಗೂ ಸಹನಾಳೆಎಂಬ ಬಣ್ಣದ ಚಿಟ್ಟೆಯ ಸನಿಹ ಸಿಗಲಾರದು. ‘ನಾಳೆಗಳಲ್ಲಿ ನಂಬಿಕೆ ಇಟ್ಟು ಅವುಗಳನ್ನು ಸುಂದರವಾಗಿ ಕಲ್ಪಿಸಿ ಕಲ್ಪನೆಯ ಬಣ್ಣದ ಚಿಟ್ಟೆಯ ಬೆನ್ನು ಹತ್ತಿದರೆ ಮಾತ್ರ ಜೀವನಪಯಣದಲ್ಲಿ ಸುಂದರ ಹೂದೋಟದ ಸುತ್ತಾಟದ ಅವಕಾಶ ಸಿಗಲು ಸಾಧ್ಯ. ಅದನ್ನು ಬಿಟ್ಟುನಾಳೆಎಂಬ ಬಣ್ಣದ ಚಿಟ್ಟೆ ತಾನಾಗೆ ಬಂದು ಭುಜದ ಮೇಲೆ ಕೂರಲಿ ಎನ್ನುವವರಿಗೆ ಅವರ ಬದುಕಿನ ನಿರ್ಗಮನದ ಸಮಯದವರೆಗೂ ಹೊರಟ ಸ್ಥಳದಲ್ಲೇ ಕಾಯುವುದೊಂದೇ ಭಾಗ್ಯವಾಗಬಹುದು

            ಹಾಗಾಗಿ ಬದುಕಿನ ಧಾರಾವಾಹಿಯನಾಳೆ ಸಂಚಿಕೆಯನ್ನು ನಮ್ಮದೇ ರೀತಿಯಲ್ಲಿ ಚಿತ್ರಿಸುತ್ತಾ, ಮುಂದೆ ಅದಕ್ಕಾಗಿ ಕುತೂಹಲದಿಂದ ನಿರೀಕ್ಷಿಸುತ್ತಾ, ಇಂದಿನ ಪ್ರತಿ ಕ್ಷಣವನ್ನು ನಾಳೆಯ ಕನಸುಗಳ ಸಾಕಾರೆದೆಡೆಗೆ ವ್ಯಯಿಸುತ್ತಾ ಬಣ್ಣದ ಚಿಟ್ಟೆಯನ್ನು ಹಿಡಿಯುವತ್ತ ಕೈಚಾಚೋಣ

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!