ಅರೆ ಮಲೆನಾಡಿನ ಸುಂದರ ತಾಣವದು. ಸುತ್ತಲೂ ಹಸಿರು. ಹಸಿರಿನ ನಡುವೆ ಹಸಿರಾಗಿ ನಿಂತಿರುವ ಸುಂದರ ಬೆಟ್ಟ. ಬೆಟ್ಟದ ಮೇಲೂಂದು ದುರ್ಗಾಂಬಿಕೆಯ ಮಂದಿರ. ಬೆಳಗ್ಗೆ ಎದ್ದೊಡನೆ ಬೆಟ್ಟ ಏರಿದರೆ ಸಾಕು ಕವಿತೆ ಗೀಚಲು ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಸ್ವಲ್ಪ ಹೊತ್ತು ಆರೋಗ್ಯಕ್ಕಾಗಿ ಅಲ್ಲೇ ತಾಲೀಮು ನಡೆಸಿ ಆಮೇಲೆ ಕವಿತೆಯನ್ನು ಬರೆಯಲು ದಿಬ್ಬದ ಕಲ್ಲಿನ ಮೇಲೆ ಕುಳಿತೆ...
ಇತ್ತೀಚಿನ ಲೇಖನಗಳು
ಭಾವತೋಟದಲ್ಲಿ ಅರಳಿ ಮೆರೆದ ಆಶಾಲತಾ
ಬರೋಬ್ಬರಿ ಇಪ್ಪತ್ತೈದು ಸಾವಿರ ಹಾಡುಗಳು ಅಥವಾ ಇನ್ನೂ ಹೆಚ್ಚಿರಬಹುದು. ಭಕ್ತಿಗೀತೆ, ಭಾವಗೀತೆ, ಹಾಗು ಚಿತ್ರಗೀತೆಗಳು. ರಾಗ, ತಾಳ, ಶ್ರುತಿಗಳ ಸೂಕ್ತ ಮಿಶ್ರಣದಿಂದ ಹಾಗು ಕೋಗಿಲೆಯೂ ಅಸೂಯೆಪಡುವಂತಹ ಇಂಪಾದ ಸ್ವರಗಳಿಂದ ಮೂಡಿದ ಹಾಡುಗಳಿವು. ಸೈನಿಕನ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸುವುದರಿಂದ ಹಿಡಿದು, ನಟನೆಯ ಮೂಲಕವೂ ಸಾಧ್ಯವಾಗದ ಭಾವಗಳನ್ನು ಪ್ರೇಕ್ಷಕನ ಚಿತ್ತದಲ್ಲಿ...
ಪಾರಿ ಭಾಗ-೧೨
“ನಿಮ್ ಗೌಡನ್ ಮನಿಗೆ ನಾವ್ಯಾಕ ಬರ್ಬೆಂಕತ? ನಮ್ ಪಾರಿ ಒದ್ದಾಡಿದ್ ಸಾಕ್ ಹೋಗು..ನಾವ್ಯಾರ್ ಮನಿಗೂ ಬರಲ್ಲ..ನಿಮ್ ಗೌಡಗ ಹೇಳ್ ಹೋಗ ಬಿಕನಾಸಿ..ನಾವ್ ಬರಲ್ಲಂತ…ಇನ್ನ ಗೌಡ ಈ ಕಡಿ ತೆಲಿ ಹಾಕಿದ ಅಂದ್ರ ಆಗುದ ಬ್ಯಾರೆ..ಎಷ್ಟಂತ ತಡ್ಕೊಳೋನು. ಹೋಗ ಭಾಡ್ಯಾ..ಬಂದ್ಬಿಟ್ಟ ಕರಿಯಾಕ..!!” ಎಂದು ಗೌಡರ ಆಳು ಮರಿಯಪ್ಪನನ್ನು ಮಲ್ಲವ್ವ ತರಾಟೆಗೆ...
ಸವಾಲುಗಳಿಗೇ ಸವಾಲೊಡ್ದಿದ ಆರೋನ್..!
“ನೋ..ನೋ.. ನನಗೆ ನೋವಾಗುತ್ತದೆ, ಬೇಡ” ಎಂದು ಆಸ್ಪತ್ರೆಯಲ್ಲಿ ಮಲಗಿದ್ದ ಒಂಭತ್ತು ವರ್ಷದ ಹುಡುಗ ಕೂಗಾಡುತ್ತಿದ್ದ. ಡಾಕ್ಟರ್ ಹಾಗೂ ನರ್ಸ್ ಆತನ ಪಕ್ಕ ಅಸಹಾಯಕರಾಗಿ ನಿಂತಿದ್ದರು. ಆಪರೇಷನ್ ಆಗಿ ಹಲವು ದಿನ ಕಳೆದ ನಂತರ ಹೊಲಿಗೆ ಬಿಚ್ಚಲು ಪ್ರಯತ್ನಿಸುತ್ತಿದ್ದರು ಆ ಡಾಕ್ಟರ್. ಆದರೆ ಆ ಪುಟ್ಟ ಹುಡುಗ ಬಿಟ್ಟರೆ ತಾನೆ! ನೋವಾಗುವುದು ಸಹಜವೇ, ಯಾಕೆಂದರೆ...
ಜಾಲತಾಣಗಳಿಗೆ ಮೂಗುದಾರ: ಕರ್ನಾಟಕದಲ್ಲಿ ಬರಲಿದೆಯೇ ಅಘೋಷಿತ ಎಮರ್ಜೆನ್ಸಿ?
ಆ ಘಟನೆ ಇನ್ನೂ ಹಸಿರಾಗಿದೆ. ಫೇಸ್ಬುಕ್ನಲ್ಲಿ ನಿಲುಮೆ ಎಂಬ ಗ್ರೂಪ್ನಲ್ಲಿ ವಿವೇಕಾನಂದರ ಕುರಿತ ಒಂದು ಲೇಖನದ ಲಿಂಕ್ಅನ್ನು ಯಾರೋ ಹಂಚಿಕೊಂಡಿದ್ದರು. ವಿವೇಕಾನಂದರು ರೋಗಿಷ್ಠರಾಗಿದ್ದರು, ಮೂವತ್ತೊಂದು ಕಾಯಿಲೆಗಳಿಂದ ನರಳುತ್ತಿದ್ದರು, ತಿಂಡಿಪೋತರಾಗಿದ್ದರು, ಮಾಂಸದಡುಗೆ ಮಾಡುತ್ತಿದ್ದರು, ಶಿಕ್ಷಕನಾಗಲು ನಾಲಾಯಕ್ ಎನ್ನಿಸಿಕೊಂಡು ಕೆಲಸ ಕಳೆದುಕೊಂಡಿದ್ದರು ಎನ್ನುತ್ತ...
ಪಾರಿ ಭಾಗ-೧೧
ಹಿಂದಿನ ಭಾಗ: ಪಾರಿ ಭಾಗ-೧0 ಮಹದೇವಸ್ವಾಮಿ ಮದುವೆಯಾದ ಹುಡುಗಿಗೆ ಮೂರ್ಛೆ ರೋಗ ಇರುವ ವಿಚಾರ ಮದುವೆಯಾದಾಗಲೇ ಗೊತ್ತಾಗಿತ್ತು. ಜೊತೆಗೆ ಮೈಮೇಲೆ ಅಲ್ಲಲ್ಲಿ ಚಿಕ್ಕದಾಗಿ ಹರಡಿಕೊಂಡಿರುವ ಸೋರಿಯಾಸಿಸ್ ಅನ್ನುವ ಚರ್ಮದ ಕಾಯಿಲೆ ಬೇರೆ ಇತ್ತು..ಇತ್ತಿಚೆಗೆ ಮಹದೇವಸ್ವಾಮಿಗೆ ಸಾಂಸಾರಿಕ ಜೀವನವೇ ಸಾಕಾಗಿ ಹೋಗಿತ್ತು.ಎರಡು ಗಂಡು ಮಕ್ಕಳು ಹುಟ್ಟಿದ್ದರೂ ಒಂದು ಮಗುವಿಗೆ ಮೂರ್ಛೆ...
