Author - Sujith Kumar

ಅಂಕಣ ಎವರ್'ಗ್ರೀನ್

ಇರುವುದೆಲ್ಲಿ?  ‘ಆ ಮನೆ’ ವಿಶ್ವದ ಅನಂತತೆಯಲ್ಲಿ….

ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು, ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆಗೆಣಸು ಹಾಗೂ ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ...

ಅಂಕಣ

ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!

2016 ಜೂನ್ 23, ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು. ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ...

ಅಂಕಣ ಎವರ್'ಗ್ರೀನ್

ಬಿರಿಯಾನಿಯ ಐತಿಹ್ಯ!

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ...

ಅಂಕಣ ಎವರ್'ಗ್ರೀನ್

ಮರುಭೂಮಿಯ ಮಲೆನಾಡು

ರಣಬಿಸಿಲ ಹೊಡೆತಕ್ಕೆ ಇದ್ದೆನೋ ಬಿದ್ದೆನೋ ಎನುತ ಎಲುಬುಗಟ್ಟಿದ ಹಕ್ಕಿಯೊಂದು ಕಷ್ಟಪಟ್ಟು ಹಾರತೊಡಗಿತ್ತು. ಕಾದ ನೀಲಾಕಾಶದಲ್ಲಿ  ಜ್ವಲಿಸುತ್ತಿರುವ ಸೂರ್ಯದೇವನ ಶಕ್ತಿ ವಾತಾವರಣದ ತಾಪಮಾನವನ್ನು 50 ಡಿಗ್ರಿಗಳವರೆಗೂ ತಲುಪಿಸಿದೆ. ಕೆಳನೋಡಿದರೆ ಕಾದ ಮರಳ ದೊಡ್ಡದೊಡ್ಡ ರಾಶಿಗಳು  ಕಳ್ಳ ನೆಪವನ್ನು ಒಡ್ಡಿ ಶಿಕಾರಿಗೆ ಕದ್ದು ಅಣಿಯಾಗಿವೆಯೇನೋ ಎಂದನಿಸುತ್ತಿದೆ. ಬೀಸುವ...

ಅಂಕಣ

ಸಾಧು ಆದ್ರೇನ್ ಶಿವ? ಇವ್ನ್ ಸಾಧ್ನೆ ಏನ್ ಕಮ್ಮಿನಾ?

‘ಏಯ್.. ಇದು ತೋಳ್ ಅಲ್ಲ ಕಣ್ರೋ.. ತೊಲೆ, ತೊಲೆ! ನನ್ನ ಇಲ್ಲಿವರ್ಗು ಯಾರು ಮುಟ್ಟಿಲ್ಲ, ಮುಂದೆ ಮುಟ್ಟೋದು ಇಲ್ಲ‘ ‘ಹೋದ್ ತಿಂಗ್ಳು ನಾನೇ ತದ್ಕಿದ್ದೆ!?’ ‘ಅದು ಹೋದ್ ತಿಂಗ್ಳು,,ನಾನ್ ಏಳ್ತಿರೋದು ಈ ತಿಂಗ್ಳು..’ ರಾಮಕೃಷ್ಣ ಚಿತ್ರದ ಈ ಒಂದು ಸಂಭಾಷಣೆ ಸಾಕು, ಗುಂಗುರು ತಲೆಯ, ಅಚ್ಚಕಪ್ಪಿನ, ತನ್ನ ಡೈಲಾಗ್ ಡೆಲಿವೆರಿಗಳಲ್ಲೇ...

ಅಂಕಣ

ಮೆಚ್ಚಲೇಬೇಕಿದೆ ಗೌತಮನ ಈ ಗಂಭೀರ ನಡೆ…!

ಡಿಸೆಂಬರ್ 15, 2016. ದೇಸಿ ಕ್ರಿಕೆಟಿನ ಮಹಾರಾಜನೆಂದೇ ಬಿಂಬಿತನಾಗಿದ್ದ ಗ್ರೇಟ್ ನಾಯಕನೊಬ್ಬನ ಅಗ್ನಿಪರೀಕ್ಷೆಯ ದಿನವಂದು. ತಿಂಗಳುಗಳ ಕೆಳಗಷ್ಟೇ ಭಾರತ ತಂಡದ ನಾಯಕನಾಗಿ ಸತತ ಐದು ವರ್ಷಗಳ ಕಾಲ ತಂಡದ ಆಗುಹೋಗುಗಳ ಮಾವುತನಾಗಿದ್ದ ವ್ಯಕ್ತಿ ಇಂದು ಅಕ್ಷರ ಸಹ ತಂಡದಲ್ಲಿ ತನ್ನ ಸ್ಥಾನವನ್ನುಉಳಿಸಿಕೊಳ್ಳಲು ಹೆಣಗುತ್ತಿದ್ದಾನೆ. ಅದು ಕೂಡ ತಂಡದ ಒಬ್ಬ ಸಾಮಾನ್ಯ ಸದಸ್ಯನಾಗಿ...

ಅಂಕಣ

ಗ್ರೇಟ್ ವಾರ್ : ಏಕಮಾತ್ರ ಗುಂಡಿನಿಂದ ಕೋಟಿ ಜನರ ಹರಣ

ಜುಲೈ 28, 1914. ನೋಡನೋಡುತ್ತಲೇ ಲಾಂಗ್ ರೇಂಜ್ ಯುದ್ಧ ಟ್ಯಾಂಕರ್‘ನಿಂದ ಪುಟಿದೆದ್ದ ಸಿಡಿಮದ್ದೊಂದು ಸೆರ್ಬಿಯಾ ದೇಶದೆಡೆ ಶರವೇಗದಲ್ಲಿ ಚಿಮ್ಮಿತು. ನಂತರದ ಕೆಲವೇ ಕೆಲವು ದಿನಗಳಲ್ಲಿ 28 ದೇಶಗಳ ಸುಮಾರು ಎರಡು ಕೋಟಿ ಜನರ ಜೀವವನ್ನು ಭಸ್ಮಿಸಿ ಇಡೀ ಭೂಖಂಡವನ್ನೇ ತಾನು ಅಲ್ಲೋಲಕಲ್ಲೋಲ ಮಾಡಬಲ್ಲನೆಂಬ ಒಂದಿನಿತು ಸುಳಿವು ಆ ಸಿಡಿಮದ್ದಿಗೆ ಇದ್ದಿರಲಾರದು! ಕರ್ತವ್ಯನಿರತ...

ಅಂಕಣ

ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!

ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ  ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ...

ಸಿನಿಮಾ - ಕ್ರೀಡೆ

42 ವರ್ಷಗಳ  ಕೆಳಗೆ…

ಹೊಟ್ಟೆ ಬಿರಿದು ತೇಗುತ್ತಿರುವವನ ಬಾಯಿಗೆ ಕಡುಬು ಗಿಡುಗಿದಂತಹ ಸ್ಥಿತಿ ಇಂದು ವಿಶ್ವ ಕ್ರಿಕೆಟ್ನದ್ದು. ಇಂದು  ESPN ಕ್ರಿಕೆಟ್ ವೆಬ್ಸೈಟ್ ಅನ್ನು ಒಮ್ಮೆ ಇಣುಕಿ ನೋಡಿದರೆ ಕಡೆ ಪಕ್ಷ ಒಂದೆರೆಡು ಡಜನ್ ಪಂದ್ಯಗಳಾದರೂ ಏಕಕಾಲಕ್ಕೆ ವಿಶ್ವದ ವಿವಿಧೆಡೆ ಜರುಗುತ್ತಿರುತ್ತವೆ. ಇನ್ನು ವಾರ, ತಿಂಗಳು ಹಾಗೂ ವರ್ಷಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೆ...

ಅಂಕಣ ಎವರ್'ಗ್ರೀನ್

ಕ್ಯಾಲ್ಕ್ಯುಲಸ್’ನಲ್ಲಿ ನ್ಯೂಟನ್ ಹಾಗೂ ಲೆಬ್ನಿಸ್ ಇಬ್ಬರಿಗೂ...

ಕಾಲ ಸುಮಾರು ಹನ್ನೆರಡನೆಯ ಶತಮಾನದ ಮಧ್ಯಭಾಗ. ಖಗೋಳಶಾಸ್ತ್ರ ಹಾಗೂ ಗಣಿತಾಧ್ಯಯನದಲ್ಲಿ ಪರಿಣತಿಯನ್ನು ಹೊಂದಿದ್ದ ಈತ, ತನ್ನ ಮಗಳ ಮದುವೆಯ ಕುರಿತು ಚಿಂತಾಗ್ರಸ್ತನಾಗಿರುತ್ತಾನೆ. ಕಾರಣ,  ಮಗಳ ಜಾತಕದ  ಪ್ರಕಾರ ಆಕೆ ಕೈಯಿಹಿಡಿಯುವ ಗಂಡು ಮದುವೆಯಾದ ಕೆಲವೇ ದಿನಗಳ ಒಳಗೆ ಜೀವ ಕಳೆದುಕೊಳ್ಳುತ್ತಾನೆಂಬುದಾಗಿರುತ್ತದೆ. ಆಕೆಯ ಮದುವೆಯ ಭಾಗ್ಯವೇ ಹಾಗಿರುವಾಗ ಯಾರು ತಾನೇ ಏನನ್ನು...