ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೩ ತೃಣಕೆ ಹಸಿರೆಲ್ಲಿಯದು ? ಬೇರಿನದೆ ? ಮಣ್ಣಿನದೆ ? | ದಿನಪನದೆ ? ಚಂದ್ರನದೆ ? ನೀರಿನದೆ ? ನಿನದೆ ? || ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು | ಗುಣಕೆ ಕಾರಣವೊಂದೆ ? – ಮಂಕುತಿಮ್ಮ || ೦೫೩ || ಹೊರನೋಟಕ್ಕೆ ಸರಳವೆಂದು ಕಾಣುವಲ್ಲು ಇರುವ ಅವ್ಯಕ್ತ ಸಂಕೀರ್ಣತೆಯನ್ನು ಈ ಪದ್ಯ ಸೊಗಸಾಗಿ ವಿವರಿಸುತ್ತದೆ –...
ಇತ್ತೀಚಿನ ಲೇಖನಗಳು
ಸವಲತ್ತುಗಳು ಬೇಡ, ಸಂಸ್ಕಾರ ಕೊಡಿ
ಮಕ್ಕಳನ್ನು LKG ಗೆ ಸೇರಿಸುವುದಕ್ಕೂ ಕೂಡ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಅವರ ತಜ್ಞರ ತಂಡ ಪಾಲಕರ ಸಂದರ್ಶನ ಮಾಡುತ್ತಾರೆ ಅಂತ ಕೇಳಿದ್ದೆ. ನಮ್ಮ ಮಗಳಿಗೂ ಶಾಲೆಗೆ ಹಾಕುವ ಸಮಯ ಬಂದೇ ಹೋಯ್ತು, ಈ ವರ್ಷ. ನಾವೇನು ವಿಶೇಷ ತಯಾರಿ ನಡೆಸಿರಲಿಲ್ಲ. ಸಮಯಕ್ಕೆ ಸರಿಯಾಗಿ ನಾವು ಮೂರು ಮಂದಿ ಅವರೆದುರು ಹೋಗಿ ಕುಳಿತೆವು. ಇನ್ನೇನು ಇಂಟರ್‌ವ್ಯೂ ಶುರು ಆಗಬೇಕು...
ಸತ್ಯದ ಬೇರುಗಳ ಅನ್ವೇಷಣೆಯ ನಡುವೆ
ಹೊಸ ವರ್ಷ ಬಂದಾಗ ಹಲವರು ಹೊಸ ಪ್ರತಿಜ್ಞೆ ಮಾಡುತ್ತಾರೆ. ಹಳೆಯದನ್ನು ಮರೆಯುತ್ತಾರೆ. ಅಲ್ಲೇ ಸುಳ್ಳಿನ ಮೂಟೆಯೊಂದನ್ನು ಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಸತ್ಯದ ಬೇರುಗಳು ಎಲ್ಲೆಲ್ಲೋ ಹುದುಗಿಕೊಂಡಿರುತ್ತದೆ. ಹುಡುಕುತ್ತೀರಾ? ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ...
ಸಾವು ಸೋಲಲ್ಲ…!!
ಇಂದು ಜ್ಯಾಕ್ ಸೊಬಿಯಾಕ್ ನೆನಪಾಗುತ್ತಿದ್ದಾನೆ. ಇಂದು ಮಾತ್ರವಲ್ಲ ‘ಆಸ್ಟಿಯೋಸರ್ಕೋಮ’ ಎಂದಾಗ, ಗಿಟಾರ್’ನ್ನು ಕಂಡಾಗ, ಧೈರ್ಯ ಹಾಗೂ ಆತ್ಮವಿಶ್ವಾಸಗಳ ಮಾತುಗಳು ಬಂದಾಗೆಲ್ಲಾ ಆತ ನೆನಪಾಗುತ್ತಾನೆ. ಜ್ಯಾಕ್ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಕೆಲ ವ್ಯಕ್ತಿಗಳು ನಮಗೆ ಹತ್ತಿರದಿಂದ ಪರಿಚಯವಿಲ್ಲದಿದ್ದರೂ, ಮುಖಾಮುಖಿಯಾಗಿ ಭೇಟಿಯಾಗಿಲ್ಲದಿದ್ದರೂ, ಅವರೊಂದಿಗೆ ಮಾತನಾಡದಿದ್ದರೂ...
ರಾಜಕಾರಣಿಗಳ ದುಂಡಾವರ್ತನೆಗೆ ಕೊನೆ ಎಂದು??
ಘಟನೆ ೧: ಗೂಂಡಾ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಸಮಾಜವಾದಿ ಪಕ್ಷದ ಆಜಂ ಖಾನ್ ಅಧಿಕಾರ ಕಳೆದುಕೊಂಡು ಮಾಜಿ ಸಚಿವನಾಗಿದ್ದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ತನ್ನ ಅಧಿಕಾರ ಚಲಾವಣೆ ಮಾಡಬಹುದು ಅನ್ನುವ ಅಧಿಕಾರದ ಮದದಲ್ಲಿ ವಿಭಾಗೀಯ ಅಧಿಕಾರಿಯೊಬ್ಬರಿಗೆ ಆವಾಜ್ ಹಾಕುತ್ತಾರೆ. ರಸ್ತೆಯ ಗುಣಮಟ್ಟ ಕಳಪೆಯಾಗಿದ್ದರಿಂದ ಸಿಡಿಮಿಡಿಗೊಂಡು ಈ ರೀತಿಯ ರಸ್ತೆಗಳಲ್ಲಿ...
ಬೇವು ನುಂಗಿ, ಬೆಲ್ಲ ಸವಿದು ನವಸಂವತ್ಸರವ ಸ್ವಾಗತಿಸೋ ಯುಗಾದಿ
ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್ ದ್ಯೋತಕವೂ ಹೌದು ಮತ್ತು ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ...
