Author - Sandesh H Naik

ಅಂಕಣ

ಈ ‘ಬಂದ್’ನ, ಜನುಮ ಜನುಮದ ಅನು’ಬಂದ್’ನ

ಬೇಕು ಬೇಡ ಎಂಬ ವಾಗ್ವಾದಗಳ ನಡುವೆಯೇ ಮತ್ತೊಂದು ಬಂದ್ ಬಂದು ಹೋಯಿತು. ಕಳೆದ ವಾರವಿಡೀ ಈ ಬಂದ್‌ ಬಗ್ಗೆಯೇ ಚರ್ಚೆ. ಎಷ್ಟೆಂದರೆ ಬಂದ್ ಮುಗಿದರೂ ಬಂದ್ ಬಗ್ಗೆ ನಡೆಯುತ್ತಿರುವ ಚರ್ಚೆ ಬಂದಾಗುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಮತ್ತೆ ಮತ್ತೆ ಬಂದು ಬಂದು ವಕ್ಕರಿಸುವ ಬಂದ್‌ಗಳನ್ನು ಗಮನಿಸಿದರೆ, ಮರಳಿ ಬರುವುದು ಯುಗಾದಿ ಮಾತ್ರವಲ್ಲ ಬಂದ್ ಕೂಡಾ ಎಂದೆನಿಸದೇ ಇರದು. ನಾಡಿನ...

ಅಂಕಣ

ಕಣ್ಣೀರೊರೆಸೋ ಬಂಧು ‘ಕರವಸ್ತ್ರ’

ಹೊಟ್ಟೆ ಹಾಗೂ ಬಟ್ಟೆ ಮನುಷ್ಯ ಜೀವನದ ಬಹುಮುಖ್ಯವಾದ ಎರಡು ಅಂಶಗಳಾಗಿವೆ. ಆತ ತನ್ನ ರಟ್ಟೆಯನ್ನು ಸವೆಸುವುದು ಹೊಟ್ಟೆ ಮತ್ತು ಬಟ್ಟೆಗಾಗಿಯೇ! ಅವುಗಳನ್ನು ಆತನ ಮೂಲಭೂತ ಅಗತ್ಯಗಳು ಎನ್ನಬಹುದಾಗಿದೆ. ಎಲೆ, ಸೊಪ್ಪುಗಳನ್ನು ಕಟ್ಟಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಿದ್ದ ಮನುಷ್ಯ ಕ್ರಮೇಣ ಅವುಗಳ ಬದಲಾಗಿ ಬಗೆಬಗೆಯ ವಸ್ತ್ರಗಳನ್ನು ಧರಿಸಲಾರಂಭಿಸಿದ ಪ್ರಕ್ರಿಯೆ ನಾಗರಿಕತೆಯ...

ಅಂಕಣ

ಸಮಾ’ವೇಶ’ಗಳ ಸಾಧನೆಯೇನು ಗೊತ್ತೇ?!

  ರಾಜ್ಯದಲ್ಲೀಗ ಸಮಾವೇಶಗಳ ಪರ್ವಕಾಲ. ವಿಧವಿಧವಾದ ಶೀರ್ಷಿಕೆಗಳಲ್ಲಿ ಹಲವಾರು ಸಮಾವೇಶಗಳು ನಡೆಯುತ್ತಿದ್ದರೂ ಅವುಗಳೆಲ್ಲದರ ಅಂತಿಮ ಉದ್ದೇಶ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಗುರಿ ತಲುಪುವುದಷ್ಟೇ ಎನ್ನುವುದು ಸುಸ್ಪಷ್ಟ. ಸಿಕ್ಕ ಸಿಕ್ಕಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಆವೇಶ, ಆಕ್ರೋಶಗಳ ಗುಟುರು ಹಾಕುವ ಈ ರಾಜಕೀಯ ಮಂದಿಗಳು ಚುನಾವಣೆ ಬಂತೆಂದರೆ ಸಾಕು...

ಅಂಕಣ

ರಜನಿ ರಾಜಕೀಯ ಜರ್ನಿಯ ರಂಜನೀಯ ನೋಟ

ಚಿತ್ರರಂಗದಲ್ಲಿರುವವರು ರಾಜಕಾರಣಕ್ಕೆ ಪದಾರ್ಪಣೆ ಮಾಡುವುದು ಹೊಸತೇನಲ್ಲ. ರಾಜಕಾರಣದಲ್ಲಿರುವವರ ಅಪೂರ್ವ ನಟನೆಯಿಂದ ಪ್ರೇರಣೆ ಪಡೆದು ಸಿನಿಮಾ ನಟನಟಿಯರು ರಾಜಕೀಯ ಸೇರುತ್ತಾರೋ ಅಥವಾ ಚಿತ್ರರಂಗದವರು ರಾಜಕೀಯಕ್ಕೆ ಸೇರಿದ್ದಕ್ಕೇ ಅಲ್ಲಿರುವವರೂ ತಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸುತ್ತಾರೋ ಎನ್ನುವುದು ‘ಲಕ್ಷ’ಪ್ರಶ್ನೆಯೇ ಸರಿ. ಒಟ್ಟಾರೆಯಾಗಿ ಸಿನಿಮಾ...

ಅಂಕಣ

ಹೀಗೊಂದು ಹೊಸ’ವರ್ಷ’ ಭವಿಷ್ಯ!

ಕಳೆದ ಮದ್ಯ(ಧ್ಯ)ರಾತ್ರಿಯ ಆಚರಣೆಯೊಂದಿಗೆ ಮತ್ತೊಂದು ಹೊಸವರ್ಷ ಬಂದೇಬಿಟ್ಟಿತು. ಆಚರಣೆಯ ಅಮಲು ಕಳೆಯುತ್ತಿದ್ದಂತೆ ಕೆಲವರಿಗೆ ಎಲ್ಲವೂ ಮಾಮೂಲು ಅನಿಸಲಾರಂಭಿಸುತ್ತಿದಂತೆ ಮತ್ತೆ ವರ್ಷವೂ ಹಳೆಯದೆನಿಸುತ್ತದೆ. ಆಗ ಹೊಸತೆನಿಸುವುದು ಕ್ಯಾಲೆಂಡರ್ ಮಾತ್ರ. ವರ್ಷ ಹದಿನೇಳು ತುಂಬಿ ಹದಿನೆಂಟಕ್ಕೆ ಬೀಳುತ್ತಿರುವ ಇದು ಹದಿಹರೆಯದ ಉತ್ತುಂಗ. ಹುಡುಗಿಯ ಹುಚ್ಚುಕೋಡಿಯ ಮನಸ್ಸಿನಂತೆ...

ಅಂಕಣ

ರೇಜಿಗೆ ಹುಟ್ಟಿಸಿದ 2G ರಾಜಿ

ನಮ್ಮ ನ್ಯಾಯದಾನ ವ್ಯವಸ್ಥೆ ಎಷ್ಟೊಂದು ನಿಧಾನವೆಂದರೆ ವಿಚಾರಣೆ ಮುಗಿಯುವಷ್ಟರಲ್ಲಿ ಆರೋಪಿಗಳಿಗೆ ತಾವು ಮಾಡಿದ ಅಪರಾಧ ಏನೆನ್ನುವುದೇ ಮರೆತು ಹೋಗಿರುತ್ತದೆ. ಅಪ್ಪನ ಅಪರಾಧಕ್ಕೆ ಮಗನ ಕಾಲದಲ್ಲಿ ಶಿಕ್ಷೆಯಾಗುವುದೂ ಇದೆ. ಇದೇ ರೀತಿಯಲ್ಲಿ 2G ಗೆ ಸಂಬಂಧಿಸಿದ ಕೇಸೊಂದರ ತೀರ್ಪು 4G ಜಮಾನದಲ್ಲಿ ಹೊರ ಬಿದ್ದಿದೆ. ಅದು ಅಂತಿಂಥ ವಿಚಾರಣೆಯಲ್ಲ ಹತ್ತಿರತ್ತಿರ ಒಂದು ದಶಕದ...

ಅಂಕಣ

ಅಣಕಿಸದಿರಿ, ಇದು ಸೌಂದರ್ಯವರ್ಧಕ ಅಣಬೆ!

ನಮ್ಮ ರಾಜಕೀಯ ನಾಯಕರು ಅಗತ್ಯಕ್ಕೆ ತಕ್ಕಂತೆ ಜಡ್ಜ್, ವೈದ್ಯಾಧಿಕಾರಿ, ಪೊಲೀಸ್ ಹೀಗೆ ಬೇರೆ ರೀತಿಯಲ್ಲಿ ವರ್ತಿಸುವುದಿದೆ. ಈ ನಾಯಕರು ಒಮ್ಮೊಮ್ಮೆ ಸಂಶೋಧಕರೂ ಕೂಡಾ ಆಗುತ್ತಾರೆ. ನಾಯಕರೋರ್ವರ ಅಂತಹದ್ದೊಂದು ಹೇಳಿಕೆಯಿಂದಾಗಿ ನಾಲ್ಕೈದು ದಿನಗಳಿಂದ  ನಾಯಿಕೊಡೆಗಳಿಗೆ ಎಲ್ಲಿಲ್ಲದ ಪ್ರಾಧಾನ್ಯತೆ ಬಂದುಬಿಟ್ಟಿದೆ. ಈ ಸಂಬಂಧದ ಒಟ್ಟಾರೆ ಬೆಳವಣಿಗೆಗಳನ್ನು ಸೂಚ್ಯವಾಗಿ...

ಅಂಕಣ

ಆದರವಲ್ಲ ‘ಆಧಾರ’ ಇರಬೇಕಂತೆ!!

ಚಿಕ್ಕಂದಿನಲ್ಲಿ ನಮಗೆ, ಸುಮ್ಮನೆ ಏನೇನೋ ಮಾತನಾಡುವುದಕ್ಕಿಂತ ದೇವರ ನಾಮ ಸ್ಮರಣೆಯನ್ನಾದರೂ ಮಾಡಬಾರದೇ ಎಂದು ಹಿರಿಯರು ಸೂಚಿಸುತ್ತಿದ್ದರು. ಅವರು ಕೂಡಾ ಅದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಈಗ ಬಿಡಿ ಮನೆಗಳಲ್ಲಿ ಮಾತೇ ಕಡಿಮೆಯಾಗಿಬಿಟ್ಟಿದೆ. ಒಂದೋ ಟಿ.ವಿ ಒದರುತ್ತಿರುತ್ತದೆ ಇಲ್ಲವೇ ಮೊಬೈಲ್  ಪರದೆ ಜನರ ನಡುವೆಯೇ ಪರದೆ ಎಳೆದುಬಿಟ್ಟಿರುತ್ತದೆ. ಏನೇ ಆದರೂ ದೇವರ...

Uncategorized

ಆಲ್ಕೋಲಾಹಲ!!

ಚುನಾವಣೆ ಹಾಗೂ ಮದ್ಯ, ಇವೆರಡಕ್ಕೂ ಒಂಥರಾ ಎಣ್ಣೆ-ಸೋಡಾದಂತೆ ಅವಿನಾಭಾವ ಸಂಬಂಧವಿದೆ. ಒಮ್ಮೊಮ್ಮೆ ಎಣ್ಣೆಯ ಅಮಲು ಮತದಾನವನ್ನು ಅಮೂಲಾಗ್ರವಾಗಿ ಪ್ರಭಾವಿಸಿದೆಯೇ ಎಂಬ ಸಂದೇಹ ಮೂಡದೇ ಇರಲಾರದು. ಚುನಾವಣೆಯಲ್ಲಿ ಗೆಲುವಿನ ನಿಯಂತ್ರಣ ಸಾಧಿಸಬೇಕೆಂದರೆ ಕೆಲವೊಂದಷ್ಟು ಮತದಾರರ ಯೋಚನೆಯ ನಿಯಂತ್ರಣವನ್ನೇ ತಪ್ಪಿಸಬೇಕೆನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಸಿದ್ಧಸೂತ್ರ. ಅದಕ್ಕಾಗಿ...

ಅಂಕಣ

 ನೋಟ್ಯಂತರ ಆಗದೇ ಹೋಗಿದ್ದರೆ?!

ನೋಟುಗಳ ಬಗೆಗಿನ ಜನರ ಸಾಮಾನ್ಯ ನೋಟ ಹಾಗೂ ಒಳನೋಟಗಳನ್ನೆಲ್ಲಾ ಬದಲಾಯಿಸಿ, ನೋಟುಗಳನ್ನು ಬದಲಾಯಿಸುವಂತೆ ಹಾಗೂ ಒಳಗೊಳಗೆ ಹುದುಗಿಟ್ಟಿದ್ದ ನೋಟುಗಳೂ ಬದಲಾವಣೆಗೆ ಒಡ್ಡಿಕೊಳ್ಳುವಂತೆ ಮಾಡಿದ್ದ ನೋಟ್ ಬ್ಯಾನ್ ಗೆ ಮೊನ್ನೆ ಮೊನ್ನೆಯಷ್ಟೇ ವರುಷ ತುಂಬಿತು. ಇದು ನಿಜಕ್ಕೂ ಭಾರತದ ಇತಿಹಾಸದಲ್ಲಿಯೇ ಒಂದು ಮಟ್ಟಿಗೆ ‘ನೋಟ್’ಬಲ್ ದಿನವೇ ಸರಿ. ‘ಹಣ ನೋಡಿದರೆ...