“ಇನ್ನೊಂದು ಮೆಟ್ಟಿಲೂ ನನ್ ಕೈಲಿ ಹತ್ತಕ್ಕಾಗಲ್ಲಪ್ಪಾ!” ಉಮಾ ನಿಡುಸುಯ್ದಳು. ಅವಳಿಗಿಂತ ಇಪ್ಪತ್ತೈದು ವರ್ಷ ಹಿರಿಯಳಾದ ಶಾಂತಜ್ಜಿ ಮಾತ್ರ ತುಟಿಪಿಟಿಕ್ಕೆನ್ನದೆ ಆಸ್ಪತ್ರೆಯ ಮೆಟ್ಟಿಲುಗಳನ್ನೇರುತ್ತಲೇ ಇದ್ದಳು. ಶಾಂತಜ್ಜಿಗೀ ಲೋಕದ ಪರಿವೆಯೇ ಇದ್ದಂತಿರಲಿಲ್ಲ. ತನ್ನ ಮಾತಿಗೆ ಶಾಂತಜ್ಜಿ ಕಿವಿಗೊಡದಿರುವುದು ನೋಡಿ ಉಮಾಳ ಮುಖ ಗಂಟಿಕ್ಕಿಕೊಂಡಿತು...
ಅಂಕಣ
ಬಾನಾಡಿಗಳಿಗೆ ಗೂಡು ಕಟ್ಟಿ ಕೊಡುವ ಸ್ನೇಹಾಲಯ ಜೋಸೆಫ್
ಪುತ್ತೂರಿನಲ್ಲಿ ರಾಮ ಅನ್ನೋ ಒಬ್ಬ ಭಿಕ್ಷುಕ ಕಮ್ ಹುಚ್ಚನೊಬ್ಬನಿದ್ದ. ಹರಕಲು ಕೊಳಕು ಬಟ್ಟೆಯನ್ನು ಹಾಕಿಕೊಂಡು ಉದ್ದದ ಕುರಚಲು ಕೂದಲು ಬಿಟ್ಟುಕೊಂಡು ದಿನಾ ಪೇಟೆಯಿಡೀ ಅತ್ತಿಂದಿತ್ತಾ ಅಲೆಯುತ್ತಿದ್ದ. ನಡೆದಾಡುವಾಗ ಜೋರಾಗಿ ಬೊಬ್ಬೆ ಹೊಡೆಯುವುದು ಆತನ ರೂಢಿಯಾಗಿತ್ತು. ರಾಮನನ್ನು ನೋಡಿದರೆ ಮಕ್ಕಳು, ಹೆಂಗಸರು ಹೆದರುತ್ತಿದ್ದರು, ಕೆಲವರು ಅಯ್ಯೋ ಪಾಪ ಎಂದು...
ಗದಾಯುದ್ಧ- ೬
ಸ್ವಲ್ಪ ತಡವಾಯಿತು. ಕ್ಷಮೆ ಇರಲಿ, ನಿರತ ಓದುಗರೇ. ಕೌರವ ಮುಂದೆ ರಣಧಾರುಣಿಯಲ್ಲಿ ಬರುತ್ತಾ ಪಿಶಾಚಿಗಳೊಡನೆ ಸಂವಾದದಂತಹ ಒಂದು ಕಲ್ಪನೆಯನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತಾನೆ ರನ್ನ. ರನ್ನನ ಪ್ರತಿಭೆಯ ಬೆಂಕಿಯೊಳಗೆ ಎಲ್ಲವೂ ನೀರು! ಕೌರವ ಮುಂದೆ ಬರುತ್ತಿರುವಾಗ, ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ...
“ಪ್ರಕೃತಿಯ ಒಡಲಿನಿಂದ ಗ್ರೀನ್ ಆಸ್ಕರ್ ವೇದಿಕೆಯವರೆಗೆ”
ಅಂದು 1997 ರಲ್ಲಿ ಬಂಡೀಪುರದ ಕಾಡಿನಲ್ಲಿರುವ ಮನೆಯಲ್ಲಿ ಈರ್ವರು ಡಾಕ್ಯುಮೆಂಟರಿ ಒಂದು ತಯಾರಿಸುತ್ತಾ ಅದಕ್ಕೆ ಫೈನಲ್ ಟಚ್ ನೀಡುವ ತಯಾರಿಯಲ್ಲಿದ್ದರು. ಆ ಸಮಯದಲ್ಲೊಂದು ಅವಘಡ ನಡೆದೇ ಹೋಯಿತು. ಅದೆಷ್ಟೋ ದಿನದಿಂದ ಅವರ ನಡೆಯನ್ನ ಗಮನಿಸುತ್ತಿದ್ದ ಕಾಡುಗಳ್ಳ ವೀರಪ್ಪನ್ ಈ ಜೋಡಿಯನ್ನ ಅಪಹರಿಸಿದ್ದ. ತನ್ನನ್ನ ಅರೆಸ್ಟ್ ಮಾಡಲು ಸೆಂಟ್ರಲ್ ಗವರ್ನಮೆಂಟ್ ನೇಮಿಸಿದ...
ಜಲಿಯನ್-ವಾಲಾ-ಬಾಗ್ ಹತ್ಯಾಕಾಂಡ: 13-04-1919
ಬ್ರಿಟಿಷರ ಅಟ್ಟಹಾಸ-ಗುಂಡಿನ ಬೋರ್ಗರೆವ ಮಳೆ-ಸಾವಿರಾರು ಅಮಾಯಕರ ಆಕ್ರಂದನ-ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು-ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನ.. ಇವನೆಲ್ಲಾ ನೆನಸಿಕೊಂಡರೆ ಮೈ ಜುಂ ಎನ್ನುವುದರಲ್ಲಿ ಸಂಶಯವಿಲ್ಲ.. ಭಾರತದ ಇತಿಹಾಸದಲ್ಲೇ ಇದೊಂದು ಎಂದೂ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವಾತಂತ್ರಪೂರ್ವ...
ಬೌದ್ಧಿಕ ಮೀಸಲಾತಿ…?
ಮೀಸಲಾತಿ… ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು ಸಬಲರನ್ನಾಗಿಸುವ ಸಲುವಾಗಿ ಜನ್ಮತಳೆದ ವ್ಯವಸ್ಥೆಯೇ ಈ ಮೀಸಲಾತಿ. ಆಗಸ್ಟ್ 1932 ರಲ್ಲಿ ಬ್ರಿಟನ್ ಪ್ರಧಾನಿಯ ಒಂದು ಯೋಜನೆಯ ಫಲವಾಗಿ ಜನ್ಮ ತಳೆದ ಈ ವ್ಯವಸ್ಥೆಯು ಜಾತಿ, ಧರ್ಮಗಳ ಮೇಲೆ ಅವಲಂಬಿತವಾಗಿದ್ದ ಕಾರಣ ಇದನ್ನು ಬ್ರಿಟಿಷರ ಒಡೆದು ಆಳುವ ನೀತಿಯ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತದೆ. ...
ಗದಾಯುದ್ಧ – ಭಾಗ ೫
ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ. ಗಾಂಧಾರಿಯ ಮಾತು- ಎಮಗಂಧಯಷ್ಟಿಯಾಗಿ- ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ...
ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ
ಆನಂದ ಪುರ. ತೇಜಸ್ವೀ ಸಿಖ್ ಗುರುವೊಬ್ಬನ ಮುಂದೆ ಕಾಶ್ಮೀರದಿಂದ ಬಂದ ಹಿಂದೂ ಪ್ರಮುಖರ ಗುಂಪೊಂದು ಗೋಳೋ ಎಂದಳುತ್ತಾ ತಮ್ಮ ಬವಣೆಗಳನ್ನರುಹುತ್ತಿದೆ. “ಯುದ್ಧ ವಿದ್ಯೆ ಕಲಿಯುವಂತಿಲ್ಲ, ಆಯುಧಪಾಣಿಯಾಗುವಂತಿಲ್ಲ, ಪಲ್ಲಕಿ ಹತ್ತುವಂತಿಲ್ಲ, ಕುದುರೆಗಳನ್ನು ಬಳಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ವಿಶ್ವನಾಥನ ಮಂದಿರವನ್ನು ಮುರಿದರು, ಮರು ನಿರ್ಮಿಸಿದ...
ಸ್ವಚ್ಚತೆಯ ಪರಿಧಿ ವಿಸ್ತರಿಸಲಿ
ಬಿದ್ದಿರುವ ಕಸವನ್ನಷ್ಟೇ ರಾಶಿ ಹಾಕಿ ಬೂದಿ ಮಾಡಿಬಿಟ್ಟರೆ ಭಾರತ ಸ್ವಚ್ಚವಾದೀತೇ.? ಮೋದೀಜೀಯವರ ಸ್ವಚ್ಚ ಭಾರತದ ಕರೆಯ ವೈಶಾಲ್ಯತೆಯನ್ನು ನಾವೆಷ್ಟು ಅರ್ಥೈಸಿಕೊಂಡಿದ್ದೇವೆ? ರದ್ದಿ ಕಾಗದಗಳು, ಪ್ಲಾಸ್ಟಿಕ್ ಲಕೋಟೆಗಳು ಮಾತ್ರ ಕಸವೇ? ಟೇಬಲ್ ನ ಕೆಳಗೆ ತೂರಿ ಬರುವ ಕೈಗಳಿಗೆ ನೋಟಿನ ಕಂತೆಯನ್ನಿಡಲು ಶಕ್ತಿಯಿಲ್ಲದ ಬಡಪಾಯಿಯೊಬ್ಬನನ್ನು ಕಛೇರಿಯಿಂದ ಕಛೇರಿಗೆ ಅಲೆದಾಡಿಸುವ...
ಗದಾಯುದ್ಧ- ಭಾಗ ೪
ಸಂಜಯವಚನಂ ಭಾಗದ ಕೊನೆಯ ಪದ್ಯಗಳು. ಇಲ್ಲಿ ಸಂಜಯನು ಕೌರವನಿಗೆ, ಧೃತರಾಷ್ಟ್ರ ಮತ್ತು ಗಾಂಧಾರಿ ನಿನ್ನನ್ನು ಹುಡುಕುತ್ತಾ ಬರುತ್ತಿದ್ದಾರೆ ಎನ್ನುವ ಭಾಗ. ಇದು ಮೂಲಮಹಾಭಾರತದಲ್ಲಿಲ್ಲ. ಅತ್ಯಂತ ಕರುಣಾರಸದ ಕೆಲವು ಘಟನೆಗಳು. ಪಡೆ ಪನ್ನೊಂದಕ್ಷೋಹಿಣಿ ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ- ಳ್ಗೊಡೆಯ ನಡುವಿರ್ಪ ನೀನಿ- ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ...