ಅಂಕಣ

“ಪ್ರಕೃತಿಯ ಒಡಲಿನಿಂದ ಗ್ರೀನ್ ಆಸ್ಕರ್ ವೇದಿಕೆಯವರೆಗೆ”

Krupakar and Senani

ಅಂದು 1997 ರಲ್ಲಿ ಬಂಡೀಪುರದ ಕಾಡಿನಲ್ಲಿರುವ ಮನೆಯಲ್ಲಿ ಈರ್ವರು ಡಾಕ್ಯುಮೆಂಟರಿ ಒಂದು ತಯಾರಿಸುತ್ತಾ ಅದಕ್ಕೆ ಫೈನಲ್ ಟಚ್ ನೀಡುವ ತಯಾರಿಯಲ್ಲಿದ್ದರು.  ಆ ಸಮಯದಲ್ಲೊಂದು ಅವಘಡ ನಡೆದೇ ಹೋಯಿತು. ಅದೆಷ್ಟೋ ದಿನದಿಂದ ಅವರ ನಡೆಯನ್ನ ಗಮನಿಸುತ್ತಿದ್ದ ಕಾಡುಗಳ್ಳ ವೀರಪ್ಪನ್ ಈ ಜೋಡಿಯನ್ನ ಅಪಹರಿಸಿದ್ದ. ತನ್ನನ್ನ ಅರೆಸ್ಟ್ ಮಾಡಲು ಸೆಂಟ್ರಲ್ ಗವರ್ನಮೆಂಟ್ ನೇಮಿಸಿದ ಅಧಿಕಾರಿಗಳು ಎಂಬ ಆತನ ಚೇಲಾಗಳ ತಪ್ಪು ಸಂದೇಶದಿಂದವ್ಯವಸ್ಥಿತವಾಗಿ ಅಪಹರಿಸಿ ಕಾಡಿಗೊಯ್ದಿದ್ದ ವೀರಪ್ಪನ್. ಆದರೆ ಈ ಜೋಡಿ ಆ ಕಟುಕನ ಮನಸ್ಸನ್ನೇ ಗೆದ್ದಿದ್ದರು. ಹದಿನಾಲ್ಕು ದಿನ ಅವರನ್ನ ಬಂಧಿಸಿದ್ದ ವೀರಪ್ಪನ್ ಗೆ ಇವರನ್ನ ಬೀಳ್ಕೊಡುವಾಗ ಮನಸ್ಸು ಭಾರವಾಗಿತ್ತು. ಆದರೆ ಆ ಹದಿನಾಲ್ಕು ದಿನಗಳು ಅವರೇನಾದರು ತಮ್ಮ ಕೆಲಸದಲ್ಲಿ ತೊಡಗಿದ್ದರೆ ಮತ್ತೊಂದು ಸುಂದರ ಡಾಕ್ಯುಮೆಂಟರಿ ಹೊರಬರುತ್ತಿತ್ತೇನೋ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ Wilddog diaries ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಆ ಹದಿನಾಲ್ಕು ದಿನದ ಅನುಭವ ಕಥನವನ್ನ “ಕಾಡುಗಳ್ಳನ ಜೊತೆ ಹದಿನಾಲ್ಕು ದಿನಗಳು”ಎಂಬ ಪುಸ್ತಕದ ಮೂಲಕ ತಿಳಿಸಿದರು… ಈ ಜೋಡಿಯೇ, ಕೃಪಾಕರ್ – ಸೇನಾನಿ. ಇವರ ಜೀವನ – ಕಥನ ಇಲ್ಲಿಗೇ ನಿಲ್ಲುವುದಿಲ್ಲ, ಹಲವು ಸಾಹಸ ಗಾಥೆಗಳ ಹೊತ್ತು ಸಾಗುತ್ತಿದೆ ನೋಡಿ…

 ಮೈಸೂರಿನಿಂದ 70 ಕಿ.ಮೀ ದೂರದಲ್ಲಿರುವ ಬಂಡೀಪುರದ ಬಳಿ ಮೆಲುಕಾಮನಹಳ್ಳಿ ಎಂಬ ಊರೊಂದಿದೆ. ಅದು Bandipur Tiger Reserve ನ ಪಕ್ಕದಲ್ಲಿಯೇ ಇದೆ. ಅಲ್ಲಿಯ ಜನರು ಹನ್ನೆರಡು (2003ರ ವರೆಗೆ) ವರ್ಷದ ಹಿಂದೆ ದಿನದ ಉರುವಲಿಗಾಗಿ ಬಂಡೀಪುರದ ದಟ್ಟ ಕಾಡನ್ನೇ ಅವಲಂಬಿಸಿದ್ದರು. ಅದೆಷ್ಟೋ ಬಡ ಜನರು ಕಾಡಿಗೆ ಹೋದವರೇ ಮರಳುತ್ತಿರಲಿಲ್ಲ. ಪರಿಸರದ ಭಾಗವಾಗಿದ್ದ ಅವರಿಗೆ ಕಾಡಿಗೆ ಕಾಲಿಡದಂತೆ ಮಾಡಲಾಯಿತು. ಅರಣ್ಯಾಧಿಕಾರಿಗಗಳು ಬಡ ಜನರು ಕಾಡಿಗೆ ಹೋಗದಂತೆ ತಡೆಯುವುದನ್ನೇ ತಮ್ಮ ಕೆಲಸ ಎಂದುಕೊಂಡು ಬಡ ಜನರ ಮೇಲೆ  ದೌರ್ಜನ್ಯ ಎಸಗಲು ಶುರು ಮಾಡಿದರು. 2003 ರಲ್ಲಿ ಅಲ್ಲಿಯ ಜನ Fuelwood ಗಾಗಿ ಬೀದಿಗೆ ಬಂದು ಹೋರಾಟ ಮಾಡಲು ಶುರು ಮಾಡಿದರು. ಯೋಚಿಸಿ ಕಷ್ಟ ಪಟ್ಟು ದುಡಿದಿದ್ದಲ್ಲದೆ ಬೇಯಿಸಿಕೊಂಡು ತಿನ್ನಲೂ ಆಗದ ಹೀನಾಯ ಪರಿಸ್ಥಿತಿಗೆ ತಲುಪಿದ್ದರು ಅಲ್ಲಿಯ ಬಡ ಜನ. ಆದರೆ ಅದಕ್ಕೊಂದು ಪರಿಹಾರ ಹುಡುಕಿ ಜನರ ಪಾಲಿಗೆ ದೇವರಾಗಿದ್ದು ‘ಕೃಪಾಕರ್ ಸೇನಾನಿ” ಎಂಬ ಹೆಸರು. ಆ ಹಾಡಿಯ ಜನರಿಗೆ, ಅವರ ಬದುಕಿಗೆ ಬೆಳಕಾಗಿ ಬಂದಿದ್ದರು ಈ ಕೃಪಾಕರ್ ಸೇನಾನಿ. ಉರುವಲಿಗಾಗಿ ಜನ ಹೋರಾಡುತ್ತಿದ್ದಾಗ “ನಮ್ಮ ಸಂಘ” ಎಂಬ ಟ್ರಸ್ಟ್ ಒಂದು ಹುಟ್ಟಿಕೊಂಡಿತ್ತು ಅದರ ಹಿಂದಿದ್ದವರು ಕೃಪಾಕರ ಬಿ ಮತ್ತು ಸೇನಾನಿ ಹೆಗಡೆ ಎಂಬ ಇಬ್ಬರು ವ್ಯಕ್ತಿಗಳು. ಜೊತೆಗೆ ಯತೀಶ್ ಕುಮಾರ್ ಎಂಬ ಅರಣ್ಯಾಧಿಕಾರಿ. “ನಮ್ಮ ಸಂಘ” ಸ್ಥಳೀಯ ಎಲ್ಲ ಬಡ ಜನರಿಗೆ ಅಡುಗೆ ಅನಿಲವನ್ನ ನೀಡುವ ಕಾರ್ಯವನ್ನ ಯಶಸ್ವಿಯಾಗಿ ನಿರ್ವಹಿಸಲು ಶುರುಮಾಡಿತು. ಪರಿಣಾಮ ಜನರ ಅತ್ಯವಶ್ಯಕ ಉರುವಲಿನ ಸಮಸ್ಯೆ ಬಗೆಹರಿಯಿತು. ಜನ ಆರಾಮವಾಗಿ ಜೀವನ ಸಾಗಿಸತೊಡಗಿದರು. ಅಂದಿನಿಂದ ಇಂದಿನವರೆಗೂ ಅವರ್ಯಾರೂ ಉರುವಲಿಗಾಗಿ ಕಾಡಿಗೆ ಹೋಗಲಿಲ್ಲ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸುತ್ತ ಮುತ್ತಲಿನ ಮೆಲುಕಾಮನಹಳ್ಳಿ, ಹಂಗಳ ಹೀಗೆ ಅನೇಕ ಹಳ್ಳಿಯ ಜನ ಈಗ ಸಂಪೂರ್ಣವಾಗಿ “ನಮ್ಮ ಸಂಘ”ದ ಮೇಲೆ  ಅವಲಂಬಿತರಾಗಿದ್ದಾರೆ. ನಮ್ಮ ಸಂಘದ ನೆಟ್ವರ್ಕ್ 194 ಹಳ್ಳಿಗಳು, ಮತ್ತು ಇದುವರೆಗೆ 29000 ಕುಟುಂಬಗಳು.ಈ ಯೋಜನೆಯು ಯಾವುದೇ ವಿದೇಶಿ ಮತ್ತು ಸರ್ಕಾರದ ನೆರವಿಲ್ಲದೆಯೇ, ಸ್ನೇಹಿತರು ಮತ್ತು ಹಿತೈಷಿಗಳು ಸಂಪೂರ್ಣವಾಗಿ ಸ್ಥಾಪಿಸಲ್ಪಟ್ಟಿತು. ಈ ಯೋಜನೆ ಅನೇಕರಿಗೆ ಮಾದರಿಯೇ ಸರಿ. ಆ ಜನರ ಮನಸ್ಥಿತಿಯನ್ನ ಬದಲಾಯಿಸಿದ್ದಕ್ಕೆ ಕೃಪಾಕರ್ ಸೇನಾನಿ ಅವರಿಗೆ ಧನ್ಯವಾದ ಸಲ್ಲಿಸಲೇ ಬೇಕಲ್ಲವೆ. ಇಷ್ಟು ಹೇಳಿದ ಬಳಿಕವೂ ಕೃಪಾಕರ್ ಸೇನಾನಿ ಕುರಿತು ಇನ್ನೊಂದಿಷ್ಟು ತಿಳಿದುಕೊಳ್ಳುವುದು ಅಗತ್ಯವೇ ಸರಿ.

ಮೊದಲಿಗೆ ನಿಮಗೆ ಕೃಪಾಕರ್ ಸೇನಾನಿ ಒಂದೇ ವ್ಯಕ್ತಿಯ ಹೆಸರು ಅನಿಸುತ್ತದೆ, ಆದರೆ ಕೃಪಾಕರ್ ಬೇರೆ ಸೇನಾನಿ ಬೇರೆ. ದೇಹ ಎರಡಾದರೂ ಪ್ರಕೃತಿಯೊಡನೆ ಮಾತನಾಡುವಾಗ ಕೃಪಾಕರ್ ಸೇನಾನಿ ಒಂದೇ. ಅಷ್ಟು ಚಂದದ ಗೆಳೆತನ ಕೃಪಾಕರ್ ಬಿ ಮತ್ತು ಸೇನಾನಿ ಹೆಗಡೆ ಅವರದ್ದು. Wildlife Photography ಯಲ್ಲಿ ಮೇಲ್ಪಂಕ್ತಿಯ ಹೆಸರು ಕೃಪಾಕರ ಸೇನಾನಿ ಅವರದ್ದು. ಪ್ರಕೃತಿಯೊಡನೆ ಈ ಜೋಡಿಯ ಸಂಬಂಧ ಅನಂತ. ಪ್ರಕೃತಿ ಪ್ರಿಯರ ಜೊತೆ ಮಾತನಾಡುವಾಗ ಪ್ರಸ್ತುತವ ಮರೆಯಬಹುದು, ಅದೊಂತರ ಧ್ಯಾನ ಮಾಡಿದ ಅನುಭವ ನೀಡುತ್ತದೆ. Wildlife Photography ಯ Wikipedia ಈ ಕೃಪಾಕರ್ ಸೇನಾನಿ. ನಮ್ಮ ಸಂಘ ಸ್ಥಾಪಿಸಿ ಅಲ್ಲಿನ ಅದೆಷ್ಟೋ ಬಡ ಹುಡುಗರಿಗೆ ಕೆಲಸ ನೀಡಿ ಅವರುಗಳ ಪಾಲಿಗೆ ಬೆಳಕಾದವರು ಈ ಜೋಡಿ. ಒಂದು ಜನಸಮುದಾಯದ ಮನಸ್ಥಿತಿಯ ಬದಲಾವಣೆ ಮಾಡುವುದು ಸುಲಭದ ಕೆಲಸವಲ್ಲ. ಅದು ಬಂಡೀಪುರದ ಸುತ್ತಮುತ್ತಲಿನ ಹಳ್ಳಿಯ ಜನರಲ್ಲಿ ಆಗಿದೆ.

 ಕೃಪಾಕರ್ ಬಿ ಎಸ್ ಅವರು ಮೈಸೂರು ಡಿ Banumaiah ಕಾಲೇಜ್ ನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಧ್ಯಯನ ಮಾಡಿದರು ಮತ್ತು ಮೈಸೂರು ವಿಶ್ವವಿದ್ಯಾಲಯವನ್ನು ಕ್ರಿಕೆಟ್  ನಲ್ಲಿ ಪ್ರತಿನಿಧಿಸಿದ್ದಾರೆ. ಸೇನಾನಿ ಹೆಗ್ಡೆ, ಕೃಪಾಕರ್ ಅವರ ಜೊತೆ ಸೇರುವ ಮೊದಲು ಬೆಂಗಳೂರಿನಲ್ಲಿ ಮತ್ತು ನಂತರ ಮಂಗಳೂರಿನಲ್ಲಿ ಪತ್ರಿಕೋದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  ಸೇನಾನಿ ಹೆಗಡೆ ಅವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ  ಸಿವಿಲ್ ಎಂಜಿನಿಯರಿಂಗ್ ಪದವಿ ಮಾಡಿದರು ಮತ್ತು  ಅವರು ಕೃಪಾಕರ್ ಜೊತೆ ವನ್ಯಜೀವಿ ಛಾಯಾಗ್ರಹಣ ಮುಂದುವರಿಸಲು ಲಾಭದಾಯಕವಾದ ವ್ಯಾಪಾರವನ್ನ ತ್ಯಜಿಸಿದರು. ಒಟ್ಟಾಗಿ ಈ ಜೋಡಿ ಜನಪ್ರಿಯ ನಿಯತಕಾಲಿಕೆಗಳಿಗೆ ಫೋಟೋ ಪ್ರಬಂಧಗಳನ್ನು ಬರೆದರು. ಆರಂಭದಲ್ಲಿ ಅವರು ವಿಚಿತ್ರವಾದ ಸಣ್ಣ ಹಕ್ಕಿಗಳ ಅಧ್ಯಯನಕ್ಕೆ ಮಂಡ್ಯ ಜಿಲ್ಲೆಯನ್ನ ಆಯ್ದುಕೊಂಡು ಆ   ಸಣ್ಣ ಹಕ್ಕಿಗಳ ಆವಾಸಸ್ಥಾನ, ಅವುಗಳ ಜೀವನ ಶೈಲಿಯ ಬಗ್ಗೆ ವಿಸ್ಕೃತ ಡಾಕ್ಯುಮೆಂಟರಿ ಒಂದನ್ನ ಮಾಡಿದರು. ಅದೇ ಸಮಯದಲ್ಲಿ ಅವರು ಈ ಹಕ್ಕಿಗಳ ಬಗ್ಗೆ ಮತ್ತು ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಜನಪ್ರಿಯ ಲೇಖನಗಳನ್ನು ಬರೆದರು. ನಂತರ ಅವರು ತಮಿಳುನಾಡಿನ ಮಧುಮಲೈ ಅರಣ್ಯಗಳತ್ತ ತೆರಳಿದರು. ಅಲ್ಲಿಂದ ಮುಂದೆ ಈ ಜೋಡಿ ಮಾಡಿದ್ದೆಲ್ಲ ದಾಖಲೆಯಾಯಿತು, ಪ್ರಶಸ್ತಿಗಳು ಹುಡುಕಿಕೊಂಡು ಬಂದವು.

 ಕೃಪಾಕರ್ ಸೇನಾನಿ ಅವರ The Wild Dog Diaries ಗೆ ಪ್ರತಿಷ್ಟಿತ National Geographic ಪ್ರಶಸ್ತಿ ನೀಡಿದೆ.

ಇವಿಷ್ಟೇ  ಅಲ್ಲದೆ:
1. ಫೆಸ್ಟಿವಲ್ ಡಿ ಎಲ್ Oiseau ಮತ್ತು ಡೆಲ್ ಲಾ ನೇಚರ್ 2008 (ಅಬ್ಬೆವಿಲ್ಲಾ, ಫ್ರಾನ್ಸ್) – ಅತ್ಯುತ್ತಮ ಪ್ರಕೃತಿ ಸಾಕ್ಷ್ಯಚಿತ್ರ ಪ್ರಶಸ್ತಿ.
2. ಜಪಾನ್ ವನ್ಯಜೀವಿ ಚಲನಚಿತ್ರೋತ್ಸವದಲ್ಲಿ 2007 (ಕೊರಿಯ, ಜಪಾನ್) – ಫೆಸ್ಟಿವಲ್ ಗ್ರ್ಯಾಂಡ್ ಪ್ರಶಸ್ತಿ.
3. Vatavaran ಪರಿಸರ ಮತ್ತು 2007 ವನ್ಯಜೀವಿ ಚಿತ್ರೋತ್ಸವ (ದಹಲಿ, ಭಾರತ) – ಉತ್ಸವ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆ ಪ್ರಶಸ್ತಿ.
4. ಏಷಿಯನ್ ಟೆಲಿವಿಷನ್ ಅವಾರ್ಡ್ಸ್ನಲ್ಲಿ 2007 (ಸಿಂಗಾಪುರ) – ಅತ್ಯುತ್ತಮ ನ್ಯಾಚುರಲ್ ಹಿಸ್ಟರಿ ಮತ್ತು ವನ್ಯಜೀವಿ ಕಾರ್ಯಕ್ರಮ.
5. Wildscreen 2006 (ಬ್ರಿಸ್ಟಲ್ UK) – ಪಾಂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.
6. NaturVision 2006 (Neuschoenau, ಜರ್ಮನಿ) -ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ.

ಈ ಚಿತ್ರವನ್ನು ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಪ್ರಸಾರ ಮಾಡಲಾಯಿತು. ಈ ಪ್ರಶಸ್ತಿಗಳೊಂದೇ ಅಲ್ಲದೆ ಡಾ ಕೆ ಪುಟ್ಟಸ್ವಾಮಿ ಜೊತೆ ಸಹಲೇಖಕರಾಗಿ ಬರೆದ  ‘ಜೀವ ಜಲ’, ವಿಜ್ಞಾನ ಬರವಣಿಗೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1999 ಸಾಧಿಸಿದೆ.ಬಹುಮುಖ್ಯವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿನ ಅವರ ಒಟ್ಟಾರೆ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ರಿಂದ, 2006 ರಲ್ಲಿ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಲಾಯಿತು.ಇಷ್ಟೇ ಅಲ್ಲದೆ ಅವರ ಚಿತ್ರಗಳನ್ನು ಜಿಯೋ, ಟೈಮ್ಸ್, ಪೀಪಲ್, ಬಿಬಿಸಿಯಂತಹ ಚಾನೆಲ್ ಗಳು ಪ್ರಕಟಿಸಿವೆ.

 ಬಹು ಮುಖ್ಯವಾಗಿ ವನ್ಯಜೀವಿ ಚಲನಚಿತ್ರಗಳ ನಿರ್ಮಾಪಕರಾದ ಕೃಪಾಕರ್ ಮತ್ತು ಸೇನಾನಿ ಅವರ ನಿರ್ಮಾಣದ  Asian Wilddogs ಅಥವಾ dhole ಅಥವಾ The Pack ಚಿತ್ರವನ್ನು ಇಂಗ್ಲೆಂಡಿನ ಬ್ರಿಸ್ಟಲ್ ನಲ್ಲಿ ನಡೆದ Wildscreen  ಪ್ರತಿಷ್ಟಿತ  ಗ್ರೀನ್ ಆಸ್ಕರ್  ಚಲನಚಿತ್ರೋತ್ಸವಕ್ಕೆ ನಾಮ ನಿರ್ದೇಶನ ಮಾಡಲಾಯಿತು ಮತ್ತು ಅಲ್ಲಿ The Pack ಗ್ರೀನ್ ಆಸ್ಕರ್ ಪ್ರಶಸ್ತಿಯನ್ನ ತನ್ನದಾಗಿಸಿಸಿಕೊಂಡಿತು. ನಿರ್ಮಾಣ,ಅತ್ಯುತ್ತಮ ಚಲನಚಿತ್ರ ಮತ್ತು ಗ್ರೀನ್ ಆಸ್ಕರ್ ಈ ಮೂರನ್ನೂ ಗೆದ್ದ ಮೊದಲ Asians ಆಗಿ ನಮ್ಮ ಹೆಮ್ಮೆಯ ಕನ್ನಡಿಗರು ಹೊರಹೊಮ್ಮಿದ್ದರು.  The Pack ಗೆ ಪೈಪೋಟಿಯನ್ನ ನೀಡಿದ್ದ ಚಿತ್ರ ಪ್ರಸಿದ್ಧ ನಿರ್ದೇಶಕ Atenbarro ನಿರ್ಮಾಣದ “The Life” ಆಗಿತ್ತು. ಕೃಪಾಕರ್ ಸೇನಾನಿ ಜೋಡಿ ಖ್ಯಾತ ವಿಜ್ಞಾನಿ ಡಾ ಜಾರ್ಜ್ Shaller ರಿಂದ ಪುರಸ್ಕಾರಗಳನ್ನು ಸ್ವೀಕರಿಸಿತು.

 “ಪ್ಯಾಕ್” ಅದೊಂದು ಅದ್ಭುತವಾದ ಡಾಕ್ಯುಮೆಂಟರಿ. ಒಂದು ದಶಕಕ್ಕೂ ಹೆಚ್ಚಿನ ಕಾಲ  ನೀಲಗಿರಿಯ ದಟ್ಟ ಕಾಡುಗಳಲ್ಲಿ ಸೇನಾನಿ ಕೃಪಾಕರ್ ಕ್ಯಾಮರಾ ಹಿಡಿದು ಕೂತಿದ್ದರು. WildDogs ಗಳ Special life style ಅನಾವರಣಗೊಳಿಸಿದ್ದರು ಕೃಪಾಕರ್ ಸೇನಾನಿ. ಕೃಪಾಕರ್ ಸೇನಾನಿ ಅವರ ಈ ಚಲನಚಿತ್ರ 47 ನಿಮಿಷದ್ದಾಗಿದೆ. ಆ ಡಾಕ್ಯುಮೆಂಟರಿಯ ಸಣ್ಣ ತುಣುಕು ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ಇಂತಹ ಅದ್ಭುತಗಳನ್ನ ನಮ್ಮಲ್ಲಿಯೇ ಇಟ್ಟುಕೊಂಡು ಡಿಸ್ಕವರಿ ಚಾನೆಲ್ ನ  Man Vs Wild ನ ಪಕ್ಕಾ 420 Brayn Grills ಅನ್ನ ನಾವು follow ಮಾಡಬೇಕಾ? ಈಗ ಸದ್ಯ Walkin With Wolves ಅನ್ನೊ ಇನ್ನೊಂದು ಚಲನಚಿತ್ರ ಬಿಡುಗಡೆ ಮಾಡಿದ್ದರು ಕೃಪಾಕರ್ ಸೇನಾನಿ, ಅದು ಕೂಡ ಬಹಳ ಸುಂದರವಾದ ಅದ್ಭುತವಾದ ಡಾಕ್ಯುಮೆಂಟರಿ.

 “ಪ್ರವಾಸೋದ್ಯಮ ಬೆಳೆವಣಿಗೆ ಜನರಿಗೆ ಕೇವಲ ಹುಲಿ ತೋರಿಸಿದರೆ ಆಗುವುದಿಲ್ಲ, ಜನರಿಗೆ ಕಾಡಿನ ಮಹತ್ವ, ಕಾಡಿನೊಳಗಿರುವ ಆ ಸುಂದರ ಸಂವಹನ ತಿಳಿಸುವ ಕಾರ್ಯ ಮಾಡಬೇಕು “ಎಂದು ಸೇನಾನಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಒಂದು ಸ್ವಚ್ಛ ಮನಸ್ಸಿನಿಂದ ಕಾಡನ್ನ ಹೊಕ್ಕರೆ, ಅಲ್ಲಿನ ಆ ಪ್ರಕೃತಿಯೊಡನೆ ಸಂವಹನ ಮಾಡುವ ಪ್ರಯತ್ನಮಾಡಿದರೆ ಒಂದು ಸಾರ್ಥಕ ಮನೋಭಾವದಿಂದ ನಾವು ಹೊರ ಬರುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದನ್ನು ಈ ಜೋಡಿ ನಮಗೆ ಸಾಬೀತು ಮಾಡಿ ತೋರಿಸಿದೆ. ಕೃಪಾಕರ್ ಸೇನಾನಿ ತರಹದ ವ್ಯಕ್ತಿಗಳು ನಮಗೆ ಪ್ರಕೃತಿಯ ಪರಿಚಯವನ್ನ ಅದ್ಭುತವಾಗಿ ಮಾಡುತ್ತಿದ್ದಾರೆ ಅವರಿಗೆಲ್ಲ  ನಾವು ಕೃತಜ್ಞರಾಗಿರಲೇಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!