Author - Namratha K

ಅಂಕಣ

ಎ, ಬಿ, ಸಿ, ಡಿ… ಗೆ ಲಕ್ಷ ಲಕ್ಷ….!!!

ಗೆಜ್ಜೆ ಕಾಲ್ಗಳ ಆ ಪುಟ್ಟ ಪುಟ್ಟ ಹೆಜ್ಜೆಗಳು, ಆ ಮುಗ್ಧ ನಗು, ಆಟ – ತುಂಟಾಟಗಳು, ಮುದ್ದಾದ ತೊದಲು ನುಡಿ… ಮಗುವಿನ ಸುಂದರ ಭವಿಷ್ಯದ ಕನಸನ್ನು ಕಣ್ಣಲ್ಲಿ ಕಟ್ಟಿಕೊಂಡು, ಅದರ ಬಾಲ್ಯದ ಮುಗ್ಧತೆಯನ್ನು ಸವಿಯುತ್ತಿರುವ ತಂದೆ ತಾಯಂದಿರು, ಮಗುವಿನ ಚೇಷ್ಟೆಗಳಲ್ಲಿ ತಮ್ಮನ್ನು ತಾವೇ ಮರೆಯುತ್ತಿರುವ ಆ ಹಿರಿ ಜೀವಗಳು.. ಈಗ್ಗೆ ಕಳೆದ ಕೆಲವು ವರುಷಗಳವರೆಗೂ ಪುಟ್ಟ ಮಕ್ಕಳಿರುವ...

ಅಂಕಣ

ಬೌದ್ಧಿಕ ಮೀಸಲಾತಿ…?

ಮೀಸಲಾತಿ… ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು ಸಬಲರನ್ನಾಗಿಸುವ ಸಲುವಾಗಿ ಜನ್ಮತಳೆದ ವ್ಯವಸ್ಥೆಯೇ ಈ ಮೀಸಲಾತಿ. ಆಗಸ್ಟ್ 1932 ರಲ್ಲಿ ಬ್ರಿಟನ್  ಪ್ರಧಾನಿಯ ಒಂದು ಯೋಜನೆಯ ಫಲವಾಗಿ ಜನ್ಮ ತಳೆದ ಈ ವ್ಯವಸ್ಥೆಯು ಜಾತಿ, ಧರ್ಮಗಳ ಮೇಲೆ ಅವಲಂಬಿತವಾಗಿದ್ದ ಕಾರಣ ಇದನ್ನು ಬ್ರಿಟಿಷರ ಒಡೆದು ಆಳುವ ನೀತಿಯ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತದೆ. ...

ಪ್ರಚಲಿತ

ಭಾರತೀಯ ಶಿಕ್ಷಣ: ಬದಲಾವಣೆಯ ಅಗತ್ಯತೆ

ಕಲಿಕೆ, ಮೂರಕ್ಷರದ ಪದವಾದರೂ, ಅಗಾಧ ಅರ್ಥ ಉಳ್ಳದ್ದು. ಹುಟ್ಟಿನಿಂದ ಸಾಯುವ ತನಕವೂ ಪ್ರತಿಯೊಂದು ಜೀವಿಗೂ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಪ್ರತಿದಿನವೂ ಪ್ರತಿ ಕ್ಷಣವೂ ಕಲಿತರೂ ಮುಗಿಯದಷ್ಟು ಸಂಗತಿಗಳು ಜೀವನದಲ್ಲಿ ಹಾದುಹೋಗುತ್ತವೆ. ಇದೇ ಕಲಿಕೆ ಎಂಬ ಪದವನ್ನು ಒಂದು ಚೌಕಟ್ಟಿನೊಳಗೆ ಇಟ್ಟು ಹೇಳುವುದಾದರೆ ಅದುವೇ ಶಾಲಾ ಶಿಕ್ಷಣ. ಅಂದರೆ ಇದು ಜೀವನದ ಅಗಾಧ ಕಲಿಕೆಯ...