Author - Deepthi Delampady

ಕಥೆ

ಉದ್ಯೋಗ

ಪದ್ಮಿನಿ ತಂದಿಟ್ಟ ಚಹಾವನ್ನು ಗುಟುಕರಿಸಿ ಕುರ್ಚಿಯಿಂದೆದ್ದರು ಮನೋಜ ರಾಯರು. ಬೆಳಗ್ಗಿನಿಂದ ಇದು ನಾಲ್ಕನೇ ಲೋಟ. ಖಾಲಿ ಲೋಟವನ್ನು ಮೇಜಿನ ಮೇಲಿಟ್ಟು ಅಪರಾಹ್ನದ ಕ್ಲಾಸುಗಳಿಗೆ ಹೊರಟಾಗ ಒಳಗಿನಿಂದ ಪದ್ಮಿನಿ “ಬರುವಾಗ ಸಕ್ಕರೆ ಮತ್ತು ಈರುಳ್ಳಿ ತನ್ನಿ” ಎಂದಿದ್ದು ಕೇಳಿಸಿತು. “ಅಯ್ಯೋ, ನನ್ನ ಕರ್ಮ! ಮನೇಲೇ ಇಡೀ ದಿನ ಬಿದ್ದಿರ್ತೀಯಾ. ನೀನೇ ತಗೊಂಡ್...

ಕವಿತೆ

ಬೆಳಕಿನೆಡೆಗೆ

ಕತ್ತಲೆಯ ಒಡಲಿಂದ ರವಿಯ ಮಡಿಲಿಗೆ ಬಂದು ಕುಳಿತಿರುವಿರೇಕೆ,ನಿಮಗಾರ ನಿರೀಕ್ಷೆ? ಮೃದು ಮಂದಹಾಸ ಮೊಗದ ತುಂಬೆಲ್ಲಾ ಸೂಸೆ, ನನಗಚ್ಚರಿ ನಿಮಗಿರುವುದಾರ ಪ್ರತೀಕ್ಷೆ! ಪುರುಷ ದಬ್ಬಾಳಿಕೆಯ ಈ ಜಗದ ನಡುವಿನಲಿ ಸಂಕೋಲೆ,ಬಹುಬಂಧನಗಳ ಕಳಚಿ ಜೀವ ಜಗದ ಕಡೆ ಮುಖ ಮಾಡಿ ನಿಂತಿರುವಿರಿ ಸಂಸಾರ ತಾಪತ್ರಯಗಳಿಂದ ನುಣುಚಿ! ಜಗದ ತುಂಬೆಲ್ಲಾ ಗಾಢಾಂಧಕಾರವಿರೆ ಬೆಳಕ ಅರಸುತ ನೀವು ಬಂದಿರೇನು...

ಕಥೆ

ಕರ್ತವ್ಯ

ಮಳೆ ಸುರಿಯುತ್ತಿದೆ,ಧೋ ಎಂದು. “ಎಂತ ಸಾವು ಮಾರ್ರೆ, ಬಟ್ಟೆ ಸ್ವಲ್ಪಸಾ ಒಣಗುದಿಲ್ಲ”, ಆಚೆ ಮನೆಯವರು ಹೇಳುವುದು ಕೇಳಿತು. ಒಬ್ಬೊಬ್ಬರದ್ದು ಒಂದೊಂದು ಚಿಂತೆ. ನನಗಿನ್ನೂ ಶಾಲೆಯಿಂದ ಮಗ ಯಾಕೆ ಬರಲಿಲ್ಲವೆಂದು ಯೋಚಿಸಿ ತಲೆ ಕೆಡುತ್ತಿದೆ.ಇವರಿಗೋ, ಇವರ ಲೋಕವೇ ಆಯ್ತು. ಒಮ್ಮೆಯಾದರೂ ಮಗನ ಬಗ್ಗೆ ತಲೆಕೆಡಿಸಿಕೊಂಡದ್ದು ಇದೆಯೇ? ಅವನ ರಿಸಲ್ಟ್ ಬಂದದ್ದೂ ಇವರಿಗೆ...

ಕಥೆ

ಕಾಲಾಯ ತಸ್ಮೈ ನಮಃ

ಯಾವಾಗಲೂ ಸಂಜೆ ಆರಾದರೂ ಮನೆ ಸೇರದಿರುತ್ತಿದ್ದ ಮಗರಾಯ ಇಂದು ಐದೂವರೆಗೇ ಸಪ್ಪೆ ಮುಖ ಮಾಡಿ ಕಾಲೆಳೆಯುತ್ತಾ ಬಾಗಿಲ ಬಳಿ ಬಂದು ನಿಂತುದನ್ನು ನೋಡಿ ಏನೋ ಎಡವಟ್ಟಾಗಿದೆ ಅಂದುಕೊಂಡೆ. “ಯಾಕೋ ಪುಟ್ಟಾ, ಫ್ರೆಂಡ್ಸ್ ಬಂದಿಲ್ವಾ ಆಡಕ್ಕೆ ಇವತ್ತು?” ಎಂದು ಕೇಳಿದ್ದೇ ತಡ, ಅಳುತ್ತಾ “ಅಪ್ಪಾ, ಇವತ್ತು ಪಾರ್ಕಿಂಗ್ ಲಾಟ್ನಲ್ಲಿ ಒಂದು ಜಾಗ ಖಾಲಿ ಇತ್ತು ಅಂತ...

ಕಥೆ

“ರಾಮಾಯಣ ಬರೆದವರು ಯಾರು? “

“ರಾಮಾಯಣ ಬರೆದವರು ಯಾರು? ” ಮೇಷ್ಟರ ಪ್ರಶ್ನೆಗೆ “ವೇದವ್ಯಾಸ” ಎಂದುತ್ತರ ಕೊಟ್ಟು ಬೆನ್ನಿಗೆ ಛಡಿಯೇಟಿನ ಆಹ್ವಾನ ನೀಡಿದ ಪುರುಷೋತ್ತಮ. “ಥೂ,ನಾಚಿಕೆ ಆಗ್ಬೇಕು ನಿಮ್ಗೆಲ್ಲಾ.ಇಂಥ ಸುಲಭ ಪ್ರಶ್ನೆಗೂ ಉತ್ತರ ಗೊತ್ತಿಲ್ವಲ್ಲ.ಕರ್ಮ ಕರ್ಮ!”, ತಲೆ ಚಚ್ಚಿಕೊಂಡರು ನಾರಾಯಣ ಮೇಷ್ಟ್ರು. “ಪುರುಷೋತ್ತಮ ಅಂತ ಹೆಸರು ಬೇರೆ...

ಕಥೆ

ಮಾಯಾಮೃಗ

“ಥೂ ದರಿದ್ರ ಬೆಕ್ಕು “, ಶಾಂತಜ್ಜಿ ಸಹಸ್ರ ನಾಮಾರ್ಚನೆಗಿಳಿಯುತ್ತಿದ್ದಂತೆ ರಾಮು ಸದ್ದು ಮಾಡದೇ ಬೆಕ್ಕನ್ನು ಹಿತ್ತಲ ಬಾಗಿಲಿನಿಂದಾಗಿ ಹೊರ ಒಯ್ದ. ಅದ್ಯಾವುದೋ ಕಪ್ಪು ಬಿಳಿ ಬಣ್ಣದ ಬೆಕ್ಕು ಮೂರ್ನಾಲ್ಕು ದಿನಗಳಿಂದ ಶಾಂತಜ್ಜಿಯ ಮನೆಯಲ್ಲಿ ಬೀಡು ಬಿಟ್ಟಿತ್ತು. ಅದೇನು ಮರಿಬೆಕ್ಕಲ್ಲ. ಅದಕ್ಕೆ ತನ್ನ ಮನೆ ಬಗೆಗೆ ಕನ್‌ಫ್ಯೂಷನ್ನೋ, ಅಥವಾ ಈ ಹೊಸ ಮನೆಯನ್ನೇ...

ಕಥೆ

ಅಭಿನಯ

“ಒಂದು ಕೆ.ಜಿ. ಟೊಮ್ಯಾಟೊ ಕೊಡಪ್ಪಾ” ಆತ ತರಕಾರಿಯವನಿಗೆ ಹೇಳುತ್ತಿದ್ದಂತೆ ಯಾರೋ ಹಿಂದಿನಿಂದ “ಹೋಯ್” ಅಂದದ್ದು ಕೇಳಿಸಿತು. ಒಬ್ಬ ಸಾಧಾರಣ ಮೈಕಟ್ಟಿನ ವ್ಯಕ್ತಿ ದಪ್ಪ ಗಾಜುಗಳ ಹಿಂದಿನಿಂದ ತೀಕ್ಷ್ಣವಾಗಿ ನೋಡುತ್ತಾ ಹತ್ತಿರ ಬರುತ್ತಿದ್ದುದು ಕಾಣಿಸಿತು. “ನೀನೇ ಅಲ್ಲವಾ ಅದು,ಹೆಂಡತಿಗೆ ದಿನಾ ಹೊಡ್ಯೋನು? ಹೆಣ್ ಮಕ್ಳ ಕಣ್ಣಲ್ಲಿ ನೀರ್...

ಕಥೆ

ಕಥೆ: ವಾಸ್ತವ

“Hello!” ಫೇಸ್ಬುಕ್ಕಿನಲ್ಲಿ ಅಪರಿಚಿತ ಪ್ರೊಫೈಲ್ ನಿಂದ ಮೆಸೇಜ್ ಬಂತು. ಸಾಮಾನ್ಯವಾಗಿ ನಾನು ಅಪರಿಚಿತ ವ್ಯಕ್ತಿಗಳಿಗೆ ಉತ್ತರಿಸುವುದಿಲ್ಲವಾದ್ದರಿಂದ ಪ್ರತಿಕ್ರಿಯಿಸಲು ಹೋಗಲಿಲ್ಲ. ಎರಡುನಿಮಿಷಗಳ ಬಳಿಕ “ಇವತ್ತು ನಿನ್ನನ್ನು ಬಸ್ ಸ್ಟಾಂಡ್ ನಲ್ಲಿ ನೋಡಿದೆ ” ಎಂಬ ಮೆಸೇಜ್. ಒಮ್ಮೆ ಗಾಬರಿಯಾದರೂ ಸಾವರಿಸಿಕೊಂಡು “ಯಾರು ನೀವು...

ಕವಿತೆ

ನೆನಪು 

ಬಿಡಿಸಲಾಗದ ಬಂಧ ನಮ್ಮದೀ ಸ್ನೇಹ ಒಮ್ಮೆ ಒಳನಡೆಯೆ,ಹೊರಬರಲಾಗದ ವ್ಯೂಹ ಇಂಥ ಬಂಧನದಿ ನಮ್ಮ ಸಿಲುಕಿಸಿ ಓ ಗೆಳತಿ, ಮರಳಿ ಬಾರದ ಕಡೆಗೆ ಯಾಕೆ ನೀ ನಡೆದಿ? ಎರಡು ದಶಕದ ಹಿಂದೆ ನಮ್ಮ ಬದುಕಿನಲಿ ಗೆಳೆತನದ ಹೊಸ ಭಾಷ್ಯ ಬರೆದೆ ಒಲವಿನಲಿ ಬರೆದ ಪ್ರತಿ ಪುಟಗಳಲೂ ನೆನಪುಗಳ ಸುಗ್ಗಿ ಒಮ್ಮೆ ಕಹಿ ಬೇವಾದರೆ,ಮತ್ತೊಮ್ಮೆ ಹುಗ್ಗಿ ಎಷ್ಟೋ ಕಾಲದ ಬಳಿಕ ಆಗಿಹುದು ಭೇಟಿ ಹೇಳಲುಳಿದಿಹ...

ಕಥೆ

 ವಿಪರ್ಯಾಸ

ಕೈಯೊಂದು ಭುಜದ ಮೇಲೆ ಬಡಿದಂತಾಗಲು ರಪ್ಪನೆ ಹಿಂದಿರುಗಿ ನೋಡಿದಾಗ ,”ಏನ್ರೀ ನಾಗರತ್ನಮ್ಮ,ನಾನ್ ಕಣ್ರೀ ಇದು! ಇಷ್ಟೊಂದು ಬೆಚ್ಚಿ ಬೀಳ್ತಿದೀರಲ್ಲಾ?”, ದೊಡ್ಡ ಕುಂಕುಮ ಬೊಟ್ಟಿನ ಮಹಿಳಾಮಣಿ ಲಕ್ಷ್ಮೀ ಕೇಳಿದರು. “ಹೌದು, ನಾನೂ ಬೆಳಗಿನಿಂದ ನೋಡ್ತಾ ಇದೀನಿ. ಫಂಕ್ಷನ್ ಅಲ್ಲಿ ಇನ್ವೋಲ್ವ್ ಆಗಿಲ್ಲ ನೀವು, ಏನಾದ್ರೂ ಸಮಸ್ಯೆಯೇ?” ಲತಾಂಗಿ ಉಲಿದಳು...