Author - Prasanna Hegde

ಅಂಕಣ

ಅಕ್ರಮ ಆಗಂತುಕರ ಹಾರಾಟ ಮತ್ತು ‘ಮಾನವ ಹಕ್ಕು ಹೋರಾಟ’

ಭಾರತದ ಉಳಿವಿಗೆ ಹೊಸಹೊಸ ದಾರಿ ಸೃಷ್ಟಿಯಾಗುತ್ತಿದ್ದಂತೆ, ಅದನ್ನು ವಿರೋಧಿಸುವವರು ಧರಿಸುವ ಮುಖವಾಡವೇ ಮಾನವ ಹಕ್ಕು ಹೋರಾಟಗಾರ, ಜಾತ್ಯತೀತವಾದಿ ಹೀಗೆ ಇನ್ನೂ ಏನೇನೋ. ಈಗ ಸದ್ಯದ ಪರಿಸ್ಥಿತಿಯಲ್ಲಿ ಭಾರತವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ, ಅಕ್ರಮ ನುಸುಳುಕೋರರ ಹಾವಳಿ. ಇದನ್ನು ತಡೆಯಲು ಸಿದ್ಧಗೊಳಿಸಿದ ಕರಡು ಪ್ರತಿ ಅಥವ ಕಾನೂನೇ ರಾಷ್ಟ್ರೀಯ ಪೌರತ್ವ ನೋಂಡಣಿ...

ಅಂಕಣ

ಕನಸಿಗೆ ಜೀವ ಬಂದು ಈಗೊಂದು ವರ್ಷ….

ಅಬ್ಬಾ!! ಅಂತೂ ‘ನಮ್ಮ ಜಿಎಸ್ ಟಿ’ ಗೆ ಒಂದು ವರ್ಷ ತುಂಬಿತು. 2000ನೇ ಇಸ್ವಿಯಲ್ಲಿ ಅಟಲ್ ಜಿ ಕಂಡ ಕನಸನ್ನು ಈಡೇರಿಸಲು ಮೋದಿ ಬಂದರು. ಈಗ ಈ ಕನಸಿನ ಕೂಸಿಗೆ ಸಂಪೂರ್ಣ ಒಂದು ವರ್ಷ ತುಂಬಿದೆ. ಈ ಒಂದು ವರ್ಷದ ಹಾದಿ ಎಲ್ಲರಿಗೂ ಕಠಿಣವಾದದ್ದಂತೂ ಹೌದಾಗಿತ್ತು. ಸರಕಾರದ ಅವಿರತ ಶ್ರಮ,ಸನ್ನದು ಲೆಕ್ಕಿಗರ ಅಭಿನಂದನಾರ್ಹ ಕೆಲಸ  ಮತ್ತು ಸಾಮಾನ್ಯ ಜನರ ಅಪ್ರತಿಮ...

ಅಂಕಣ

ಭರವಸೆಯ ತೇಜಸ್ಸು ‘ಸೂರ್ಯ’ನ ರೂಪದಲ್ಲಿ….

ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ, ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ...

Featured ಅಂಕಣ

ಅಡಿಕೆಗೆ ಬೆಂಬಲವಾಗಿ ನಿಂತಿದ್ದ ನೀವೇ ಈಗ ಅಡಿಕೆ ನಿಷೇಧಕ್ಕೆ ಹೊರಟರೆ ಹೇಗೆ...

ಈಗ ಒಂದು ಸುದ್ದಿ ಓಡಾಡುತ್ತಿದೆ. ಅದೇ ಅಡಿಕೆ ನಿಷೇಧದ ಸುದ್ದಿ. ಇದಕ್ಕೆ ಇಂಬು ಕೊಡುವಂತಹ ಒಂದು ವಿದ್ಯಮಾನ ಡಿಸೆಂಬರ್ 22, 2017 ರಂದು ನಡೆದಿದೆ(ಅಂದು ನಡೆದ ಈ ಘಟನೆ ಈಗ ಹೇಗೆ ಮುನ್ನೆಲೆಗೆ ಬಂತು? ಇದೂ ಕೂಡ ವಿಚಿತ್ರವೇ ಹೌದು). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಶ್ರೀಮತಿ ಅನುಪ್ರಿಯ ಪಟೇಲ್ ಡಿಸೆಂಬರ್ 22 ರಂದು ನಡೆದ ಲೋಕಸಭೆಯ ಪ್ರಶ್ನೋತ್ತರ...

ಕಥೆ

ಹೆಜ್ಜೆ ಮೂಡದ ಹಾದಿ

ಮನೆಯ ಅಂಗಳದ ತುದಿಯಲ್ಲಿನ ಒಲೆಗೆ ನಿನ್ನೆ ರಾತ್ರಿ ಹಚ್ಚಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಒಳಗೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಬಡಬಡಾಯಿಸುತ್ತಲಿತ್ತು. ಕಂಬನಿಯ ಒರೆಸಿಕೊಂಡ ಕೈ ಒದ್ದೆಯಾಗಿಯೇ ಇತ್ತು. ಆದರೂ ಮುಖದ ಮೇಲೆ ನಗುವೊಂದು ಮೂಡಲೇಬೇಕಿತ್ತು. ಅವಳು ಸೋತಿದ್ದಳು. ಬಾಡಿದ ಮುಖದ ಮೇಲೆ ಮೂಡುತ್ತಿದ್ದ ನಗು ಮನದ ಭಾವನೆಯ ಪ್ರತಿಫಲನವಂತೂ ಅಲ್ಲವಾಗಿತ್ತು. ಆದರೂ...

ಅಂಕಣ

ಕನ್ನಡದ ಕವಿತೆಯ ಹಾಡುವಲ್ಲೆಲ್ಲ ಇರುವ ‘ಅನಂತ’ರು….

ನಮ್ಮ ಕನ್ನಡ ನಾಡಿನದ್ದು  ಶ್ರೀಮಂತ ಸಂಸ್ಕೃತಿ. ಕನ್ನಡದ  ಶ್ರೀಮಂತ ಸಂಸ್ಕೃತಿಯ ಕೀರ್ತಿ ಕಲಶವೇ ‘ಸುಗಮ ಸಂಗೀತ’. ಇಪ್ಪತ್ತನೇ ಶತಮಾನದ ಕಾಣಿಕೆಯಾದ ಸುಗಮಸಂಗೀತ ತನ್ನ ಹೆಸರಿನಲ್ಲಿಯೇ ಹೇಳುವಂತೆ ಸುಗಮವಾಗಿ ಹರಿಯುವಂತಹ ಒಂದು ಗಾಯನ ನಿರೂಪಣಾ ಶೈಲಿ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಕವಿತೆಯ ಅರ್ಥವನ್ನು ತನ್ನ ವಿನೂತನ ನಿರೂಪಣೆಯಿಂದ ವ್ಯಾಖ್ಯಾನಿಸಿ...

ಅಂಕಣ

ಉತ್ತರ ಹುಡುಕುವವರಾರು ಉತ್ತರಕನ್ನಡಕ್ಕೆ?

ಭ್ರಮನಿರಸನ ಉಂಟುಮಾಡುವ ರಾಜಕಾರಣಿಗಳ ಸಂಖ್ಯೆ ನಮ್ಮ ಉತ್ತರಕನ್ನಡದಲ್ಲಂತೂ ಹೆಚ್ಚಾಗುತ್ತಲೇ ಇದೆ. ಒಂದು ಹಂತದವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ ಕಾಲಕ್ರಮೇಣ ಎಲ್ಲವೂ ಬದಲಾಗುತ್ತದೆ. ರಾಮಕೃಷ್ಣ ಹೆಗಡೆಯವರಂತಹ ಮತ್ತೊಬ್ಬ ಮುತ್ಸದ್ದಿ ರಾಜಕಾರಣಿ ನಮ್ಮ ಜಿಲ್ಲೆಗೆ ದೊರಕಲೇ ಇಲ್ಲ. ಈಗ ಇರುವವರಲ್ಲಿ ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತಾರೆ ಕಾರಣ ಅವರ ನೇರ ನುಡಿ...

ಅಂಕಣ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಂಸ್ಕೃತಿಯ ಹರಣ

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಸದ್ಯಕ್ಕೆ ಭಾರತದಲ್ಲಿ ವಿಪರೀತ ಸದ್ದು ಮಾಡುತ್ತಿರುವ ವಿಷಯ. ಈ ಎಡಪಂಥೀಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿಮಾಡಿ ತಲೆಮರೆಸಿಕೊಳ್ಳಲು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಮೋದಿ ಪ್ರಧಾನಿಯಾದಾಗಿನಿಂದ ಇವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ’...

ಅಂಕಣ

ಬದಲಾವಣೆಯ ವಿರೋಧಿಸುವ ಮೊದಲು ಸ್ವಲ್ಪ ಯೋಚಿಸಿ

ಜಿ.ಎಸ್.ಟಿ. ಒಂದು ಹೊಸ ತೆರಿಗೆ ಸಾಮ್ರಾಜ್ಯ. ಈ ಸಾಮ್ರಾಜ್ಯವ ಕಟ್ಟಬೇಕಾದರೆ ಎಲ್ಲವೂ ಹೊಸದರಿಂದಲೇ ಶುರುವಾಗಬೇಕು. ಒಂದು ವೇಳೆ ಮೋದಿ ಈ ವ್ಯವಸ್ಥೆಯ ತರದೇ ಇದ್ದರೆ? ಅದು ಚರ್ಚೆಯ ಇನ್ನೊಂದು ವಿಷಯವಾಗುತ್ತದೆ. ಆದರೆ ಸಂಪೂರ್ಣ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ದೊಡ್ಡ ಧೈರ್ಯ ಮಾಡಿದರಲ್ಲ ಅದು ನನಗೆ ಖುಷಿ ಕೊಟ್ಟಿದೆ. ಹೊಸಮನೆಗೆ ಅಥವಾ ಒಂದು ಸಣ್ಣ ರೂಮಿಗೆ...

ಅಂಕಣ

ಸುಳ್ಳು ಮಾತನಾಡಿದರೆ ನಿಮ್ಮ ಸಾಮಾಜಿಕ ಬದ್ಧತೆಯನ್ನೂ ನಾವು...

ನಟರುಗಳ ಆರ್ಭಟ ಜೋರಾಗಿದೆ. ತೆರೆ ಮೇಲೆ ಯಾರೋ ಬರೆದುಕೊಟ್ಟ ಸಂಭಾಷಣೆಯನ್ನು ಹೇಳುವ ನಟರು ಈಗ ಕೆಲವು ದಿನದ ಹಿಂದೆ ತೆರೆಯಿಂದಾಚೆಗೂ ಬಂದು ಅಪ್ರಬುದ್ಧವಾಗಿ ಒದರುತ್ತಿದ್ದಾರೆ. ತೆರೆ ಮೇಲೆ ಸಂಭಾಷಣೆಯನ್ನು ಯಾರೋ ಬರೆದುಕೊಟ್ಟಂತೆ ಹೇಳುವ ಮೊದಲು ಸ್ವಲ್ಪ ‘ಅನಾಲಿಸಿಸ್’ ಮಾಡುವುದು ನಟನ  ಜವಾಬ್ದಾರಿ. ಎಷ್ಟೋ ನಟರು ಇದನ್ನು ಪಾಲಿಸಬಹುದು. ಈಗ ಕೆಲವು ದಿನಗಳ...