ಅಣ್ಣಪ್ಪ ಅವರ ಹತ್ತಿರದ ಸಂಬಂಧಿಯೊಬ್ಬರು ಮೆದುಳಿನ ರೋಗಕ್ಕೆ ತುತ್ತಾಗಿ ಸಣ್ಣ ಪ್ರಾಯದಲ್ಲೇ ಇಹಲೋಕವನ್ನು ತ್ಯಜಿಸಿದರಂತೆ. ಅವರ ಕಷ್ಟವನ್ನು ಕಣ್ಣಾರೆ ಕಂಡ ಅಣ್ಣಪ್ಪ, ಇಂತಹಾ ವಿಶೇಷಚೇತನರಿಗಾಗಿ ನಾನೇನಾದರೂ ಮಾಡಬೇಕು ಅಂತ ನಿರ್ಧರಿಸಿದರು. ಅದರ ಭಾಗವಾಗಿಯೇ ಹುಟ್ಟಿಕೊಂಡಿದ್ದು “ಪ್ರಜ್ಞಾ ನರ ಮಾನಸಿಕ ಕೇಂದ್ರ”. ಪುತ್ತೂರು ತಾಲೂಕಿನ ಕರ್ಮಲ ಎನ್ನುವಲ್ಲಿ...
Author - Shivaprasad Bhat
ಇವರನ್ನು ಬೈಯುವುದಕ್ಕೆ ನಮಗೆ ಮನಸಾದರೂ ಹೇಗೆ ಬಂದೀತು?
ನನ್ನ ನೆರೆಹೊರೆಯವರಲ್ಲೊಬ್ಬ ಲೈನ್ ಮ್ಯಾನ್ ಇದ್ದಾನೆ. ಮಧ್ಯವಯಸ್ಕ. ಹೆಂಡತಿ-ಎರಡು ಮಕ್ಕಳ ಜೊತೆಗೆ ಸುಖ ಸಂಸಾರ. ಅವನು ಒಮ್ಮೆ ಕೆಲಸದಲ್ಲಿ ನಿರತನಾಗಿದ್ದಾಗ ತೀವ್ರತರವಾದ ವಿದ್ಯುತ್ ಶಾಕ್ ತಗುಲಿ ಕಂಬದಲ್ಲೇ ನೇತಾಡಿಕೊಂಡಿದ್ದ. ದೇಹದ ಬಹಳಷ್ಟು ಭಾಗಗಳು ಸುಟ್ಟು ಹೋಗಿತ್ತು. ನಾಲ್ಕೈದು ತಿಂಗಳುಗಳ ಕಾಲ ಕೋಮಾದಲ್ಲಿದ್ದು ಬಳಿಕ ನಿಧಾನಕ್ಕೆ ಚೇತರಿಸಿಕೊಂಡ. ಮತ್ತೆ ಡ್ಯೂಟಿಗೆ...
ಶಿರಾಡಿ ಘಾಟ್ ಸತ್ಯಶೋಧನೆಯಲ್ಲಿ ಕಂಡಿದ್ದಿಷ್ಟು…
ಮಂಗಳೂರಿಗರಿಗೆ ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವುದು ಶಿರಾಡಿ ಘಾಟ್. ಆ ಕಡೆ ಸಂಪಾಜೆ ಘಾಟ್, ಈ ಕಡೆ ಚಾರ್ಮಾಡಿ ಘಾಟ್ ರಸ್ತೆಯಿರುವಾಗಲೂ ಜನ ಪ್ರಿಫರ್ ಮಾಡುವುದು ಶಿರಾಡಿ ಘಾಟ್ ರಸ್ತೆಯನ್ನೇ. ಇದಕ್ಕೆ ಕಾರಣ, ಶಿರಾಡಿ ಘಾಟ್ ರಸ್ತೆಯಾಗಿ ಬೆಂಗಳೂರನ್ನು ಬೇಗವಾಗಿ ತಲುಪಬಹುದೆನ್ನುವುದು ಒಂದಾದರೆ ಚಾರ್ಮಾಡಿ ಘಾಟ್’ಗೆ ಹೋಲಿಸಿದರೆ ಅಪಾಯಕಾರಿ...
ಪುತ್ತೂರಿನ ಹುಡುಗನೂ.. ಗುಜರಾತಿ ಹುಡುಗಿಯೂ..!
೧೨.೩೦ರ ಮಟ ಮಟ ಮಧ್ಯಾಹ್ನ ಮಂಗಳೂರು ಜಂಕ್ಷನ್’ನಲ್ಲಿ ನಿಜಾಮುದ್ದೀನ್ ಎಕ್ಸ್’ಪ್ರೆಸ್ ರೈಲು ಹತ್ತಿದ್ದ ನನಗೆ ಹಸಿವೋ ಹಸಿವು.. ಗೆಳೆಯ ಶ್ರೀನಿಧಿ ಮನೆಯಿಂದ ಬಾಳೆಲೆಯಲ್ಲಿ ಕಟ್ಟಿ ತಂದಿದ್ದ ಸೇಮಿಗೆ-ಸಾಂಬಾರನ್ನು ಬಿಚ್ಚಿಟ್ಟಾಗಲಂತೂ ನನ್ನ ಮೇಲೆ ನನಗೇ ಕಂಟ್ರೋಲ್ ಇರಲಿಲ್ಲ. ಗಬಗಬ ತಿನ್ನುವುದು, ಮುಕ್ಕುವುದು ಅಂತೆಲ್ಲಾ ಹೇಳುತ್ತಾರಲ್ಲಾ ನಮ್ಮ ಕಡೆ, ಹಾಗೆಯೇ ಗರಿಗರಿ...
ಮೂರು ವರ್ಷಗಳ ಪಯಣ..
ಇಲ್ಲಿಯವರೆಗೆ ಬಂದು ನಿಂತಿದ್ದೇವೆ. ಮೂರು ವರುಷಗಳ ಹಿಂದೆ ನಾವು ‘ರೀಡೂ’ವನ್ನು ಆರಂಭಿಸಿದಾಗ ಇಲ್ಲಿಯವರೆಗೆ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ. ನಿಜವನ್ನೇ ಹೇಳುವುದಾದರೆ ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದವರಾದ ಕಾರಣ ನಮಗೊಂದು ಸ್ಪಷ್ಟ ಗುರಿ ಅಂತ ಇರಲಿಲ್ಲ. ಏನು ಎತ್ತ ಅಂತಲೇ ಗೊತ್ತಿರಲಿಲ್ಲವಂತೆ, ಸ್ಪಷ್ಟ ಗುರಿ ಇನ್ನೆಲ್ಲಿಂದ? ಏನೋ ಒಂದು...
ಅಕ್ಕಪಕ್ಕದವರಿಗೆ ಸೆಡ್ಡು ಹೊಡೆದು ನಿಂತಿರುವ ಕತಾರ್’ನ್ನು...
ಕತಾರ್ ಪ್ರವಾಸ ನನ್ನ ಎರಡನೇ ಅಂತಾರಾಷ್ಟ್ರೀಯ ಪ್ರವಾಸ. ನಿಜವಾಗಿಯೂ ಹೇಳಬೇಕಾದರೆ ಕತಾರ್’ನಲ್ಲಿ ಇಲ್ಲಿಂದ ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹಾ ಯಾವ ಪ್ರವಾಸಿ ತಾಣವೂ ಇಲ್ಲ. ಪ್ರವಾಸಕ್ಕೆ ಹೇಳಿದ ಒಂದು ಡೆಸ್ಟಿನೇಶನ್ನೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ ಅಲ್ಲಿ ಹೋಗಿ ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ ಜೀವನ ನಡೆಸುವುದಕ್ಕೆ ಕತಾರ್...
ಇಲಿಯನ್ನು ಮಾತ್ರವಲ್ಲ, ಹೆಗ್ಗಣಗಳನ್ನೂ ಹಿಡಿದೇ ಹಿಡಿಯುತ್ತಾರೆ!
ನವೆಂಬರ್ 8, 2016.. ಪ್ರತಿಯೊಬ್ಬ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲ! ಜನರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ, ಹಲವಾರು ದಿನ ಗೊಂದಲಕ್ಕೀಡು ಮಾಡಿದ, ಗಂಟೆಗಟ್ಟಲೆ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಿಸಿದ ದಿನ ಅದು. ಜನ ಎದ್ದು ಬಿದ್ದು ಕ್ಯೂನಲ್ಲಿ ನಿಂತದ್ದು, ಕ್ಯೂ ನಿಂತೂ ಕೂಡ ನೋಟು ಸಿಗದೇ ಹಿಡಿಶಾಪ ಹಾಕಿದ್ದು, ಬ್ಯಾಂಕಿನ ಸಿಬ್ಬಂದಿ ಜೊತೆ ಜಗಳವಾಡಿದ್ದು, ಅಲ್ಯಾರೋ...
ಬಳ್ಳಾರಿ ಪಾದಯಾತ್ರೆಯನ್ನೊಮ್ಮೆ ನೆನಪಿಸಿಕೊಳ್ಳಿ ಸಿದ್ಧರಾಮಯ್ಯ..!
ಬಿಜೆಪಿ ಸರಕಾರದ ಅತ್ಯಂತ ಕೆಟ್ಟ ದಿನಗಳವು. ಹೆಜ್ಜೆ ಹೆಜ್ಜೆಗೂ ಯಡಿಯೂರಪ್ಪನವರಿಗೆ ಅಡ್ಡಗಾಲು ಹಾಕುತ್ತಿದ್ದ ಸ್ವಪಕ್ಷೀಯರು, ಇವರೆಲ್ಲಿ ಸಿಕ್ಕಿ ಬೀಳುತ್ತಾರೆಂದು ಹಾತೊರೆದು ಕುಳಿತಿದ್ದ ಸಿದ್ಧರಾಮಯ್ಯ ನೇತೃತ್ವದ ವಿರೋಧ ಪಕ್ಷದವರು, ಇದಕ್ಕೆ ಸರಿಯಾಗಿ ಕಂಟಕಪ್ರಾಯವಾಗಿ ಪರಿಣಮಿಸಿದ ಬಲ್ಲಾರಿ ಗಣಿ ಹಗರಣ.. ಸಿದ್ಧರಾಮಯ್ಯರಿಗೆ ಅದೊಂದೇ ಸಾಕಿತ್ತು ಬಿಜೆಪಿಯ ವಿರುದ್ಧ...
ಬರವಣಿಗೆಯೆನ್ನುವ ಹುಣ್ಣನ್ನು ಕೆರೆಯುತ್ತಿದ್ದರೇನೇ ಸುಖ!
ಬಿಟ್ಟರೂ ಬಿಡದೀ ಮಾಯೆ ಎನ್ನುತ್ತಾರಲ್ಲ…ಪ್ಯಾಶನ್ನ್ ಎನ್ನುವುದು ಸಹ ಹಾಗೇನೇ.. ಪ್ರೊಫೆಶನ್’ನಲ್ಲಿ ನಾವು ಏನೇ ಅಗಿರಲಿ. ಪ್ಯಾಶನ್ ಕಡೆಗಿನ ತುಡಿತ ಹೆಚ್ಚುತ್ತಲೇ ಇರುತ್ತದೆ. ಲೈಫಲ್ಲಿ ನಾವು ಅದೆಷ್ಟೇ ಬ್ಯುಸಿಯಾಗಿರಲಿ, ಗುಡ್ಡ ಕಡಿಯುವ ಕೆಲಸವೇ ಇರಲಿ, ಅವೆಲ್ಲದರ ನಡುವೆಯೂ ನಮ್ಮನ್ನು ಇನ್ನಿಲ್ಲದಂತೆ ಕಾಡುವುದು ಈ ಪ್ಯಾಶನ್. ಅದು ಬರೀ ಹವ್ಯಾಸವೋ ಇಲ್ಲಾ ಚಟವೋ...
ಬೋಳುತಲೆಯ ಮೇಲೆ ಜೀವನಪಾಠವನ್ನು ಅನಾವರಣಗೊಳಿಸುವ ಕಥೆ!
ಅವನ ಹೆಸರು ಜನಾರ್ದನ, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ಪ್ರಾಯ ಇಪ್ಪತ್ತೆಂಟಾದರೂ ಮದುವೆ ಮಾತ್ರ ಆಗಿರುವುದಿಲ್ಲ. ಮತ್ತು ಅದಕ್ಕಾಗಿ ಕಷ್ಟ ಪಟ್ಟು ಹೈರಾಣಾಗಿರುತ್ತಾನೆ. ಯಾವುದೆಲ್ಲಾ ಹುಡುಗಿಯರು ಇವನ ನೋಡುತ್ತಾರೋ ಅವರೆಲ್ಲಾ ಇವನನ್ನು ಒಂದೇ ಏಟಿಗೆ ರಿಜೆಕ್ಟ್ ಮಾಡುತ್ತಾರೆ, ಕಾರಣ ಈತನ ಬೊಕ್ಕತಲೆ. ಬೊಕ್ಕತಲೆಯಿಂದಾಗಿ ಆತ ಎದುರಿಸುವ ಸಮಸ್ಯೆ, ಮದುವೆಯಾಗಲು ಪಡುವ...