ನನ್ನ ಸಹೋದ್ಯೋಗಿಯೊಬ್ಬರ ತಂದೆ ಅಂದಿನ ಕಾಲದಲ್ಲಿ ಚಾಮರಾಜನಗರದ ಶಾಸಕರಾಗಿದ್ದರು. ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಗ ವಿಶ್ರಾಂತಿ ಜೀವನ ನಡೆಸುವುದರೊಂದಿಗೆ ಅದೇ ಶಿಸ್ತು, ಓದುವ ಹವ್ಯಾಸ, ದಿನ ನಿತ್ಯದ ಬೆಳವಣಿಗೆಯ ಸಂಪೂರ್ಣ ಮಾಹಿತಿ ಅವರಿಗಿದೆ. ಶ್ರೀಯುತರಿಗೆ ಈಗ ವಯಸ್ಸು 90 + ವರ್ಷಗಳು ಅಷ್ಟೇ. ಅವರ ಮಾತಿಗೆ ಸುತ್ತಮುತ್ತಲು ಇಂದಿಗೂ ಅಷ್ಟೇ...
ಅಂಕಣ
ನಾನು ಬಡವನಯ್ಯಾ ಎನ್ನದ ಜಂಗಮವಾಣಿ
ನನ್ನ ಬಳಿ ಸ್ಯಾಂಸಂಗ್ ಮೊಬೈಲ್ ಇದೆ. ಏಳು ವರ್ಷದ ಹಿಂದೆ ಕೊಂಡಾಗ ಅದರ ಬೆಲೆ ಏಳ್ನೂರು ರೂಪಾಯಿ! ಈಗ ಅದನ್ನು ಕೊಟ್ಟು ಅದರ ಮೇಲೆ ನಾನೇ ಏಳ್ನೂರರ ಭಕ್ಷೀಸು ಕೊಟ್ಟರೂ ಕೊಳ್ಳುವವರು ಯಾರೂ ಇರಲಿಕ್ಕಿಲ್ಲ! ಗೆಳೆಯರ ಗುಂಪಿನಲ್ಲಿ,ಪಾರ್ಟಿಗಳಲ್ಲಿ, ಬಸ್ಸು-ರೈಲುಗಳ ನೂಕುನುಗ್ಗಲುಗಳಲ್ಲಿ, ವಿಮಾನಕಟ್ಟೆಯ ಲೌಂಜುಗಳಲ್ಲಿ ನಾನದನ್ನು ಹೊರತೆಗೆದು ಕೈಯಲ್ಲಿ ಹಿಡಿದಾಗ ಸುತ್ತಲಿನವರು...
ಉತ್ತರ ಭಾರತೀಯರಿಗೆ ಬೆಂಗಳೂರು ಆಕ್ಷಯ ಪಾತ್ರೆಯಂತೆ
ಎಲ್ಲರಿಗೂ ನಮಸ್ಕಾರ, ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸ೦ಗ ಮಾಡುತ್ತಿದ್ದೇನೆ. ನನ್ನ ಸ್ವಂತ ಊರು ದಾವಣಗೆರೆ ಆದರೆ ಬೆಂಗಳೂರಿಗೆ ಬಂದು ಒಂದುವರ್ಷದ ಮೇಲಾಯ್ತು. ನಿನ್ನೆ ಬೆಳೆಗ್ಗೆ ಕ್ಷೌರಕ್ಕೆಂದು ಸಲೂನ್ ಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಅದೇನೆಂದರೆ ಆ ಅಂಗಡಿ ನಮ್ಮ ಕಾಲೇಜ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದಷ್ಟೇ...
ಅಮ್ಮಾ ನೀನೇಕೆ ಹೀಗೆ ಮಾಡಿದೆ?
ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನಭವತಿ(ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಹುಟ್ಟಲಾರಳು) ಎಂಬ ಮಾತನ್ನು ಆದಿ ಶಂಕರಾಚಾರ್ಯರು ಭಾರತದಲ್ಲಿ ಮಾತ್ರ ಹೇಳಲು ಸಾಧ್ಯವಾಯಿತು.ಸನ್ಯಾಸಿಗಳು ಎಲ್ಲವನ್ನೂ ತೊರೆದವರಾದರೂ ಶಂಕರರಿಗೆ ತಮ್ಮ ತಾಯಿಯ ಮೇಲಿನ ವ್ಯಾಮೋಹವನ್ನು ತೊರೆಯಲಾಗಲೇ ಇಲ್ಲ. ಶಂಕರರನ್ನು ಮೊಸಳೆ ಕಚ್ಚಿ ಹಿಡಿದು ಸನ್ಯಾಸಿಯಾದರೆ ಮಾತ್ರ...
ಕಾರಂತಜ್ಜನ ನೆನಪಿನಲ್ಲಿ…
“ನನಗೆ ಜಡ ಜೀವನ ನಡೆಸುವುದು ಅಸಾಧ್ಯದ ಮಾತು. ಅಲೆದಾಡಿ ನೋಡುತ್ತಿರಬೇಕು, ವಿವಿಧ ಜ್ಞಾನಗಳನ್ನು ಓದಿನಿ೦ದ ಪಡೆಯಬೇಕು. ನಾನು ಇನ್ನೂ ಬದುಕಿರುವುದಕ್ಕೆ ಏನಾದರೂ ಸಾರ್ಥಕ ಕೆಲಸ ಮಾಡುತ್ತಿರಲೇಬೇಕು. ಬದುಕು ಬದುಕಿದ೦ತೆ ಕಾಣಿಸುವುದು ಅದರಿ೦ದ ಎ೦ಬ ಭಾವನೆ ನನ್ನದು” ಹೀಗ೦ತ ಹೇಳಿದ್ದು ‘ನಡೆದಾಡುವ ವಿಶ್ವಕೋಶ’ ಎ೦ದೇ ಖ್ಯಾತರಾದ ಡಾ.ಶಿವರಾಮ ಕಾರ೦ತರು. ಅಕ್ಟೋಬರ್ ೧೦, ೧೯೦೨...
ಪ್ರೀತಿಗೆ ಕಣ್ಣಿಲ್ಲ?
ಸುನಿಲ್ ಮತ್ತು ನಾನು ಇಬ್ರೂ ಫ್ರೆಂಡ್ಸ್, ಬೆಸ್ಟ್ ಅಲ್ಲ, ಜಸ್ಟ್ ಕ್ಲೋಸ್ ಫ್ರೆಂಡ್ಸ್. ಎಂಟನೇ ತರಗತಿಯಿಂದ ಒಟ್ಟಿಗೆ ಓದಿದ್ದು ನಾವು. ನಮ್ಮಿಬ್ಬರಲ್ಲಿ ಮುಚ್ಚಿಡುವಂತಾದ್ದು ಏನೂ ಇರಲಿಲ್ಲ. ಅವನ ಕಷ್ಟ ನನ್ನತ್ರ ಹೇಳ್ತಿದ್ದ, ನನ್ನ ಕಷ್ಟ ಅವನಲ್ಲಿ. ಅವನು ಅತ್ಯಂತ ಚುರುಕಾದ ಸ್ವಭಾವದವನು. ಕಲಿಕೆಯಲ್ಲಿ ಯಾವಾಗಲೂ ನಮಗಿಬ್ಬರಿಗೆಯೇ ಫೈಟ್ ಮತ್ತು ನಮಗೆ ಫೈಟ್ ಕೊಡೋರು ಬೇರೆ...
‘ನಾಳೆ’ ಎಂಬ ಬಣ್ಣದ ಚಿಟ್ಟೆ…
ನಮ್ಮ ಬದುಕನ್ನು ಪ್ರವೇಶಿಸಿರದ, ಆದರೂ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ, ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಹಂಬಲಿಸುವ ಭವಿಷ್ಯದ ತುಣುಕಿನ ಚಿತ್ರಣವೇ ‘ನಾಳೆ‘. ಈ ಜೀವನ ಪಯಣದಲ್ಲಿ ‘ನಾಳೆ‘ ನಮಗಿಂತ ತುಸು ಮುಂದೆ ಇದ್ದು ನಮ್ಮೊಂದಿಗೆ ಸಾಗುತ್ತದೆ. ಅದು ನೂರು ಕನಸುಗಳ ಬಣ್ಣ ಮೆತ್ತಿಕೊಂಡು ಹಾರುವ ಚಿಟ್ಟೆಯಂತೆ. ಇನ್ನೇನು ನಾವು ಆ...
ಕೊಳಲಿನ ಕುಸುರಿಯಂಗಳ
ಕಲಾವಿದ.. ಕಲ್ಪನೆಗೆ ಕುಂಚ ಹಚ್ಚಿ, ಮುದ ನೀಡಿ ಮನಗೆದ್ದು ಮನಸೇರೊ ಜೊತೆಗಾರ… ನಾದದ ನಾನಾ ರೀತಿಯನ್ನು ರಾಗದ ಜೊತೆ ಸೇರಿಸಿ, ಭಾವನೆಯ ಭಂಗಿ ಬೆರೆಸಿ, ಸ್ವರ ತರಂಗದ ಅಮಲಿನಲ್ಲಿ ತೇಲಿಸುವವನು ಕೊಳಲುಗಾರ.. ಹೀಗೆ ಕಲೆ ಹತ್ತು ಹಲವು ರೀತಿಯಲ್ಲಿದ್ದರೂ ಕಲಾವಿದನೆಂದರೆ ಆತ ತನ್ನಲ್ಲಿರುವ ಕಲೆಯಿಂದ ಮನಗೆಲ್ಲುವವನೇ.. ಪ್ರತಿ ಕಲಾವಿದ ತನ್ನ ಕಲೆಯಿಂದ ಖುಷಿಪಡಿಸಿ...
ಪ್ರತಾಪ್ ಸಿಂಹರೇ, ನಿಮ್ಮ ಉದ್ದೇಶ ಶುದ್ಧಿಯ ಮೇಲೂ ಪ್ರಶ್ನೆಗಳೇಳಬಾರದಲ್ಲವೇ?
ವೇತನ ಹೆಚ್ಚಳ ಕುರಿತಾಗಿ ತಮ್ಮ ಮೇಲೆ ಬಂದಿದ್ದ ಟೀಕೆಗಳಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಬೇಸರವೆಂದರೆ ಈ ಭಾರಿ ಇನ್ನೂ ಬಾಲಿಶವಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಜನರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ “ವೈಯಕ್ತಿಕ ಬದುಕನ್ನೇ ಕಳೆದುಕೊಂಡು ಜನಸೇವೆ ಮಾಡುತ್ತಿದ್ದೇನೆ” ಎಂಬರ್ಥದ ಮಾತುಗಳನ್ನಾಡಿದ್ದಾರೆ. ಸಂಸದರು ಮನುಷ್ಯರೇ...
ಮಾಧ್ಯಮ ಮಿತ್ರರಿಗೆ ಬಹಿರಂಗ ಪತ್ರ
ಮಾಧ್ಯಮ ಮಿತ್ರರೇ, ನಮಸ್ಕಾರ. ಮೊನ್ನೆ ಸೆಪ್ಟೆಂಬರ್ 19ನೇ ತಾರೀಖಿನಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿಪಟ್ಟಿ ಬಿಡುಗಡೆ ಮಾಡಿದ ದಿನದಿಂದಲೂ ಆಗುತ್ತಿರುವ ಬೆಳವಣಿಗೆಗಳನ್ನು ನೀವು ನೋಡುತ್ತಿದ್ದೀರಿ. ಪಟ್ಟಿಯಲ್ಲಿರುವ ಕೆಲವು ಹೆಸರುಗಳು ಆಕ್ಷೇಪಾರ್ಹವಾಗಿವೆ ಎಂದು ಹಲವು ಕನ್ನಡಿಗರು ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ವೆಬ್ ಪತ್ರಿಕೆಗಳು ಸರಣಿ...