ವರುಷ ವರುಷಗಳೇ ಕಳೆದುಹೋಯಿತು , ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ ಬರೀ ನಿರೀಕ್ಷೆಯಲ್ಲಿ.. ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ ಇಂದಿನ ದಿನಗಳಲ್ಲೂ ಖುಷಿಯಿಲ್ಲ ಬರುವ ನಾಳೆಯಲ್ಲಾದರೂ ಖುಷಿಯಿರಬಹುದೆಂಬ ಆಸೆ.. ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು ನಿತ್ಯ ನಗುವಿನ ಮುಖವಾಡ ಹೊತ್ತು ಬರೀ ನಟನೆಯನ್ನೇ ಜೀವಾಳವಾಗಿಸಿದ ಬದುಕು...
ಇತ್ತೀಚಿನ ಲೇಖನಗಳು
ಇಂದಿರಾ-ಅನ್ನಪೂರ್ಣಾ ನಡುವೆ ಹೋಲಿಸುವ ಮುನ್ನ ಇದನ್ನೊಮ್ಮೆ ಓದಿ
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದೇಶದಲ್ಲಿ ಸರ್ಕಾರಗಳು ಬಡತನ ನಿವಾರಣೆಗಾಗಿ ಪ್ರತೀ ವರ್ಷವೂ ಲಕ್ಷಾಂತರ ಕೋಟಿ ಹಣವನ್ನು ತೆಗೆದಿರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಇದುವರೆಗೆ ಗೆದ್ದ ಎಲ್ಲಾ ಪಕ್ಷಗಳೂ ನಾವು ಬಡವರ ಪರ ಎಂದು ಹೇಳಿಕೊಂಡೆ ಅಧಿಕಾರಕ್ಕೆ ಬಂದಿವೆ ಮತ್ತು ಗೆದ್ದ ನಂತರವೂ ನಮ್ಮದು ಬಡವರ ಪರವಾದ ಸರ್ಕಾರ ಎಂದೇ ಹೇಳಿಕೊಳ್ಳುತ್ತವೆ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 3: ಭಾರತದ ಮುಂದಿರುವ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 2 ಡೊಕ್ಲಮ್, ಭಾರತ–ಭೂತಾನ್–ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ ೨ : ಚೀನಾದೊಂದಿಗೆ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ–ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ...
ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..
ಮಂಕುತಿಮ್ಮನ ಕಗ್ಗ ೦೭೩. ನಂಟು ತಂಟೆಗಳ ಗಂಟೀ ಬ್ರಹ್ಮ ಭಂಡಾರ | ಅಂಟಿಲ್ಲವೆನಗಿದರೊಳೆನ್ನದಿರದೆಂದುಂ || ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ | ಒಂಟಿಸಿಕೊ ಜೀವನವ – ಮಂಕುತಿಮ್ಮ || ೦೭೩ || ಬ್ರಹ್ಮ ಭಂಡಾರ : ಬ್ರಹ್ಮನ ಸೃಷ್ಟಿಯಾದ ಈ ವಿಶ್ವ, ಜಗತ್ತು, ಭೂಮಿ ಅಂಟು : ಸಂಬಂಧ, ನಂಟು ಭಂಟ : ಬಲವಾದ, ಶಕ್ತಿವಂತನಾದ ಕಟ್ಟಾಳು ಒಂಟಿಸಿಕೊ : ಹೊಂದಿಸಿಕೊ ಲೌಕಿಕ ಜಗದ...
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1 : ವಿಸ್ತಾರವಾದಿ ಚೀನಾದ...
ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು. ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ–ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್“. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ...
