ಸಿಲಿಕಾನ್ ಸಿಟಿ, ಐಟಿಬಿಟಿ ನಗರ, ಗಾರ್ಡನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳೋ ಬೆಂಗಳೂರಿನ ಮಾಯೆಯೇ ಅಂಥಹದ್ದು. ರಾಜ್ಯದ ವಿವಿಧ ಮೂಲೆಯಿಂದ ಜನ್ರು ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟೇ ಯಾಕೆ ಭಾಷೆ ಅರಿಯದ, ಸಂಸ್ಕೃತಿಯ ಪರಿಚಯವೂ ಇಲ್ಲದ ಅದೆಷ್ಟೋ ರಾಜ್ಯದ ಜನ್ರಿಗೆ ಬೆಂಗಳೂರು ಸೂರಾಗಿದೆ. ಹೊತ್ತಿನ ತುತ್ತು ಗಳಿಸುವ ಕೆಲಸ ನೀಡಿದೆ. ಹಾಗಾಗಿಯೇ ಅದೆಷ್ಟೋ...
ಇತ್ತೀಚಿನ ಲೇಖನಗಳು
ಸೋಲಿನ ಸರ ಮಾಲೆಗಳ ನಂತರ ಸಾಧಿಸುವ ಗೆಲುವಿನ ಪುಷ್ಪಮಾಲೆ
ಧೈರ್ಯವಾಗಿ ಸೋಲನ್ನು ಒಪ್ಪಿಕೊಳ್ಳಿ: ಸೋಲು ಗೆಲುವು ಒಂದೆ ನಾಣ್ಯದ ಎರಡು ಮುಖಗಳು ಸೋಲು ಎನ್ನುವುದು ಆಟದ ಒಂದು ಭಾಗವೇ ಆದರೂ ಸೋತವರೇನು ದುರ್ದೈವಿಗಳಲ್ಲ ಯಾರಾದರು ವಿಜಯಿಗಳಾಗಬೇಕಾದರೆ ಸೋಲುವವರಿರಬೇಕಲ್ಲವೆ? ಈ ಭಾರಿಯೂ ನೀವೇನಾದರು ಸೋತು ಸುಣ್ಣವಾಗಿದ್ದರೆ ಸಂಕಟ ಪಡುವ ಅಗತ್ಯವಿಲ್ಲ. ಒದಗಿ ಬಂದ ಸೋಲಿಗಾಗಿ ಸ್ವಲ್ಪ ಹೊತ್ತು ರೋಧಿಸಿ, ದೂರಿ, ಕೊರಗಿ ಮತ್ತು ವಿಷಾದಿಸಿ...
ತೀರ
ನೇಹಾ ತನ್ನ ಕಾಲೇಜು ಮುಗಿಸಿ ಎಫ್. ಸಿ ರೋಡಿನ ಬಸ್ಟಾಪಿಗೆ ಬಂದು ನಿಂತುಕೊಂಡಾಗ ಸುಮಾರು ಹನ್ನೊಂದುವರೆ ಆಗಿದ್ದಿರಬೇಕು.ಸೂರ್ಯ ಆಗತಾನೆ ತನ್ನ ಕಿರಣದ ಪಂಪನ್ನು ಒತ್ತುತ್ತಾ ಬಿಗಿಯಾಗುತ್ತಾ ಸಾಗಿದ್ದ. ನಿನ್ನೆ ಸುರಿದಿದ್ದ ಸಂಜೆಯ ವರ್ಷಧಾರೆಗೆ ತನ್ನನ್ನು ಒಡ್ಡಿಕೊಂಡಿದ್ದ ರಸ್ತೆಯ ತುಂಬೆಲ್ಲಾ ಮರದ ಎಲೆಗಳು ಒತ್ತೊತ್ತಾಗಿ ಸರಿದು ನೀರು ಓಡಿದ ದಾರಿಯನ್ನು ತೋರಿಸುತ್ತಿತ್ತು...
ಶ್ರಾವಣ ಬ೦ತು ಕಾಡಿಗೆ, ನಾಡಿಗೆ, ಬೀಡಿಗೆ…
ನಮಗೆಲ್ಲ ನಿತ್ಯ ಬದುಕಿನಲ್ಲೊಂದು ಹೊಸತನ ಬೇಕು, ಏಕತಾನತೆಗೊ೦ದು ಬದಲಾವಣೆ ಬೇಕೆನ್ನಿಸುವುದು ಸಹಜ. ಅದೇ ರಾಗ ಅದೇ ಹಾಡಿನ ಮಧ್ಯದಲ್ಲೊಂದು ಹೊಸ ಪಲ್ಲವಿ ಈ ಹಬ್ಬಗಳು..!! ಹಬ್ಬದ ಹೆಸರಿನಲ್ಲಿ ಸಡಗರವನ್ನು ಮೈ-ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಹೀಗೆ ನಮ್ಮೊಳಗೆ ಖುಷಿಯಾದಾಗ ಮಾತ್ರ ಸುತ್ತೆಲ್ಲ ಸಂತಸ ಹಬ್ಬಿದಂತೆ ತೋರುತ್ತದೆ. ಎಲ್ಲರ ನೆಮ್ಮದಿ, ಖುಷಿಗೆ ಇಂಬು ನೀಡುವ...
ವಿಕಾಸ’ವಾದ’ -೨ ( ಲಿಟಲ್ ಆಲ್ಬರ್ಟ್ )
ಇಪ್ಪತ್ತನೇ ಶತಮಾನದ ಆದಿಕಾಲ, ವೈದ್ಯವಿಜ್ಞಾನ ಇನ್ನೂ ತೊಟ್ಟಿಲಲ್ಲಿತ್ತು. ಮನೋವಿಜ್ಞಾನವಂತೂ ಶಿಶು. ಹುಚ್ಚುಹಿಡಿದವರನ್ನು ಚರ್ಚಿಗೆ ಸೇರಿಸಲಾಗುತ್ತಿತ್ತು. ಅಲ್ಲಿ ಜನರಿಗೆ ಬೈಬಲ್ ಓದಿ ಹೇಳುತ್ತಾ “ಭಗವಂತಾ ಕರುಣೆ ತೋರು” ಎಂದು ಬೇಡಿಕೊಳ್ಳಲಾಗುತ್ತಿತ್ತು. ಆಗಿನ ಕಾಲಕ್ಕೆ ನಮಗೆ ತಿಳಿದಿದ್ದ ಮನೋವಿಜ್ಞಾನ ಅಷ್ಟೇ!! ನಂತರದ ದಿನಗಳಲ್ಲಿ ಬಂದ...
ಹನಿಗಳ ಮೆರವಣಿಗೆ…
ಬೇಸಗೆಯ ಧಗೆಯಲ್ಲಿ ಬೆಂದ ಧರಣಿಗೆ ತಂಪೆರೆಯಲು ಭೂಮಿಗಿಳಿಯುವ ನೀರಿನ ಹನಿಗಳ ಮೆರವಣಿಗೆ ಈ ಮಳೆ. ಸೂರ್ಯನ ಕಿರಣಗಳ ಧಗೆಯಿಂದ ಭೂಮಿಯನ್ನು ಕಾಪಾಡಲು ಸೂರ್ಯನಿಗೆ ಅಡ್ಡವಾಗಿ ನಿಲ್ಲುವ ಮೋಡಗಳು ಅದೂ ಸಾಲದೇ ಹೋದಾಗ ಮಳೆಯಾಗಿ ಇಳೆಗಿಳಿದು ತಂಪೆರೆಯುವ ಕಾಲ ಅದು. ‘ಮಳೆ’ ಕೇವಲ ನೀರಿನ ಹನಿಗಳಲ್ಲ; ಅವು ಹೊಸತನದ ರಾಯಭಾರಿಗಳು. ಭೂಮಿಗೆ ಹಸಿರನ್ನು ಜೀವಿಗಳಿಗೆ...
