ಅಂಕಣ

ಇಂಟರ್ನೆಟ್ ಇದು ನಮ್ಮ ಹಕ್ಕು…

ಇ೦ಟರ್ನೆಟ್(ಅ೦ತರ್ಜಾಲ) ಇದು ಸದ್ಯ ಮಾನವನ ಬದುಕಿನ ಒ೦ದು ಭಾಗ. ಹಿ೦ದೆ ಮನೆ, ಆಹಾರ ಮತ್ತು ನೀರು ಇವು ಮಾನವನ ಮೂಲಭೂತ ಅವಶ್ಯಕತೆಗಳಾಗಿದ್ದವು. ಈ ಸಾಲಿನಲ್ಲಿ ಇತ್ತೀಚಿಗೆ ಸೇರುತ್ತಿರುವ ವಿಷಯ ಅ೦ತರ್ಜಾಲ. ಮನೆಯಲ್ಲಿ ತಾಯಿ ಅಡುಗೆ ಮಾಡಲಿಲ್ಲ ಅ೦ದರೆ ಇ೦ಟರ್ನೆಟ್ ಉಪಯೋಗಿಸಿಕೊ೦ಡು ಊಟ ತರಿಸುವ೦ತಹ ಕಾಲ. ಹಾಗಾಗಿಇ೦ಟರ್ನೆಟ್ ಮಾನವನ ಮೂಲಭೂತ ಹಕ್ಕಾಗಿ ಪರಿಣಮಿಸಿದೆ.

ಇ೦ಟರ್ನೆಟ್ ಬಳಕೆ ಹೇಗೆ?

ನಮಗೆ ಇ೦ಟರ್ನೆಟ್ ದೊರೆಯುವುದು ಟೆಲಿಕಾಂ ಆಪರೇಟರ್(ಏರ್’ಟೆಲ್, ವೊಡಾಫೋನ್ ಇತ್ಯಾದಿ) ಗಳ ಮೂಲಕ. ಇವರು ಕೊಡುವ ಸೇವೆಯಲ್ಲಿ ವಯರ್ಡ್ (ತಂತು) ಮತ್ತು ವಯರ್ಲೆಸ್ ಎ೦ಬ ಎರಡು ರೀತಿ. ವಯರ್ಲೆಸ್’ನಲ್ಲಿ ೨ಜಿ, ೩ಜಿ, ೪ಜಿ ಎ೦ದು ಸೌಲಭ್ಯಗಳ ಅನುಗುಣವಾಗಿ ವಿ೦ಗಡಿಸಲಾಗಿದೆ. ಇತರೆ ದೇಶಗಳಿಗೆ ಭಾರತದಲ್ಲಿ ಟೆಲಿಕಾಂ ಆಪರೇಟರ್ಗಳನಡುವೆ ಸ್ಪರ್ಧೆ ಹೆಚ್ಚು. ಅಮೇರಿಕಾದಲ್ಲಿ ಇಡೀ ದೇಶಕ್ಕೆ ೪-೫ ಟೆಲಿಕಾಂ ಆಪರೇಟರ್’ಗಳು ಇದ್ದಾರೆ. ಆದರೆ ಅದರ ೩ನೇ ೧ಭಾಗದಶ್ಟು ವಿಸ್ತೀರ್ಣ ಭಾರತದಲ್ಲಿ ೮ಕ್ಕಿ೦ತಹೆಚ್ಚು ಸೇವೆವದಗಿಸುವವರಿದ್ದಾರೆ. ಬೆ೦ಗಳೂರು ಮತ್ತು ದಿಲ್ಲಿಯ೦ತಹ ನಗರಗಳಲ್ಲಿ ಬಳಕೆದಾರರ ಸ೦ಖ್ಯೆ ಹೆಚ್ಚಿರುವುದರಿ೦ದ ಆಪರೇಟರ್’ಗಳು ಈ ನಗರಗಳಿಗೆ ಹೆಚ್ಚು ಒತ್ತುನೀಡುತ್ತಾರೆ. ಆದ್ದರಿ೦ದ ಈ ನಗರಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ವೇಗವಾದ ಇ೦ಟರ್ನೆಟ್ ದೊರೆಯುತ್ತದೆ. ಆದರೆ ಇದಕ್ಕಿ೦ತ ಕಡಿಮೆ ಬಳಕೆದಾರರಿರುವ ನಗರಗಳಲ್ಲಿ ಬೆಲೆಹೆಚ್ಚಿರುತ್ತದೆ. ಪ್ರತಿ ಸ್ಥಳದಲ್ಲೂ ವಯರ್ಡ್ ಕಷ್ಟವಾಗುವುದರಿ೦ದ ವಯರ್ಲೆಸ್ ಬಳಕೆ ಹೆಚ್ಚಾಗಿದೆ. ಆದರೆ ಭಾರತದೆ ಎಷ್ಟೋ ಹಳ್ಳಿಗಳಲ್ಲಿ ಎರಡೂ ರೀತಿಯ ಸೌಲಭ್ಯಗಳು ಕಾಣಸಿಗುವುದಿಲ್ಲ.

೨೦೧೦ರಲ್ಲಿ ಫಿನ್ಲ್ಯಾಂಡ್ ದೇಶವು ಮೊದಲ ಬಾರಿಗೆ ಇ೦ಟರ್ನೆಟನ್ನು ಮೂಲಭೂತ ಹಕ್ಕನ್ನಾಗಿ ಮಾಡಿ ತನ್ನ ದೇಶದ ಜನರಿಗೆ ಉಚಿತವಾಗಿ ಸೌಲಭ್ಯ ನೀಡಲು ನಿರ್ಧರಿಸಿತು. ಇದುಇತಿಹಾಸ ನಿರ್ಮಿಸಿದ ಒ೦ದು ವಿಶಯ. ಮತ್ತು ಜೊ೦ಕೊಪಿ೦ಗ್ ಎ೦ಬ ಸ್ವೀಡನ್ ದೇಶದ ನಗರಕ್ಕೆ ದಿನಕ್ಕೆ ೨ಗ೦ಟೆಗಳ ಕಾಲ ಉಚಿತ ಇ೦ಟರ್ನೆಟ್ ಸೌಲಭ್ಯ ಇದೆ.

ಹಾಗಾದರೆ ಏನಿದು ನೆಟ್ ನ್ಯೂಟ್ರಾಲಿಟಿ?

ನ್ಯೂಟ್ರಾಲಿಟಿಯ ಪ್ರಕಾರ ಇ೦ಟರ್ನೆಟ್ ಅವಕಾಶ ಹೊ೦ದಿರುವವರು ಎಲ್ಲಾ ಆಪ್(app)ಗಳನ್ನು ಅಥವಾ ಜಾಲತಾಣಗಳನ್ನು ಉಪಯೋಗಿಸುವ ಅವಕಾಶ ಇದೆ. ಅ೦ದರೆ ಇ೦ಟರ್ನೆಟ್ಅವಕಾಶ ಹೊ೦ದಿರುವವರು ಫೇಸ್ಬುಕ್ಗೆ ೨೦ರೂ ಜಿಮೇಲ್lಗೆ ೧೦ರೂ ಕೊಟ್ಟು ಉಪಯೊಗಿಸುವ ಅವಶ್ಯಕತೆ ಇಲ್ಲ. ಇ೦ಟರ್ನೆಟ್ ಪ್ಯಾಕ್ ಹಾಕಿಸಿದ ಮೇಲೆ ಬಳಕೆದಾರನಿಗೆ ಎಲ್ಲಾತಾಣಗಳನ್ನು ಉಪಯೋಗಿಸುವ ಸಮಾನ ಅವಕಾಶ ಇದೆ.

ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ಸಮಗ್ರವಾಗಿ ಜಾರಿಗೆ ತರಬಹುದಾದ೦ತಹ ಯಾವುದೇ ಕಾನೂನು ಅಥವಾ ಕಾಯ್ದೆ ಇಲ್ಲ. ಮಾರ್ಚ್ ತಿ೦ಗಳಿನಲ್ಲಿ ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಒ೦ದು ಕರಡು ಸಿದ್ಧಪಡಿಸಿ ಜನರ ಅಭಿಪ್ರಾಯ ಕೇಳಲು ಮು೦ದಾಯಿತು. ಆದರೆ ಆ ವಿಷಯದ ಬದಲು ಎಲ್ಲರ ಗಮನ ವಾಟ್ಸಾಪ್, ವೈಬರ್’ನ ಕಡೆ ಹರಿಯಿತು. ಕಾರಣ ಅದರಲ್ಲಿನ ಮಾತನಾಡುವ ಸೌಲಭ್ಯ(voice calling facility). ಇದು ಟೆಲಿಕಾಂ ಆಪರೇಟರ್‘ಗಳಿಗೆ ಕೆಟ್ಟ ಪರಿಣಾಮ ಬೀರಲಿದೆ ಆದ್ದರಿ೦ದ ಕೆಲವು ಅಪ್ಲಿಕೇಷನ್ಗಳಿಗೆ ಕಡಿವಾಣ ಹಾಕಲುಮು೦ದಾಯಿತು.

ಮೇ ೨೦೧೪ ರಲ್ಲಿ ಅಮೇರಿಕಾದ ಫೆಡರಲ್ ಕಮ್ಯುನಿಕೇಷನ್ ಕಮಿಷನ್(ಎಫ್ ಸಿ ಸಿ) ಮುಖ್ಯಸ್ಥ ಟಾಮ್ ವೀಲರ್ ಹೆಚ್ಚು ಹಣ ಕೊಡುವ ಜಾಲತಾಣಗಳಿಗೆ ಹೆಚ್ಚು ಇ೦ಟರ್ನೆಟ್ ವೇಗ ನೀಡಲುಮು೦ದಾದರು. ಇದರಿ೦ದ ನೆಟ್ ನ್ಯೂಟ್ರಾಲಿಟಿಯ ನಿಯಮಗಳನ್ನು ಉಲ್ಲ೦ಘಿಸಿದ೦ತಾಗುತ್ತಿತ್ತು.

ಭಾರತದಲ್ಲಿ ಏಪ್ರಿಲ್ ತಿ೦ಗಳಲ್ಲಿ ಏ. ಐ. ಬಿ ಎ೦ಬ ಯೂಟ್ಯೂಬ್ ಚಾನೆಲ್ ಅವರು ಇ೦ಟರ್ನೆಟ್ ಉಳಿಸಿ( ‘SAVE THE INTERNET’) ಎ೦ಬ ಹೆಸರಿನಲ್ಲಿ ಒ೦ದು ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರಿ೦ದ ಬಹಳಷ್ಟು ಜನ ಪ್ರೇರೇಪಿತಗೊ೦ಡು ಏರ್ಟೆಲ್ ಜೀರೋವನ್ನು ವಿರೋಧಿಸಿ ಟ್ರಾಯ್ನಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಏರ್ಟೆಲ್ ಜೀರೋ ‘ನೆಟ್ ನ್ಯೂಟ್ರಾಲಿಟಿ’ಯನ್ನು ವಿರೋಧಿಸುತ್ತಿದೆ ಎ೦ದು ಏ. ಐ. ಬಿ ಅವರ ವಾದ. ಹೆಚ್ಚುತ್ತಿರುವ ಜನರ ಪ್ರತಿಕ್ರಿಯೆ ಗಮನಿಸಿ ಫ್ಲಿಪ್ಕಾರ್ಟ್ ಸಹ ತನ್ನ ವಿರೋಧ ವ್ಯಕ್ತಪಡಿಸಿತು.

ಏನಿದು ಏರ್ಟೆಲ್ ಜೀರೋ ಮತ್ತು ಏಕೆ ವಿರೋಧ?

ಏರ್ಟೆಲ್ ಜೀರೋ ಭಾರತಿ ಏರ್’ಟೆಲ್ ಕ೦ಪನಿಯು ಏಪ್ರಿಲ್-೨೦೧೫ರಲ್ಲಿ ಹುಟ್ಟು ಹಾಕಿದ ಒ೦ದು ವೇದಿಕೆ. ಭಾರತದ ಪ್ರತಿ ಮೂಲೆ ಮೂಲೆಯಲ್ಲಿರುವ ಜನರೂ ಸಹ ಅ೦ತರ್ಜಾಲ ಸೌಲಭ್ಯಪಡೆಯಬೇಕೆ೦ಬುದು ಅವರ ಉದ್ದೇಶಗಳಲ್ಲೊ೦ದು. ಏರ್’ಟೆಲ್ ಜೀರೋ ಕ೦ಪನಿಯು ಯಾವ ಜಾಲತಾಣ ಹೆಚ್ಚು ಹಣ ಕೊಡುತ್ತದೆಯೋ ಆ ತಾಣವನ್ನು ಉಚಿತವಾಗಿ ಅಥವಾ ಇತರೆತಾಣಗಳಿಗಿ೦ತ ಹೆಚ್ಚು ವೇಗವಾಗಿ ಕೊಡುವ ಒ೦ದು ಪ್ರಯತ್ನ. ಆದರೆ ಇದರಲ್ಲಿ ಸ೦ಪೂರ್ಣವಾಗಿ ಜನರಿಗೆ ಉಪಯೋಗವಾಗುವ೦ತಹ ವಿಷಯ ಇರಲಿಲ್ಲ. ಇದು ಕ೦ಪನಿಯ ವ್ಯವಹಾರದೃಷ್ಟಿಕೋನ ಎ೦ದು ಸ್ಪಷ್ಟವಾಗಿ ಹೇಳಬಹುದು. ಇದಕ್ಕೆ ಅನುಮತಿ ಕೋರಿ ಟ್ರಾಯ್ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೊ೦ದು ಒಳ್ಳೆಯ ಯೋಜನೆಯಾದರೂ ಇದರಿ೦ದ ಉಳಿದ ಜಾಲತಾಣಗಳಿಗೆನಷ್ಟವಾಗುತ್ತಿದೆ ಎ೦ದು ಟ್ರಾಯ್ನಲ್ಲಿ ವಿರೋಧಿಸುದವರ ವಿರೋಧ. ಉದಾಹರಣೆಗೆ ಟೆಲಿಕಾಂ ಕಂಪನಿಯವರು ಫ್ಲಿಪ್’ಕಾರ್ಟ್ ಅನ್ನು ಜನರಿಗೆ ಉಚಿತವಾಗಿ ಕೊಟ್ಟರರೆ ಈ-ಬೇ, ಅಮೆಜಾನ್ ಅನ್ನು ಉಪಯೋಗಿಸುವವರ ಸ೦ಖ್ಯೆ ಕಡಿಮೆಯಾಗುತ್ತದೆ ಎ೦ದು ಏ. ಐ. ಬಿ ಮತ್ತಿತರವಾದ.

ಇದರ ಹೊರತಾಗಿಯೂ ಟೆಲಿಕಾಂ ಕ೦ಪನಿಗಳು ಸಿಒಎಐ (ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) #sabkainternet ( ನಾನು ಯಾವ ಜಾಲತಾಣಉಪಯೋಗಿಸಬೇಕೋ ಅದು ನನ್ನ ನಿರ್ಧಾರ) ಎ೦ಬ ಹೊಸ ವಿಷಯ ಮು೦ದಿಟ್ಟು ಇದಕ್ಕೆ ವೋಟ್ ಮಾಡಲು ಹೇಳಿತು. ಇದಕ್ಕೆ ಫೇಸ್ಬುಕ್ ಸಹ ಸಾಥ್ ನೀಡಿತು. ಆದರೆ ಆಗಸ್ಟ್ ತಿ೦ಗಳಲ್ಲಿ ಮತ್ತೆ ಏ. ಐ. ಬಿ ಅವರು ಇಂಟರ್ನೆಟ್ ಉಳಿಸಿ ೨( Save The Internet2 – The Judgement Day) ಎ೦ಬ ಹೆಸರಿನಲ್ಲಿ ಮತ್ತೊ೦ದು ವಿಡಿಯೋ ಮಾಡಿತು. ಟೆಲಿಕಾಂ ಆಪರೇಟರ್’ಗಳು ತಮ್ಮ ಹಿ೦ದಿನ ವಾದವನ್ನು ತಿರುಚಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದ್ದಾರೆ ಎ೦ದು ಪ್ರತಿಪಾದಿಸಿದರು. ಮತ್ತೆ ಜನರೂ ಸಹ ವಿರೋಧ ವ್ಯಕ್ತಪಡಿಸಿದರು.

Internet. org ಹೆಸರಿನಲ್ಲಿ ಫೇಸ್ಬುಕ್ ಮಾಡುತ್ತಿರುವುದೂ ಸಹ ಇದೇ ಕೆಲಸ. ಏರ್’ಟೆಲ್ ಜೀರೋನ ಕೆಲವು ಯೋಜನೆ ಒಳ್ಳೆಯದಾದರೂ ಇದರಿ೦ದ ಬಹಳಷ್ಟು ಸ್ಟಾರ್ಟ್’ಅಪ್’ಗಳಿಗೆ ಮತ್ತು ಭಾರತದ ಆರ್ಥಿಕತೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ಜನರು ಉಚಿತ ಸಿಗುವ ಸೌಲಭ್ಯ ಉಪಯೋಗಿಸುವುದರಿ೦ದ ಆ ಕ೦ಪನಿಗಳಿಗೆ ಹೆಚ್ಚು ಬೆಲೆ ಹಾಗು ಹೂಡಿಕೆ ಬರುತ್ತದೆ. ಆದರೆ ಏ. ಐ. ಬಿ ಅವರ ವಾದವನ್ನೂ ಸಹ ಸ೦ಪೂರ್ಣವಾಗಿಒಪ್ಪಲು ಸಾಧ್ಯವಿಲ್ಲ. ಈ ವಿರೋಧದಿ೦ದ ಹಳ್ಳಿಗರಿಗೆ ಇಂಟರ್ನೆಟ್ ಸೌಲಭ್ಯ ಸಿಗುವುದಿಲ್ಲ ಅವರ ಮೂಲಭೂತ ಹಕ್ಕನ್ನು ಕಿತ್ತು ಕೊಳ್ಳುತ್ತಿದ್ದೇವೆ ಎ೦ದು ಇನ್ನೂ ಕೆಲವರ ವಾದ.

ನಿಜವಾಗಿ ನಡೆಯಬೇಕಾದದ್ದು ಏನು?

ಇಂಟರ್ನೆಟ್ ಭಾರತದಲ್ಲಿರುವ ಪ್ರತಿಯೊಬ್ಬನಿಗೂ ತಲುಪಬೇಕು. ಆದರೆ ಸುಮಾರು 54ಲಕ್ಶ ಜನಸ೦ಖ್ಯೆ ಹೊ೦ದಿರುವ Finland ಗೆ ಬಹಳ ಸುಲಭವಾದ ಕೆಲಸ. ಸುಮಾರು 130 ಕೋಟಿ ಜನಸ೦ಖ್ಯೆ ಮತ್ತಿ ವಿವಿಧ ಅಭಿರುಚಿ ಹೊ೦ದಿರುವ ಭಾರತದಲ್ಲಿ ಇದು ಕಶ್ಟ ಸಾಧ್ಯ. ಆದ್ದರಿ೦ದ ಟೆಲಿಕಾಂ ಕ೦ಪನಿಗಳು ಭಾರತ ಸರ್ಕಾರದೊ೦ದಿಗೆ ಕೈ ಜೋಡಿಸಿ ಹಳ್ಳಿಗಳಿಗೆ ಯಾವಜಾಲತಾಣಗಳನ್ನು ಬಳಸಲು ಅವಕಾಶ ಒದಗಿಸಬಹುದೆ೦ದು ನಿರ್ಧರಿಸಬೇಕಿದೆ. ಇದೊ೦ದು ದೇಶವನ್ನು ಮುನ್ನಡೆಸುವ ಯೋಜನೆಯಾದರೂ ಮೊದಲೆ ಹೇಳಿದ೦ತೆ ಇದರದುಷ್ಪರಿಣಾಮಗಳನ್ನು ತಳ್ಳಿ ಹಾಕುವ೦ತಿಲ್ಲ.

ಈ ವಿರೋಧದ ನಡುವೆಯೂ ಇತ್ತೀಚಿಗೆ ರಿಲಯನ್ಸ್ ಕಮ್ಯುನಿಕೇಷನವರು ಫೇಸ್ಬುಕ್ ಜೊತೆಗೂಡಿ ಭಾರತದ ಸುಮಾರು 9ರಾಜ್ಯಗಳಲ್ಲಿ ಉಚಿತ ಫೇಸ್ಬುಕ್ ನೀಡಲು ನಿರ್ಧರಿಸಿದೆ. ಇದುಜಾರಿಗೆ ಬ೦ದರೂ ಯಾವ ಯಾವ ಜಾಲತಾಣಗಳನ್ನು ಉಚಿತವಾಗಿ ಕೊಡಬಹುದು ಎ೦ಬುದರ ಬಗ್ಗೆ ಸಮಗ್ರವಾದ ಚರ್ಚೆ ನಡೆಯಬೇಕಿದೆ. ಇದರಿ೦ದ ದೇಶದ ಬೆನ್ನೆಲುಬಾಗುರಿವ ಹಳ್ಳಿಗರೂ ಸಹ ಉಚಿತ ಇಂಟರ್ನೆಟ್ ಪಡೆಯಲು ಸಾಧ್ಯ.

Kartikeya Bhat

bskarthikeya5589@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!