Author - Gurukiran

ಪ್ರವಾಸ ಕಥನ

ಮಂಜಿನನಗರಿಯಲ್ಲೊಂದು ದಿನ…

ಎಲ್ಲಾ ಪ್ರವಾಸ ಕಥನಗಳೂ ಶುರುವಿಗೆ ಮುಂಚೆ ಡೋಲಾಯಮಾನ ಯೋಜನೆಗಳೇ ಆಗಿರುತ್ತವೆ. ಅದೂ ಈಗೀನ ಕಾಲದ ಕೂಲಿ ಕೆಲಸಮಾಡುವ ಗೆಳೆಯ ಬಳಗವನ್ನು ಕಟ್ಟಿಕೊಂಡು ಹೋಗುವುದು ಕಪ್ಪೆ ಹಿಡಿದು ಕೊಳಗ ತುಂಬಿದಂತೆ. ನಮ್ಮ ಯೋಜನೆಗಳು ಬಾಸಿನ ಹೆಂಡತಿ ಮಾಡಿದ ಅಡಿಗೆಯ ರುಚಿಯೋ , ಮನೆಯಲ್ಲಿ ಮಾಡಿದ ಜಗಳದ ಮೇಲೋ ನಿಂತಿರುವುದು ವಿಪರ್ಯಾಸ. ಅದನ್ನೆಲ್ಲಾ ಮೆಟ್ಟಿ ನಾವು ಯೋಜನೆ...

ಕಥೆ

ಕಾಮಿತ ಫಲದೇ …

ಆಗಿನ್ನೂ ನಾನು ಚಿಕ್ಕವ .ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ ‘ ನಾನೇಕೆ ಹೀಗೆ? ‘ ಎಂದು ಕೇಳುತ್ತಿದ್ದೆ. ಅವರಾದರೂ ಹೇಗೆ ಹೇಳಿಯಾರು? ನಾನು ಸ್ನಾನ ಮಾಡುತ್ತಿದ್ದಾಗ ನನ್ನ ಮುಂದೆ ಊರ್ವಶಿ ಬಂದಳು, ಅವಳನ್ನು ನೋಡಿ ನಾನು...

ಅಂಕಣ

ವಿಕಾಸ’ವಾದ’ -೨ ( ಲಿಟಲ್ ಆಲ್ಬರ್ಟ್ )

ಇಪ್ಪತ್ತನೇ ಶತಮಾನದ ಆದಿಕಾಲ, ವೈದ್ಯವಿಜ್ಞಾನ ಇನ್ನೂ ತೊಟ್ಟಿಲಲ್ಲಿತ್ತು. ಮನೋವಿಜ್ಞಾನವಂತೂ ಶಿಶು. ಹುಚ್ಚುಹಿಡಿದವರನ್ನು ಚರ್ಚಿಗೆ ಸೇರಿಸಲಾಗುತ್ತಿತ್ತು. ಅಲ್ಲಿ ಜನರಿಗೆ ಬೈಬಲ್ ಓದಿ ಹೇಳುತ್ತಾ “ಭಗವಂತಾ ಕರುಣೆ ತೋರು” ಎಂದು ಬೇಡಿಕೊಳ್ಳಲಾಗುತ್ತಿತ್ತು. ಆಗಿನ ಕಾಲಕ್ಕೆ ನಮಗೆ ತಿಳಿದಿದ್ದ ಮನೋವಿಜ್ಞಾನ ಅಷ್ಟೇ!!             ನಂತರದ ದಿನಗಳಲ್ಲಿ ಬಂದ...

ಪ್ರವಾಸ ಕಥನ

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ? ಹೇಗೆ ಹೋದೆ? ಏನೇನು ತಿಂದೆ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ. ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ. ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ. ನಾನು ಬರೆಯುತ್ತಿರುವ ಈ ಪ್ರವಾಸ ಕಥನ...

ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಮುಕ್ತಾಯ )

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)   ನಿಧಾನವಾಗಿ ಕಣ್ಣು ತೆರೆದೆ , ಎದ್ದು ಕೂರಲು ಆಗದಷ್ಟು ಬೆನ್ನು ನೋಯುತ್ತಿತ್ತು . ಕೆಲ ಹೊತ್ತಿನಲ್ಲಿ ವಿಕ್ರಮ್ ಹಾಗೂ ಡಾಕ್ಟರ್ ನನ್ನೆದುರು ಬಂದು ಕುಳಿತರು . ಆ ನೋವಿನಲ್ಲೂ ನನಗೆ ಆತ ಯಾರು ? ಯಾಕೆ ಬಂದ ಎಂಬ ಪ್ರಶ್ನೆಗಳೇ ಕಾಡುತಿತ್ತು . ಆತನೂ ಅದೇ ಆಸ್ಪತ್ರೆಯಲ್ಲಿ ಇದ್ದಾನಂತೆ , ಇನ್ನೂ ಪ್ರಜ್ಞೆ ಬಂದಿರಲಿಲ್ಲ . ಎದ್ದು...

ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -2) ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ ಬಳಿ ಹೋಗದೆ ಡೆಡ್ ಎಂಡ್ ತಲುಪುತ್ತಿತ್ತು . ನಾನು ತಿಪ್ಪರಲಾಗ ಹೊಡೆದರೂ ಇಪ್ಪತ್ನಾಲ್ಕು ಗಂಟೆಯೊಳಗೆ ಕೇಸು ಮುಗಿಸಲು  ಸಾಧ್ಯವೇ ಇರಲಿಲ್ಲ . ಆದರೆ ಒಂದೇ ಒಂದು ದಾರಿ ಮಾತ್ರ ನನಗೆ ಉಳಿದಿತ್ತು  , ಕೊಲೆ ಮಾಡಿ...

ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ-೨)

 ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧) ರಿಪೋರ್ಟು ಬರುವ ತನಕ ನಾನು ಸುಮ್ಮನೆ ಕೂರುವ ಹಾಗಿರಲಿಲ್ಲ .  ತಡ ಮಾಡಿದಷ್ಟೂ ಕೊಲೆಗಾರ ಸಾಕ್ಷಿಗಳನ್ನು ನಾಶ ಮಾಡುತ್ತಾ ಹೋಗುತ್ತಾನೆ . ನನ್ನ ತಲೆ ಕೆಡಿಸಿದ್ದು ವಜ್ರದ ಹರಳು , ಅದನ್ನು ನೋಡಿದರೆ ಹೇಳಬಹುದು ಅದು ಆಫ್ರಿಕಾದ ಗಣಿಯಿಂದ ಬಂದದ್ದು . ಅಲ್ಲಿ ತೆಗೆದ ವಜ್ರಗಳನ್ನು ಪ್ರಪಂಚದ ತುಂಬೆಲ್ಲಾ ಕದ್ದು ಸಾಗಿಸುವ ದೊಡ್ಡ ಜಾಲವೇ...

ಕಥೆ

ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧)

ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ನನ್ನ ಅಭ್ಯಾಸ . ನಾನು ಸೇನೆ ಬಿಟ್ಟು ಹದಿನೈದು ವರ್ಷವೇ ಆದರೂ ಅಲ್ಲಿ ಕಲಿತ ಪಾಠಗಳನ್ನು ಇನ್ನೂ ಮರೆತಿಲ್ಲ. ಇಂದಿಗೂ ಇಪ್ಪತ್ತು ಮೈಲು ಓಡುವಷ್ಟು ಕಸು ನನ್ನಲ್ಲಿದೆ. ವ್ಯಾಯಾಮ ಮುಗಿಸಿ ಬರುವಷ್ಟರಲ್ಲಿ ನನ್ನ ಮೊಬೈಲಿಗೆ ಇಪ್ಪತ್ತೆರಡು ಮಿಸ್’ಕಾಲ್ ಬಂದು ಕುಳಿತಿತ್ತು . ಐಸಿಸ್’ನ ವೆಬ್ಸೈಟುಗಳನ್ನು ಧ್ವಂಸ ಮಾಡಿದ ನನ್ನಂತಹ...

ಕಥೆ

ನೆನಪಿನ ಬುತ್ತಿಯಿಂದ

ಅಂದು ಶನಿವಾರವಾಗಿತ್ತು .ಈ ಶಾಲೆ ,ಪಾಠ ರಗಳೆಗಳಿಂದ ಮುಕ್ತಿ ಯಾವಾಗ ಸಿಗುತ್ತೋ ಎಂದು ನಾನು  ಲಾಸ್ಟ್ ಪಿರಿಯಡ್ನಲ್ಲಿ ಕೂತಿದ್ದೆ. ಅಂತೂ -ಇಂತೂ ನೂರೆಂಟು ಸಲ ವಾಚ್ ನೋಡಿ ೧೨ ಗಂಟೆ  ಆಗಿತ್ತು. ಶಾಲೆ ಬಿಟ್ಟ ತಕ್ಷಣ  ಒಂದೇ ಓಟಕ್ಕೆ ಮನೆ ಸೇರಿದ್ದೆ. ಬೇಗ ಬೇಗ ಊಟ ಮುಗಿಸಿ ಕ್ರಿಕೆಟ್ ಆಡಲೆಬೇಕೆಂಬ ಪಣ ತೊಟ್ಟಿದ್ದೆ. ಮಳೆ ೩ ತಿಂಗಳಿನಿಂದ  ನಮ್ಮ ಆಟಕ್ಕೆ ಕಲ್ಲು ಹಾಕುತಿತ್ತು...

ಅಂಕಣ

ವಿಕಾಸ’ವಾದ’ – ನಿದ್ದೆ ಬಂದಿಲ್ಲ

” ಥೂ ಏನ್ ತಿಗಣೆ ಮಾರಾಯ . ರಾತ್ರಿ ನಿದ್ದೇನೆ ಬಂದಿಲ್ಲ ನಂಗೆ ” , ಹೊಸದಾಗಿ ನನ್ನ ರೂಮಿಗೆ ಬಂದಿದ್ದ ಜೀವನ್ ತನ್ನ ಅಳಲು ತೋಡಿಕೊಳ್ಳುತ್ತಿದ್ದ . ” ನಿನ್ಕಿಂತ ಮೊದ್ಲೇ ಅವು ನನ್ ರೂಂ ಮೇಟ್ ಕಣಯ್ಯಾ ” ಎಂದು ನಾನು ನಕ್ಕೆ . ಮೊದ-ಮೊದಲು ನನಗೂ ಹೀಗೆ ಆಗಿತ್ತು . ಹಾಸ್ಟೆಲ್ ಸೇರುವ ಮೊದಲು ನಾನು ತಿಗಣೆಗಳನ್ನು ನೋಡಿಯೇ ಇರಲಿಲ್ಲ . ಒಂದು...