ಅಬ್ಬಬ್ಬಾ ಎಂಥಾ ಉರಿ ಬಿಸಿಲು, ಹೊರಗೆ ಕಾಲಿಡುವುದು ಅಸಾಧ್ಯ, ಮನೆ ಒಳಗೆ ಕುಳಿತರೂ ಬೆವತುಕೊಳ್ಳುವ ಸ್ಥಿತಿ, ರಾತ್ರಿಯಂತೂ ಸೆಕೆಗೆ ನಿದ್ದೆಯೇ ಇಲ್ಲ, ಮಹಡಿ ಮೇಲೆ ನಿಂತರೂ ತಣ್ಣಗಿನ ಗಾಳಿ ಬೀಸುವುದಿಲ್ಲ. ಕಳೆದ ಕೆಲ ವರ್ಷಗಳಿಂದ ಬೇಸಿಗೆ ಆರಂಭವಾದೊಡನೆ ಎಲ್ಲರ ಬಾಯಲ್ಲೂ ಕೇಳಿ ಬರುವ ಮಾತುಗಳಿವು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನೆಲ್ಲ ಕಡಿದು, ಕಿಟಿಕಿ, ಬಾಗಿಲು...
ಇತ್ತೀಚಿನ ಲೇಖನಗಳು
ಶಿಲೆಯಾದಳವಳು
-ಅಂದು- ಜನುಮದ ಪ್ರೀತಿಯನ್ನೆಲ್ಲ ಅಮೃತವನ್ನಾಗಿಸುತ್ತಿದ್ದಳು ಮಮತೆಯನ್ನೆಲ್ಲ ಎದೆಯಲ್ಲಿ ಹಾಲಾಗಿ ಬಚ್ಚಿಡುತ್ತಿದ್ದಳು|| ಎದೆಯಲ್ಲುಕ್ಕುವ ಹಾಲ ಮನತಣಿಯೇ ಕುಡಿಸುತ್ತಿದ್ದಳು ಬೆಚ್ಚಗಿನ ಅಪ್ಪುಗೆಯಿತ್ತು ಮನಸಾರೆ ಮುದ್ದುಗರೆಯುತ್ತಿದ್ದಳು|| ನಕ್ಷತ್ರ ತಾರೆಗಳ ಬಳಿ ಕರೆದು ಹೊಟ್ಟೆತುಂಬಿ ಉಣಿಸುತ್ತಿದ್ದಳು ಚಂದಮಾಮ ಕಥೆ ಹೇಳಿ ಚೆಂದನಿದ್ದೆ...
ಅಂಗನವಾಡಿಯಲ್ಲಿ ಇದ್ದಾಗಿಂದ ಕೇಳ್ತಿದ್ದೇನೆ ಈ ಸಮಸ್ಯೆ, ಇನ್ನೂ...
ಹಾಗೊಂದು ಶೀರ್ಷಿಕೆಯನ್ನು ಬರೆದೆನಾದರೂ ನಾನು ಅಂಗನವಾಡಿ, ನರ್ಸರಿ, ಪ್ರೀಸ್ಕೂಲು ಇತ್ಯಾದಿಗಳಿಗೆ ಹೋದವನಲ್ಲ. ನೇರ ಒಂದನೇ ತರಗತಿಗೆ, ಅದೂ ಒಂದು ತಿಂಗಳು ತಡವಾಗಿ ಸೇರಿದವನು ನಾನು. ನಾನು ಶಾಲೆ ಸೇರುವ ಹೊತ್ತಿಗೆ ಒಂದನೇ ಕ್ಲಾಸಿನ ಉಳಿದ ಹುಡುಗರೆಲ್ಲ ಅಆಇಈಗಳ ನದಿ ದಾಟಿ ಕಕ್ಕಗಗ್ಗಗಳ ಬೆಟ್ಟವನ್ನೇರಿ ಪಪ್ಪಬಬ್ಬಮ್ಮಗಳ ಬಯಲವರೆಗೆ ಬಂದುಬಿಟ್ಟಿದ್ದರು. ಕಾಲೇಜಿನಲ್ಲಾದರೆ...
ಆರತಿ ತಟ್ಟೆಯ ಚಿಲ್ಲರೆಗೆ ಕೈ ಚಾಚುವ ನಿಮಗೇ ಇಷ್ಟಿರಬೇಕಾದರೆ…
“ದೇವಾಲಯಗಳು ಶೋಷಣೆಯ ಕೇಂದ್ರಗಳು. ವೈದಿಕಶಾಹಿ, ಪುರೋಹಿತಶಾಹಿ ವರ್ಗ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಠಿಸಿ ಶೂದ್ರಾದಿಗಳ ಅಜ್ಞಾನವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಅವರ ದುಡಿಮೆಯನ್ನೆಲ್ಲಾ ತಮ್ಮ ಸೌಕರ್ಯ, ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ. ಹೋಮ, ಪೂಜೆ, ಸತ್ಯನಾರಾಯಣವ್ರತ ಇತ್ಯಾದಿ ಅವೈಜ್ಞಾನಿಕವಾದ...
ಎರಡು ಮನಸ್ಸುಗಳ ಮಧ್ಯೆ
ವಾಸಂತಿ ಮಗಳು ಮೃದುಲಾಗೆ ಫೋನ್ ಮಾಡಿದಳು . “ನಿನ್ನ ಅಣ್ಣನ ಲಗ್ನ ನಿಶ್ವಯವಾಗಿದೆ ” ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ ಬಂದರೆ ಅಮ್ಮ ಅಮ್ಮ ಅಂತ ಹಿಂದೆ ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ಅವಳು ಮದುವೆಯಾಗಿ ಹೊರಟುಹೋದ ಮೇಲೆ ಒಂಟಿತನ ಕಾಡುತಿತ್ತು. ಅವಳ ಮದುವೆಯಾಗಿ ಎರಡು ವರ್ಷವಾಗಿದ್ದರೂ ಕೇವಲ...
ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ -ಭಾಗ-2- ಫ್ಲೇಮಿಂಗೋ (ರಾಜಹಂಸ)
ಪಕ್ಷಿಲೋಕದ ವಿಸ್ಮಯಗಳಲ್ಲೊಂದಾದ ಬಣ್ಣ ಬಣ್ಣದ ಬಳುಕುವ ಕತ್ತಿನ, ಸೌಂದರ್ಯ ದೇವತೆಯ ಸಂತಾನವೇನೋ ಎಂದೆನಿಸುವ ಪ್ರಕಾಶಮಾನವಾದ ಗುಲಾಬಿಗರಿಗಳಿಂದ ಸಮ್ಮೋಹಿತಗಳಿಸುವ ವಿಶಿಷ್ಟ ಪಕ್ಷಿಯೇ ಫ್ಲೇಮಿಂಗೋ. ಬಾನಾಡಿಗಳ ಲೋಕದ ಹಂಸಗಳ ರಾಜನೆಂದು ಗುರುತಿಸಲ್ಪಡುವ ಈ ಹಕ್ಕಿಗೆ ಕನ್ನಡದಲ್ಲಿ ರಾಜಹಂಸವೆಂದೂ, ಹಿಂದಿಯಲ್ಲಿ ಬೋಗ್ ಹಂಸ ಅಥವಾ ಚರಾಜ್ ಬಗ್ಗೋ ಹಾಗೂ ಮರಾಠಿಯಲ್ಲಿ ರೋಹಿತ್ ಅಥವಾ...
