ಅದೊಂದು ದಿನ ಮೌನಿಯಾಗಿ ಕೂತಿದ್ದೆ,ಹೌದು ಕೇವಲ ಮೌನವೊಂದೇ ಮನಸ್ಸನ್ನ ಆವರಿಸಿತ್ತು..ಮೊದಲ ಬಾರಿ ನಾನು ಸೋತೆ ಎಂದು ಕುಗ್ಗಿದ್ದೆ..ನನ್ನದೇ ನಿರ್ಧಾರ ನನ್ನನ್ನ ಹಂತ ಹಂತವಾಗಿ ಕುಗ್ಗಿಸಿತ್ತು,ಇದು ಅಂದು ನಾನೇ ತೆಗೆದುಕೊಂಡ ನಿರ್ಧಾರವೇ? ನನಗೇ ನಂಬಲಾಗುತ್ತಿರಲಿಲ್ಲ..ಪ್ರತೀ ಕ್ಷಣವೂ ಸೋಲುತ್ತಿದ್ದ ಮನಸ್ಥಿತಿಯ ಎದುರು ನಾನು ಕುಬ್ಜನಾಗುತ್ತಾ ಸಾಗಿದ್ದೆ..ಕಾರಣ ಹುಡುಕುವ...
ಪ್ರಚಲಿತ
ಆ ‘ಸೌಮ್ಯ’ ಬದುಕಿಗೆ ಕೊಳ್ಳಿಯಿಟ್ಟ ರಾಕ್ಷಸನೆಲ್ಲಿ?
ಇದು ಬರೋಬ್ಬರಿ ಹದಿನೇಳು ವರ್ಷಗಳ ಹಿಂದಿನ ಘಟನೆ, ನನಗಿನ್ನೂ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆವತ್ತು ಆಗಸ್ಟ್ ಆರು, ಏಳಕ್ಕೆ ತುಳುನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬ. ಆ ಪ್ರಯುಕ್ತ ವಿಶೇಷವಾಗಿ ಮಾಡುವ ಅರಶಿನ ಎಲೆ ಕೊಟ್ಟಿಗೆ ಮತ್ತು ಹಬ್ಬಕ್ಕೆ ಬೇಕಾದ ತಯಾರಿಗಳು ಜೋರಾಗಿಯೇ ನಡೆದಿತ್ತು ಆ ದಿನ ಸಂಜೆ. ಆವಾಗೆಲ್ಲ...
ಪಾರ್ನ್ ಬ್ಯಾನ್ ಈ ಪರಿ ಹಾರ್ನ್ ಮಾಡುತ್ತಿರುವುದೇಕೆ?
ಇಲ್ಲ, ನನ್ನಿಂದ ತಡೆದುಕೊಳ್ಳುವುದು ಅಸಾಧ್ಯವೇ ಆಗಿತ್ತು. ನಿನ್ನೆ ಮೊನ್ನೆಯೆಲ್ಲಾ ಈ ಸಾಮಾಜಿಕ ಜಾಲತಾಣ (ಫ಼ೇಸ್ ಬುಕ್, ಟ್ವಿಟ್ಟರ್) ತೆರೆದಾಗಲೆಲ್ಲಾ #pornban ಇವುಗಳದ್ದೇ ಸದ್ದು – ಗದ್ದಲ. ‘Are you aware of this?? Porn websites are banned!! ಎಂದು ಜನರಿಗೆ ಅದೇನೋ ದೇಶವೇ ಕೊಳ್ಳೆ ಹೋಗುತ್ತಿರುವುದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂಬಂತೆ ಬಿಂಬಿಸುವ...
ನಾವು ದ್ವೇಶಿಸುವುದು ದೇಶದ್ರೋಹಿಗಳನ್ನು ಮಾತ್ರ!
ಆಗಸ್ಟ್ 30 2015 , ಭಾರತದ ಇತಿಹಾಸದಲ್ಲೇ ಅದೊಂದು ಮಿಶ್ರತೆಯ ದಿನ. ಒಂದೆಡೆ ಈ ದೇಶ ಕಂಡ ಅದ್ಬುತ ರಾಜಕೀಯೇತರ ನಾಯಕ , ಜನರ ಹೃದಯ ಗೆದ್ದ ಅತ್ಯಂತ ಸರಳ ವ್ಯಕ್ತಿ, ಜಾತಿ ಧರ್ಮಗಳ ಎಲ್ಲೆ ಮೀರಿ ಭಾರತೀಯತೆಯನ್ನೇ ತನ್ನ ಉಸಿರಾಗಿಸಿಕ್ಕೊಂಡು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಬಿಟ್ಟುಹೋದ ಆವುಲ್ ಫಕೀರ್ ಜೈನೂಲಬ್ದೀನ್ ಅಬ್ದುಲ್ ಕಲಾ ಪಂಚಭೂತಗಳಲ್ಲಿ...
ಒಬ್ಬ ಅಲ್ಲಿ …. ಮತ್ತೊಬ್ಬರು ಇಲ್ಲಿ….
ಕಷ್ಟ ಪಟ್ಟಾದರೂ ಉನ್ನತ ವ್ಯಕ್ತಿಯಾಗಬೇಕೆಂಬ ಆಸೆ ಕಲಾಂರಲ್ಲಿತ್ತು… ಯಾವುದೇ ಕೆಟ್ಟ ಹಾದಿ ಹಿಡಿಯದೆ ಸನ್ಮಾರ್ಗದಿಂದ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದರು…ತಾವೇ ಸ್ವತ: ಮನೆ ಮನೆಗೆ ದಿನಪತ್ರಿಕೆಗಳನ್ನು ಹಂಚಿ ತಮ್ಮ ಶಾಲಾ ಶುಲ್ಕವನ್ನು ಭರಿಸಿದ್ದರು.. ವೈಮಾನಿಕ ಇಂಜಿನೀಯರಿಂಗ್ ಪದವಿ, ನಂತರ ಪಿ ಹೆಚ್ ಡಿ, ಎಮ್ ಟೆಕ್ ನ್ನು ಮುಗಿಸಿದರು.. ಇಸ್ರೋ ದಲ್ಲಿ...
ಬಹುಶಃ ದೇವರಿಗೂ ನಿಮ್ಮ ಪಾಠ ಕೇಳುವ ಮನಸ್ಸಾಗಿತ್ತು!
ಯಾವತ್ತಿನಂತೆ ಕಬಡ್ಡಿ ನೋಡುತ್ತಿದ್ದೆ. ಘಂಟೆ ಒಂಬತ್ತಾಗಿದ್ದರಿಂದ ವಾರ್ತೆ ನೋಡಣವೆಂದು ಟಿವಿ9ನತ್ತ ಚಾನಲ್ ತಿರುಗಿಸಿದೆ. ತಿರುಗಿಸಿದ್ದೇ ತಡ, ಟಿವಿ ಪಕ್ಕದಲ್ಲೇ ಕುಳಿತಿದ್ದ ತಂಗಿ ‘ಅಣ್ಣಾ.. ಅಬ್ದುಲ್ ಕಲಾಂ..’ ಎಂದು ಚೀರಿದಳು. ಏನಾಗುತ್ತಿದೆ ಎಂದು ಗೊತ್ತಾಗುವ ಮುನ್ನವೇ ‘ಅಬ್ದುಲ್ ಕಲಾಂ ಇನ್ನಿಲ್ಲ’ ಎಂಬ ಶಾಕಿಂಗ್ ಸುದ್ದಿ ಬರುತ್ತಿತ್ತು. ಅಯ್ಯೋ ದೇವರೇ…...
ಸತ್ತು ಬದುಕುತ್ತಿರುವವರು…
ಭಾರತ ಹಳ್ಳಿಗಳ ದೇಶ, ಆದರೆ ಅಲ್ಲಿನ ಜನರ ಬದುಕಿನ ಸ್ಥಿತಿ ಗತಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ. ಗ್ರಾಮೀಣ...
ಮತ್ತೊಬ್ಬ ರಾಜೇಶ ಹುಟ್ಟದಿರಲಿ!
ನನ್ನನ್ನು ಮತ್ತೆ ರಿಯಾಲಿಟಿ ಶೋ ಎಂಬ ಹುಚ್ಚರ ಸಂತೆ ಕಾಡುತ್ತಿದೆ. ಹಳ್ಳಿ ಹೈದ ಪ್ಯಾಟೆಗ್ ಬಂದ ಅಂತೆ, ಅರೆರೆ, ಇವರೇನೋ ಹಳ್ಳಿ ಹೈದರನ್ನು ಪೇಟೆಗೆ ಕರೆ ತಂದು ಬಹಳ ಉದ್ಧಾರ ಮಾಡ ಹೊರಟಿದ್ದಾರೆನೋ ಅಂದುಕೊಳ್ಳಬೇಕು. ಹಳ್ಳಿ ಹೈದರ ತಾಕತ್ತು ಗತ್ತು ನಮಗಿಲ್ಲ, ಬಿಡಿ ಅದು ಬೇರೆ ವಿಷಯ. ಆದರೆ ಈ ಹಳ್ಳಿ ಹೈದ ಪ್ಯಾಟೆಗ್ ಬಂದ ಶೋ ನ ಉದ್ದೇಶವಾದರೂ ಏನು?? ನಿಮಗೆ ಹಳ್ಳಿ ಹೈದ...
ಬಡವರನ್ನು ಬಡವರನ್ನಾಗಿಸಿಯೇ ಇರಿಸುವುದು ನಿಮ್ಮ ರಾಜಕೀಯ ಧರ್ಮವಾ?
ನಾಡಿನ ಹಿರಿಯ ಸಾಹಿತಿಯಾಗಿರುವ ಎಸ್.ಎಲ್.ಭೈರಪ್ಪನವರು ದಿನ ಪತ್ರಿಕೆಗಳಲ್ಲಿ ಅನ್ನ ಭಾಗ್ಯದ ಕುರಿತು ನೀಡಿದ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎರಡು ಕಾರಣಗಳು. ಒಂದು ಪ್ರಚಾರಕ್ಕಾಗಿ, ಬಾಯಿ ಚಪಲಕ್ಕಾಗಿ ಮಾತನಾಡುವ ಥರ್ಡ್ ಕ್ಲಾಸ್ ಸಾಹಿತಿಯಲ್ಲ ಭೈರಪ್ಪನವರು. ಎರಡನೇಯದು ಭೈರಪ್ಪನವರು ಏನೇ ಹೇಳಿದರೂ ಅದಕ್ಕೆ ಅಧಾರವಿದ್ದುಕೊಂಡೇ ಹೇಳುತ್ತಾರೆ...
ಯಡಿಯೂರಪ್ಪನೆಂಬ ದುರಂತ ನಾಯಕ..
ರೈತರ ಸರಣಿ ಆತ್ಮಹತ್ಯೆಗಳು ಮುಂದುವರಿದಿದೆ. ಎಮ್ಮೆ ಚರ್ಮದ ಸರ್ಕಾರಕ್ಕೂ, ಗಡಸು ಸಕ್ಕರೆ ಕಾರ್ಖಾನೆಗಳಿಗೂ ರೈತರ ಬವಣೆ ಇನ್ನೂ ಅರ್ಥವಾಗುತ್ತಿಲ್ಲ. ಪಾದಯಾತ್ರೆ, ರಸ್ತೆತಡೆ, ಪ್ರತಿಭಟನೆಗಳ ತರುವಾಯ ವಿಧಾನಮಂಡಲದ ಅಧಿವೇಶನ ನಡೆಯುತ್ತಲಿದೆ. ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆಯಾದರೂ ಏನೋ ಒಂದು ಖದರ್ರು ಮಿಸ್ಸಾದಂತೆ ಕಾಣುತ್ತಿದೆ. ಪ್ರತಿಪಕ್ಷ ನಾಯಕನ...