ಪ್ರಚಲಿತ

ನಾವು ದ್ವೇಶಿಸುವುದು ದೇಶದ್ರೋಹಿಗಳನ್ನು ಮಾತ್ರ!

ಆಗಸ್ಟ್ 30 2015 , ಭಾರತದ ಇತಿಹಾಸದಲ್ಲೇ ಅದೊಂದು ಮಿಶ್ರತೆಯ ದಿನ. ಒಂದೆಡೆ ಈ ದೇಶ ಕಂಡ ಅದ್ಬುತ ರಾಜಕೀಯೇತರ ನಾಯಕ , ಜನರ ಹೃದಯ ಗೆದ್ದ ಅತ್ಯಂತ ಸರಳ ವ್ಯಕ್ತಿ, ಜಾತಿ ಧರ್ಮಗಳ ಎಲ್ಲೆ ಮೀರಿ ಭಾರತೀಯತೆಯನ್ನೇ ತನ್ನ ಉಸಿರಾಗಿಸಿಕ್ಕೊಂಡು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಬಿಟ್ಟುಹೋದ ಆವುಲ್ ಫಕೀರ್ ಜೈನೂಲಬ್ದೀನ್ ಅಬ್ದುಲ್ ಕಲಾ ಪಂಚಭೂತಗಳಲ್ಲಿ ಲೀನವಾಗಿದ್ದರೆ, ಮತ್ತೊಂದೆಡೆ ಭಾರತದ ಪುಣ್ಯಭೂಮಿಯಲ್ಲಿ ಹುಟ್ಟಿ, ಈ ನೆಲದಲ್ಲಿ ಬೆಳೆದು ದೇಶಕ್ಕಿಂತ ತಾನು ಪಾಲಿಸಿ ಬಂದ ಮೂಡ ತತ್ವ ಮೇಲೆಂದುಕೊಂಡು ತನ್ನದೇ ನೆಲದ ಜನರನ್ನು ದಾರುಣವಾಗಿ ಕೊಂದ ಯಾಕೂಬ್ ಮೆಮೊನ್ ಕೂಡ ಗಲ್ಲಿಗೆರಲ್ಪಟ್ಟ ದಿನ.

ಪೂಜ್ಯ ಅಬ್ದುಲ್ ಕಲಾಂರ ಬಗ್ಗೆ ಎಷ್ಟು ಬರೆದರೂ , ಓದಿದರೂ ಅದು ಕಡಿಮೆಯೇ, ತನ್ನ ಪೂರ್ತಿ ಜೀವನವನ್ನ ಈ ದೇಶದ ಒಳಿತಿಗೋಸ್ಕರ ಮುಡಿಪಾಗಿಟ್ಟ ಕೆಲವೇ ವ್ಯಕ್ತಿಗಳಲ್ಲಿ ಅವರು ಒಬ್ಬರು, ಅವರೊಬ್ಬ ಅಸಾಮಾನ್ಯ ವಿಜ್ಯಾನಿ , ಅಪ್ರತಿಮ ದೇಶಭಕ್ತ, ಮೀಗಿಲಾಗಿ ಜನ ಸಾಮಾನ್ಯರ ರಾಷ್ಟ್ರಪತಿ, ಯುವ ಸಮೂಹದ ಆಶಾಕಿರಣ. ಅವರೊಬ್ಬ ಚೈತ್ಯನ್ಯದ ಚಿಲುಮೆ,ಸ್ವಾಮಿ ವಿವೇಕಾನಂದರ ರಾಷ್ಟೀಯ ಚಿಂತನೆಗಳಿಂದ ಸ್ವತಃ ಪ್ರೇರಿತರಾದದ್ದೆ ಅಲ್ಲದೆ ಅಸಂಖ್ಯಾತ ಯುವ ಮನಸ್ಸುಗಳನ್ನು ರಾಷ್ಟ್ರದೇವೋಭಾವದ ಚಿಂತನೆಯೆಡೆ ಕೊಂಡೊಯ್ದ ಆಧುನಿಕ ಭಾರತದ ಮತ್ತೋರ್ವ ಸಂತ ವಿಜ್ಞಾನಿ ಎಂದರೆ ತಪ್ಪಾಗಲಾರದು. ನಾವು ಸಣ್ಣದಿರುವಾಗ ಶಾಲೆಯಲ್ಲಿ ಗುರುಗಳು ಭಾರತದ ರಾಷ್ಟ್ರಪತಿ ಯಾರೆಂದು ಕೇಳಿದ ಕೂಡಲೇ ಒಬ್ಬರ ಮೇಲೊಬ್ಬರಂತೆ ಕೈಯೆತ್ತಿ ಎ. ಪಿ. ಜೆ ಅಬ್ದುಲ್ ಕಲಾಂ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು.

ಆದರೆ ದುರದೃಷ್ಟ ಆ ಮಹಾನ್ ನಾಯಕನನ್ನು ಬಿಡಲಿಲ್ಲ. ಸ್ವಂತಕ್ಕಾಗಿ ಏನನ್ನು ಬಯಸದ ಅವರಿಗೆ ರಾಷ್ಟ್ರಪತಿಯಂತ ಗೌರವ ಮತ್ತು ಯೋಗ್ಯ ಅಧಿಕಾರವನ್ನು ನೀಡಿದ್ದು ಮತ್ತೋರ್ವ ಅಪ್ರತಿಮ ದೇಶಭಕ್ತ ಅಟಲ್ ಜಿ. ಆದರೆ ಕಲಾಂ ಎನ್ನುವ ಅಪ್ರತಿಮ ನಾಯಕನಿಗೆಗೆ ಈ ಅಧಿಕಾರ ಅದು ಇದೆಲ್ಲ ಬೇಕಾಗಿರಲಿಲ್ಲ. ತನ್ನ ಮೂಲ ವ್ಯಕ್ತಿತ್ವವನ್ನು ಕಳೆದುಕ್ಕೊಳದೆ, ಪ್ರತಿ ಕ್ಷಣವನ್ನು ಯುವ ಪೀಳಿಗೆಯೊಂದಿಗೆ ಕಳೆದು ಯುವ ಭಾರತವನ್ನು ಬಡಿದ್ದೆಬ್ಬಿಸುವ ಕೆಲಸವನ್ನು ಮಾಡುತ್ತಾ ಬಂದರು, ತಾನಿಷ್ಟ ಪಟ್ಟು ಆಯ್ಕೆ ಮಾಡಿದ ವೃತ್ತಿ ಎನ್ನುವುದಕ್ಕಿಂತಲೂ ತನ್ನ್ನ ಅಖಂಡ ಜ್ಞಾನವನ್ನು ಹಂಚಿಕೊಳ್ಳುವ ವೇದಿಕೆಯಾಗಿ ಸ್ವೀಕರಿಸಿಕೊಂಡ ಶಿಕ್ಷಕ ಪ್ರವೃತ್ತಿಯಲ್ಲೇ ತಮ್ಮ ಕೊನೆಯ ಕ್ಷಣಗಳನ್ನು ಆಸ್ವಾದಿಸಿದ ಧೀಮಂತ ವ್ಯಕ್ತಿತ್ವ ಅಬ್ದುಲ್ ಕಲಾಂ.  ಅಂತಹ ವ್ಯಕ್ತಿ ನಮ್ಮ ನಡುವಿನಿಂದ ದೂರವಾದಾಗ ಕೋಟಿ ಭಾರತೀಯರಿಗಾದ ದುಖಃ ಅಷ್ಟಿಷ್ಟಲ್ಲ, ಕಂಬನಿ ಮಿಡಿದ ಕಣ್ಣುಗಳೆಷ್ಟೋ ದೇವರೇ ಬಲ್ಲ, ಕೋಮುವಾದಿಗಳೆಂದು ಹಣೆಪಟ್ಟಿ ಹಚ್ಚಿಕ್ಕೊಂಡವರು ಸಹ ಕಲಾಂ ಜಿ ಮತ್ತೊಮ್ಮೆ ಈ ದೇಶದಲ್ಲಿ ಹುಟ್ಟಿ ಬನ್ನಿ ಎಂದು ಗೋಗರೆದುದಕ್ಕೆ ಎಲ್ಲೆಯೇ ಇಲ್ಲ, ಅದರ ನಡುವೆಯೂ ಬುದ್ದಿಜೀವಿಗಳೆನಿಸಿಕೊಂಡವರು, ಜಾತ್ಯತೀತ ವೋಟ್ ಬ್ಯಾಂಕ್ ನ ನೇತಾರರು , ಮೊಸಳೆ ಕಣ್ಣೀರು ಸುರಿಸಿದ್ದು ಮಾತ್ರವಲ್ಲದೆ ಅವರ ಸಾವನ್ನು ತಮ್ಮ ಬೇಳೆ ಬೇಯಿಸಲು ಬಳಸಿದ್ದು ವಿಪರ್ಯಾಸ.

ಇದೆಲ್ಲಾ ಒಂದು ಆಯಾಮವಾದರೆ ಮತ್ತೊಂದು ಆಯಾಮದಲ್ಲಿ ಯೂಕೂಬ್ ಮೆಮನ್ ಎಂಬ ರಾಕ್ಷಸನಿದ್ದಾನೆ. ಯಾಕೂಬ್ ಗಲ್ಲಿನ ಕುರಿತು ಹೈದ್ರಾಬಾದಿನಾ ಒಬ್ಬ ಕಾಮಾಲೆ ಕಣ್ಣಿನ ನೇತಾರ ಹೇಳುತ್ತಾನೆ ಯಾಕೂಬ್ ಮನನ್ ನನ್ನು ಗಲ್ಲಿಗೇರಿಸಿದ್ದು ಅವನ್ನೊಬ್ಬ ಮುಸಲ್ಮಾನ ಅನ್ನೋ ಕಾರಣಕ್ಕೆ ಅಂತ, ಆದರೆ ಆ ಪುಣ್ಯಾತ್ಮನಿಗೆ ಕಲಾಂ ಕೂಡ ಒಬ್ಬ ದೇಶಭಕ್ತ, ಮೂಲವಾಗಿ ಮುಸಲ್ಮಾನನಾಗಿದ್ದರೂ ಎಂದೂ ತನ್ನ ಮತವನ್ನ ತುಷ್ಟೀಕರಣಕ್ಕೆ ಆಗಲಿ ಅಂಧಾಭಿಮಾನಕ್ಕಾಗಲಿ  ಬಳಸದೆ ನಿಜವಾದ ಭಾರತೀಯನಾಗಿ ಬಾಳಿ ಕೋಟ್ಯಂತರ ಭಾರತೀಯರ ಪ್ರೀತಿಗೆ ಪಾತ್ರರದದ್ದು ಕಾಣಿಸದೆ ಹೋಯಿತು. ಮೂಲ ಭಾರತೀಯರಾದ ಸನಾತನ ಧರ್ಮೀಯರು ಎಂದಿಗೂ ಯಾರನ್ನೂ ಧ್ವೇಷಿಸಿದ ಉದಾಹರಣೆ ಎಲ್ಲೂ ಸಿಗಲಿಕ್ಕಿಲ್ಲ, ನಾನಾ ಮತೀಯರನ್ನು , ದೇಶೀಯರನ್ನು ತನ್ನ ನೆಲದಲ್ಲಿ ಆಶ್ರಯ ನೀಡಿ , ಸತ್ಕಾರ ಆದರದಿಂದ ನಡೆಸಿಕ್ಕೊಂಡು ಬಂದು ವಿಶ್ವಕ್ಕೆ ವಸುದೈವ ಕುಟುಂಬಕಂ ಅನ್ನುವ ಸಹಬಾಳ್ವೆಯ ಮಂತ್ರವನ್ನು ಉದ್ಘೋಷಿಸಿದ ಸಂಸ್ಕೃತಿ ನಮ್ಮದು, ಅಂತಹ ಜನರಿಗೆ ಪಾಠ ಹೇಳಿಕೊಡುವ ಕನಿಷ್ಟ ಯೋಗ್ಯತೆಯಾದರೂ  ಇಂತಹ ನಕಲಿ ಜಾತಿವಾದಿಗಳಿಗೆ ಇದೆಯೇ? ಕಲಂ, ಅಶ್ಫಾಕ್-ಉಲ್ಲಾ ಖಾನ್ , ಮೌಲಾನಾ ಆಜ಼ಾದ್, ಸಂತ ಕಭೀರ್, ಶ್ರೀ ಸಾಯಿಬಾಬಾ, ಈ ರೀತಿ ಅನೇಕ ದೇಶಭಕ್ತ ಸಂತ ಸೇನಾನಿಗಳನ್ನು ಪ್ರತಿನಿತ್ಯ ಗೌರವಿಸುವ ಈ ನೆಲದಲ್ಲಿ, ಪೊಳ್ಳು ರಾಜಕೀಯಕ್ಕೋಸ್ಕರ ಜನರನ್ನು ಒಡೆಯುವ ಇಂತಹ ಓವೇಯೀಸೀ ಗಳು ಯಾವ ರೀತಿಯ ದರ್ಬಾರ್ ಮಾಡಿಯಾರು ಯೋಚಿಸಿ. ಒವೈಸಿಯಂತವರು ಏನೇ ಹೇಳಲಿ, ನಾವು ದ್ವೇಶಿಸುವುದು ದೇಶದ್ರೋಹಿಗಳನ್ನು ಮಾತ್ರ.

ಇದೆಲ್ಲ ಅರ್ಹ್ತವಾಗದ  ಸಂಕುಚಿತ ಮನಸ್ಥಿತಿಯವರಿಗೆ ಕಲಾಂ ಆದರ್ಶವಾಗುವುದಿಲ್ಲ.  ಬದಲಾಗಿ ನೂರಾರು ಅಮಾಯಕರನ್ನು ತನ್ನ ಮೂಡ ಜಿಹಾದಿಗೋಸ್ಕರ ಬಲಿ ತೆಗೆದುಕೊಂಡ ಭಯೋತ್ಪಾದಕ ಮೇಲ್ಪಂಕ್ತಿಯವನಾಗುತ್ತಾನೆ. ಅದೇ ದಿನ ಆಗಸ್ಟ್ 30ರಂದು ನಾಗಪುರದಲ್ಲಿ ಯಾಕೂಬ್ ನ ಶರೀರದ ಸಂಸ್ಕಾರಕ್ಕಾಗಿ ಸೇರಿದ್ದ ಜನ ಸಾವಿರಾರು, ಒಬ್ಬ ದೇಶದ್ರೋಹಿಯನ್ನ ಈ ರೀತಿ ಹುತಾತ್ಮನ ತರಹ ಬಿಂಬಿಸುವ ಮನಸ್ಥಿತಿಯಂತೂ ಬಹಳ ನೀಚ. ಎಲ್ಲೋ ದೂರದ ಪಾಲೆಸ್ತೀನಿನಲ್ಲಿ ಬಾಂಬ್ ಬಿದ್ದಾಗ ಈ ದೇಶದ ಆಸ್ತಿಪಾಸ್ತಿಗಳನ್ನು ನಾಶ ಪಡಿಸುವುದು, ಪಕ್ಕದ ಮಯನ್ಮಾರಿನಲ್ಲಿ ತಮ್ಮವರ ಹತ್ಯೆಯಾದಾಗ ಇಲ್ಲಿ ಅದರ ವಿಷಬೀಜ ಬಿತ್ತಿ ಸಾಮರಸ್ಯ ಕಲಕುವುದು, ವಿಶ್ವಕ್ಕೆ ಕಂಟಕರಾದ ಐಸಿಸ್  ಉಗ್ರರನ್ನು ಬೆಂಬಲಿಸುವುದು, ಒಬ್ಬ ದೇಶದ್ರೋಹಿ ಉಗ್ರನನ್ನು ಮಹಾ ನಾಯಕನನ್ನಾಗಿ ಪ್ರತಿಬಿಂಬಿಸುವುದು, ಇದೆ ಏನು ನಿಮ್ಮ ಸಂಕುಚಿತ ಮನಸ್ಸಿನ ಪರಿಧಿ? ಇಂತಹ ನೂರು ಜನರಿಂದ ಅದೆಷ್ಟೋ ಸಾವಿರ ದೇಶಭಕ್ತ ಕಲಾಂ, ಆಜ಼ಾದ್, ಅಶ್ಫಾಕ್ ಗಳು ತಲೆತಗ್ಗಿಸುವಂತಾಗಿದೆ, ಅವರ ರಾಷ್ಟ್ರಾಭಿಮಾನಕ್ಕೆ ಇಂತಹ ತುಚ್ಚ ಘಟನೆಗಳಿಂದ ಧಕ್ಕೆಯಾಗಿದೆ. ಒವೈಸಿ ನೀವೇನಾದರೂ ಇದನ್ನ ಯೋಚಿಸಿದ್ದೀರಾ?

ಮುಂಬೈಯಲ್ಲಿ ಯಾಕೂಬ್ ಸಂಸ್ಕಾರಕ್ಕೆ ಸೇರಿದ ಜನ.

,ಓರ್ವ ದೇಶದ್ರೋಹಿಗೆ ಈ ರೀತಿಯ ಗೌರವ ಬೇಕೇ? ಭಯೋತ್ಪಾದಕ ಯಾವತ್ತಿದ್ದರೂ ಭಯೋತ್ಪಾದಕನೇ, ನಾಲ್ಕು ಜನ ಸೇರಿಸಿ ಅವನನ್ನು ಹುತಾತ್ಮನನ್ನಾಗಿ ಬಿಂಬಿಸುವುದು ಎಷ್ಟೊಂದು ಅಪಾಯಾಕಾರಿ ಮತ್ತು ಎಷ್ಟೊಂದು ತಪ್ಪು ಸಂದೇಶವನ್ನು ಈ ದೇಶದ ಯುವ ಪೀಳಿಗೆಗೆ ತಲುಪಿಸುತ್ತದೆ. ಮತಾಂಧ ಉಗ್ರರು ಬಾಂಬಿಟ್ಟು ಕೊಂದಾಗ ಎಲ್ಲ ಸೆಕ್ಯುಲರುಗಳು ಒಂದೇ ರಾಗದಲ್ಲಿ ಹೇಳುತ್ತಾರೆ ” ಭಯೋತ್ಪಾದನೆಗೆ ಧರ್ಮವಿಲ್ಲ” ಅದೇ ಒಬ್ಬ ಉಗ್ರ ತನ್ನ ಅಪರಾಧಕ್ಕೋಸ್ಕರ ಗಲ್ಲಿಗೇರಲ್ಪಟ್ಟರೆ ಹೇಳುತ್ತಾರೆ “ಅವನೊಬ್ಬ ಮುಸಲ್ಮಾನ ಅದಕ್ಕೋಸ್ಕರ ಅವನಿಗೆ ಶಿಕ್ಷೆ ನೀಡುತ್ತೀರಿ” ಅಂತ, ಏನಿದು ವಿಡಂಬನೆ , ದ್ವಂದ್ವ ನೀತಿ? ನಿಮ್ಮ ಇಂತಹ ದ್ವಂದ್ವತೆಯಿಂದ ಅದೆಷ್ಟೋ ಮುಗ್ದ ರಾಷ್ಟ್ರಪ್ರೇಮಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಅನ್ನುವ ಕಾಳಜಿ ನಿಮಗಿದೆಯೇ ?

ಒಬ್ಬ ಸೆಕ್ಯುಲರ್ ನಾಯಕನಂತೂ ಉಗ್ರನ ಕುಟುಂಬಿಕರಿಗೆ ರಾಜ್ಯಸಭಾ ಸೀಟ್ ನೀಡಿ ಅಂತ ಫರ್ಮಾನ್ ಹೊರಡಿಸಿದ್ರೆ, ಮತ್ತೋರ್ವ ಗುಜರಾತ್, ಅಯೋಧ್ಯಾ ವಿಷಯಗಳನ್ನು ತಳಕು ಹಾಕ್ತಾನೆ, ನಿಮ್ಮಂತಹ ಮೂಢ ಜಾತ್ಯಾತೀತರು ಇರುವವರೆಗೂ ಈ ದೇಶ ಪರಮ ವೈಭವಕ್ಕೆ ಮುಟ್ಟಲು ಖಂಡಿತ ಸಾದ್ಯವಿಲ್ಲ. ದಯಮಾಡಿ  ಬದಲಾಗಿ , ಸನಾತನಾ ಭಾರತೀಯರು ಬಹಳ ಹೃದಯವಂತರು, ಎಂತೆಂತಹವರನ್ನೋ ಈ ನೆಲದಲ್ಲಿ ಆಶ್ರಯ ನೀಡಿದವರಿಗೆ ನೀವೇನು ಕಡಿಮೆಯಾಗಲಿಕ್ಕಿಲ್ಲ, ಋಗ್ವೇದದಲ್ಲಿ ಹೇಳುವಂತೆ “ಸಂಗ್ಚ್ಛಧ್ವಂ ಸಂವಾಡಧಹ್ವಂ ಸಂ ಒ ಮನಸಿ ಜನತಾಂ | ದೇವ ಭಾಗಂ ಯಥಾ ಪೂರ್ವೇ ಸಂಜನನ ಉಪಸಾತ್” – ಬನ್ನಿ ಒಟ್ಟಾಗಿ, ಜಾತಿ ಧರ್ಮದ ಎಲ್ಲೆಗಳನ್ನು, ಪೊಳ್ಳು ರಾಜಕೀಯದ ಡೋಂಗಿ ನಾಟಕವನ್ನು ಬಿಟ್ಟು ಈ ದೇಶಕ್ಕೋಸ್ಕರ ಒಗ್ಗಟ್ಟಾಗಿ ಮುನ್ನಡೆಯೋಣ, ಅದ್ಬುಲ್ ಕಲಾಂರ ” ಇಂಡಿಯಾ 2020 ” ಯನ್ನ ಮನದಲ್ಲಿ ಇಟ್ಟು ನಿಸ್ವಾರ್ಥತೆಯಿಂದ ಭಾರತವನ್ನ ಪರಮ ವೈಭವಕ್ಕೆ ಕೊಂಡೊಯ್ಯೋಣ.

ಜೈ ಹಿಂದ್.

Sagar s poojari

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!