ಅಂಕಣ

ಅಂಕಣ

‘ಸೋಲು’- ವಾಸ್ತವದ ಪರದೆ ಸರಿಸುವ ಗುರು..!   

ಬದುಕಿನ ಹಾದಿಯಲ್ಲಿ ಗೆಲುವಿನ ಕಡೆಗೆ ಹೆಜ್ಜೆಯಿಡುತ್ತಿದ್ದಾಗ ಕೆಲವು ಸಲ ಅನಿರೀಕ್ಷಿತವಾಗಿ ಸೋಲು ನಮ್ಮನ್ನು ಅಪ್ಪಿಕೊಂಡುಬಿಡುತ್ತದೆ. ನಮ್ಮ ಎಲ್ಲಾ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿ ಮೇಲಕ್ಕೆ ಏರಲಾರದಂತಹ ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಸೋಲನ್ನು ಯಾರೂ ಕೂಡ ಬೇಕೆಂದೇ ಆಹ್ವಾನಿಸುವುದಿಲ್ಲ, ಆದರೆ ಸೋತ ವ್ಯಕ್ತಿಯನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಗಮನಿಸಿದಾಗ...

ಅಂಕಣ

ಹ್ಯಾಮ್ ರೇಡಿಯೋ

ಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ...

ಅಂಕಣ

ಸನ್ಯಾಸಿ ಮತ್ತು ಸಂಸಾರಿ

ಒಂದಾನೊಂದು ಕಾಲದಲ್ಲಿ ರಾಜನೋರ್ವ ಬಹು ಪ್ರಖ್ಯಾತನಾಗಿದ್ದ. ಐಶ್ವರ್ಯ, ಆರೋಗ್ಯ, ಧನಬಲ ಎಲ್ಲವೂ ಆತನ ಬಳಿ ಇದ್ದವು. ಪ್ರಜೆಗಳು ನಿಷ್ಠರಾಗಿದ್ದರು, ಶತ್ರುಗಳು ಹೆದರುತ್ತಿದ್ದರು. ಕಾಲ ಕಾಲಕ್ಕೆ ಮಳೆ – ಬೆಳೆ ಎಲ್ಲವೂ ಆಗುತ್ತಿದ್ದವು. ಆದರೆ, ಇಷ್ಟಾದರೂ ರಾಜನಿಗೆ ನೆಮ್ಮದಿ ಇರಲಿಲ್ಲ. ಸದಾ ದುಃಖಿತನಾಗಿಯೇ ಇರುತ್ತಿದ್ದ. ಕಾರಣವೇನೆಂಬುದೂ ತಿಳಿದಿರಲಿಲ್ಲ. ಕೊನೆಗೆ...

ಅಂಕಣ

ಇನ್ನಾದರೂ ಬರೆಯಬೇಕು ಖರೇ ಇತಿಹಾಸ

ಎರಡು ವಾರಗಳ ಅಂತರದಲ್ಲಿ, ನಮ್ಮ ದೇಶದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ, ಗಡಿನಾಡು ಕಾಸರಗೋಡಲ್ಲಿ ಕನ್ನಡದ ನಂದಾದೀಪದಂತೆ ಬೆಳಗುತ್ತಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ, ಆರೆಸ್ಸೆಸ್’ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಪ್ರಚಾರಕ ನ. ಕೃಷ್ಣಪ್ಪ ತೀರಿಕೊಂಡರು. ಗೂಗಲ್ಎಂಬ ಹೆಸರಾಂತ ಐಟಿ ದಿಗ್ಗಜ ಕಂಪೆನಿಗೆ ಭಾರತ ಮೂಲದ ಸುಂದರ್ ಪಿಚೈ...

ಅಂಕಣ

ಮನ್ ಕೀ ಬಾತ್ v/s ದಿಲ್ ಕೀ ಬಾತ್

ಇದೇನಿದು??? ಒಂದರ ವಿರುದ್ಧ ಇನ್ನೊಂದು ಅಂದುಕೊಳ್ಳುವುದು ಬೇಡ. ಎರಡು ವಿಷಯಕ್ಕೂ ಅರ್ಥದಲ್ಲಿ ಸಾಮ್ಯತೆಯಿದ್ದರೂ ಉದ್ದೇಶ ವಿಭಿನ್ನವಾಗಿದೆ. ಏನಿದು ಮನ್ ಕೀ ಬಾತ್ ಮತ್ತು ದಿಲ್ ಕೀ ಬಾತ್ ? ನಮ್ಮ ಪ್ರಧಾನಿ ಮೋದಿಯವರು ಸುಮಾರು 10 ತಿಂಗಳಿನ ಹಿಂದೆ ಆಕಾಶವಾಣಿ ಸಂಭಾಷಣೆಯನ್ನು ಪ್ರಾರಂಭಿಸಿದರು… ಅದಕ್ಕೆ ‘ಮನ್ ಕೀ ಬಾತ್’ (ಮನದ ಮಾತು) ಎಂದು ನಾಮಕರಣ ಮಾಡಿದರು … ಭಾರತದ...

ಅಂಕಣ

ತೆರಿಗೆ ಕಟ್ಟುವ ಸಮಯ

ಇದು ಆದಾಯ ತೆರಿಗೆ (Income Tax)ಸಲ್ಲಿಸುವ ಸಮಯ.ಪ್ರತೀ ವರ್ಷದಂತೆ ಈ ವರ್ಷವೂ ಆದಾಯ ತೆರಿಗೆ ಸಲ್ಲಿಸಲೇ ಬೇಕು.ಪ್ರತೀ ವರ್ಷ ಜುಲೈ ೩1 ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಆದರೆ ಈ ಬಾರಿ ವಿವರ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಈ ವರ್ಷ ಐಟಿಆರ್ ನಮೂನೆಗಳನ್ನು ಪರಿಷ್ಕರಿಸಿ, ಸರಳೀಕರಣ ಮಾಡಲಾಗಿದೆ.ತೆರಿಗೆ ಸಲಹೆಗಾರರ ಸಹಾಯ ಪಡೆಯುವುದೇ ದೊಡ್ಡ ತಲೆನೋವು...

ಅಂಕಣ

ಕಯ್ಯಾರರ ಹೋರಾಟದ ಬದುಕು

`ಕಾಸರಗೋಡು’ ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ’; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ’. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು’ ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ’...

ಅಂಕಣ

ಮೇಡಮ್ಮು ಬರ್ಲಿಲ್ಲಾಂದ್ರೆ ನೆಕ್ಸ್ಟ್ ಎಲೆಕ್ಕ್ಸನ್ನು ಟಿಕೆಟ್ ಮಿಸ್ಸಾಗೋದು ಗ್ಯಾರಂಟೀ

ಸಿವ ವೊತ್ತಾರೆ ಎದ್ದು ಬೋ ಬೇಜಾರಲ್ಲಿದ್ದ. ಗೋಪಾಲಣ್ಣಂಗೆ ಇವ್ನ ಮೋನ ತಡಿಲಾರ್ದೆ ಕೇಳ್ದ, “ ಏನಲೇ ಬೇಕೂಫಾ.. ಇದ್ಯಾಕಿಂಗೆ ಆಕಾಸಾನೇ ತಲ್ಮ್ಯಾಕೆ ಬಿದ್ದಂಗಾಡ್ತಿ?” “ಏನೇಳ್ಳಿ ಗೋಪಾಲಣ್ಣ, ನಮ್ ಯಾಕೂಬುನ ನೇಣ್’ಗಂಬಕ್ಕಾಬಾರ್’ದಿತ್ತು. ಅದ್ಕೇಯಾ ಬೇಜಾರು..” ಸಿವ ಕಣ್ಣೀರಾಕ್ದ. “ಎಲಾ ಬಡ್ಡೀ ಮಗನಾ.. ನಿಂದೂಕೆ ಅವರ್ದೂಕೆ ಏನಲಾ ಸಮ್ಮಂದ? ಪೀಡೆ ತೊಲಗ್ತು ಅಂತ ಕುಸಿ ಪಡಾದ್...

ಅಂಕಣ

ಅಪ್ಪ ಮತ್ತು ಯಕ್ಷಗಾನ

ನೆನಪಿದೆ ಅಪ್ಪನ ಹೆಗಲ ಮೇಲೆ ಹತ್ತಿ ಕುಳಿತು ಯಕ್ಷಗಾನ ನೋಡಲು ಹೊರಟಿದ್ದು, ಅಪ್ಪ ಹಾಡುತಿದ್ದ ಯಕ್ಷಗಾನದ ಹಾಡುಗಳಿಗೆ ಗೊತ್ತಿಲ್ಲದೇ ದನಿಯಾಗುತ್ತಿದ್ದುದು,ಅರ್ಥವಾಗದಿದ್ದರೂ ಕಣ್ಮುಚ್ಚದೇ ನೋಡುತ್ತಿದ್ದ ಚಿಟ್ಟಾಣಿ ಅಜ್ಜನ ಪಾತ್ರ,ಕನಸಿನಲ್ಲೂ ಗುನುಗಬೇಕೆಂಬಂತೆ ಅನ್ನಿಸುತ್ತಿದ್ದ ನೆಬ್ಬೂರು ಭಾಗವತರ ಹಾಡು,ನಕ್ಕು ನಕ್ಕು ಸುಸ್ತಾಗುವಂತಿದ್ದ ರಮೇಶ್ ಭಂಡಾರಿಯವರ ಹಾಸ್ಯ...

ಅಂಕಣ

ಅವರು ನೆತ್ತರು ಹರಿಸಿದ್ದರಿಂದಲೇ ನಾವಿಂದು ಸುಖವಾಗಿರೋದು!!

 ಇಂದು ಜಗತ್ತು ಬರಿ ಸ್ವಾರ್ಥಮಯವಾಗಿಬಿಟ್ಟಿದೆ. ತಾನೂ ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಬೇರೆಯವರ ಉಸಾಬರಿ ನಮಗ್ಯಾಕೆ? ಎನ್ನುವ ಭಾವನೆ ಜನರಲ್ಲಿ ತುಂಬಿಹೋಗಿದೆ.  ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದೆ ನಾನ್ಯಾಕೆ ಬೇರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಅದರಿಂದ ನನಗೇನು ಲಾಭ? ಹೀಗೆ ಲಾಭ- ನಷ್ಟಗಳ ಲೆಕ್ಕಾಚಾರ ಮಾಡುತ್ತದೆ ಮನುಷ್ಯನ ಮನಸ್ಸು. ನಮ್ಮ ಈ...