ಅಂಕಣ

ತೆರಿಗೆ ಕಟ್ಟುವ ಸಮಯ

ಇದು ಆದಾಯ ತೆರಿಗೆ (Income Tax)ಸಲ್ಲಿಸುವ ಸಮಯ.ಪ್ರತೀ ವರ್ಷದಂತೆ ಈ ವರ್ಷವೂ ಆದಾಯ ತೆರಿಗೆ ಸಲ್ಲಿಸಲೇ ಬೇಕು.ಪ್ರತೀ ವರ್ಷ ಜುಲೈ ೩1 ಆದಾಯ ತೆರಿಗೆ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಆದರೆ ಈ ಬಾರಿ ವಿವರ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಈ ವರ್ಷ ಐಟಿಆರ್ ನಮೂನೆಗಳನ್ನು ಪರಿಷ್ಕರಿಸಿ, ಸರಳೀಕರಣ ಮಾಡಲಾಗಿದೆ.ತೆರಿಗೆ ಸಲಹೆಗಾರರ ಸಹಾಯ ಪಡೆಯುವುದೇ ದೊಡ್ಡ ತಲೆನೋವು ಅಂದುಕೊಳ್ಳಲೇಬೇಡಿ ಈ ಬಾರಿ ತಾನೇ ನೇರವಾಗಿ ಆದಾಯ ವಿವರ ಭರ್ತಿ ಮಾಡುವಂತೆ ಐಟಿಆರ್ ನಮೂನೆಗಳನ್ನು ಸರಳೀಕರಿಸಲಾಗಿದೆ. ಅದರಲ್ಲೂ ವಿಶೇಷವಾಗಿ, ಆನ್‌ಲೈನ್‌ನಲ್ಲಿ ತೆರಿಗೆ ವಿವರ ಸಲ್ಲಿಸುವುದನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸರಳೀಕೃತ ವಿಧಾನವನ್ನು ರೂಪಿಸಲಾಗಿದೆ.

ಸರಳೀಕೃತ ವಿದಾನವೊಂದೇ ಅಲ್ಲದೇ ಹೆಚ್ಚಿನ ಸಮಯಾವಕಾಶವನ್ನೋ ಈ ಭಾರಿ ಸರಕಾರ ನೀಡಿದೆ.ಕಳೆದ ವರ್ಷ ಕೇಂದ್ರ ಸರಕಾರ ೧೨,೫೧,೦೦೦ ಕೋಟಿ ತೆರಿಗೆ ಆದಾಯವನ್ನ ಸಂಗ್ರಹಿಸಿತ್ತು.ಈ ಭಾರಿ ಇದನ್ನೂ ಮೀರಿ ಸಂಗ್ರಹವಾಗುವ ನಿರೀಕ್ಷೆಯಿದೆ.ತೆರಿಗೆದಾರರಿಗೆ ಈ ವರ್ಷ ಅನಲೈನ್ ಪ್ರಕ್ರಿಯೆಯು ಕೂಡ ತುಂಬ ಸುಲಭ ಮತ್ತು ಸಂಪೂರ್ಣ ಕಾಗದಮುಕ್ತವಾಗಲಿದೆ. ಕಳೆದ ವರ್ಷದವರೆಗೆ ತೆರಿಗೆದಾರರು ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್ ಮಾಡಿದ ನಂತರ ಆ ಪ್ರತಿಯನ್ನು ಪ್ರಿಂಟ್ ಮಾಡಿ ಮತ್ತು ಸಹಿ ಮಾಡಿ  ಐಟಿಆರ್-ವಿ(ITR-V) ನಮೂನೆಯನ್ನು ಅಂಚೆ ಮೂಲಕ ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ ಕಳಿಸುವುದು ಕಡ್ಡಾಯವಾಗಿತ್ತು.ತೆರಿಗೆದಾರನ ಗುರುತು ಮತ್ತು ವಿವರಗಳನ್ನು ಪ್ರಮಾಣೀಕರಿಸುವುದು ಇದರ ಉದ್ದೇಶವಾಗಿತ್ತು.ಈ ಬಾರಿ ಈ ವ್ಯವಸ್ಥೆಯೇ ಬದಲಾಗಿದೆ.ತೆರಿಗೆದಾರರು ಕಷ್ಟಪಡುವ ಅವಶ್ಯಕತೆಯೇ ಇಲ್ಲ. ತೆರಿಗೆದಾರನ ವಿದ್ಯುನ್ಮಾನ ಪ್ರಮಾಣೀಕರಣ ಸಂಕೇತ (Electronic Verification Code)ದ ಮೂಲಕ ಐಟಿ ರಿಟರ್ನ್ಸ್‌ನ ಗುರುತು ಪತ್ತೆ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.ಹಾಗಾಗಿ ಎಲ್ಲ ಕಾಗದ ಮುಕ್ತ…10 ಅಂಕಿಗಳ ‘ಇವಿಸಿ’ಯು ಅಕ್ಷರಸಂಖ್ಯಾಯುಕ್ತ ಸಂಕೇತವಾಗಿದೆ. ಪ್ರತಿ ಪ್ಯಾನ್ ಕಾರ್ಡ್‌ಗೆ ಈ ಸಂಕೇತ ವಿಶಿಷ್ಟವಾಗಿರುತ್ತದೆ. ಹಿಂದೂ ಅವಿಭಜಿತ ಕುಟುಂಬಕ್ಕೆ ಸಂಬಂಧಿಸಿದಂತೆ(HUF), ಕುಟುಂಬದ ಹಿರಿಯ ಪುರುಷ ಅಥವಾ ಯಜಮಾನನಿಗೆ ಇವಿಸಿ ಪ್ರಮಾಣೀಕರಣ ಅನ್ವಯವಾಗುತ್ತದೆ. ಈ ವರ್ಷದಿಂದ ಐಟಿಆರ್ ನಮೂನೆಗಳಲ್ಲಿ ಆಧಾರ್ ಸಂಖ್ಯೆ ಹೊಂದಿರುವ ತೆರಿಗೆದಾರರಿಗೆ ಪ್ರತ್ಯೇಕ ಕಲಮು ಪರಿಚಯಿಸಲಾಗಿದೆ. ತೆರಿಗೆದಾರನ ಗುರುತು ದೃಢೀಕರಣಕ್ಕೆ ಆದಾಯ ತೆರಿಗೆ ಇಲಾಖೆ ನೀಡಿರುವ ನಾಲ್ಕು ಅವಕಾಶಗಳಲ್ಲಿ ಆಧಾರ್ ಸಂಖ್ಯೆಯೂ ಒಂದು. ಆಧಾರ್ ಸಂಖ್ಯೆ ನಮೂದಿಸುವ ಅವಕಾಶ ನೀಡಿರುವುದರಿಂದ ಇದು ನಿಮ್ಮ ಆಧಾರ್ ಜೊತೆ ಹೊಂದಾಣಿಕೆಯಾಗುತ್ತದೆ.ಒಂದು ವೇಳೆ ಆದಾರ್ ಲಿಂಕ್ ಆಗದೇ ಇದ್ದರೆ ತೆರಿಗೆದಾರಾರರು ಐಟಿ ರಿಟರ್ನ್ಸ್ ಸಲ್ಲಿಕೆಯ ನಂತರ ಐಟಿಆರ್-ವಿ ನಮೂನೆಯನ್ನು ಅಂಚೆ ಮೂಲಕ ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ ಕಳಿಸಲು ಅವಕಾಶವಿದೆ.ಹೀಗಾಗಿ ಎರಡು ಆಯ್ಕೆ ತೆರಿಗೆ ಸಲ್ಲಿಸುವವರಿಗೆ ನೀಡಲಾಗಿದೆ. ಇದೊಂದು ಮಹತ್ವದ ನಿರ್ದಾರ ಮತ್ತು ಅವಶ್ಯಕ ನಿರ್ಧಾರವಾಗಿದೆ.ತೆರಿಗೆದಾರರು ಕೆಲವೇ ಹಂತಗಳಲ್ಲಿ ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.ಆದರೆ ತೆರಿಗೆದಾರರು ಒಂದು ಗಮನಿಸಬೇಕು ಅದೇನೆಂದರೆ ಒಂದು ವೇಳೆ ನಿಮ್ಮ ಆದಾಯ ೫,೦೦,೦೦೦ ಲಕ್ಷಕ್ಕೂ ಮೀರಿದ್ದರೆ ಅಥವಾ ನೀವು ಐಟಿ ರೀಫಂಡ್ ಪಡೆಯುವ ವಿಭಾಗಕ್ಕೆ ಸೇರಿದರೆ ನಿಮಗೆ ಇವಿಸಿ ಅನ್ವಯವಾಗುವುದಿಲ್ಲ ಆಗ ನೀವು ನೆಟ್ ಬ್ಯಾಂಕಿಗ್ ಮೂಲಕ ಐಟಿ ರಿಟರ್ನ ಸಲ್ಲಿಸಬೇಕಾಗುತ್ತದೆ ಇಲ್ಲವೇ ಐಟಿಆರ್-ವಿ ಪ್ರತಿಯನ್ನು ಬೆಂಗಳೂರಿಗೆ ಕಳುಹಿಸಬೇಕಾಗುತ್ತದೆ.

ಹಾಗಾದರೆ ಆದಾಯ ತೆರಿಗೆಯನ್ನ ಹೇಗೆ ಸಲ್ಲಿಸಬೇಕು? ಒಂದಿಷ್ಟು ಮುಖ್ಯವಾದ ವಿಚಾರಗಳನ್ನ ತಿಳಿಸುವ ಪ್ರಯತ್ನ ಮಾಡುತ್ತೇನೆ.

  • ನಿಮ್ಮ ಬಂಡವಾಳ ಗಳಿಕೆಯ ಸಂಪೂರ್ಣ ಲೆಕ್ಕಾಚಾರ ಹಾಕಿಕೊಳ್ಳಿ.ಮ್ಯೂಚುವಲ್ ಫಂಡ್, ಷೇರುಗಳು, ಸ್ಥಿರಾಸ್ತಿ ಅಥವಾ ಬಂಗಾರದಂತಹ ಬಂಡವಾಳವನ್ನು ಮಾರಾಟ ಮಾಡಿ ಲಾಭ ಗಳಿಸಿದರೆ, ಆ ಗಳಿಕೆಯನ್ನು ಐಟಿ ರಿಟರ್ನ್ಸ್‌ನಲ್ಲಿ ಒದಗಿಸಬೇಕು.ಯಾವುದೇ ಕಾರಣಕ್ಕೂ ಇದನ್ನ ಸ್ಪಷ್ಟಪಡಿಸಲು ಹಿಂಜರಿಯಬೇಡಿ.ಈ ರೀತಿಯ ಕೆಲವು ಹಣಕಾಸು ಸಾಧನಗಳಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಆದರೆ, ಮತ್ತೆ ಕೆಲವಕ್ಕೆ ಬಂಡವಾಳ ಗಳಿಕೆ ತೆರಿಗೆ ಅನ್ವಯವಾಗುತ್ತದೆ.ಹಾಗಾಗಿ ಹಿಂಜರಿಕೆ ಅಥವಾ ತೋರಿಸದೇ ಇದ್ದರೂ ನಡೆಯುತ್ತೆ ಎಂಬ ಆಲಸೀತನ, ಧಿಮಾಕು ಬೇಡ. ನೀವೇನಾದರೂ ಬಾಡಿಗೆ ಆದಾಯ ಗಳಿಸುತ್ತಿದ್ದರೆ ಅದರ ಮಾಹಿತಿಯನ್ನ ಒದಗಿಸುವುದಯ ಕಡ್ಡಾಯ. ಆಸ್ತಿಯ ವಿವರಗಳನ್ನ ಪಡೆಯುವ ಸಲುವಾಗಿ ಆದಾಯ ತೆರಿಗೆ ಇಲಾಖೆ ಹೊಸ ಐಟಿಆರ್ ನಮೂನೆಗಳಲ್ಲಿ ‘let-out’ and ‘deemed-to-be-let-out’ ಎಂಬ ಎರಡು ಪ್ರತ್ಯೇಕ ವಿಭಾಗವನ್ನ ಅಳವಡಿಸಿದೆ. ತೆರಿಗೆದಾರ ಆಸ್ತಿಯಿಂದ ಯಾವುದೇ ಆದಾಯ ಗಳಿಸದಿದ್ದರೂ ಅಥವಾ ಅದು ಖಾಲಿ ಇದ್ದರೂ, ತೆರಿಗೆ ಪಾವತಿಗೆ ಹೊಣೆಗಾರನಾಗಿರುತ್ತಾನೆ. ಹಾಗಾಗಿ ನೀವೇನಾದರು ಬಾಡಿಗೆ ಆದಯ ಗಳಿಸಲು ನನ್ನ ನಿವೇಶನ ಖಾಲೀ ಇದೆಯಲ್ಲ ಅಂದುಕೊಂಡರೆ ಮತ್ತೆ ನಿಮ್ಮಿಂದ ತಪ್ಪಾಗುತ್ತದೆ.ಒಂದು ವೇಳೆ ಆಸ್ತಿಯ ಮಾರಾಟ ಮಾಡಿದರೆ, ಹೊಸ ನಮೂನೆಗಳಲ್ಲಿ ಆಸ್ತಿಗೆ ಸಂಬಂಧಿಸಿದ ಬಳಕೆಯಾಗದ ಮೊತ್ತವೇನಾದರೂ ಇದ್ದರೆ, ವಾರ್ಷಿಕ ಆಧಾರದಲ್ಲಿ ಅದರ ವಿವರ ಒದಗಿಸುವುದು ಕಡ್ಡಾಯ.
  • ಇವೆಲ್ಲದರ ಜೊತೆ ಇತರೆ ಮೂಲಗಳ ಆದಾಯವನ್ನ ನಿಮ್ಮ ಆದಾಯದ ಜೊತೆ ಸೇರಿಸಲು ಮರೆಯಬೇಡಿ.ತೆರಿಗೆದಾರರಾದ ನಿಮಗೆ ವೇತನದ ಜೊತೆ ಬೇರೆ ಆದಾಯ ಕೂಡ ಇರುತ್ತದೆ. ಬ್ಯಾಂಕ್ ನಿಶ್ಚಿತ ಠೇವಣಿ, ಆವರ್ತ ಠೇವಣಿ, ಮೂಲಸೌಕರ್ಯ ಬಾಂಡ್‌ಗಳು, ರಾಷ್ಟ್ರೀಯ ಉಳಿತಾಯ ಪತ್ರಗಳು, ಕಿಸಾನ್ ವಿಕಾಸ್ ಪತ್ರಗಳು ಹಾಗೂ ಬ್ಯಾಂಕ್ ಉಳಿತಾಯ ಖಾತೆಯಿಂದ ಗಳಿಸುವ ಬಡ್ಡಿ ಆದಾಯಗಳನ್ನು ಐಟಿ ರಿಟರ್ನ್ಸ್‌ನಲ್ಲಿ ಒದಗಿಸಬೇಕು. ನಿಶ್ಚಿತ ಠೇವಣಿಯ ಬಡ್ಡಿ ಆದಾಯಕ್ಕೆ ಟಿಡಿಎಸ್ ಮುರಿದುಕೊಂಡಿದ್ದರೂ, ನಿಮ್ಮ ವಾರ್ಷಿಕ ವರಮಾನ 5 ಲಕ್ಷ ರೂ.ಗಿಂತ ಹೆಚ್ಚಿನದಾಗಿದ್ದರೆ(ಶೇ 20-30ರ ತೆರಿಗೆ ವ್ಯಾಪ್ತಿ), ಹೆಚ್ಚಿನ ಪ್ರಮಾಣದ ತೆರಿಗೆ ಕಟ್ಟಬೇಕಾಗುತ್ತದೆ.
  • ತೆರಿಗೆದಾರರೇ ಮುಖ್ಯವಾಗಿ ನೀವು ತೆರಿಗೆ ಬಾಧ್ಯತೆ(TDS)ಯನ್ನು ಗಮನಿಸಬೇಕು.

ಆದಾಯ ತೆರಿಗೆ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರತಿ ತೆರಿಗೆದಾರನ ತೆರಿಗೆ ಬಾಧ್ಯತೆಯ ಸಂಪೂರ್ಣ ವಿವರಗಳನ್ನು ನಮೂನೆ ’26ಎಎಸ್’ನಲ್ಲಿ ಹಾಕಿರುತ್ತದೆ. 26ಎಎಸ್ ನಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ.ನಿಮ್ಮ ಬ್ಯಾಂಕ್ ಠೇವಣಿಗಳು(FD Interest and Interest) ವೇತನ(Salary), ಸಲಹಾ ಶುಲ್ಕ(Professional and Cinsultancy Fees),ಆಸ್ತಿ ಮಾರಾಟ(Sale of Property) ಸೇರಿದಂತೆ ತೆರಿಗೆದಾರನ ಎಲ್ಲಾ ಆದಾಯಕ್ಕೆ ಅನ್ವಯವಾಗುವ ತೆರಿಗೆ ಬಾಧ್ಯತೆಯ ವಿವರ ಇದರಲ್ಲಿ ಇರುತ್ತದೆ. ಹಾಗಾಗಿ, ನೀವು ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಲಾಗ್‌ಆನ್ ಆಗಿ, ಅಲ್ಲಿ ೨೬ಎಎಸ್ ಅನ್ನು ಆಯ್ಕೆ ಮಾಡಿದರೆ ಅಥವಾ ’26ಎಎಸ್’ ನಮೂನೆ ತೆರೆದರೆ, ನಿಮ್ಮ ಎಲ್ಲಾ ತೆರಿಗೆ ಬಾಧ್ಯತೆಯ ಮಾಹಿತಿ ಸಿಗುತ್ತದೆ.ಪ್ಯಾನ್ ಸಂಖ್ಯೆ ಬಳಸಿ ನೀವು ೨೬ಎಎಸ್ ಅನ್ನು ತೆರೆದರೆ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.ನೀವು ಪಾವತಿಸಿರುವ ತೆರಿಗೆ ’26ಎಎಸ್’ ನಮೂನೆಯಲ್ಲಿ ಪ್ರತಿಫಲನವಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬಹುದು. ಒಂದು ವೇಳೆ ’26ಎಎಸ್’ ನಮೂನೆಯಲ್ಲಿರುವ ನಿಮ್ಮ ತೆರಿಗೆಯ ಬಾಧ್ಯತೆ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ ಎಂದು ನಿಮಗೆ ಅನಿಸಿದರೆ ಅದನ್ನು ಸರಿಪಡಿಸುವುದು ನಿಮ್ಮ ಕರ್ತವ್ಯವಾಗಿರುತ್ತದೆ.ನಿಮ್ಮಿಂದ ತೆರಿಗೆ ಮುರಿದುಕೊಂಡಿರುವವರನ್ನು (ಉದಾ: ಉದ್ಯೋಗದಾತರು, ಬ್ಯಾಂಕ್, ಹಣಕಾಸು ಸಂಸ್ಥೆಗಳು ಇತ್ಯಾದಿ) ಸಂಪರ್ಕಿಸಿ, ಮತ್ತೆ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸುವುದು ತುಂಬಾ ಅನಿವಾರ್ಯವಾಗಿರುತ್ತದೆ. ಇದು ಅತಿಮುಖ್ಯ. ಏಕೆಂದರೆ, ಆದಾಯ ತೆರಿಗೆ ಇಲಾಖೆ ಸಾಮಾನ್ಯವಾಗಿ ’26ಎಎಸ್’ನಲ್ಲಿರುವ ಮಾಹಿತಿಯ ಆಧಾರದ ಮೇಲೆಯೇ ತೆರಿಗೆದಾರನ ತೆರಿಗೆ ಸಲ್ಲಿಕೆ ಸರಿಯಾಗಿದೆಯೇ ಎಂಬುದನ್ನ ಗಮನಿಸುತ್ತದೆ. ಇನ್ನೊಂದು ಮುಖ್ಯವಾದ ವಿಚಾರ ಬಂದರೆ ನೀವು ’26ಎಎಸ್’ನಲ್ಲಿ ನಮೂದಿಸಿರುವ ಆದಾಯ ವಹಿವಾಟಿನ ವಿವರವು ಐಟಿ ರಿಟರ್ನ್ಸ್‌ನಲ್ಲಿ ಸಲ್ಲಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ. ಏಕೆಂದರೆ ಇವೆರಡೂ ಹೊಂದಾಣಿಕೆಯಾಗಲೇಬೇಕು.ಉದಾಹರಣೆಗೆ ಸಹಾಯ ಶುಲ್ಕ(Professional Fees) ಆದಾಯಕ್ಕೆ ಶೇ 10 ಟಿಡಿಎಸ್ ಇದೆ ಎಂದಾದರೆ, ಸಂಪೂರ್ಣ ಸಹಾಯ ಶುಲ್ಕದ ಆದಾಯವನ್ನು ಆದಾಯವನ್ನು ರಿಟರ್ನ್ಸ್‌ನಲ್ಲಿ ಒದಗಿಸಬೇಕು. ಉದ್ಯೋಗ ಬದಲಿಸಿದಾಗ, ನೀವು ಅದರಿಂದ ಎರಡು ವಿನಾಯಿತಿ ಮತ್ತು ಕಡಿತ ಪಡೆದರೂ, ಎರಡೂ ಆದಾಯಗಳನ್ನು ಐಟಿ ರಿಟರ್ನ್ಸ್‌ನಲ್ಲಿ ಒದಗಿಸಬೇಕು. ಜತೆಗೆ, ಎರಡೂ ಆದಾಯಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ.ಇದನ್ನ ತೆರಿಗೆದಾರರು ಬಹುಮುಖ್ಯವಾಗಿ ಗಮನಿಸಬೇಕಾಗುತ್ತದೆ.

  • ಈ ಬಾರಿ ಸರ್ಕಾರ ಇನ್ನೊಂದು ಆದಾಯ ತೋರ್ಪಡಿಕೆಯನ್ನು ಖಡ್ಡಾಯಗೊಳಿಸಿದೆ ಅದು ವಿದೇಶಿ ಸ್ವತ್ತಿನ ಆದಾಯ.ತೆರಿಗೆದಾರರು ಭಾರತದ ಹೊರಗೆ ಹೊಂದಿರುವ ಸ್ವತ್ತು ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ನಿಕಟವಾಗಿ ಗಮನಿಸುತ್ತಿರುತ್ತದೆ. ನೀವು ನಾನು ಸರ್ಕಾರಕ್ಕಿಂತಲೂ ಬುದ್ದಿವಂತ ದುಕೊಂಡು ಮರೆಮಾಚಲು ಹೊರಟರೆ ತುಂಬಾ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ.ಹೊಸ ಐಟಿಆರ್-2 ನಮೂನೆಯಲ್ಲಿ ವಿದೇಶಿ ಬ್ಯಾಂಕ್ ಖಾತೆಗಳ ವಿವರ ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ. ವಿದೇಶಿ ಸ್ವತ್ತಿನ ಮಾಲಿಕತ್ವ ಮತ್ತು ಅದರ ಫಲಾನುಭವಿಯ ವಿವರಗಳನ್ನು ಸಂಪೂರ್ಣವಾಗಿ ಒದಗಿಸಲೇಬೇಕು. ವಿದೇಶಿ ಬ್ಯಾಂಕ್ ಖಾತೆ ತೆರೆದ ದಿನಾಂಕ, ಬ್ಯಾಂಕ್‌ನಲ್ಲಿ ಇಟ್ಟಿರುವ ಹಣಕ್ಕೆ ವರ್ಷದಲ್ಲಿ ಬಂದಿರುವ ಬಡ್ಡಿ ವರಮಾನ ಇವುಗಳನ್ನೆಲ್ಲ ಸವಿವರವಾಗಿ ನೀಡಲೇಬೇಕು.
  • ಯಾವೆಲ್ಲಾ ತೆರಿಗೆ ವಿನಾಯಿತಿ ಮತ್ತು ಮುರಿತಗಳಿಗೆ ಅರ್ಹತೆ ಇದೆ ಎಂಬುದನ್ನು ತೆರಿಗೆದಾರರು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಈ ಕುರಿತು ಸಮರ್ಪಕ ಮಾಹಿತಿ ಕಲೆ ಹಾಕಬೇಕು. ಉದ್ಯೋಗದಾತರಿಗೆ ನಿಗದಿತ ಸಮಯದಲ್ಲಿ ತೆರಿಗೆದಾರ ಸೂಕ್ತ ದಾಖಲೆಗಳನ್ನು ಒದಗಿಸದಿದ್ದರೆ, ತೆರಿಗೆದಾರನಿಗೆ ಲಭ್ಯವಿರುವ ವಿನಾಯಿತಿ ಮತ್ತು ಮುರಿತ ಸೌಲಭ್ಯಗಳು ಕೈತಪ್ಪುತ್ತವೆ. ಹಾಗಾಗಿ, ಐಟಿ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲೇ ನೀವು ಕ್ಲೇಮುಗಳನ್ನು ಪಡೆಯಬಹುದು.

:ಹೊಸ ಐಟಿಆರ್ ನಮೂನೆಗಳು ಯಾವ ಪ್ರಮುಖ ಆದಾಯ ಮೂಲಗಳಿಗೆ?

  1. ಐಟಿಆರ್-1 (ವೇತನ, ಪಿಂಚಣಿ,1 ಕಟ್ಟಡ )
  2. ಐಟಿಆರ್-2ಎ (ಐಟಿಆರ್-1+ಕೃಷಿಆದಾಯ, ಲಾಟರಿ, ರೇಸ್)
  3. ಐಟಿಆರ್-2 (ಐಟಿಆರ್-2ಎ+ಬಂಡವಾಳ ಗಳಿಕೆ, ವಿದೇಶಿ ಆದಾಯ)

4.ಐಟಿಆರ್-3(ಐಟಿಆರ್-2+ಪಾಲುದಾರಿಕೆಯ ಲಾಭ)

5.ಐಟಿಆರ್-4 (ಐಟಿಆರ್-3+ಮಾಲಿಕತ್ವದ ವ್ಯಾಪಾರ, ವೃತ್ತಿ)

ಮೂಲ ತೆರಿಗೆ ವಿನಾಯಿತಿ ಮಿತಿ ದಾಟಿದರೆ ಐಟಿ ರಿಟರ್ನ್ಸ್ ಕಡ್ಡಾಯ

ವಾರ್ಷಿಕ 5 ಲಕ್ಷ ರೂ. ಒಳಗಿನ ಆದಾಯ ವರ್ಗಕ್ಕೆ ಐಟಿ ರಿಟರ್ನ್ಸ್ ಇಲ್ಲ ಎಂದು ಕೇಂದ್ರ ಸರಕಾರ 3 ವರ್ಷಗಳ ಹಿಂದೆ ತಂದಿದ್ದ ಕಾಯಿದೆ ಈಗ ರದ್ದಾಗಿದೆ. ಆದಾಯ ತೆರಿಗೆಯ ಹೊಸ ಕಾಯಿದೆ ಪ್ರಕಾರ, ತೆರಿಗೆಗೆ ಒಳಪಡುವ ನಿಮ್ಮ ವಾರ್ಷಿಕ ಒಟ್ಟು ಆದಾಯವು ಮೂಲ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ. ದಾಟಿದ್ದರೆ, ಐಟಿ ರಿಟರ್ನ್ಸ್ ಸಲ್ಲಿಸುವುದನ್ನು ಈಗ ಕಡ್ಡಾಯ ಮಾಡಲಾಗಿದೆ. ತೆರಿಗೆದಾರ ಎಚ್‌ಆರ್‌ಎ, ವಾಹನ ಭತ್ಯೆ ಮತ್ತು ಎಲ್‌ಟಿಎ ಇತ್ಯಾದಿಗೆ ಸಿಗುವ ಎಲ್ಲಾ ವಿನಾಯಿತಿ ಪಡೆದ ನಂತರ ಉಳಿಯುವ ಆದಾಯವು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.ಕೇಂದ್ರ ಸರಕಾರ ಹಳೆಯ ಕಾಯಿದೆಯನ್ನು ತೆಗೆದುಹಾಕಿ, ಹೊಸ ಕಾಯಿದೆಯನ್ನು ಜಾರಿಗೆ ತಂದಿರುವುದರಿಂದ ತೆರಿಗೆದಾರರು, ಐಟಿ ರಿಟರ್ನ್ಸ್ ಸಲ್ಲಿಸುವುದನ್ನು ನಿರ್ಲಕ್ಷಿಸಬಾರದು.

ಯಾರು ಎಷ್ಟು ತೆರಿಗೆ ಕಟ್ಟಬೇಕು?:

ನಿಮ್ಮ ಆದಾಯ(taxable income)Rs. 2,50,000/- ದಾಟದಿದ್ದಲ್ಲಿ ನೀವು ತೆರಿಗೆ ಸಲ್ಲಿಅಬೇಕಿಲ್ಲ.ಆದರೆ ನಿಮ್ಮ ಆದಾಯವೇನಾದರು Rs. 2,50,000/- ಕ್ಕಿಂತ ಜಾಸ್ತಿ ಹಾಗೂ  Rs. 5,00,000/- ಕ್ಕಿಂತ ಕಡಿಮೆ ಇದ್ದಲ್ಲಿ ನೀವು Rs2,50,000 ದಾಟಿದ ಆದಾಯದ ಮೇಲೆ  ೧೦% ತೆರಿಗೆಯನ್ನ ಸಲ್ಲಿಸಬೇಕು.ಅದೇ ರೀತಿ ನಿಮ್ಮ ಆದಾಯವೇನಾದರು  Rs. 5,00,000 ಕ್ಕಿಂತ ಜಾಸ್ತಿ ಮತ್ತು Rs. 10,00,000/- ಕ್ಕಿಂತ ಕಡಿಮೆ ಇದ್ದಲ್ಲಿ ನಿವು Rs. 25,000/-  ಜೊತೆ 5,00,000ಕ್ಕಿಂತ ಅಧಿಕವಾದ ಆದಾಯದ ಮೇಲೆ 20% ತೆರಿಗೆಯನ್ನು ಕಟ್ಟಬೇಕು.ಒಂದು ವೇಳೆ ನಿಮ್ಮ ಆದಾಯ Rs. 10,00,000/- ದಾಟಿದರೆ ನೀವು Rs. 125,000/- ಜೊತೆ 10,00,000ಕ್ಕಿಂತ ದಾಟಿದ ಆದಾಯದ ಮೇಲೆ  30% ತೆರಿಗೆಯನ್ನು ಕಟ್ಟಬೇಕು.

ಉದ್ದೇಶಪೂರ್ವಕವಾಗಿ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆ 5 ಸಾವಿರ ರೂ.ವರೆಗೆ ದಂಡ ವಿಧಿಸುತ್ತದೆ. ಕೆಲವು ವರ್ಷಗಳ ನಂತರ ನಿಮ್ಮ ಆದಾಯ ನಿರ್ದಿಷ್ಟ ಪ್ರಮಾಣದಲ್ಲಿ ಹೆಚ್ಚಾಗಿ, ನೀವು ರಿಟರ್ನ್ಸ್ ಸಲ್ಲಿಸಿದಾಗ, ಹಿಂದಿನ ವರ್ಷಗಳ ವಿವರ ಒದಗಿಸುವಂತೆ ಐಟಿ ಇಲಾಖೆ ಸೂಚಿಸುತ್ತದೆ. ಇದಕ್ಕೆ ಸ್ಪಂದಿಸದಿದ್ದರೆ 2 ಲಕ್ಷ ರೂ,ವರೆಗೆ ದಂಡ ವಿಧಿಸಲಾತ್ತದೆ.

ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆ, ಐಟಿಆರ್ ನಮೂನೆ ಮತ್ತು ತೆರಿಗೆ ಬಾಧ್ಯತೆಯ ಮಾಹಿತಿಗೆ ವೆಬ್‌ಸೈಟ್ ವಿಳಾಸ.

https://incometaxindiaefiling.gov.in/e-Filing/

ತರಿಗೆದಾರರೇ ನಿಮ್ಮ ತೆರಿಗೆ ಸಲ್ಲಿಸಲು ಅಗಸ್ಟ್ ೩೧ ಕೊನೆಯ ದಿನಾಂಕ,ಇನ್ನು 19ದಿನವಷ್ಟೇ ಬಾಕಿಯಿದೆ ಹಾಗಾಗಿ ಬೇಗ ತೆರಿಗೆ ಪಾವತಿಮಾಡಿಬಿಡಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!