ಮನುಷ್ಯನಿಗೆ ಆಸೆ, ಆಮಿಷಗಳು ಜಾಸ್ತಿ. ಎಲ್ಲ ಇದ್ದರೂ ಅತೃಪ್ತಿ. ಮತ್ತೇನಕ್ಕೋ ತುಡಿತ. ಆಸೆ,ಹಂಬಲಗಳಿಗೆ ಕೊನೆಯಿಲ್ಲ. ಬೇಕು, ಬೇಕು ಅನ್ನೋ ಬಯಕೆಗಳಿಗೆ ಪೂರ್ಣ ವಿರಾಮವಿಲ್ಲ ಎಲ್ಲಾ ಇದ್ದರೂ, ಇನ್ನೇನೋ ಬೇಕು ಅನ್ನೋ ತುಡಿತದಲ್ಲೇ ಬದುಕು ಮುಂದುವರೆಯುತ್ತಿರುತ್ತದೆ. ಹೊತ್ತಿಗೆ ತುತ್ತು, ಮೈ ತುಂಬಾ ಬಟ್ಟೆ ಇದ್ದವನಿಗೆ ಮಧ್ಯಮ ವರ್ಗದ ಬದುಕಿನ ಆಸೆ. ಮನೆಯಲ್ಲಿ...
ಇತ್ತೀಚಿನ ಲೇಖನಗಳು
ಕಾವೇರಿ ಸಮಸ್ಯೆಗೊಂದು ಗಣಿತ ಮಾದರಿ ಪರಿಹಾರ
ಸಧ್ಯದಲ್ಲಿ ನಮ್ಮನ್ನೆಲ್ಲಾ ಅತಿಯಾಗಿ ಕಾಡಿದ್ದೆಂದರೆ ಕಾವೇರಿ ಸಮಸ್ಯೆ. ಈ ಸಮಸ್ಯೆ ಬಹಳ ವರ್ಷಗಳಷ್ಟು ಹಳೆಯದಾಗಿದ್ದರೂ, ಇನ್ನೂ ಒಂದು ಸರಿಯಾದ ಉತ್ತರ ಕಂಡು ಹಿಡಿದುಕೊಳ್ಳಲಾಗದ್ದು ದುರದೃಷ್ಟಕರ. ಹಾಗೆಂದು ಇದರ ಬಗ್ಗೆ ಯಾರೂ ಏನೂ ಮಾಡುತ್ತಿಲ್ಲವೆಂದೇನಿಲ್ಲ. ಹಲವರು (ಪರಿಹರಿಸಲೆಂದೋ/ ಬಾರದೆಂದೋ) ಹಲವಾರು ರೀತಿಯಲ್ಲಿ ತಮ್ಮ ತಮ್ಮ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ...
ಕೀಮೋಥೆರಪಿ ಜನಿಸಿದ್ದು ವಿಶ್ವ ಯುದ್ಧದಲ್ಲಿ…
ಈ ಶೀರ್ಷಿಕೆಯನ್ನು ನೋಡಿ ಆಶ್ಚರ್ಯವಾಗಿರಬಹುದು. ಮಿಲಿಯನ್’ಗಟ್ಟಲೇ ಜನರನ್ನ ಬಲಿ ತೆಗೆದುಕೊಂಡ ವಿಶ್ವಯುದ್ಧಕ್ಕೂ, ಮಹಾಮಾರಿ ಕ್ಯಾನ್ಸರ್’ನಿಂದ ಮುಕ್ತಗೊಳಿಸುವ ಕೀಮೋಥೆರಪಿಗೂ ಎಂತಹ ಸಂಬಂಧ ಎಂಬ ಪ್ರಶ್ನೆ ಉದ್ಭವವಾಗಿರಬಹುದು. ಆದರೆ ಇದು ಅಕ್ಷರಶಃ ಸತ್ಯ. ಕೀಮೋಥೆರಪಿ ಎಂಬ ಕ್ಯಾನ್ಸರ್ ಚಿಕಿತ್ಸೆ ಹುಟ್ಟಿದ್ದೇ ವಿಶ್ವಯುದ್ಧದಿಂದ. ಕಾಲದ ವೈಶಿಷ್ಟ್ಯವೇ ಅಂತದ್ದು...
ಈ ಕೃತಘ್ನರಿಗೆ ಕಾವೇರಿಯ ಋಣಕ್ಕಿಂತ ಗಂಜಿಯ ಋಣ ಜಾಸ್ತಿಯಾಯಿತೆ?
ನನಗೊಬ್ಬರು ಹೈಸ್ಕೂಲಿನಲ್ಲಿ ಕನ್ನಡ ಮೇಷ್ಟ್ರು ಇದ್ದರು. ಹೆಸರು ಎ.ಎಸ್. ಪಾಟೀಲ್ ಅಂತ. ಬಹುಷಃ ಅಲ್ಲಿಯವರೆಗೆ ಕನ್ನಡವನ್ನು ಒಂದು ವಿಷಯವಾಗಿ ಓದುತ್ತಿದ್ದ ನಮಗೆ ಅದರಲ್ಲಿನ ಸಾಹಿತ್ಯದ ರುಚಿ ಹತ್ತಿಸಿದ್ದೇ ಅವರು . ಕನ್ನಡ ಪಾಠಗಳನ್ನು ಅಂಕ ಗಳಿಸುವುದಕ್ಕೆ ಸೀಮಿತಗೊಳಿಸದೇ ಕನ್ನಡದಲ್ಲಿನ ಸಾಹಿತ್ಯದ ಆಳವನ್ನು ಸೂಕ್ಷ್ಮತೆಯನ್ನು ಹೊರಗೆಳೆದು ತಂದವರು ಅವರು...
ಆಧುನಿಕ ರೈತ
ಗರಿ ಗರಿ ಇಸ್ತ್ರಿ ಹಾಕಿದ ಅಂಗಿ ನೋಡಿ ಅವನ ಗಂಭೀರ ಭಂಗಿ ಅವನಿನ್ನೂ ಮೀಸೆ ಮೂಡದ ಹುಡುಗ ಕೈಯಲ್ಲಿ ಮಿಂಚುವ ಚಿನ್ನದ ಖಡಗ ಕತ್ತಿನಲ್ಲಿ ಬಲು ದಪ್ಪದ ಬಂಗಾರದ ಸರಪಳಿ ನೋಡಿದವರು ಒಮ್ಮೆಗೆ ಆಗುವರು ಪಿಳಿ ಪಿಳಿ ಶುದ್ದ ಬಿಳಿಯ ಕಾರು, ಕಪ್ಪು ಕನ್ನಡಕ ಸುತ್ತ ಜನರಿದ್ರೆ ಅವನಿಗೇನೋ ಪುಳಕ ಬೆಂಗಳೂರಿನ ಇವತ್ತಿನ ರೈತ ಭಾರಿ ಆಧುನಿಕ ರಿಯಲ್...
ಅನ್ವೇಷಣೆಯ ಅಭಿಯಾನ ….
ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ – ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರ ಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ – ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ. ಅದು ಪ್ರಶ್ನೆ ಕೇಳುವುದೊ, ಕೇಳಿಸುವುದೊ, ಉತ್ತರಕಾಗಿ ಹುಡುಕುವುದೊ, ಹುಡುಕಿಸುವುದೊ ಎಲ್ಲವು ಮನೊ ಭ್ರಾಂತಿಯ ಪಿತ್ತ...
