21ನೇ ಶತಮಾನ ತಂತ್ರಜ್ಞಾನ ಕ್ರಾಂತಿಯನ್ನು ಕಂಡ ಶತಮಾನ. ಮನುಷ್ಯನ ಬೆರಳ ತುದಿಯಲ್ಲಿ ಜಗತ್ತೇ ಅವಿತು ಕುಳಿತಿದೆ. ಎಲ್ಲವೂ ಇಂಟರ್ನೆಟ್, ಎಲ್ಲೆಡೆಯೂ ಇಂಟರ್ನೆಟ್. ಇಂಟರ್ನೆಟ್ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವೇ ಇಲ್ಲ. ಹೌದು ಇದೊಂತರ ಮನುಷ್ಯ ಬದುಕಲು ಆಮ್ಲಜನಕ ಹೇಗೆ ಅಗತ್ಯವೋ ಹಾಗೇ ಈ ಇಂಟರ್ನೆಟ್ ಕೂಡ ಬಹಳಾ ಮುಖ್ಯ. ಮನೋರಂಜನೆಯಿಂದ ಹಿಡಿದು ಬಿಸಿನೆಸ್ ತನಕ...
ಇತ್ತೀಚಿನ ಲೇಖನಗಳು
ಕಮಲ್ ಹಾಸನ್ ಆವತ್ತು ಹಾಗೆ ಹೇಳಿದ್ದು ಸುಮ್ಮನೇ ಅಲ್ಲ!
2013ರ ವರ್ಷಾರಂಭದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ತಮ್ಮ ಬಹು ನಿರೀಕ್ಷಿತ ವಿಶ್ವರೂಪಂ ಚಿತ್ರವನ್ನು ತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೆನ್ಸಾರ್ ಬೋರ್ಡಿನಿಂದ ಕ್ಲಿಯರೆನ್ಸ್ ಪಡೆದುಕೊಂಡಿದ್ದ ಚಿತ್ರ ಬಿಡುಗಡೆಗೆ ಇನ್ನೇನು ಎರಡು ಮೂರು ದಿನಗಳಿದ್ದಂತೆ ಕೋರ್ಟಿನಿಂದ ನಿಷೇಧಕ್ಕೊಳಗಾಯ್ತು. ಕಾರಣ ಏನೆಂದರೆ ಮುಸ್ಲಿಂ...
ಸ್ವಾತಂತ್ರ್ಯ ಹೋರಾಟ ಹಾಗೂ ಆರ್‍ಎಸ್‍ಎಸ್‍ನ ಪಾತ್ರ
ಅದು ‘ವಂದೇ ಮಾತರಂ’ನ್ನು ಬ್ರಿಟೀಷರು ನಿಷೇಧಿಸಿದ್ದ ಕಾಲ. ರಕ್ತದ ಕಣಕಣದಲ್ಲೂ ದೇಶ ಪ್ರೇಮವನ್ನು ಜಾಗೃತಗೊಳಿಸುತ್ತೇ, ಬ್ರಿಟೀಷರ ವಿರುದ್ಧ ಭಾರತೀಯರ ಐಕ್ಯತೆಗೆ ಪ್ರಬಲ ಅಸ್ತ್ರವಾಗಲಿದೆ ಎಂಬ ಒಂದು ಭಯವೇ ಅಂದು ಬ್ರಿಟೀಷರಿಗೆ ವಂದೇ ಮಾತರಂ ಮೇಲೆ ಆಕ್ರೋಶ ಮೂಡಲು ಕಾರಣವಾಗಿತ್ತು! ಅಂದಿನ ಪರಿಸ್ಥಿತಿ ಅದ್ಹೇಗಿತ್ತು ಎಂದರೆ ಎಲ್ಲಿ ‘ವಂದೇ ಮಾತರಂ’ನ ಸ್ವರ ತರಂಗಗಳು ಕೇಳುತ್ತೋ...
ನೀಲಿ ’ಮಳೆ ಕವಿ’ – ಜಯಂತ್ ಕಾಯ್ಕಿಣಿ
ಆಗೊಂದಷ್ಟು ದಿನ ಕನ್ನಡ ಚಲನಚಿತ್ರಗಳಲ್ಲಿನ ಹಾಡುಗಳು ಏಕೋ ಅಷ್ಟಾಗಿ ಮನಸ್ಸು ತಟ್ಟುತ್ತಿರಲಿಲ್ಲ. ಹಾಡುಗಳನ್ನು ಎಲ್ಲೊ ಒಮ್ಮೊಮ್ಮೆ ಗುನುಗುನಿಸಬೇಕೆನಿಸಿದರೂ ಅದರ ಸಾಹಿತ್ಯ ನೆನಪಿರುತ್ತಿರಲಿಲ್ಲ. ಅವುಗಳಲ್ಲೊಂದಿಷ್ಟು ಬೇರೆ ಬೇರೆ ಭಾಷೆಯ ಪದಗಳು. ಕನ್ನಡದ ಶಬ್ಧಕೋಶದಲ್ಲಿ ಕೋಟಿಗಟ್ಟಲೆ ಪದಗಳಿದ್ದರೂ ಯಾವುದೋ ಭಾಷೆಯ ಪದಗಳ ಬಳಕೆಯೇ ಹೆಚ್ಚಿರುತ್ತದೆಯಲ್ಲ ಎಂಬ ಸಣ್ಣ ನೋವು...
ಮರುಹುಟ್ಟು ಪಡೆದ ಚಿತ್ರರಂಗ, ಅಷ್ಟಕ್ಕೆ ನಿಲ್ಲದಿರಲಿ
`ತಿಥಿ’ ಸಿನಿಮಾದಲ್ಲಿ ಎಲ್ಲರ ಮನಸೂರೆಗೊಳ್ಳುವ ಗಡ್ಡಪ್ಪನು, ಆತನ ಮಗ ತಮ್ಮಣ್ಣ `ಬಾ ಮನೆಗೋಗದ’ ಅಂದರೆ `ಇನ್ನು ಟೈಮ್ ಅದೆ’ ಎನ್ನುತ್ತಾನೆ. ಈ ಮಾತನ್ನು ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನಂಬಿಕೊಂಡು ಅಂತಹ ಚಿತ್ರಗಳನ್ನೇ ನಿರ್ಮಿಸುತ್ತಿದ್ದ ಮಂದಿಗೆ ಅನ್ವಯಿಸಿ ನೋಡಬಹುದು. ನಮಗೂ ಒಂದು ಟೈಮ್ ಬರುತ್ತೆ ಎಂದು ಎಂದು ನಂಬಿದ್ದವರು ತಮ್ಮ...
ಕನ್ನಡೇತರರರಿಗೆ ಕನ್ನಡ ಕಲಿಯಲು ನೀವು ಹೇಗೆ ಸಹಾಯ ಮಾಡಬಹುದು?
“ಅಯ್ಯೋ, ಅವರು ೨೦ ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ”; “ಇಲ್ಲಿನ ಅನ್ನ–ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?”; “ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ ಹೋಗು” ಇಂತಹ ಸುಮಾರು ಮಾತುಗಳು ನಮಗೆಲ್ಲರಿಗೂ ದಿನನಿತ್ಯ ಕೇಳಿಬರುತ್ತದೆ. ಮೌಖಿಕ ಸಂಭಾಷಣೆಯಲ್ಲಾಗಲೀ, ಅಥವಾ...
